Latest Updates
-
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು?
ಸ್ಕಿನ್ ಟ್ಯಾಗ್‌ಗಳ ನಿವಾರಣೆಗಾಗಿ ಮನೆ ಮದ್ದು
ನಿಮ್ಮ ತ್ವಚೆಯಲ್ಲಿ ಎದ್ದುಕಾಣುವ ಬೆಳವಣಿಗೆಗಳನ್ನು ನೀವು ನೋಡಿರಬಹುದು, ದೇಹದ ಕೆಲವು ಭಾಗಗಳಲ್ಲಿ ತುಂಬಿಕೊಂಡಿರುವ ಸ್ಕಿನ್ ಟ್ಯಾಗ್‌ಗಳು (ಕೆಡು) ಚರ್ಮದ ಮೇಲೆ ಹೆಚ್ಚುವರಿಯಾಗಿ ಬೆಳೆಯುವ ಒಂದಂಶವಾಗಿದೆ. ಇದೊಂದು ಗಂಭೀರ ಸಮಸ್ಯೆ ಅಲ್ಲ ಮತ್ತು ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತದೆ.
ಚರ್ಮದ ಮೇಲಿನ ಸಣ್ಣ ಬೊಬ್ಬೆಗಳಂತಿರುವ ಈ ಕೆಡುಗಳು ಯಾವುದೇ ರೋಗದ ಲಕ್ಷಣವಲ್ಲ. ಇವುಗಳು ಹೆಚ್ಚಾಗಿ ಒಂದೇ ಕಡೆಯಲ್ಲಿ ಒತ್ತೊತ್ತಾಗಿ ಬೆಳೆಯುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮುಖದ ಚರ್ಮದ ಸಿಪ್ಪೆ ಸುಲಿಯಲು ಕಾರಣ ಮತ್ತು ಚಿಕಿತ್ಸೆ
ಈ ಟ್ಯಾಗ್‌ಗಳು ಕೊಲಜನ್ ಮತ್ತು ರಕ್ತನಾಳಗಳ ಗೊಂಚಲಾಗಿದ್ದು ತ್ವಚೆಯ ವರ್ತುಲದಲ್ಲಿ ಬೆಳೆಯುತ್ತವೆ. ಈ ಸ್ಕಿನ್ ಟ್ಯಾಗ್‌ಗಳನ್ನು ನೀವು ಹೆಚ್ಚಾಗಿ ಮುಖ, ಕುತ್ತಿಗೆ, ತೋಳುಗಳ ಅಡಿಯಲ್ಲಿ, ಕಣ್ಣಗುಡ್ಡೆ, ತೊಡೆಸಂದು, ಸ್ತನಗಳ ಅಡಿಯಲ್ಲಿ ಕಾಣುವಿರಿ. ಸ್ಕಿನ್ ಟ್ಯಾಗ್‌ಗಳು ಕೊಳಕಾಗಿದ್ದು ನಿಮ್ಮ ಸುಂದರ ತ್ವಚೆಗೆ ಕಪ್ಪು ದೃಷ್ಟಿಯಂತಾಗುತ್ತದೆ.
ಈ ಸ್ಕಿನ್ ಟ್ಯಾಗ್‌ಗಳನ್ನು ತೊಡೆದು ಕಪ್ಪು ಚುಕ್ಕೆಗಳಿಂದ ಮುಕ್ತಿ ಹೊಂದುವುದು ಅವಶ್ಯಕವಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ನೀವು ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಮನೆಯಲ್ಲೇ ಸಿಗುವ ಸಾಮಾಗ್ರಿಗಳನ್ನು ಬಳಸಿಕೊಂಡು ಈ ಸ್ಕಿನ್ ಟ್ಯಾಗ್‌ಗಳನ್ನು ನಿವಾರಿಸಬಹುದು.
ಟೀ ಟ್ರೀ ಆಯಿಲ್, ಏಪಲ್ ಸೀಡರ್ ವಿನೇಗರ್, ಹರಳೆಣ್ಣೆ ನೈಸರ್ಗಿಕವಾಗಿ ಸ್ಕಿನ್ ಟ್ಯಾಗ್‌ಗಳ ನಿವಾರಣೆಯನ್ನು ಚಿಟಿಕೆಯಲ್ಲಿ ಹೋಗಲಾಡಿಸಿ ನಿಮಗೆ ಸುಂದರ ಮೈ ಕಾಂತಿಯನ್ನು ನೀಡುತ್ತದೆ. ನಿಮ್ಮ ಸ್ಕಿನ್ ಟ್ಯಾಗ್‌ಗಳನ್ನು ಚಿಮುಟುವುದನ್ನು ನಿಲ್ಲಿಸಿ ಮತ್ತು ಮನೆಮದ್ದನ್ನು ಬಳಸಿ ಫಲ ಕಂಡುಕೊಳ್ಳಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎಣ್ಣೆ ಮತ್ತು ಸೂಕ್ಷ್ಮ ತ್ವಚೆಗಾಗಿ ಫೇಶಿಯಲ್ ಆಯಿಲ್

ಶುಂಠಿ:
ಶುಂಠಿಯ ತುಂಡನ್ನು ಎರಡು ವಾರಗಳಿಗೆ ದಿನಕ್ಕೊಮ್ಮೆ ಉಜ್ಜಿಕೊಳ್ಳಿ. ಈ ಕೆಡು ಹಗುರಗೊಂಡು ನೈಸರ್ಗಿಕವಾಗಿ ಹೊರಟು ಹೋಗುತ್ತದೆ.

