Latest Updates
-
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ!
ಈಜಿನಿಂದ ಬರುವ ಚರ್ಮದ ಸಮಸ್ಯೆಗಳು
ಜಗತ್ತಿನಲ್ಲಿ ಹೆಚ್ಚಿನ ಮಂದಿ ಅಧಿಕ ಉಷ್ಣತೆಯಿಂದ ಪಾರಾಗಲು ಅಥವಾ ದೇಹಕ್ಕೆ ಆರಾಮ ನೀಡಲು ಈಜುವುದನ್ನು ಇಷ್ಟಪಡುತ್ತಾರೆ. ಆದರೂ ಈಜುವುದರಿಂದ ಹಲವಾರು ರೀತಿಯ ಪ್ರಯೋಜನಗಳಿದ್ದರೂ ಕೆಲವೊಂದು ಚರ್ಮದ ಸಮಸ್ಯೆಗಳು ಇದರಿಂದ ಬರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು.
ಈಜುಕೊಳದಲ್ಲಿ ನೀರನ್ನು ಶುದ್ಧೀಕರಿಸಲು ಉಪಯೋಗಿಸುವ ದ್ರಾವಣವೇ ಕ್ಲೋರಿನ್. ಸೋಂಕು ನಿವಾರಕ ಗುಣಗಳನ್ನು ಹೊಂದಿರುವ ಕ್ಲೋರಿನ್ ನನ್ನು ದೀರ್ಘ ಸಮಯದಿಂದ ನೀರಿನ ಶುದ್ದೀಕರಣಕ್ಕಾಗಿ ಬಳಸಲಾಗುತ್ತಿದೆ.
ನಮ್ಮ ತ್ವಚೆ ತುಂಬಾ ಸೂಕ್ಷ್ಮ ಮತ್ತು ನೀರನ್ನು ಹೀರಿಕೊಳ್ಳುವ ಪ್ರವೃತ್ತಿ ಹೊಂದಿರುವ ಕಾರಣದಿಂದ ನೀರಿಗೆ ಮಿಶ್ರಣ ಮಾಡಿರುವ ಪ್ರತಿಯೊಂದು ಅಂಶವನ್ನು ಚರ್ಮವು ಹೀರಿಕೊಂಕೊಳ್ಳುವುದರಿಂದ ಚರ್ಮದ ಸಮಸ್ಯೆಯಾಗಬಹುದು.

ಈಜುವ ವೇಳೆ ಚರ್ಮವು ಹೆಚ್ಚು ಒಡ್ಡಲ್ಪಡುತ್ತದೆ ಮತ್ತು ಈ ಬಗ್ಗೆ ನಾವು ತಿಳಿದುಕೊಂಡು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು. ಈಜಿನ ವೇಳೆ ಉಂಟಾಗುವ ಚರ್ಮ ಸಂಬಂಧಿ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ಚರ್ಮದ ಹಾನಿಯನ್ನು ಕಡಿಮೆ ಮಾಡಿ, ಚರ್ಮದ ಆರೋಗ್ಯ ವೃದ್ಧಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಪುರುಷರಿಗೆ ಸಲಹೆಗಳು
ಈಜಿನಿಂದ ಉಂಟಾಗುವ ಚರ್ಮದ ಸಮಸ್ಯೆಗಳು
ಚರ್ಮವನ್ನು ತೇವಾಂಶರಹಿತವಾಗಿಸುವುದು
ಅತಿಯಾಗಿ ಈಜುವುದರಿಂದ ನಿಮ್ಮ ಚರ್ಮವು ತುಂಬಾ ಸೂಕ್ಷ್ಮವಾಗುತ್ತದೆ ಮತ್ತು ಚರ್ಮದ ಸಮಸ್ಯೆಗೊಳಗಾಗುವ ಪ್ರವೃತ್ತಿ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಚರ್ಮವು ತೇವಾಂಶ ಕಳಕೊಳ್ಳುವುದರಿಂದ ಚರ್ಮದಲ್ಲಿನ ನೈಸರ್ಗಿಕ ಪಿಎಚ್ ಸಮತೋಲನ ನಷ್ಟವಾಗುತ್ತದೆ. ಇದರಿಂದ ಚರ್ಮವು ಒಣಗಿ, ಜೋತುಬೀಳುತ್ತದೆ.
ಚರ್ಮದ ತುರಿಕೆ
ಈಜುವುದರಿಂದ ಚರ್ಮದ ಮೇಲಾಗುವ ಪರಿಣಾಮಗಳಲ್ಲಿ ಒಂದೆಂದರೆ ಅದು ಚರ್ಮದ ತುರಿಕೆ. ನಿಯಮಿತವಾಗಿ ಈಜುವುದರಿಂದ ಚರ್ಮವು ತನ್ನ ನೈಸರ್ಗಿಕ ನೀರಿನಾಂಶ ಕಳಕೊಳ್ಳುವ ಕಾರಣ ಚರ್ಮದಲ್ಲಿ ತುರಿಕೆ ಉಂಟಾಗಿ ಕೆಂಪು ಗುಳ್ಳೆಗಳು ಮೂಡಬಹುದು. ಈ ಗುಳ್ಳೆಗಳು ತುಂಬಾ ನೋವನ್ನುಂಟು ಮಾಡಬಹುದು.
