Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ನೈಸರ್ಗಿಕ ಸೊಬಗುಳ್ಳ ಗುಲಾಬಿ ಕೆನ್ನೆ ನಿಮ್ಮದಾಗಿಸಿಕೊಳ್ಳಬೇಕೇ?
ಕಾಂತಿಯುತವಾದ ಗುಲಾಬಿ ಗಲ್ಲವು ನಿಮ್ಮ ಬ್ಲಶ್ ಅಥವಾ ಮೇಕಪ್‌ನ್ನು ಹೊರಹಾಕುತ್ತದೆ. ಗಲ್ಲದ ಮೇಲಿನ ನೈಸರ್ಗಿಕ ಕಾಂತಿಯು ನಿಮ್ಮನ್ನು ತುಂಬಾ ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ. ಹಾಗಾಗಿ ನೀವು ಮೇಕಪ್ ಬ್ಲಶ್ ಬಳಸುವುದನ್ನು ಬಿಟ್ಟು ಮನೆಯಲ್ಲೇ ಸಿಗುವ ಕೆಲವೊಂದು ನೈಸರ್ಗಿಕ ಪ್ಯಾಕ್‌ಗಳನ್ನು ಬಳಸಿಕೊಳ್ಳಬಹುದು.
ಬೀಟ್‌ರೂಟ್
ಬೀಟ್‌ರೂಟ್ ನಿಮ್ಮ ತ್ವಚೆಗೆ ಗುಲಾಬಿ ಬಣ್ಣವನ್ನು ನೀಡುತ್ತದೆ. 2-3 ಬೀಟ್‌ರೂಟ್‌ನ್ನು ಬೇಯಿಸಿ ಮತ್ತು ಅದನ್ನು ಚೆನ್ನಾಗಿ ರುಬ್ಬಿಕೊಳ್ಳಿ ಅಲ್ಲದೆ ಅದಕ್ಕೆ ಮೂರು ಚಮಚ ಕಯೋಲಿನ್ ಪೌಡರ್(ಇದು ನಿಮ್ಮ ಸಮೀಪದ ಮೆಡಿಕಲ್ ಅಂಗಡಿಯಲ್ಲಿ ಲಭ್ಯ) ಹಾಕಿ ಮತ್ತು ಇದನ್ನು ಮಿಶ್ರಣ ಮಾಡಿ ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 20 ನಿಮಿಷ ಹಾಗೆ ಬಿಡಿ ಮತ್ತು ಅದರ ಬಳಿಕ ತೊಳೆಯಿರಿ.

ಮಸೂರ್ ದಾಲ್ ಮತ್ತು ಹಾಲು
ಹಸಿ ಹಾಲಿನಲ್ಲಿ 30 ನಿಮಿಷಗಳ ಕಾಲ ಮಸೂರು ದಾಲ್‌ನ್ನು ನೆನೆಸಲು ಹಾಕಿ. ಇದರ ಬಳಿಕ ಅದನ್ನು ರುಬ್ಬಿಕೊಳ್ಳಿ . ಇದಕ್ಕೆ ಸ್ವಲ್ಪ ಕಯೋಲಿನ್ ಪೌಡರ್ ಹಾಕಿ. ಮುಖಕ್ಕೆ ಹಚ್ಚಿ ಮತ್ತು 20 ನಿಮಿಷ ಹಾಗೆ ಬಿಡಿ.
ಕಡಲೆ ಹಿಟ್ಟು, ಹಾಲಿನ ಕೆನೆ, ಗೋಧಿ ಹುಡಿ ಮತ್ತು ಮೊಸರು
ಮೃಧುವಾದ ಮಾಶ್ ಮಾಡಲು 2-3 ಚಮಚ ಕಡಲೆ ಹಿಟ್ಟು ಹಾಕಿ, ಒಂದು ಚಮಚ ಹಾಲಿನ ಕೆನೆ, ಮೂರು ಚಮಚ ಗೋಧಿ ಹುಡಿ ಮತ್ತು ಮೊಸರು. ಇದನ್ನೆಲ್ಲಾ ಮಿಶ್ರ ಮಾಡಿ ನಿಮ್ಮ ಮುಖಕ್ಕೆ ಹಚ್ಚಿ ಮತ್ತು 15 ನಿಮಿಷ ಬಿಟ್ಟು ತೊಳೆಯಿರಿ.
ಸೌತೆಕಾಯಿ ತಿರುಳು
ನಿಮ್ಮ ತ್ವಚೆಯನ್ನು ತುಂಬಾ ಕಳೆಗುಂದಿದಂತೆ ಕಾಣುವಂತೆ ಮಾಡುವ ಸತ್ತ ಚರ್ಮವನ್ನು ತೆಗೆಯಲು ನಿಮ್ಮ ತ್ವಚೆಯ ಪದರ ಕಳಚುವುದು ತುಂಬಾ ಮುಖ್ಯವಾಗುತ್ತದೆ. ನಿಮ್ಮ ಮುಖಕ್ಕೆ ಸೌತೆಕಾಯಿಯ ತಿರುಳನ್ನು ಹಚ್ಚಿ. ಇದು ತ್ವಚೆಗೆ ಕಾಂತಿ ನೀಡಲು ಅದ್ಭುತವಾಗಿ ಕೆಲಸ ಮಾಡುತ್ತದೆ. ನಿಮ್ಮ ಮುಖದಲ್ಲಿರುವ ಕಪ್ಪು ಕಲೆಗಳನ್ನು ತೆಗೆದು ಪದರ ಕಳಚುತ್ತದೆ.
