Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಲೋವೇರಾ ಬಳಸಿ ನಿಮ್ಮ ಸೌಂದರ್ಯವನ್ನು ವೃದ್ಧಿಸಿ
ನಿಮಗೆ ವಯಸ್ಸಾದಂತೆ ನಿಮ್ಮ ತ್ವಚೆಗೂ ವಯಸ್ಸಾಗುತ್ತದೆ, ಆದರೆ ನಿಮ್ಮ ತ್ವಚೆಯ ವಯಸ್ಸಾಗುವಿಕೆಯನ್ನು ನಿಮಗೆ ತಡೆಗಟ್ಟಬಹುದಾಗಿದೆ, ಆದರೆ ನಿಮ್ಮ ವಯಸ್ಸನ್ನಲ್ಲ! ನಿಮ್ಮ ಮುಖದ ಸೌಂದರ್ಯವನ್ನು ವೃದ್ಧಿಸುವಂತೆ ಮಾಡಬಹುದು. ಮತ್ತು ನಿಮ್ಮ ಸೌಂದರ್ಯವನ್ನು ಹಾಗೆಯೇ ನಿರ್ವಹಿಸಲೂಬಹುದು.
ನಿಮ್ಮ ವಯಸ್ಸಾಗುವಿಕೆ ಸಮಸ್ಯೆಗಳನ್ನು ನೀವು ಮೊದಲು ತಿಳಿದುಕೊಳ್ಳಬೇಕು. ವಯಸ್ಸಾಗುವಿಕೆಯ ಪರಿಣಾಮವನ್ನು ನೀವು ಕೂಡ ತಿಳಿದುಕೊಳ್ಳಬೇಕು, ಅವುಗಳನ್ನು ಉಪಚರಿಸುವ ರೀತಿ ಕೂಡ ನಿಮಗೆ ತಿಳಿದಿರಬೇಕು. ನಿಮ್ಮ ತ್ವಚೆ ಉತ್ತಮವಾಗಿದ್ದರೆ ವಯಸ್ಸಾಗುವಿಕೆಯ ಕೆಲವೊಂದು ಲಕ್ಷಣಗಳನ್ನು ನಿಮಗೆ ನಿವಾರಿಸಬಹುದು. ನೀವು ಹೆಚ್ಚು ನೀರನ್ನು ಕುಡಿದು ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಬೇಕು. ಮತ್ತು ನಿಮ್ಮ ತ್ವಚೆಯನ್ನು ಹೊಗೆ, ಕಲುಷಿತ ವಾತಾವರಣದಿಂದ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.
ನಿಮ್ಮ ಮುಖದ ಸೌಂದರ್ಯವನ್ನು ವೃದ್ಧಿಸುವಂತಹ ಮತ್ತು ತ್ವಚೆಯ ಮುಪ್ಪಾಗಿಸುವಿಕೆಯನ್ನು ತಡೆಹಿಡಿಯುವ ನೈಸರ್ಗಿಕ ವಿಧಾನಗಳಿದ್ದು ಇದನ್ನು ನೀವು ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಿತ್ಯವೂ ಬಳಸಬಹುದಾಗಿದೆ. ಅದರಲ್ಲೂ ಅಲೋವೇರಾ ಒಂದು ನೈಸರ್ಗಿಕ ಗುಣಗಳನ್ನು ತನ್ನಲ್ಲಿ ಹೇರಳವಾಗಿ ಹೊಂದಿರುವ ಸಸ್ಯವಾಗಿದ್ದು ಇದನ್ನು ನಿಮ್ಮ ತ್ವಚೆಗೆ ಬಳಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಅಲೋವೇರಾವನ್ನು ನಿಮ್ಮ ತ್ವಚೆಯ ಸೌಂದರ್ಯ ವೃದ್ಧಿಸುವ ಒಂದು ಉತ್ತಮ ಮನೆಮದ್ದಾಗಿ ಬಳಸಿಕೊಳ್ಳಬಹುದಾಗಿದೆ.
ಮುಖದಲ್ಲಿ ಕಂಡು ಬರುವ ಬಿಳಿ ಚುಕ್ಕಿಗಳನ್ನು ನಿವಾರಿಸುವುದು ಹೇಗೆ?

ತ್ವಚೆಯ ಹೊಳಪನ್ನು ವೃದ್ಧಿಸುತ್ತದೆ
ನೀವು ಅಲೋವೇರಾವನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಿರುವಂತೆ ತ್ವಚೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ನಿಮಗೆ ಗಮನಿಸಬಹುದು. ಮುಖದಲ್ಲಿನ ವಿಷಯುಕ್ತ ಅಂಶಗಳನ್ನು ಇದರಲ್ಲಿನ ಲೋಳೆ ರಸ ಹೊರಹಾಕಿ ಮುಖವನ್ನು ಶುಭ್ರಗೊಳಿಸುತ್ತದೆ.

