Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ತ್ವಚೆಯ ಸೌಂದರ್ಯಕ್ಕಾಗಿ ಚೆರ್ರಿ ಹಣ್ಣುಗಳ ಮಹತ್ವ
ತ್ವಚೆಯ ಸೌಂದರ್ಯಕ್ಕಾಗಿ ಇತ್ತೀಚೆಗೆ ನಾವು ಹಲವು ರೀತಿಯ ಕಸರತ್ತುಗಳನ್ನು ಮಾಡುವುದು ಸಾಮಾನ್ಯವಾಗಿದೆ. ತ್ವಚೆಯ ಹೊಳಪಿಗೆ ಮತ್ತು ತ್ವಚೆಯಲ್ಲಿ ಕಂಡುಬರುವ ಕಪ್ಪು ಚುಕ್ಕೆಗಳನ್ನು ತೆರವುಗೊಳಿಸುವ ಉದ್ದೇಶದಿಂದ ನಾನಾ ರೀತಿಯ ಸೌಂದರ್ಯವರ್ಧಕ ಸಾಧನಗಳಿಗೆ ಮೊರೆ ಹೋಗುತ್ತೇವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಪ್ಪಾಯಿ ಹಣ್ಣಿನಿಂದ ನಿಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳಿ
ಇನ್ನು ಚಿಂತೆ ಮಾಡುವ ಅವಶ್ಯಕತೆ ಇಲ್ಲ, ತ್ವಚೆಯಲ್ಲಿ ಕಂಡು ಬರುವ ಡಾರ್ಕ್ ಸ್ಪಾಟ್ಸ್‌ಳ ನಿರ್ಮೂಲನೆಗೆ ನೈಸರ್ಗಿಕವಾಗಿ ದೊರೆಯುವ ಚೆರ್ರಿ ಹಣ್ಣುಗಳಿಂದ ಪರಿಹಾರ ಕಂಡು ಕೊಳ್ಳಬಹುದು. ತ್ವಚೆಯ ಹೊಳಪಿಗೆ ಅತ್ಯಂತ ಉಪಯುಕ್ತವಾಗಿರವ ಈ ಹಣ್ಣು ತನ್ನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳಿಂದ ತ್ವಚೆಯಲ್ಲಿ ಕಂಡುಬರುವ ಮೊಡವೆಯನ್ನು ಹೋಗಲಾಡಿಸಲು ಸಹಕಾರಿಯಾಗಲಿದೆ.

ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಶಿಯಂ, ಸತು, ಕಬ್ಬಿಣ, ತಾಮ್ರ, ಮ್ಯಾಂಗನೀಸ್, ಇತ್ಯಾದಿ ಸತ್ವಗಳನ್ನು ಈ ರುಚಿಕರವಾದ ಹಣ್ಣು ಸುಕ್ಕು ಕಟ್ಟಿದ ತ್ವಚೆಯ ತೇವಾಂಶವನ್ನು ಕಾಯ್ದುಕೊಳ್ಳುತ್ತದೆ ಮತ್ತು ಹಾನಿಗೊಳಗಾದ ಚರ್ಮವನ್ನು ಸರಿಪಡಿಸುತ್ತದೆ,
ಔಷಧಿ ಗುಣಗಳನ್ನು ಹೊಂದಿರುವ ಈ ಚೆರ್ರಿ ಹಣ್ಣುಗಳು ಪ್ರತಿ ನಿತ್ಯ ಸೇವಿಸುವುದರಿಂದ ಸಾಮಾನ್ಯವಾಗಿ ಕಂಡುಬರುವ ಮೈಗ್ರೇನ್ ತಲೆನೋವು ಮತ್ತು ನಿದ್ರಾಹೀನತೆ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತ್ವಚೆ ಸಮಸ್ಯೆಗೆ ಮನೆಯಲ್ಲಿಯೇ ಮುಲಾಮ್ !
