Latest Updates
-
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು?
ಕಣ್ಣಿನ ಸುತ್ತಲು ಇರುವ ಡಾರ್ಕ್ ಸರ್ಕಲ್ ಹೋಗಲಾಡಿಸುವುದು ಹೇಗೆ?
ಡಾರ್ಕ್ ಸರ್ಕಲ್ ಸಾಮಾನ್ಯವಾಗಿ ಹೆಚ್ಚಿನ ಜನರನ್ನು ಕಾಡುವ ಸಮಸ್ಯೆ. ಇದು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸಂಭವಿಸುತ್ತದೆ. ಆದರೆ ಮಹಿಳೆಯರ ಸೌಂದರ್ಯಕ್ಕೆ ಹೆಚ್ಚಿನ ಸಮಸ್ಯೆಯಾಗಿದೆ. ಕಣ್ಣಿನ ಸುತ್ತಲೂ ಇರುವ ಚರ್ಮ ಇತರ ಭಾಗದ ಚರ್ಮಕ್ಕಿಂತ ಹೆಚ್ಚು ಮೃದುವಾಗಿ ಇರುತ್ತದೆ ಆದ್ದರಿಂದ ಇದಕ್ಕೆ ಹೆಚ್ಚಿನ ಕಾಳಜಿಯ ಅಗತ್ಯವಿದೆ.
ಕಪ್ಪು ವೃತ್ತಗಳು ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳಬಹುದು, ಆದರೆ ಇದು ಹೆಚ್ಚಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಕಣ್ಣಿನ ಸುತ್ತಲ ಕಪ್ಪು ವೃತ್ತಕ್ಕೆ ಕಾರಣಗಳು ಅನೇಕ. ಇದು ಅನುವಂಷಿಕ ಆಗಿರಬಹುದು ಅಥವಾ ಅತಿಯಾದ ಬಳಲಿಕೆ ಕಾರಣವಾಗಿರಬಹುದು.
ಮನೆಯಲ್ಲಿಯೇ ಇರುವ ಆನೇಕ ವಸ್ತುಗಳಿಂದ ಕಣ್ಣಿನ ಸುತ್ತಲು ಆಗುವ ಕಪ್ಪು ವರ್ತುಲಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಕಪ್ಪು ವೃತ್ತವನ್ನು ಹೋಗಲಾಡಿಸಲು ಈ ಕೆಳಗೆ ಕೆಲವು ಮನೆ ಮದ್ದನ್ನು ನೀಡಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮೂಗಿನಲ್ಲಿರುವ ಬ್ಲ್ಯಾಕ್ ಹೆಡ್ಸ್ ತೆಗೆಯಲು ಟಿಪ್ಸ್
ಪೌಷ್ಟಿಕ ಆಹಾರ:
ಇದನ್ನು ತಡೆಯಲು ಉತ್ತಮ ವಿಧಾನವೆಂದರೆ ಪೌಷ್ಟಿಕ ಆಹಾರ ತೆಗೆದುಕೊಳ್ಳುವುದು, ತಾಜಾ ಹಣ್ಣು ತಿನ್ನುವುದು ಮತ್ತು ಮೊಸರು , ಬೇಳೆಕಾಳುಗಳು, ಸಂಸ್ಕರಿಸಿದ ಧಾನ್ಯಗಳು, ಕೆನೆ ತೆಗೆದ ಹಾಲು, ಸೊಪ್ಪುಗಳು ಮತ್ತು ಬೀನ್ಸ್ ಇವುಗಳನ್ನು ಹೆಚ್ಚಾಗಿ ಬಳಸುವುದು.
ವ್ಯಾಯಾಮ ಮಾಡುವುದು:
ರಕ್ತ ಸಂಚಲನ ಸುಲಭವಾಗಿ ಆಗಲು ಉಸಿರಾಟದ ವ್ಯಾಯಾಮಗಳನ್ನು ಮಾಡುವುದು ಮತ್ತು ಒತ್ತಡ, ಆತಂಕಗಳನ್ನು ಕಡಿಮೆ ಮಾಡಿಕೊಳ್ಳುವುದು ಕೂಡ ಕಪ್ಪು ವೃತ್ತ ತಡೆಯಲು ಉತ್ತಮ ವಿಧಾನವಾಗಿದೆ.
ಸರಿಯಾಗಿ ನಿದ್ದೆ ಮಾಡಿ:
ಮನುಷ್ಯನಿಗೆ ನಿದ್ದೆ ಅತ್ಯವಶ್ಯಕ, ಸರಿಯಾಗಿ ನಿದ್ದೆ ಮಾಡದಿದ್ದರ ಕೂಡ ಇಂತಹ ಸಮಸ್ಯೆ ತಲೆದೂರುತ್ತದೆ, ಆರಾಮದಾಯಕ ನಿದ್ದೆಗೆ ಹೆಚ್ಚು ಒತ್ತು ನೀಡಿ.
