Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಮೊಡವೆ ಕಲೆಗಳ ನಿವಾರಣೆಗೆ ನೈಸರ್ಗಿಕ ಉಪಾಯಗಳು
ಹದಿಹರೆಯದಲ್ಲಿ ಮುಖವನ್ನು ಆವರಿಸುವ ಮೊಡವೆಗಳು ಬಳಿಕ ಕಲೆಗಳನ್ನು ಉಳಿಸಿ ನಿರ್ಗಮಿಸುತ್ತವೆ. ಈ ಕಲೆಗಳು ಮುಖದ ಸೌಂದರ್ಯವನ್ನೇ ಕಳೆಗುಂದಿಸುವುದರಿಂದ ಹೆಚ್ಚಿನ ತರುಣ ತರುಣಿಯರು ಮಾನಸಿಕವಾಗಿ ಕುಗ್ಗುತ್ತಾರೆ. ಈ ಕಲೆಗಳಿಂದ ಮುಕ್ತರಾಗಲು ಹಲವು ವಿಧಾನಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ದುಬಾರಿ ವೈದ್ಯಕೀಯ ಚಿಕಿತ್ಸೆಗಳಿಗಾಗಿ ಹಣ ಸುರಿಯುತ್ತಾರೆ. ಆದರೂ ಪ್ರತಿಬಾರಿ ಉತ್ತಮ ಪರಿಣಾಮ ಪಡೆಯಲು ವಿಫಲರಾಗುತ್ತಾರೆ.
ಆದರೆ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದಾದ ಕೆಲವು ಚಿಕಿತ್ಸೆಗಳಿಂದ ಹೆಚ್ಚಿನ ಖರ್ಚಿಲ್ಲದೇ ಉತ್ತಮ ಪರಿಣಾಮ ಪಡೆಯಬಹುದು. ಇದರಿಂದ ಯಾವುದೇ ಪಾರ್ಶ್ವ ಪರಿಣಾಮವೂ ಇರದ ಕಾರಣ ಧೈರ್ಯವಾಗಿ ಪ್ರಯೋಗಿಸಿಕೊಳ್ಳಬಹುದು. ಆದರೆ ಇದರ ಪರಿಣಾಮವನ್ನು ಅರಿಯಲು ಕೆಲವು ದಿನಗಳೇ ಬೇಕಾಗುವುದರಿಂದ ಹೆಚ್ಚಿನ ತಾಳ್ಮೆ ಅಗತ್ಯ.
ಹದಿಹರೆಯದಲ್ಲಿ ಕಾಡುವ ಮೊಡವೆಗೆ ಇಲ್ಲಿದೆ ಸೂಕ್ತ ಪರಿಹಾರ!

ಆಲಿವ್ ಎಣ್ಣೆ
ಕಲೆ ಇರುವ ಜಾಗದಲ್ಲಿ ಅಪ್ಪಟ ಆಲಿವ್ ಎಣ್ಣೆಯನ್ನು ನಯವಾಗಿ ತಿಕ್ಕಿ ಹದವಾದ ನೀರಾವಿಗೆ ಚರ್ಮವನ್ನು ಒಡ್ಡಿಕೊಳ್ಳಬೇಕು. ಇದರಿಂದಾಗಿ ಚರ್ಮದ ಸೂಕ್ಷ್ಮರಂಧ್ರಗಳು ತೆರೆದು ಆಲಿವ್ ಎಣ್ಣೆ ಗಾಢವಾಗಿದ್ದ ಚರ್ಮದ ಮೆಲನಿನ್ ವರ್ಣದ್ರವ್ಯವನ್ನು ಕಡಿಮೆಗೊಳಿಸಿ ಕಲೆಯನ್ನು ಕಡಿಮೆ ಮಾಡುತ್ತದೆ.

ಶ್ರೀಗಂಧ
ಶ್ರೀಗಂಧದ ಕೊರಡನ್ನು ತೇದಿದ ಲೇಪನವನ್ನು ಅಥವಾ ಶ್ರೀಗಂಧದ ಪುಡಿಯನ್ನು ಹಾಲು ಅಥವಾ ಗುಲಾಬಿನೀರಿನಲ್ಲಿ ಮಿಶ್ರಣ ಮಾಡಿ ಕಲೆಗಳ ಮೇಲೆ ಹಚ್ಚಿ ಒಂದು ಘಂಟೆಯ ಕಾಲ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಬೇಕು.