ಪೈನಾಫಲ್:
ಸ್ಕಿನ್ ಟ್ಯಾಗ್ ಅನ್ನು ಹೋಗಲಾಡಿಸುವ ಇನ್ನೊಂದು ನೈಸರ್ಗಿಕ ಪರಿಹಾರಕವಾಗಿದೆ. ಪೈನಾಫಲ್ ರಸವನ್ನು ಸ್ಕಿನ್ ಟ್ಯಾಗ್‌ಗೆ ಹಚ್ಚಿಕೊಂಡು 20-25 ನಿಮಿಷ ಹಾಗೆಯೇ ಬಿಡಿ. ಬೆಚ್ಚನೆಯ ನೀರಿನಿಂದ ಮುಖ ತೊಳೆದುಕೊಳ್ಳಿ. 10 ದಿನ ಈ ವಿಧಾನವನ್ನು ಅನುಸರಿಸಿ ಮತ್ತು ಫಲಿತಾಂಶವನ್ನು ಆಸ್ವಾದಿಸಿ.

ಈರುಳ್ಳಿ ರಸ:
ಈರುಳ್ಳಿ ರಸ ಕೂಡ ನಿಮ್ಮ ಸ್ಕಿನ್ ಟ್ಯಾಗ್ ಅನ್ನು ಮಂದವಾಗಿಸಿ ಅದನ್ನು ಸ್ವಾಭಾವಿಕವಾಗಿ ಹೋಗಲಾಡಿಸುತ್ತದೆ. ಈರುಳ್ಳಿ ತುಂಡನ್ನು ಉಪ್ಪಿನೊಂದಿಗೆ ಮುಳುಗಿಸಿಕೊಂಡು ಹಚ್ಚಿ ರಾತ್ರಿ ಪೂರ್ತಿ ಹಾಗೆಯೇ ಬಿಡಿ.

ಏಪಲ್ ಸೀಡರ್ ವಿನೇಗರ್:
ಇದೊಂದು ನೈಸರ್ಗಿವಾಗಿ ಸ್ಕಿನ್ ಟ್ಯಾಗ್ ಅನ್ನು ನಿವಾರಿಸುವ ಮತ್ತು ಪರಿಣಾಮಕಾರಿಯಾಗಿರುವ ಮನೆ ಮದ್ದಾಗಿದೆ. ಹತ್ತಿಯ ಉಂಡೆಯನ್ನು ವಿನೇಗರ್‌ನಲ್ಲಿ ಅದ್ದಿ ಟ್ಯಾಗ್‌ನ ಮೇಲೆ ಉಜ್ಜಿ.

ಟೀ ಟ್ರೀ ಆಯಿಲ್:
ಮುಖವನ್ನು ಸೋಪು ಮತ್ತು ನೀರಿನೊಂದಿಗೆ ತೊಳೆದುಕೊಳ್ಳಿ. ಸ್ಕಿನ್ ಟ್ಯಾಗ್‌ಗೆ 2-3 ಬಿಂದು ಟೀ ಟ್ರೀ ಆಯಿಲ್ ಅನ್ನು ಹಾಕಿ. ಇದು ಸ್ವಲ್ಪ ಹೊತ್ತು ಉರಿತವನ್ನುಂಟು ಮಾಡುತ್ತದೆ.ದಿನಕ್ಕೆ ಮೂರು ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

.ಲಿಂಬೆ ರಸ:
ಸ್ಕಿನ್ ಟ್ಯಾಗ್ ಅನ್ನು ಸ್ವಾಭಾವಿಕವಾಗಿ ನಿವಾರಿಸುವ ಗುಣ ಲಿಂಬೆಗಿದ್ದು ಇದೊಂದು ಉತ್ತಮ ಪರಿಹಾರಕವಾಗಿದೆ. ಲಿಂಬೆ ರಸವನ್ನು ಕೆಡುವಿರುವ ವಲಯಕ್ಕೆ ಉಜ್ಜಿ ಮತ್ತು 20-25 ನಿಮಿಷ ಹಾಗೆಯೇ ಬಿಟ್ಟು ಮುಖ ತೊಳೆದುಕೊಳ್ಳಿ.

ಬೆಳ್ಳುಳ್ಳಿ:
ಬೆಳ್ಳುಳ್ಳಿ ರಸವನ್ನು ಸ್ಕಿನ್ ಟ್ಯಾಗ್‌ನ ಮೇಲೆ ಹಚ್ಚಿಕೊಳ್ಳುವುದು ಅದರ ನಿವಾರಣೆಗೆ ಕಾರಣವಾಗಿದೆ. ಜಜ್ಜಿದ ಬೆಳ್ಳುಳ್ಳಿ ಅಥವಾ ಅದರ ರಸವನ್ನು ದಿನಕ್ಕೆ ಮೂರು ಬಾರಿಯಂತೆ ಹಚ್ಚಿಕೊಳ್ಳಿ.

ಅಲೋ ವೆರಾ:
ಅಲೋವೆರಾದಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ. ಸ್ಕಿನ್ ಟ್ಯಾಗ್‌ನಿಂದ ಉಪಶಮನ ಪಡೆಯಲು ಅಲೋವೆರಾವನ್ನು ನೇರವಾಗಿ ಚರ್ಮಕ್ಕೆ ಹಚ್ಚಿಕೊಳ್ಳಿ.



Click it and Unblock the Notifications
