Latest Updates
-
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ
ಚಳಿಗಾಲದಲ್ಲಿ ಕಂಡುಬರುವ ಸಮಸ್ಯೆಗೆ ಸೂಕ್ತ ಪರಿಹಾರ
ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮ ಒಣಗುವುದು ಮತ್ತು ನವೆ ಉಂಟಾಗುವುದು ಸಾಮಾನ್ಯ. ಎಷ್ಟೇ ಬಾಡಿ ಲೋಷನ್ ಮತ್ತು ಮಾಯಿಶ್ಚರೈಸರ್ ಅನ್ನು ನೀವು ಚರ್ಮಕ್ಕೆ ಹಚ್ಚಿದರೂ ಕೂಡ ಇದರ ತೊಂದರೆ ಇದ್ದೇ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಅದರ ಹೊಡೆತಕ್ಕೆ ಸಿಲುಕುವ ನಿಮ್ಮ ಶರೀರದ ಅಂಗವೆಂದರೆ ತುಟಿ ಹಾಗೂ ಕಾಲಿನ ಹಿಮ್ಮಡಿ ಹೊಡೆಯುವುದು.
ಬೆಳಗ್ಗೆ, ಸಂಜೆ ಅತಿಯಾದ ಚಳಿ, ಮಧ್ಯಾಹ್ನ ಬಿಸಿಲು, ಇದರಿಂದ ವಾತಾವರಣವು ಅತಿಯಾದ ಆರ್ದ್ರತೆ ಹಾಗೂ ಧೂಳಿನಿಂದ ಕೂಡಿರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಚರ್ಮ ರೋಗಗಳು ಕಾಣಿಸಿಕೊಳ್ಳುವುದು ಹೆಚ್ಚು.
ಹಾಗಾಗಿ ಚಳಿಗಾಲಲ್ಲಿ ಕಂಡುಬರುವ ಒಣಗಿದ ಚರ್ಮವು ನಿಮಗೆ ಕಿರಿಕಿರಿಯುಂಟು ಮಾಡುವುದಂತೂ ಸತ್ಯ. ಇಂತಹ ಸಮಸ್ಯೆಯಿಂದ ನಿಮ್ಮ ತುಟಿಯನ್ನು ಕಾಪಾಡಬೇಕೆಂದು ನೀವು ಬಯಸಿದ್ದರೆ ಅದರ ಕಾಳಜಿಯತ್ತ ಕೂಡ ನೀವು ಗಮನ ಹರಿಸುವುದು ಆವಶ್ಯಕ.
ಚಳಿಗಾಲದಲ್ಲಿ ವಾತಾವರಣವು ಬದಲಾದಂತೆ ಚರ್ಮಕ್ಕೆ ಸಣ್ಣದಾಗಿ ಹಾನಿಯಾಗುತ್ತವೆ. ಈ ವಾತಾವರಣವು ಚರ್ಮಕ್ಕೆ ಹಲವಾರು ರೀತಿಯ ತೊಂದರೆಗಳನ್ನುಂಟುಮಾಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ಹೆಚ್ಚಿನ ಕಾಳಜಿಯನ್ನು ನೀವು ತೆಗೆದುಕೊಳ್ಳಬೇಕಾದುದು ಅತ್ಯವಶ್ಯಕ. ತುಟಿ ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಹೀಗೆ ಮಾಡಿ
ಜೇನು

ಹನಿಯನ್ನು ಲಿಂಬೆಯೊಂದಿಗೆ ಮಿಶ್ರ ಮಾಡಿಕೊಂಡು ಮುಖಕ್ಕೆ ಲೇಪಿಸಿಕೊಳ್ಳಿ. ಇದೊಂದು ನೈಸರ್ಗಿಕವಾದ ಮತ್ತು ಮನೆಯಲ್ಲೇ ತಯಾರಿಸಬಹುದಾದ ಲೇಪನವಾಗಿದ್ದು ಕಳೆಗುಂದಿದ ತ್ವಚೆಯನ್ನು ದೂರವಾಗಿಸಿ ಅದನ್ನು ಕಾಂತಿಯುಕ್ತವನ್ನಾಗಿಸುತ್ತದೆ. ನಿಮ್ಮ ಒಡೆದ ತುಟಿಗೆ ಜೇನನ್ನು ಸವರಿ ಮತ್ತು ಚಮತ್ಕಾರವನ್ನು ಆಸ್ವಾದಿಸಿ.