ಬಾದಾಮಿ
ಬಾದಾಮಿಯ ಬೀಜಗಳನ್ನು ಹನ್ನೆರಡು ಘಂಟೆ ನೀರಿನಲ್ಲಿ ನೆನೆಸಿದ ಬಳಿಕ ಸಿಪ್ಪೆ ಸುಲಿದು ನಯವಾಗಿ ತೇದಿಕೊಳ್ಳಬೇಕು. ಈ ಲೇಪನವನ್ನು ಗುಲಾಬಿನೀರಿನೊಂದಿಗೆ ಮಿಶ್ರಣಮಾಡಿಕೊಂಡು ರಾತ್ರಿ ಹಚ್ಚಿ ಬೆಳಿಗ್ಗೆ ತಣ್ಣಿರಿನಿಂದ ತೊಳೆದುಕೊಳ್ಳಬೇಕು.

ಲಿಂಬೆರಸ
ದಿನಕ್ಕೆ ಮೂರು ಬಾರಿಯಂತೆ ಎರಡು ವಾರಗಳ ಕಾಲ ಲಿಂಬೆರಸವನ್ನು ಸೇವಿಸುವುದರ ಮೂಲಕ ಉತ್ತಮ ಪರಿಣಾಮ ಪಡೆಯಬಹುದು.

ಅಡುಗೆ ಸೋಡಾ
ಅಡುಗೆ ಸೋಡಾಪುಡಿಯನ್ನು ನೀರಿನೊಂದಿಗೆ ಸೇರಿಸಿ ಕಲೆಯಾದ ಜಾಗದಲ್ಲಿ ನಯವಾಗಿ ಒಂದರಿಂದ ಎರಡು ನಿಮಿಷಗಳವರೆಗೆ ತಿಕ್ಕಬೇಕು. ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಬೇಕು. ದಿನಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನ ಅನುಸರಿಸುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

ಮೂಲಂಗಿ ಬೀಜ
ಮೂಲಂಗಿ ಬೀಜಗಳನ್ನು ನುಣ್ಣಗೆ ಪುಡಿಮಾಡಿ ನೀರಿನೊಂದಿಗೆ ಮಿಶ್ರಣ ಮಾಡಿಕೊಳ್ಳಬೇಕು. ರಾತ್ರಿ ಮಲಗುವ ಮುನ್ನ ತೆಳುವಾಗಿ ಹಚ್ಚಿ ಬೆಳಿಗ್ಗೆ ತಣ್ಣೀರಿನಲ್ಲಿ ತೊಳೆದುಕೊಳ್ಳಬೇಕು. ದಿನದ ಸಮಯದಲ್ಲಿ ದಪ್ಪನಾದ ಮಿಶ್ರಣವನ್ನು ಇಪ್ಪತ್ತು ನಿಮಿಷಗಳವರೆಗೆ ದಿನಕ್ಕೆರಡು ಬಾರಿ ಹಚ್ಚಿಕೊಳ್ಳಬೇಕು.

ಆಲುಗಡ್ಡೆ
ಹಸಿ ಆಲುಗಡ್ಡೆಯ ರಸ ಹಿಂಡಿ ಕಲೆಯಾದ ಜಾಗದಲ್ಲಿ ಹಚ್ಚಿಕೊಳ್ಳಬೇಕು. ಇದರಲ್ಲಿರುವ ಗಂಧಕ ಮತ್ತು ಪೊಟ್ಯಾಶಿಯಂ ಕಲೆಗಳನ್ನು ನಿವಾರಿಸಲು ನೆರವಾಗುತ್ತವೆ. ಕಣ್ಣಿನ ಕೆಳಗಿನ ಜಾಗಕ್ಕೆ ಆಲುಗಡ್ಡೆಯ ತೆಳುವಾದ ಪದರವೊಂದನ್ನು ಇಟ್ಟು ಕಣ್ಣುಮುಚ್ಚಿ ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆದುಕೊಳ್ಳಬೇಕು. ಆಲುಗಡ್ಡೆಯ ರಸದ ಬದಲು ಆಲುಗಡ್ಡೆಯನ್ನು ಹೆಚ್ಚಿ ಜಜ್ಜಿ ಗಾಢ ಲೇಪನವನ್ನೂ ಮಾಡಿಕೊಳ್ಳಬಹುದು. ಈ ಲೇಪನವನ್ನು ಕಣ್ಣಿನ ಸುತ್ತ ಹೊರತಾಗಿ ಉಳಿದ ಭಾಗಗಳಲ್ಲಿ ಹಚ್ಚಿ ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಬೇಕು.



Click it and Unblock the Notifications