Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹದಿಹರೆಯದಲ್ಲಿ ಕಾಡುವ ಮೊಡವೆಗೆ ಇಲ್ಲಿದೆ ಸೂಕ್ತ ಪರಿಹಾರ!
ಮೊಡವೆ ಹದಿಹರೆಯದಲ್ಲಿ ಕಾಡುವ ದುಃಸ್ವಪ್ನ. ಮೊಡವೆ ಬರುತ್ತಿದ್ದಂತೆ ಅದರ ಬಗ್ಗೆ ಗಮನ ಹರಿಸಿದರೆ ಮುಖದ ಮೇಲೆ ಅದು ಬೀರುವ ಕೆಟ್ಟ ಪರಿಣಾಮವನ್ನು ತಡೆಯಬಹುದು. ಮೊಡವೆಯಿಂದ ಕಲೆಗಳು ಉಂಟಾದರೆ ನಿಧಾನಕ್ಕೆ ಹೋಗಲಾಡಿಸಬಹುದು. ಆದರೆ ರಂದ್ರಗಳು ಉಂಟಾದರೆ ಮುಖದ ಅಂದ ಮಾಯವಾಗುವುದು.
ಮೊಡವೆ ಕಲೆಗಳನ್ನು ತೆಗೆಯಲು ಸಾಕಷ್ಟು ವಿಧಾನಗಳಿವೆ. ಈ ಮೊಡವೆಗಳು ಪ್ರಾರಂಭವಾಗುವುದು ಯೌವನದಲ್ಲಿ. ಪ್ರಾಯದ ಕಾಲದಲ್ಲಿ ಹಾರ್ಮೋನ್ ಏರುಪೇರಾದಾಗ ಮೆದೋಗ್ರಂಥಿಗಳ ಸ್ರಾವದಿಂದಾಗಿ ಮೊಡವೆಗಳು ಪ್ರಾರಂಭವಾಗುತ್ತವೆ.
ಇದಕ್ಕೆ ಕೆಲವು ಔಷಧೀಯ ಚಿಕಿತ್ಸೆಗಳಿವೆ, ಆದರೆ ಮನೆಯಲ್ಲಿಯೇ ಮಾಡಿಕೊಳ್ಳುವ ಪ್ರಾಕೃತಿಕ ಚಿಕಿತ್ಸೆಯಿಂದ ಸಾಕಷ್ಟು ಹಣ ಉಳಿಸಬಹುದು. ಸ್ವಾಭಾವಿಕ ವಿಧಾನದಿಂದ ಮೊಡವೆ ಕಲೆಗಳಿಂದ ಮುಕ್ತಿ ಹೊಂದುವುದು ಹೇಗೆ ಎಂದು ತಿಳಿಯಬೇಕೆ? ಹಾಗಾದರೆ ಮುಂದೆ ಓದಿ:
ಆರೋಗ್ಯಕರ ಹೊಳೆಯುವ ತ್ವಚೆಕ್ಕಾಗಿ ಕಡೆಗಣಿಸಬಹುದಾದ 15 ಆಹಾರಗಳು

ನೀರು ಕುಡಿಯಿರಿ:
ಹೈಡ್ರೇಶನ್ ಕೀಲಿ ನೀರು ಮೊಡವೆ ಕಲೆಗಳನ್ನು ತಡೆಗಟ್ಟುವ ಉತ್ತಮ ಸ್ವಾಭಾವಿಕ ವಿಧಾನ ಎಂದು ಸಾಬೀತಾಗಿದೆ.ಪ್ರತಿ ದಿನ 8 ಲೋಟ ಅಥವಾ ಅದಕ್ಕಿಂತ ಹೆಚ್ಚು ನೀರು ಕುಡಿದರೆ ಅದು ಬೇಡದ ಚರ್ಮವನ್ನು,ಕಲೆಗಳನ್ನು ತೆಗೆಯುತ್ತದೆ ಎಂದು ಹೇಳಲಾಗುತ್ತದೆ.

