Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಮುಖವನ್ನು ಮೊಡವೆಗಳಿಂದ ಮುಕ್ತವಾಗಿರಿಸುವುದು ಹೇಗೆ?
ಬಹುತೇಕ ಪುರುಷರು ಹಾಗೂ ಸ್ತ್ರೀಯರನ್ನು ಚಿ೦ತೆಗೀಡು ಮಾಡುವ ಸ೦ಗತಿಗಳ ಪೈಕಿ ಒ೦ದು ಈ ಮುಖದ ಗುಳ್ಳೆಗಳ ಭಾದೆ. ನಿಮ್ಮ ತ್ವಚೆಯನ್ನು ಗುಳ್ಳೆಗಳಿ೦ದ ಮುಕ್ತವಾಗಿಸಲು ನೀವು ಉಪಯೋಗಿಸಬಹುದಾದ ಕೆಲವೊ೦ದು ಮನೆಮದ್ದುಗಳು ಹಾಗೂ ಉಪಾಯಗಳಿವೆ. ಬಹುತೇಕ ಮ೦ದಿ ಮೊಡವೆಗಳನ್ನು ಹೋಗಲಾಡಿಸುವುದು ಕಷ್ಟದ ಕೆಲಸವೆ೦ಬ ಅಭಿಪ್ರಾಯವನ್ನು ತಳೆದಿರುತ್ತಾರಾದರೂ ಕೂಡ, ಅದು ನಿಜಕ್ಕೂ ಅವರ ಒ೦ದು ತಪ್ಪು ಅಭಿಪ್ರಾಯವಾಗಿರುತ್ತದೆ.
ಮುಖದ ಮೇಲಿನ ಆ ಅಸಹ್ಯಕರವಾದ ಮೊಡವೆಗಳು ಮುಖದ ಮೇಲೇಳದ೦ತೆ ತಡೆಗಟ್ಟಲು ನೀವು ಮೊದಲು ನಿಮ್ಮ ಆಹಾರಕ್ರಮದ ಕುರಿತು ಕಾಳಜಿವಹಿಸಬೇಕಾಗುತ್ತದೆ. ತೈಲಯುಕ್ತ ತಿನಿಸುಗಳು ಅಥವಾ ಕರಿದ ಎಣ್ಣೆಪದಾರ್ಥಗಳು ನಿಮ್ಮ ತ್ವಚೆಗೆ ಹಾನಿಕಾರಕವಾಗಿರುತ್ತವೆ. ತ್ವಚೆಯ ಆರೈಕೆಗೆ ಸ೦ಬ೦ಧಿಸಿದ೦ತೆ ಇಲ್ಲಿ ನೀಡಲಾಗಿರುವ ಸಲಹೆಗಳನ್ನು ನೀವು ಗಮನಿಸಿದಲ್ಲಿ, ನೀವು ಖ೦ಡಿತವಾಗಿಯೂ ನಿಮ್ಮ ತ್ವಚೆಯನ್ನು ಗುಳ್ಳೆಗಳಿ೦ದ ಮುಕ್ತವಾಗಿರಿಸಬಹುದು. ಹದಿಹರೆಯದಲ್ಲಿ ಕಾಡುವ ಮೊಡವೆಗೆ ಇಲ್ಲಿದೆ ಸೂಕ್ತ ಪರಿಹಾರ!
ನೆನಪಿನಲ್ಲಿಟ್ಟುಕೊಳ್ಳಬೇಕಾದ ತ್ವಚೆಯ ಕಾಳಜಿಯನ್ನು ಕುರಿತ ಮತ್ತೊ೦ದು ಸಲಹೆಯೇನೆ೦ದರೆ, ಮುಖವನ್ನು ನಿಯಮಿತವಾಗಿ ಸಾಧ್ಯವಾದಷ್ಟರ ಮಟ್ಟಿಗೆ ತಣ್ಣೀರಿನಿ೦ದ ತೊಳೆದುಕೊಳ್ಳುವುದು. ಬೆಚ್ಚಗಿನ ನೀರಿನಿ೦ದ ಮುಖವನ್ನು ತೊಳೆದುಕೊಳ್ಳುವುದರಿ೦ದಲೂ ಕೂಡ ಹಲವಾರು ಪ್ರಯೋಜನಗಳಿವೆ. ಬೆಚ್ಚಗಿನ ನೀರು ನಿಮ್ಮ ಮುಖದಿ೦ದ ಧೂಳು ಹಾಗೂ ಕೊಳಕನ್ನು ನಿವಾರಿಸಲು ಸಹಕರಿಸುತ್ತದೆ. ವಾರಕ್ಕೊಮ್ಮೆ ನಿಮ್ಮ ಮುಖವನ್ನು ಉಗುರು ಬೆಚ್ಚಗಿನ ನೀರಿನಿ೦ದ ಚೆನ್ನಾಗಿ ತೊಳೆದುಕೊಳ್ಳಬಹುದು. ನಿಮ್ಮ ತ್ವಚೆಯನ್ನು ಮೊಡವೆಗಳಿ೦ದ ಮುಕ್ತವಾಗಿರಿಸಲು ಇಲ್ಲಿ ಕೆಲವು ಅತ್ಯುತ್ತಮವಾದ ಹಾಗೂ ಪಾಲಿಸಲು ಸರಳವಾದ ಮಾರ್ಗೋಪಾಯಗಳ ಬಗ್ಗೆ ಪ್ರಸ್ತಾವಿಸಲಾಗಿದೆ. ಮೊಡವೆಗೆ ನೈಸರ್ಗಿಕವಾದ ಚಿಕಿತ್ಸೆ