ವಯಸ್ಸಾಗುವುದರ ಅಕಾಲಿಕ ಚಿಹ್ನೆಗಳು
ನೀವು ಯುವಕರಾಗಿದ್ದರೆ ಮತ್ತು ವಯಸ್ಸಾಗುವುದರ ಅಕಾಲಿಕ ಚಿಹ್ನೆಗಳನ್ನು ತಪ್ಪಿಸಲು ಬಯಸುವಿರಾದರೆ ಈಜುವಾಗ ಕೆಲವೊಂದು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ನಿಯಮಿತವಾಗಿ ಈಜುವುದರಿಂದ ನಿಮ್ಮ ಚರ್ಮವು ವಯಸ್ಸಿನ ಸಂಬಂಧಿ ಆಗುವಂತಹ ಚರ್ಮ ಸಮಸ್ಯೆಗಳಾದ ಸೂಕ್ಷ್ಮ ರೇಖೆಗಳು, ಜೋತುಬೀಳುವುದು ಇತ್ಯಾದಿ ಕಾಣಿಸಿಕೊಳ್ಳಬಹುದು. ಚರ್ಮದಲ್ಲಿನ ನೀರಿನಾಂಶದ ಕೊರತೆಯಿಂದ ಹೀಗಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮುಖದ ಚರ್ಮದ ಸಿಪ್ಪೆ ಸುಲಿಯಲು ಕಾರಣ ಮತ್ತು ಚಿಕಿತ್ಸೆ
ಸೂರ್ಯನಿಂದಾಗುವ ಹಾನಿ ಅಧಿಕ
ನೀವು ಯಾವಾಗಲೂ ಈಜುತ್ತಲಿದ್ದರೆ ಆಗ ಸೂರ್ಯನಿಂದ ಚರ್ಮದ ಮೇಲಾಗುವ ಹಾನಿಯಂತಹ ಚರ್ಮ ಸಮಸ್ಯೆ ಕಾಣಿಸಬಹುದು. ನೀವು ಈಜುತ್ತಿರುವಾಗ ನಿಮ್ಮ ಚರ್ಮದ ಪರಿಸ್ಥಿತಿಯಾದ ಒಣಚರ್ಮ, ತುರಿಕೆ ವಿರುದ್ಧ ಹೋರಾಡುವ ಚರ್ಮದ ಗುಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತದೆ. ಇದರಿಂದ ಅದು ಸೂರ್ಯನಿಂದಾಗುವ ಹಾನಿಗೆ ತುಂಬಾ ಸೂಕ್ಷ್ಮವಾಗುತ್ತದೆ. ಹೆಚ್ಚಾಗಿ ಬಿಸಿಲಿನಲ್ಲಿದ್ದರೆ ಆಗ ಚರ್ಮ ಸುಡಬಹುದು.
ಬಿಸಿ ನೀರಿನ ಸ್ನಾನ ನಿಯಂತ್ರಿಸಿ
ಈಜಿ ಬಂದ ಬಳಿಕ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ತುಂಬಾ ಅನಾರೋಗ್ಯಕರ. ಇದು ಈಜುವುದರಿಂದ ಉಂಟಾಗುವ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಬಿಸಿನೀರು ಅಥವಾ ಸ್ಟೀಮ್ ನಿಂದ ಕ್ಲೋರಿನ್ ಚರ್ಮದ ಆಳಕ್ಕೆ ಇಳಿಯಲು ನೆರವಾಗುತ್ತದೆ ಮತ್ತು ಇದರಿಂದ ಒಣಚರ್ಮ ಉಂಟಾಗಬಹುದು.
ವಿಷದಾಂಶ ಹೆಚ್ಚಳ
ಪ್ರತೀ ಸಲ ನೀವು ಈಜಿದಾಗ ದೇಹವು ಹಾನಿಕಾರಕ ವಿಷಕಾರಿ ವಸ್ತುಗಳನ್ನು ಹೀರಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತದೆ. ಈಜುವುದರಿಂದ ಆಗುವ ಚರ್ಮದ ಸಮಸ್ಯೆಗಳಲ್ಲಿ ಇದಕ್ಕೆ ಅಗ್ರಸ್ಥಾನ ನೀಡಲಾಗಿದೆ. ಈ ಕಾರಣ ನಿಮ್ಮ ಚರ್ಮ ಒಣಗುತ್ತದೆ ಮತ್ತು ಗಾಳಿಗೆ ಒಡ್ಡಿದಾಗ ಚರ್ಮವು ಒಣಗಬಹುದು.
ಈಜುವುದರಿಂದ ಉಂಟಾಗುವ ಚರ್ಮದ ಸಮಸ್ಯೆಗಳನ್ನು ತಿಳಿಕೊಂಡರೆ ಅದಕ್ಕೆ ಪರಿಣಾಮಕಾರಿ ಚಿಕಿತ್ಸೆ ಮಾಡಿಸಬಹುದು. ಪ್ರತೀ ಸಲ ನೀವು ಈಜುವಾಗ ನಿಮ್ಮನ್ನು ರಕ್ಷಿಸಿ ಮತ್ತು ಚರ್ಮದ ಬಗ್ಗೆ ಕಾಳಜಿ ತೆಗೆದುಕೊಳ್ಳಿ. ಈಜುಕೊಳಕ್ಕೆ ಇಳಿಯುವ ಮೊದಲು ನೀರು ಕ್ಲೋರಿನ್ ಮುಕ್ತ ಅಥವಾ ಕಡಿಮೆ ಕ್ಲೋರಿನ್ ಬಳಸಲಾಗಿದೆಯಾ ಎಂದು ದೃಢಪಡಿಸಿಕೊಳ್ಳಿ. ಇದರಿಂದ ನೀವು ಚರ್ಮದ ಸಮಸ್ಯೆಯಿಂದ ದೂರ ಉಳಿಯಬಹುದು.



Click it and Unblock the Notifications