ಕ್ರೀಂ ಹಚ್ಚುವಾಗ ಎಚ್ಚರಿಕೆ ವಹಿಸಿ:
ಕ್ರೀಂ ಹಚ್ಚುವಾಗ ಮತ್ತು ಮೇಕಪ್ ಮಾಡುವಾಗ ನಿಧಾನವಾಗಿ ಹಚ್ಚಿ. ಕಣ್ಣಿನ ಕೆಳ ಭಾಗದಲ್ಲಿ ಹೆಚ್ಚು ಮಸಾಜ್ ಮಾಡಬೇಡಿ. ಕಣ್ಣಿನ ಕೆಳಗೆ ಮಸಾಜ್ ಮಾಡಲು ವೃತ್ತಿಪರ ಮಸಾಜುಗಾರರಿಗೆ ಮಾತ್ರ ಅವಕಾಶ ಕೊಡಿ. ಕಣ್ಣಿನ ಸುತ್ತ ವಿಶೇಷವಾಗಿ ಅದಕ್ಕೆಂದೇ ತಯಾರಿಸಿದ ಕ್ರೀಮ್ ಬಳಸಿ.
ಶುದ್ಧ ನೀರಿನಿಂದ ಕಣ್ಣನ್ನು ತೊಳೆಯಿರಿ:
ಕಣ್ಣಿನ ಆಯಾಸ ಕಡಿಮೆ ಮಾಡಲು ಬೆಚ್ಚಗಿನ ನೀರಿನಿಂದ ತೊಳೆಯಿರಿ ನಂತರ ತಣ್ಣನೆ ನೀರಿನಿಂದ ಕೂಡ ಕಣ್ಣನ್ನು ತೊಳೆಯಿರಿ. ಇದು ರಕ್ತ ಸಂಚಲನವನ್ನು ಸುಗಮವಾಗಿಸುವುದರ ಮೂಲಕ ಕಪ್ಪು ವೃತ್ತ ಹೋಗಲಾಡಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮೊಡವೆ ಹೆಚ್ಚಾಗಲೂ ಈ ಆಹಾರಗಳು ಒಂದು ಕಾರಣ
ಟೊಮೆಟೊ ಜ್ಯೂಸ್ ಬಳಸಿ:
ಟೊಮೆಟೊ ಜ್ಯೂಸ್ ಕೂಡ ಕಣ್ಣಿಗೆ ಅಷ್ಟೇ ಒಳ್ಳೆಯದು. ಇದನ್ನು ಹಚ್ಚಿ 20 ನಿಮಿಷ ಹಾಗೆಯೇ ಬಿಡಿ. ಅಲ್ಲದೆ ಬಾದಾಮಿ ಎಣ್ಣೆ ಕೂಡ ಉತ್ತಮ ಮನೆ ಮದ್ದು. ಮಲಗುವ ಮೊದಲು ಬಾದಾಮಿ ಮತ್ತು ಹಾಲನ್ನು ಮಿಶ್ರ ಮಾಡಿ ಅದನ್ನು ಕಣ್ಣಿನ ಸುತ್ತಲು ಹಚ್ಚಿ. ಮಾರನೆಯ ದಿನ ಬೆಳಗ್ಗೆ ತಣ್ಣನೆಯ ನೀರಿನಿಂದ ತೊಳೆಯಿರಿ.
ಪುದೀನ ಎಲೆಗಳು:
ಜಜ್ಜಿದ ಪುದೀನ ಎಲೆಗಳು ಕೂಡ ಕಣ್ಣಿನ ಸುತ್ತಲಿನ ಕಪ್ಪು ಕಲೆ ಹೋಗಲಾಡಿಸಲು ಉತ್ತಮ ಮದ್ದು. ಜಜ್ಜಿನ ಪುದೀನವನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿ ಮತ್ತು 10 ರಿಂದ 15 ನಿಮಿಷ ಬಿಟ್ಟು ತೊಳೆಯಿರಿ. ಕಿತ್ತಳೆ ರಸವನ್ನು ಗ್ಲಿಸರಿನ್ ಜೊತೆ ಬೆರೆಸಿ ವಾರದಲ್ಲಿ 3 ಭಾರಿ ಕಣ್ಣಿನ ಸುತ್ತ ಹಚ್ಚಿ 20 ನಿಮಿಷದ ನಂತರ ತೊಳೆಯಿರಿ. ಕಣ್ಣಿನ ಸುತ್ತಲ ಕಪ್ಪು ಕಲೆಗಳನ್ನು ಹೋಗಲಾಡಿಸಿ.
ಸೌತೆಕಾಯಿ:
ಸೌತೆಕಾಯಿ ಸೌತೆಕಾಯಿರಸ ಡಾರ್ಕ್ ಸರ್ಕಲ್ ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿಯಾದ ಮನೆ ಮದ್ದಾಗಿದೆ. ಸೌತೆಕಾಯಿಯನ್ನು ಕತ್ತರಿಸಿ ಕಣ್ಣಿನ ಮೇಲೆ ಇಟ್ಟು 10 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಿ. ನಂತರ ಮುಖ ತೊಳೆಯಿರಿ. ಇದು ಕಲೆ ಹೋಗಲಾಡಿಸಿ ಕಣ್ಣು ಶುಭ್ರವಾಗಿ ಕಾಣುವಂತೆ ಮಾಡುತ್ತದೆ.



Click it and Unblock the Notifications