ಸೌತೆಕಾಯಿ, ನಿಂಬೆ, ಹಾಲು ಮತ್ತು ಜೇನಿನ ಪೇಸ್ಟ್
ಸೌತೆಕಾಯಿ, ನಿಂಬೆ ರಸ(1/4ಕಪ್), ತಲಾ ಐದು ಚಮಚ ಜೇನು ಮತ್ತು ಹಾಲನ್ನು ಸೇರಿಸಿ ಮಿಶ್ರಣ ಮಾಡಿ ಮನೆಯಲ್ಲಿ ಫೇಸ್ ಪ್ಯಾಕ್ ಮಾಡಬಹುದು. ಇದು ದಪ್ಪವಾಗಲು ಕಡಲೆ ಹಿಟ್ಟು ಹಾಕಿ. ಈ ಮಿಶ್ರಣವನ್ನು ಸುಮಾರು 5-6 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿಡಿ. ಈ ತಂಪಾದ ಫೇಸ್ ಪ್ಯಾಕ್‌ನ್ನು ಮುಖಕ್ಕೆ ಹಚ್ಚಿ. 15-20 ನಿಮಿಷ ಬಿಟ್ಟು ತೊಳೆಯಿರಿ.
ಕಾಂತಿಯುತ ಹಾಗೂ ಮೊಡವೆ ಮುಕ್ತ ತ್ವಚೆಗಾಗಿ ಸರಳ ಪರಿಹಾರಗಳು
ನಿಂಬೆ ಮತ್ತು ಹಾಲಿನ ಮಸಾಜ್
ನಿಮ್ಮ ತ್ವಚೆಯನ್ನು ಯುವ ಹಾಗೂ ಕಾಂತಿಯುತವಾಗಿ ಕಾಣಿಸುವಂತೆ ಮಾಡಲು ಮಸಾಜ್ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಇದಕ್ಕಾಗಿ 1/4 ಕಪ್ ನಿಂಬೆ ರಸವನ್ನು ಹಾಲಿನೊಂದಿಗೆ ಮಿಶ್ರ ಮಾಡಿ. ನಿಮ್ಮ ಮುಖದ ಮೇಲೆ ನಿಂಬೆ ಮತ್ತು ಹಾಲಿನ ಮಸಾಜ್ ಮಾಡಿದರೆ ರಕ್ತದ ಸಂಚಲನ ಉತ್ತಮವಾಗುತ್ತದೆ.
ಬಾದಾಮಿ ಕ್ರಷ್
ಆರೋಗ್ಯಕರ ಕಾಂತಿಗಾಗಿ ನಿಮ್ಮ ತ್ವಚೆಯನ್ನು ಮೊಶ್ಚಿರೈಸರ್ ಮಾಡುವುದು ತುಂಬಾ ಮುಖ್ಯ. ಕೆಲವು ಬಾದಾಮಿಯನ್ನು ರುಬ್ಬಿಕೊಳ್ಳಿ, ಅದರೊಂದಿಗೆ ಗುಲಾಬಿ ದಳ, ತಲಾ ಐದು ಚಮಚ ಪುದೀನಾ ರಸ ಮತ್ತು ಜೇನನ್ನು ಹಾಕಿ. ಈ ಮಿಶ್ರಣವು ಕ್ರೀಮ್‌ನಂತೆ ಕಾಣಿಸುತ್ತದೆ ಮತ್ತು 5-6 ದಿನ ಫ್ರಿಡ್ಜ್‌ನಲ್ಲಿಡಬಹುದು. ಈ ಫೇಶ್ ಮಾಸ್ಕ್ ಒಂದು ವಾರದಲ್ಲಿ ಫಲಿತಾಂಶ ನೀಡುತ್ತದೆ. ಇದನ್ನು ಮಲಗುವ ಸಮಯದಲ್ಲಿ ಮುಖಕ್ಕೆ ಹಚ್ಚಿಕೊಳ್ಳಬೇಕು.
ಉತ್ತಮ ಫಲಿತಾಂಶ ಪಡೆಯಲು ಫೇಸ್ ಪ್ಯಾಕ್‌ನ್ನು ನಿಯಮಿತವಾಗಿ ಹಚ್ಚಿಕೊಳ್ಳಿ. ಸರಳ ಹಾಗೂ ನೈಸರ್ಗಿಕವಾಗಿ ನಿಮ್ಮ ತ್ವಚೆಯು ಕಾಂತಿಯುತವಾಗಿ ಮಾಡಬಹುದು.



Click it and Unblock the Notifications
