Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಪೆಟ್ರೋಲಿಯಮ್ ಜೆಲ್ಲಿಯನ್ನು ಬಳಸಲು ಹಲವಾರು ವಿಧಾನಗಳು
ಹಿನ್ನೆಲೆ: 1859ರಲ್ಲಿ ಅಮೆರಿಚಾದ ಪೆನ್ಸಿಲ್ವೇವನಿಯ ಪ್ರಾಂತ್ಯದಲ್ಲಿ ಎಣ್ಣೆ ಭಾವಿ ಯಂತ್ರಗಳಮೇಲೆ ಒಂದು ದಟ್ಟವಾದ ವಸ್ತು ಕಂಡುಬಂತು. ಅದು ತಮ್ಮ ಕೆಲಸಗಳಿಗೆ ಒಂದು ಅಡಚಣೆಯಾಗಿತ್ತು. ಆದರೆ ಕೆಲವು ರಾಸಾಯನಿಕ ಪರಿಷ್ಕರಣೆಯ ನಂತರ ಆ ದಟ್ಟವಾದ ವಸ್ತುವನ್ನು ವಾಣಿಜ್ಯ ಪೆಟ್ರೋಲಿಯುಮ್ ಜೆಲ್ ಎಂದು ವ್ಯಾಪಕವಾಗಿ ಮಾರಾಟಮಾಡಲು ಆರಂಭಿಸಿದರು.
ಈ ಪೆಟ್ರೋಲಿಯಮ್ ಜೆಲ್ಲಿಯನ್ನು ಹಲವಾರು ವಿಧಾನಗಳಲ್ಲಿ ಈ ಕೆಳಕಂಡಂತೆ ಬಳಸಬಹುದು:
ಕಾಂತಿಯುತ ತ್ಚಚೆಗೆ ಕಡೆಗಣಿಸಬೇಕಾದ ಅನಾರೋಗ್ಯಕರ ಆಹಾರಗಳು
1. ಪೆಟ್ರೋಲಿಯಮ್ ಜೆಲ್ಲಿಯನ್ನು ತುಟಿಗಳಮೇಲೆ ಪ್ರತಿದಿನ ಹಚ್ಚಿದರೆ ನಯವಾದ ಮತ್ತು ಮೃದು ತುಟಿಗಳನ್ನು ಪಡೆಯಬಹುದು. ಉತ್ತಮ ಫಲಿತಾಂಶಕ್ಕೆ ರಾತ್ರಿ ಮಲಗುವ ಮೊದಲು ತುಟಿಗಳಮೇಲೆ ಲೇಪಿಸಿದರೆ ಬೆಳಗಾದ ಮೇಲೆ ನೋಡಿದರೆ ಹೊಳೆಯುವ ಮತ್ತು ನಯವಾದ ತುಟಿಗಳನ್ನು ಕಾಣಬಹುದು.

2. ಹಳೆಯ ಲಿಪ್ ಸ್ಟಿಕ್ ಜೊತೆಗೆ ಪೆಟ್ರೋಲಿಯಮ್ ಜೆಲ್ಲಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸೇರಿಸಿ ಬಳದರೆ ಲಿಪ್ ಸ್ಟಿಕ್ ಮೇಲೆ ಹೊಳಪು ಕಾಣಬಹುದು. ಹಾಗೆಯೇ ಲಿಪ್ಸ್ಟಿ ಕ್ ಹಾಕಿಗೊಂಡ ನಂತರ ಸ್ವಲ್ಪ ಪೆಟ್ರೋಲಿಯಮ್ ಜೆಲ್ಲಿಯನ್ನು ಸವರಿದರೆ ಹೊಳಪು ಬರುತ್ತದೆ.
3. ತುಟಿಗಳ ಮೇಲೆ ಉದುರುವ ಚರ್ಮವಿದ್ದರೆ ಅದನ್ನು ಪೆಟ್ರೋಲಿಯಮ್ ಜೆಲ್ಲಿಯಿಂದ ಮೆಲ್ಲಗೆ ಉಜ್ಜಿದರೆ ಬಿಡಿಸಿಕೊಂಡಿರುವ ಚರ್ಮವು ಬಿದ್ದುಹೋಗಿ ತೇವಾಂಶದ ಜೊತೆಗೆ ಹೊಳೆಯುವಹಾಗೆ ಮಾಡುತ್ತದೆ. ಈ ಕಾರ್ಯವನ್ನು ನೀವು ಬೆಳಗ್ಗೆ ಎದ್ದ ಕೂಡಲೇ ಪ್ರಯತ್ನಿಸಬಹುದು.
4. ಚಳಿಗಾಲದಲ್ಲಿ ಶೀತಲಗಾಳಿಯಿಂದ ನಿಮ್ಮ ಸೂಕ್ಷ್ಮ ಕಣ್ಣುಗುಡ್ಡೆಗಳ ಮೇಲೆ ಹಚ್ಚಿ ರಕ್ಷಿಸಬಹುದು ಹಾಗೂ ನಿಮ್ಮ ಕಣ್ಣು ಗುಡ್ಡೆಗಳಮೇಲಿನ ಚರ್ಮವನ್ನು ರಕ್ಷಿಸಲು ಪೆಟ್ರೋಲಿಯುಮ್ ಜೆಲ್ಲಿಯು ಒಂದು ಪರಿಪೂರ್ಣ ಆಯ್ಕೆಯಾಗಿದೆ.