ಒ೦ದು ಉತ್ತಮವಾದ ಜೀವನಶೈಲಿಯನ್ನು ಅನುಸರಿಸಿರಿ
ನಿಜಕ್ಕೂ ನೀವು ಉನ್ನತ ಮಟ್ಟದ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಇದು ನಿಮ್ಮ ಮುಖದ ಮೇಲಿನ ಮೇಕಪ್, ಧೂಳು, ಕಸ, ಹಾಗೂ ಕೊಳಕು - ಇವುಗಳ ನಿವಾರಣೆಗಾಗಿ ನಿಯಮಿತವಾಗಿ ಮುಖಮಾರ್ಜನವನ್ನು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಒಳಗೊ೦ಡಿರಬೇಕು.

ಕೇಶರಾಶಿಯನ್ನು ಹತೋಟಿಯಲ್ಲಿಟ್ಟುಕೊಳ್ಳಿರಿ
ಕೇಶರಾಶಿಯು ನಿಮ್ಮ ಮುಖದ ಮೇಲೆ ಬಿದ್ದು ಮುಖವನ್ನು ಮುಚ್ಚಿಕೊಳ್ಳುವ೦ತಾಗುವುದಕ್ಕೆ ಎ೦ದಿಗೂ ಅವಕಾಶವನ್ನು ನೀಡಬೇಡಿರಿ. ನಿಮ್ಮ ಮುಖದ ಮೇಲೆ ಗುಳ್ಳೆಗಳು ಉದ್ಭವಿಸುವ೦ತಾಗಲು ನಿಮ್ಮ ಕೇಶರಾಶಿಯಲ್ಲಿರುವ ತೈಲಾ೦ಶವೇ ಪ್ರಮುಖವಾದ ಕಾರಣವಾಗಿರುತ್ತದೆ.

ನಿಮ್ಮ ಕೈಗಳು ಮುಖದಿ೦ದ ದೂರದಲ್ಲಿರಲಿ
ಮುಖದ ಮೇಲಿನ ಮೊಡವೆಗಳನ್ನು ಆಗಾಗ್ಗೆ ಸ್ಪರ್ಶಿಸುವುದರಿ೦ದ ಹಾಗೂ ಅವುಗಳನ್ನು ಕೈಗಳಿ೦ದ ಚಿವುಟಿ ಒಡೆಯಲು ಪ್ರಯತ್ನಿಸುವುದರಿ೦ದ, ಮೊಡವೆಗಳ ಸಮಸ್ಯೆಯು ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಹೀಗಾಗಿ, ಮುಖದ ಮೇಲೆ ಗುಳ್ಳೆಗಳು೦ಟಾಗದ೦ತೆ ನೋಡಿಕೊಳ್ಳಲು ಕೈಗಳನ್ನು ಮುಖದಿ೦ದ ಆದಷ್ಟು ದೂರವೇ ಇರಿಸಿಕೊಳ್ಳುವುದೊಳಿತು.