ಮೆಂತೆ ಸೊಪ್ಪು:
ಟ್ರೀಟ್ ಮೆಂಟ್ ಮೆಂತೆ ಸೊಪ್ಪನ್ನು ನೆನೆಸಿ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಇದನ್ನು ಒಣಗಲು ಬಿಡಿ ಮತ್ತು ಸ್ವಲ್ಪ ಹೊತ್ತಿನ ನಂತರ ತೊಳೆಯಿರಿ. ಸ್ವಲ್ಪ ದಿನಗಳವರೆಗೆ ಇದನ್ನು ಅನುಸರಿಸಿ ಇದರಿಂದ ಮೊಡವೆಗಳು ಮಾಯವಾಗುತ್ತವೆ ಮತ್ತು ಚರ್ಮವನ್ನು ಮೃದುವಾಗಿಸುತ್ತದೆ.

ಸೂಕ್ತ ಡಯಟ್:
ಸೂಕ್ತ ಡಯಟ್ ತರಕಾರಿ ಮತ್ತು ಹಣ್ಣುಗಳಲ್ಲಿ ಸಾಕಷ್ಟು ಕಬ್ಬಿಣ ಮತ್ತು ವಿಟಮಿನ್ ಗಳಿರುತ್ತವೆ ಇದು ಮುಖದ ಸೌಂದರ್ಯ ಮರಳಿ ಪಡೆಯಲು ಸಹಾಯ ಮಾಡುತ್ತವೆ.ಅದರಲ್ಲಿರುವ ಜ್ಯೂಸ್ ಅಂಶ ದೇಹದಲ್ಲಿ ನೀರನ್ನು ಕಾಪಾಡಲು ಸಹಾಯವಾಗುತ್ತದೆ.ಕಾಂತಿ ಹೆಚ್ಚಲು ಮತ್ತು ಕಲೆ ಮಾಸಲು ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ತಿನ್ನಿ.

ಲೋಳೆಸರ:
ಲೋಳೆಸರ ಬೆಸ್ಟ್ ಮೊಡವೆಯ ಹಠ ಮಾಡುವ ಕಲೆಗಳನ್ನು ಹೋಗಲಾಡಿಸಲು ಲೋಳೆಸರ ಬಳಸುವುದು ಉತ್ತಮ ವಿಧಾನ.ಲ್ಯಾವೆಂಡರ್ ಎಣ್ಣೆ ಮುಂತಾದ ಎಣ್ಣೆಗಳನ್ನು ಕಲೆಗಳಿಗೆ ಹಚ್ಚಿದರೆ ಬೇಗ ಕಡಿಮೆ ಆಗುತ್ತದೆ.

ಮಸಾಜ್:
ಮಸಾಜ್ ಮೊಡವೆ ಆದಾಗ ಮಸಾಜ್ ಮಾಡಿ ಇದು ಮೊಡವೆ ಕಲೆಗಳನ್ನು ಕಡಿಮೆ ಮಾಡಿ ಮೊಡವೆಯನ್ನು ಹೊರಹಾಕಲು ಸಹಾಯ ಮಾಡುತ್ತವೆ.

ಹಾಲನ್ನು ಕುಡಿಯಿರಿ:
ಹಾಲಿನಿಂದ ಟ್ರೀಟ್ ಮೆಂಟ್ ಒಂದು ಕಪ್ ಹಾಲನ್ನು ಕುಡಿಸಿ ಗಟ್ಟಿಯಾದ ನಂತರ ಅದಕ್ಕೆ ಒಂದು ಹನಿ ನಿಂಬೆ ರಸ ಹಿಂಡಿ ಮತ್ತು ಒಲೆಯಿಂದ ಇಳಿಸಿ,ಕದಡುತ್ತಿರಿ. ಬಿಸಿ ತಣಿದ ನಂತರ ಮಲಗುವ ಸಮಯದಲ್ಲಿ ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮತ್ತು ಮರುದಿನ ಬೆಳಗ್ಗೆ ನಿಮ್ಮ ಮುಖವನ್ನು ತೊಳೆಯಿರಿ.ಇದು ಮೊಡವೆ ನಿವಾರಿಸಿ ಮೃದು ಕಾಂತಿ ನೀಡುತ್ತದೆ.