5. ನಿಮ್ಮ ಕಣ್ಣಿನಮೇಲಿರುವ ಹುಬ್ಬುಗಳನ್ನು ಕಾಪಾಡಲು ಅದರಮೇಲೆ ಸ್ವಲ್ಪ ಪ್ರಮಾಣದಲ್ಲಿ ಪೆಟ್ರೋಲಿಯಮ್ ಜೆಲ್ಲಿಯನ್ನು ಸವರಿ. ಹೀಗೆ ಮಾಡುವುದರಿಂದ ಪೆಟ್ರೋಲಿಯಮ್ ಜೆಲ್ಲಿಯು ಇತರ ಜೆಲ್ ಕಾರ್ಯವನ್ನು ಉತ್ತಮವಾಗಿ ಮಾಡುತ್ತದೆ.
ಸನ್‍ಟ್ಯಾನ್ ನಿವಾರಿಸಲು ಮನೆಯಲ್ಲಿಯೇ ಇದೆ ಮದ್ದುಗಳು
6. ನಿಮ್ಮ ಮುಖವು ಕಾಂತಿಯಿಂದ ಹೊಳೆಯಬೇಕಾದರೆ ನಿಮ್ಮ ಕೆನ್ನೆಯಯಮೇಲೆ ಮತ್ತು ಕಣ್ಣಿನ ಹುಬ್ಬುಗಳ ಮೇಲೆ ಪೆಟ್ರೋಲಿಯಮ್ ಜೆಲ್ಲಿಯನ್ನು ಸವರಿ.
7. ಪೆಟ್ರೋಲಿಯುಮ್ ಜೆಲ್ಲಿಯನ್ನು ಕೆಲವು ಸೆಕೆಂಡ್ ಕಾಲ ಕಾಯಿಸಿ ನಿಮ್ಮ ಚರ್ಮದಮೇಲೆ ರಾತ್ರಿ ಹಚ್ಚಿರಿ. ಹೀಗೆ ದಿನವೂ ಕ್ರಮಬದ್ಧವಾಗಿ ಮಾಡಿದರೆ ನಿಮ್ಮ ಚರ್ಮವು ಮೃದುವಾಗಿರುತ್ತದೆ. ಎಣ್ಣೆಯುಕ್ತ ಚರ್ಮವಿದ್ದಲ್ಲಿ ದಿನ ಬಿಟ್ಟು ದಿನ ಬಳಸಿ.
8. ಮಲಗುವ ಮುನ್ನ ನಿಮ್ಮ ಪಾದಗಳಮೇಲೆ ಹಚ್ಚಿ ಅದರ ಮೇಲೆ ಸಾಕ್ಸ್ ಹಾಕಿಕೊಂಡು ಇಡೀ ರಾತ್ರಿ ಹಾಗೆಯೇ ಮಲಗಿ. ಇದರಿಂದ ನಿಮ್ಮ ಪಾದಗಳು ಮತ್ತು ಬೆರಳುಗಳು ಮೃದುವಾಗುತ್ತದೆ. ಇದೇರೀತಿ ನಿಮ್ಮ ಕೈಗಳಮೇಲೆಯೂ ಹಚ್ಚಿ ಹತ್ತಿಬಟ್ಟೆಯ ಗ್ಲವ್ಸ್ ಇಡೀ ರಾತ್ರಿ ಹಾಕಿಕೊಂಡು ಅಭ್ಯಾಸಮಾಡಿದರೆ ನಿಮ್ಮ ಬೆರಳುಗಳು ಮತ್ತು ಕೈಗಳು ಮೃದುವಾಗುತ್ತದೆ.
9. ನಿಮ್ಮ ಉಗುರುಗಳು ಒಣಗಿ ಒಡೆದುಹೋಗುತ್ತಿದ್ದರೆ ಅಂತಹ ಉಗುರಿನ ಮೇಲೆ ಕ್ರಮಬದ್ಧವಾಗಿ ದಿನಕ್ಕೆ ಎರಡುಸಲ ಬಳೆಯುತ್ತಿದ್ದರೆ ನಿಮ್ಮ ಉಗುರುಗಳು ಮೃದುವಾಗುವುದಲ್ಲದೆ ಮತ್ತೆ ಒಡೆಯುವುದಿಲ್ಲ.
10. ನಿಮ್ಮ ತಲೆಯ ಕೂದಲ ಕೊನೆಯಲ್ಲಿರುವ ಒಡಕಿನಮೇಲೆ ಕ್ರಮಬದ್ಧವಾಗಿ ದಿನವೂ ಹಚ್ಚುತ್ತಿದ್ದರೆ ಆರೋಗ್ಯಕೂದಲನ್ನು ಪಡೆಯುತ್ತೀರಿ.
ಕಪ್ಪು ಕುತ್ತಿಗೆ ಭಾಗವನ್ನು ಚಿಕಿತ್ಸೆಗೊಳಿಸುವ ಮನೆಮದ್ದುಗಳು
11. ಕೆಲವು ಸುಗಂಧ ದ್ರವ್ಯಗಳು ಸ್ವಲ್ಪ ಸಮಯದ ನಂತರ ವಾಸನೆ ಕಡಿಮೆಯಾಗುತ್ತದೆ. ಅದನ್ನು ತಪ್ಪಿಸಲು ಸುಘಂಧ ದ್ರವ್ಯವನ್ನು ಬಳಸಿದ ನಂತರ ಅದರ ಮೇಲೆ ಸ್ವಲ್ಪ ಸವರಿದರೆ ಸುಘಂಧದ ವಾಸನೆ ದೀರ್ಘಕಾಲವಿರುತ್ತದೆ.



Click it and Unblock the Notifications