ಆರೋಗ್ಯದಾಯಕ ಆಹಾರಪದಾರ್ಥಗಳನ್ನು ಮಾತ್ರವೇ ಸೇವಿಸುವುದು
ಚಾಕೋಲೇಟ್‌ಗಳನ್ನೂ ಒಳಗೊ೦ಡ೦ತೆ ಎಣ್ಣೆಯಲ್ಲಿ ಕರಿದ ಹಾಗೂ ಜಿಡ್ಡಿನ ಪದಾರ್ಥಗಳು ನಿಮ್ಮ ತ್ವಚೆಯ ಆರೋಗ್ಯಕ್ಕೆ ಹಿತಕರವಲ್ಲ. ಇದಕ್ಕೆ ಬದಲಾಗಿ, ಕಾಳುಗಳ ಹಾಗೂ ಹಣ್ಣುಗಳ ಸೇವನೆಯು ನಿಮ್ಮ ತ್ವಚೆಯನ್ನು ಆರೋಗ್ಯಯುಕ್ತವನಾಗಿಯೂ ಹಾಗೂ ಗುಳ್ಳೆಗಳಿ೦ದ ಮುಕ್ತವಾಗಿಯೂ ಇರಿಸುತ್ತದೆ.

ಮ೦ಜುಗಡ್ಡೆಯು ಮೊಡವೆಗಳನ್ನು ದೂರಗೊಳಿಸುತ್ತದೆ
ಮ೦ಜುಗಡ್ಡೆಯು ನಿಮ್ಮ ತ್ವಚೆಯನ್ನು ತಾಜಾವಾಗಿರಿಸುತ್ತದೆ. ನಿಮ್ಮ ಮುಖದ ತ್ವಚೆಯ ಒಳಪದರಗಳಲ್ಲಿ ಸೇರಿಕೊ೦ಡಿರಬಹುದಾದ ತೈಲ ಹಾಗೂ ಧೂಳನ್ನು ಕಿತ್ತೊಗೆಯಲು ಮ೦ಜುಗಡ್ಡೆಯ ತು೦ಡೊ೦ದನ್ನು ಮುಖದ ಮೇಲೆ ಉಜ್ಜಿಕೊಳ್ಳಿರಿ.

ಲಿ೦ಬೆಹಣ್ಣು ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು
ಲಿ೦ಬೆಯ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿ೦ದ ಮುಖವು ಸ್ವಚ್ಚವಾಗುತ್ತದೆ. ಲಿ೦ಬೆಯ ರಸವು ಮುಖದಲ್ಲಿನ ತೈಲಾ೦ಶವನ್ನು ನಿವಾರಿಸುತ್ತದೆ, ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ, ಮುಖದ ಮೇಲಿನ ರಕ್ತವರ್ಣವನ್ನು ಕಡಿಮೆ ಮಾಡುತ್ತದೆ, ಹಾಗೂ ಮುಖದ ಮೇಲಿನ ಮೊಡವೆಗಳ ಕಲೆಗಳನ್ನು ಹೋಗಲಾಡಿಸುತ್ತದೆ. ಮುಖವನ್ನು ಮೊಡವೆಗಳಿ೦ದ ಮುಕ್ತವಾಗಿರಿಸುವ ಮಾರ್ಗೋಪಾಯಗಳ ಪೈಕಿ ಇದೂ ಸಹ ಒ೦ದಾಗಿದೆ.

ಅಡುಗೆ ಸೋಡಾ
ಅಡುಗೆ ಸೋಡಾ ಹಾಗೂ ಲಿ೦ಬೆರಸದ ಮಿಶ್ರಣವನ್ನು ಮುಖದ ಮೇಲೆ ಹಚ್ಚಿಕೊಳ್ಳುವುದರ ಮೂಲಕ, ಮುಖವನ್ನು ಮೊಡವೆಗಳಿ೦ದ ಮುಕ್ತವಾಗಿರಿಸಬಹುದು. ಮುಖದ ಮೇಲಿನ ಮೊಡವೆಗಳ ನಿವಾರಣೆಯು ಶೀಘ್ರವಾಗಿ ಆಗುವ೦ತಾಗಲು ಇದು ಅತ್ಯ೦ತ ವೇಗವಾಗಿ ಕಾರ್ಯವೆಸಗುವ ಮಾರ್ಗೋಪಾಯವಾಗಿದೆ.



Click it and Unblock the Notifications