ಮಾಯಿಶ್ಚರೈಸರ್ ಬಳಸಿ
ಚಳಿಗಾಲದಲ್ಲಿ, ಒಣ ಚರ್ಮ ಮತ್ತು ಅದರಿಂದ ಉಂಟಾಗುವ ಹಲವಾರು ಪರಿಣಾಮಗಳನ್ನು ನೀವು ಅನುಭವಿಸಬೇಕಾಗುತ್ತದೆ. ಸ್ನಾನದ ನಂತರವೂ ನಿಮ್ಮ ತ್ವಚೆ ಒದ್ದೆಯಾಗಿದ್ದರೆ ಮಾಯಿಶ್ಚರೈಸರ್ ಅನ್ನು ಬಳಸಿ. ಚಳಿಗಾಲದಲ್ಲಿ ಇದು ತ್ವಚೆಯ ಕಾಳಜಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಆಲೀವ್ ಆಯಿಲ್
ಆಲೀವ್ ಆಯಿಲ್ ಅನ್ನು ನಿಮ್ಮ ತುಟಿಯೊಂದಿಗೆ ಮುಖಕ್ಕೆ ಕೂಡ ಹಚ್ಚಬಹುದು. ಮಗುವಿನಂತಹ ತ್ವಚೆಯನ್ನು ಪಡೆಯಲು ಆಲೀವ್ ಆಯಿಲ್ ಸಹಕಾರಿ.
ನೀರು ಹೆಚ್ಚಾಗಿ ಕುಡಿಯಿರಿ
ನಿಮ್ಮ ದೇಹದಲ್ಲಿ ನೀರಿನಂಶ ಹೆಚ್ಚಾಗಿ ಇರಬೇಕಾಗಿದ್ದರಿಂದ ಸಾಧ್ಯವಾದಷ್ಟು ನೀರು ಕುಡಿಯಿರಿ. ಇದು ನಿಮ್ಮ ತ್ವಚೆಯ ಮಾಯಿಶ್ಚರೈಸ್ ಅನ್ನು ಪ್ರಾಕೃತಿಕವಾಗಿ ಕಾಪಾಡುತ್ತದೆ. ನಿಮ್ಮ ತ್ವಚೆಯ ಸ್ಥಿತಿಸ್ಥಾಪಕತ್ವನ್ನು ಇದು ರಕ್ಷಿಸುತ್ತದೆ. ಸಾಕಷ್ಟು ನೀರು ಕುಡಿಯುವುದು ಕೂಡ ಹದಿಹರೆಯದ ಹುಡುಗಿಯರು ತ್ವಚೆಯ ಕಾಳಜಿಗಾಗಿ ಮಾಡಲೇಬೇಕು. ಚಳಿಗಾಲದಲ್ಲಿ ಪುರುಷರ ಕೂದಲಿನ ರಕ್ಷಣೆಗೆ ಸೂಕ್ತ ಸಲಹೆಗಳು
ಸೌಂದರ್ಯ ಉತ್ಪನ್ನಗಳು
ಉತ್ತಮ ಗುಣಮಟ್ಟದ ಸೌಂದರ್ಯ ಉತ್ಪನ್ನಗಳನ್ನು ನೀವು ಬಳಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಚಳಿಗಾಲದಲ್ಲಿ ತ್ವಚೆಯು ಒಣಗಿ ಹೋಗುವುದರಿಂದ, ನಿಮ್ಮ ತ್ವಚೆಯನ್ನು ಒಣಗುವುದರಿಂದ ತಡೆಗಟ್ಟುವ ತ್ವಚೆಯನ್ನು ಮಾಯಿಶ್ಚರೈಸ್ ಮಾಡುವ ಸೌಂದರ್ಯ ಉತ್ಪನ್ನಗಳನ್ನು ಬಳಸಿ.



Click it and Unblock the Notifications