ತ್ವಚೆಯ ಆರೋಗ್ಯಕ್ಕೆ
ನೆರಿಗೆ ಬಿದ್ದಿರುವ ನಿಮ್ಮ ತ್ವಚೆಯನ್ನು ಆಲೋವೇರಾದ ಲೋಳೆಯೊಂದಿಗೆ ಉತ್ತಮವಾಗಿ ಪರಿಹರಿಸಿಕೊಳ್ಳಬಹುದು. ಇದು ನಿಮ್ಮ ತ್ವಚೆಗೆ ಬೇಕಾದ ಆವಶ್ಯಕ ಮಿನರಲ್ ಮತ್ತು ವಿಟಮಿನ್‌ಗಳನ್ನು ನೀಡುತ್ತದೆ. ತ್ವಚೆಯ ಆರೋಗ್ಯಕ್ಕೂ ಇದು ಒಳ್ಳೆಯದು.

ಸೌಂದರ್ಯ ವೃದ್ಧಿ
ನಿಮ್ಮ ತ್ವಚೆಗೆ ಆಲೋವೇರಾ ಹಚ್ಚಿದಾಗ, ಇದು ನಿಮ್ಮ ತ್ವಚೆಯನ್ನು ಹೊಳೆಯಿಸುತ್ತದೆ. ತ್ವಚೆಯಲ್ಲಿನ ನೆರಿಗೆಯನ್ನು ಕಡಿಮೆಗೊಳಿಸಿ ಮುಖದ ಸೌಂದರ್ಯಕ್ಕೆ ನೆರವನ್ನು ನೀಡುತ್ತದೆ.

ಮೃತ ಕೋಶಗಳ ರಕ್ಷಣೆ
ಅಲೋವೇರಾ ಮೃತಕೋಶಗಳನ್ನು ಅಭಿವೃದ್ಧಿಪಡಿಸುತ್ತದೆ. ಇದು ತ್ವಚೆಯ ಸೌಂದರ್ಯವನ್ನು ವೃದ್ಧಿಸಿ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ವಯಸ್ಸಾಗುವಿಕೆಯ ಲಕ್ಷಣಗಳನ್ನು ನಿವಾರಿಸುತ್ತದೆ.

ಕಣ್ಣಿನ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ
ನಿಮ್ಮ ಕಣ್ಣಿನ ಸುತ್ತಲೂ ಪ್ರತಿ ರಾತ್ರಿ ಅಲೋವೇರಾ ಜೆಲ್ ಅನ್ನು ಹಚ್ಚಿ. ಕಣ್ಣುಗಳ ಕೆಳಗೆ ಇರುವ ಸುಕ್ಕುಗಳು ಪ್ರಮುಖ ತೊಂದರೆಯಾಗಿರುತ್ತದೆ, ಮತ್ತು ಅಲೋವೇರಾ ಅದನ್ನು ಉಪಚರಿಸಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಇ, ಎ ಮತ್ತು ಸಿಯನ್ನು ಒಳಗೊಂಡಿರುತ್ತದೆ ಹಾಗೂ ತ್ವಚೆಯ ಹೊಳಪನ್ನು ಹೆಚ್ಚಿಸುವುದಲ್ಲದೆ ತ್ವಚೆಯ ಆರೋಗ್ಯವನ್ನು ಸುಧಾರಿಸುತ್ತದೆ.

ಅಲೋವೇರಾ ಮತ್ತು ವಿಟಮಿನ್ ಇ
ವಿಟಮಿನ್ ಇ ದ್ರವದೊಂದಿಗೆ ಅಲೋವೇರಾ ಜೆಲ್ ಅನ್ನು ಸೇರಿಸಿ. ಈಗ ಇದನ್ನು ಪ್ಯಾನ್‌ನಲ್ಲಿ ಬಿಸಿ ಮಾಡಿಕೊಳ್ಳಿ ಮತ್ತು 1/3 ಭಾಗದಷ್ಟು ಆಲಿವ್ ಆಯಿಲ್‌ನೊಂದಿಗೆ ಅದನ್ನು ಮಿಶ್ರ ಮಾಡಿಕೊಳ್ಳಿ. ಇದು ನಿಮ್ಮ ಮುಖದ ಅಂದವನ್ನು ಹಾಳು ಮಾಡುತ್ತಿರುವ ನೆರಿಗೆಯನ್ನು ಹೋಗಲಾಡಿಸಿ ನಿಮ್ಮ ಸೌಂದರ್ಯವನ್ನು ಹೊಳೆಯುವಂತೆ ಮಾಡುತ್ತದೆ.

ಅಲೋವೇರಾ ಮತ್ತು ಬೋರೆಕ್ಸ್
ನೀವು ನೀರಿನೊಂದಿಗೆ ಬೋರೆಕ್ಸ್ ಅನ್ನು 1:1 ಪ್ರಮಾಣದಲ್ಲಿ ಸೇರಿಸಿಕೊಳ್ಳಬಹುದು ಮತ್ತು ಇದನ್ನು ಕುದಿಸಿ ತಣಿಸಿಕೊಳ್ಳಿ. ಇದಕ್ಕೆ ನೈಸರ್ಗಿಕ ತೆಂಗಿನೆಣ್ಣೆಯನ್ನು ಸೇರಿಸಿಕೊಳ್ಳಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದು ಕೂಡ ನಿಮ್ಮ ತ್ವಚೆಯ ವಯಸ್ಸಾಗುವಿಕೆಯ ಸಮಸ್ಯೆಯನ್ನು ನಿವಾರಿಸುತ್ತದೆ.



Click it and Unblock the Notifications