ಚೆರ್ರಿ ಫೇಶಿಯಲ್ ಮಾಸ್ಕ್:
ಸಿಪ್ಪೆ ತೆಗೆದ ಚೆರ್ರಿ ಹಣ್ಣುಗಳನ್ನು ಚೆನ್ನಾಗಿ ಹಿಸುಕಿ, ನಿಯಮಿತವಾಗಿ ನಿಮ್ಮ ಮುಖದ ಮೇಲೆ ಅನ್ವಯಿಸುವುದರಿಂದ ನಿಮ್ಮ ಚರ್ಮದ ಹೊಳಪನ್ನು ಕಾಯ್ದುಕೊಳ್ಳಬಹುದು ಹಾಗೂ ಈ ಹಣ್ಣನ್ನು ಮುಖಕ್ಕೆ ಹಚ್ಚುವ ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆಯಿರಿ. ನೀವು ಎಣ್ಣೆಯುಕ್ತ ತ್ಚಚೆಯನ್ನು ಹೊಂದಿದ್ದರೆ, ಹುಳಿ ಚೆರ್ರಿಯನ್ನು ಬಳಸುವುದು ಉತ್ತಮ,
ಸುಲಭವಾಗಿ ಚೆರ್ರಿ ಮಾಸ್ಕ್ ತಯಾರಿಸಲು ಒಂದು ಚಮಚ ನೈಸರ್ಗಿಕ ಜೇನುತುಪ್ಪ ಮತ್ತು ಕೆಲವು ಹನಿ ನಿಂಬೆ ರಸವನ್ನು ಕೆಲವು ಹಿಸುಕಿದ ಚೆರ್ರಿಗಳ ಜೊತೆ ಮಿಶ್ರಣ ಮಾಡಿ ತಯಾರು ಮಾಡಬಹುದು.
ನಿಮ್ಮ ಮುಖ ಮತ್ತು ಕುತ್ತಿಗೆ ಮೇಲೆ ಈ ಪೇಸ್ಟ್ ಹಚ್ಚಿ ಮತ್ತು 15-20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಮೊಡವೆಯನ್ನು ಹೋಗಲಾಡಿಸಲು ನಿಯಮಿತವಾಗಿ ಈ ಮನೆಮದ್ದನ್ನು ಬಳಸಿ.
ಸ್ವಲ್ಪ ಚೆರ್ರಿ ಹಣ್ಣುಗಳು ಮತ್ತು ಎರಡು ಚಮಚ ಜೇನನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಒಣಗಲು ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಸ್ವಾಭಾವಿಕವಾಗಿ ಸುಕ್ಕುಗಳು ಮತ್ತು ತ್ವಚೆಯಲ್ಲಿನ ಸೂಕ್ಷ್ಮ ರೇಖೆಗಳನ್ನು ತೆಗೆಯಲು ಲಾಭದಾಯಕ ಮನೆಮದ್ದಾಗಿದೆ. ಜೊತೆಗೆ ತ್ವಚೆಯಲ್ಲಿನ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಚೆರ್ರಿ ಹಣ್ಣು ಹಾಗೂ ಸ್ಟ್ರಾಬೆರಿ ಹಣ್ಣುಗಳ ಮಿಶ್ರಣ:
ಚೆರ್ರಿಗಳು ಮತ್ತು ಸ್ಟ್ರಾಬೆರಿಗಳನ್ನು ತೆಗೆದುಕೊಳ್ಳಿ, ಹಾಗೂ ಈ ಎರಡೂ ಹಣ್ಣುಗಳನ್ನು ಚಿನ್ನಾಗಿ ಹಿಸುಕಿ ಕೊಂಡು ನಿಮ್ಮ ಮುಖ ಮತ್ತು ಕತ್ತಿಯ ಭಾಗಕ್ಕೆ ಹಚ್ಚಿಕೊಳ್ಳಿ, ಸುಮಾರು 5 - 10 ನಿಮಿಷಗಳವರೆಗೆ ಹಾಗೆಯೇ ಬಿಡಿ. ಇದು ನಿಮ್ಮ ಮುಖದಲ್ಲಿರುವ ಕಪ್ಪು ಕಲೆಗಳನ್ನು, ಹಾಗೂ ಸುಕ್ಕು ಕಟ್ಟಿದ ಚರ್ಮವನ್ನು ಸರಿ ಪಡಿಸಲು ಸಹಕಾರಿಯಾಗಲಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: 10 ದಿನಗಳಲ್ಲಿ ಸುಂದರ ತ್ವಚೆ ಪಡೆಯಿರಿ!
