Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಹೇಗೆ?
ಚಳಿಗಾಲ ಬಂತೆಂದರೆ ಸಾಕು, ಸಮಸ್ಯೆಗಳ ಸುರಿಮಳೆಯೇ ಕಂಡುಬರುತ್ತದೆ, ತ್ವಚೆ ಒಡೆಯುವುದು, ಪಾದಗಳಲ್ಲಿ ಬಿರುಕು, ತುಟಿ ಡ್ರೈಯಾಗಿ ಬಿರುಕು ಕಂಡು ಬರುವುದು, ಕೂದಲು ಒಣಗುವುದು ಈ ರೀತಿಯ ನಾನಾ ಸಮಸ್ಯೆಗಳು ಕಂಡು ಬರುವುದು.
ಇಂತಹ ಸಮಸ್ಯೆಯಿಂದ ರಕ್ಷಣೆ ಪಡೆಯಲು, ಚಳಿಗಾಲ ಪ್ರಾರಂಭವಾಗುತ್ತಿರುವಾಗಲೇ ಎಚ್ಚರಿಕೆ ವಹಿಸುವುದು ಒಳ್ಳೆಯದು. ಚಳಿಗಾಲದಲ್ಲಿ ನಿಮ್ಮ ಸೌಂದರ್ಯ ಕಾಪಾಡುವಲ್ಲಿ ಈ ಟಿಪ್ಸ್ ತುಂಬಾ ಸಹಾಯಕಾರಿಯಾಗಿವೆ:
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸುಂದರ ಕಣ್ಣಿಗಾಗಿ ಮೇಕಪ್‌ನ ಸ್ಪರ್ಶ

1. ನೀರಿನ ಅಂಶ:
ದೇಹದಲ್ಲಿ ನೀರಿನ ಅಂಶ ಪ್ರಮುಖ ಪಾತ್ರ ವಹಿಸುತ್ತದೆ, ನೀವು ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿವುದು ಅತ್ಯವಶ್ಯಕ, ಜೊತೆಗೆ ಫಾಸ್ಟ್ ಫುಡ್‌ನಿಂದ ಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು.
2. ಸ್ನಾನಕ್ಕೆ ಅತೀ ಬಿಸಿ ನೀರು ಬಳಸಬೇಡಿ:
ಚಲಿಗಾಲದಲ್ಲಿ ಬಿಸಿ ಬಿಸಿ ನೀರು ಸ್ನಾನ ಮಾಡಬೇಕು ಎಂದು ಮನಸ್ಸು ಬಯಸುವುದು ಸಹಜ, ಆದರೆ ಅತಿ ಬೆಚ್ಚಗಿನ ನೀರು ಚರ್ಮಕ್ಕೆ ಒಳ್ಳೆಯದಲ್ಲ, ಅಲ್ಲದೆ ಕೆಲವೊಂದು ಸೋಪು ಕೂಡ ದೇಹದ ಚರ್ಮಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
3. ಎಣ್ಣೆ ಸ್ನಾನ:
ಚಳಿಗಾಲದಲ್ಲಿ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡುವುದು ಒಳ್ಳೆಯದು, ವಾರಕ್ಕೊಮ್ಮೆ ಎಣ್ಣೆ ಸ್ನಾನ ಮಾಡುವುದರಿಂದ ಅದು ದೇಹದ ಕಾಂತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೈಲ್ ಪೈಂಟಿಗ್ ಬಗ್ಗೆ ಕೆಲ ಸಂಗತಿಗಳು
4. ತುಟಿ ಒಣಗುವುದು:
ಚಳಿಗಾಲದಲ್ಲಿ ತುಟಿ ಒಣಗುವುದು, ಅಥವಾ ಪಾದಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದು ಸಾಮಾನ್ಯ, ಇಂತಹ ಸಮಸ್ಯೆಯನ್ನು ನಿವಾರಿಸಲು ತುಟಿಗೆ ಲಿಪ್-ಬಾಮ್ ಅಥವಾ ಹಾಲಿನ ಕೆನೆ ಸವರಬೇಕು,
5 . ತ್ವಚೆಗೆ ಮಾಯಿಶ್ಚರೈಸರ್ ಬಳಸಿ:
ಚಳಿಗಾಲದಲ್ಲಿ ತ್ವಚೆಗೆ ಮಾಯಿಶ್ಚರೈಸರ್ ಅನ್ನು ಬಳಸಿದರೆ ತ್ವಚೆ ಮೃದುವಾಗುವುದಲ್ಲದೆ ತ್ವಚೆಯೂ ಬಿರುಕು ಬಿಡುವುದಿಲ್ಲ. ಹೊರಗಡೆ ಹೋಗುವಾಗ ಮಾಯಿಶ್ಚರೈಸರ್ ಹಚ್ಚಿ.
6. ನಿರ್ಜಿವ ತ್ವಚೆಯನ್ನು ಹೋಗಲಾಡಿಸಿ:
ಸ್ನಾನ ಮಾಡುವ ಮುಂಚೆ 2 ಚಮಚ ಸಕ್ಕರೆಗೆ 2 ಚಮಚ ಎಣ್ಣೆ ಹಾಕಿ ಮಿಶ್ರಣ ಮಾಡಿಕೊಳ್ಳಿ ಹಾಗೂ ಮೈಗೆ ಸ್ಕ್ರಬ್ ಮಾಡಿಕೊಳ್ಳಿ. ಇದು ನಿರ್ಜಿವ ತ್ವಚೆಯನ್ನು ಹೋಗಲಾಡಿಸಿ, ತ್ವಚೆಯ ಹೊಳಪು ಹೆಚ್ಚಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಯಾಸಗೊಂಡ ಕಣ್ಣುಗಳ ತ್ವರಿತ ಮೇಕಪ್
7. ಚಳಿಗಾಲದಲ್ಲಿ ಕೂದಲಿನ ರಕ್ಷಣೆ:
ಚಳಿಗಾಲದಲ್ಲಿ ತ್ವಚೆ ಹಾಗೂ ಕೂದಲು ತುಂಬಾ ಒಣಗುತ್ತದೆ. ಕೂದಲು ಕವಲೊಡೆದು ಉದುರಲಾರಂಭಿಸುತ್ತದೆ. ಈ ಸಮಯದಲ್ಲಿ ಎಣ್ಣೆಯನ್ನು ಹಾಗೇ ತಲೆಗೆ ಹಚ್ಚುವುದಕ್ಕಿಂತ ಬಿಸಿ ಮಾಡಿ ಹಚ್ಚಿದರೆ ಒಳ್ಳೆಯದು.



Click it and Unblock the Notifications