ಬೆರಳೆಣಿಕೆಯಷ್ಟು ಚೆರ್ರಿಗಳನ್ನು ಹಿಸುಕಿ ಇದಕ್ಕಿ 2 -3 ಚಮಚ ಮೊಸರನ್ನು ಸೇರಿಸಿ. 20-30 ನಿಮಿಷಗಳ ನಿಮ್ಮ ತ್ವಚೆಯ ಮೇಲೆ ಈ ಪೇಸ್ಟ್ ಹಚ್ಚಿ ನಂತರ ತೊಳೆಯಿರಿ. ಈ ರೆಸಿಪಿ, ಮಂದ ಚರ್ಮದ ಕಾಂತಿಯನ್ನು ವರ್ಧಿಸುವಲ್ಲಿ ಅತ್ಯುತ್ತಮವಾಗಿದೆ. ಅಲ್ಲದೆ, ನಿಮ್ಮ ಚರ್ಮಕ್ಕೆ ಹೊಳಪನ್ನೂ ನೀಡುತ್ತದೆ. ಇದರ ಜೊತೆಗೆ ಸಕ್ಕರೆ ಸೇರಿಸಿ ಮತ್ತು ಸ್ಕ್ರಬ್ ರೀತಿಯಲ್ಲಿಯೂ ಬಳಸಬಹುದು. ನೀವು ಚೆರ್ರಿ ರಸಕ್ಕೆ ಎರಡು ಚಮಚ ಓಟ್ ಹಿಟ್ಟು ಬೆರೆಸಿ ಮತ್ತೊಂದು ಉತ್ತಮ ಚೆರ್ರಿ ಮಾಸ್ಕ್ ತಯಾರು ಮಾಡಬಹುದು. ಐದು ನಿಮಿಷಗಳ ಕಾಲ ನಿಮ್ಮ ತ್ವಚೆಯ ಮೇಲೆ ಹಾಗೆಯೇ ಬಿಟ್ಟು ಮತ್ತು ನಂತರ ತೊಳೆಯಿರಿ.
ಮೊಟ್ಟೆಯ ಬಿಳಿ ಭಾಗ ಮತ್ತು ಎರಡು ಚಮಚ ಜೋಳದ ಹಿಟ್ಟು:
ಒಂದು ಚಮಚ ಜೇನು, ಮತ್ತು ಸುಮಾರು ಹತ್ತು ಹಿಸುಕಿದ ಚೆರ್ರಿಗಳನ್ನು ಬೆರೆಸಿ ಮಾಸ್ಕ್ ತಯಾರಿಸಿ ಎಣ್ಣೆಯುಕ್ತ ಚರ್ಮದಿಂದ ಮುಕ್ತಿಯನ್ನು ಪಡೆಯಲು ನಿಯಮಿತವಾಗಿ ಬಳಸಿ. ನಿಮ್ಮ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಈ ಮಿಶ್ರಣವನ್ನು ಹಚ್ಚಿ. ಸುಮಾರು 20 ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. ಈ ಮಾಸ್ಕ್ ನಿಮ್ಮ ಸೌಂದರ್ಯ ವೃದ್ಧಿಸುವಲ್ಲಿ ಪರಿಪೂರ್ಣ ಮನೆಮದ್ದಾಗಿದೆ.



Click it and Unblock the Notifications