ರೋಸ್ ವಾಟರ್:
ಶ್ರೀಗಂಧ ಮತ್ತು ರೋಸ್ ವಾಟರ್ 8.ಶ್ರೀಗಂಧ ಮತ್ತು ರೋಸ್ ವಾಟರ್ ಅನ್ನು ಮಿಶ್ರ ಮಾಡಿ,ಇದನ್ನು ಕಲೆ ಇರುವೆಡೆ ಹಚ್ಚಿ ಮತ್ತು ರಾತ್ರಿ ಪೂರ್ತಿ ಹಾಗೆ ಇಟ್ಟು ಬೆಳಗ್ಗೆ ತೊಳೆಯಿರಿ.

ಜೇನು:
ಜೇನಿನ ಸಿಹಿ ನಿಮ್ಮ ದಿನವನ್ನು ಹೊಳೆಯುವಂತೆ ಮಾಡಬಹುದು,ಹಾಗೆಯೇ ಜೇನು ನಿಮ್ಮ ಮುಖವನ್ನು ಕೂಡ ಹೊಳೆಯುವಂತೆ ಮಾಡುತ್ತದೆ. ಜೇನನ್ನು ಮುಖಕ್ಕೆ ಮತ್ತು ಕಲೆಗಳಿಗೆ ಹಚ್ಚಿ ಇದರಿಂದ ನಿಮ್ಮ ಮುಖ ಹೊಳೆಯುತ್ತದೆ ಮತ್ತು ನೀವು ಯಂಗ್ ಆಗಿ ಕಾಣಿಸುವಿರಿ.

ಬೇಕಿಂಗ್ ಪೌಡರ್:
ಬೇಕಿಂಗ್ ಪೌಡರ್ ಅನ್ನು ನೀರಿನೊಂದಿಗೆ ಕಲೆಸಿ ಇಟ್ಟುಕೊಳ್ಳಿ ನೊರೆ ಬರಲು ಬಿಡಿ ನಂತರ ಅದನ್ನು ಮುಖದ ಕಲೆಗಳಿಗೆ ಹಚ್ಚಿ ಮತ್ತು ನೀರಿನಿಂದ ತೊಳೆಯಿರಿ.

ನಿಂಬೆರಸ ಮತ್ತು ಕಡಲೆ ಎಣ್ಣೆ:
ನಿಂಬೆರಸ ಮತ್ತು ಕಡಲೆ ಎಣ್ಣೆಯನ್ನು ಮಿಶ್ರಣ ಮಾಡಿ ದಿನವೂ ಮುಖಕ್ಕೆ ಹಚ್ಚಿ ಅರ್ಧಗಂಟೆಯ ಬಳಿಕ ಹದ ಬಿಸಿ ನೀರಿನಲ್ಲಿ ಮುಖ ತೊಳೆಯಬೇಕು.

ಜೇನು ಮತ್ತು ಸೇಬು:
ಸೇಬನ್ನು ಚೆನ್ನಾಗಿ ಹಿಸುಕಿ ಅದಕ್ಕೆ 1 ಚಮಚ ಜೇನು ಹಾಕಿ ಮುಖಕ್ಕೆ ಹಚ್ಚಿದರೆ ಮೊಡವೆ ಕಡಿಮೆಯಾಗುವುದು. ಮುಖದ ಹೊಳಪು ಹೆಚ್ಚುವುದು.

ಟೊಮೆಟೊ ಮತ್ತು ಸೌತೆಕಾಯಿ:
ಟೊಮೆಟೊ ಮತ್ತು ಸೌತೆಕಾಯಿಯನ್ನು ಹಚ್ಚಿದರೆ ಮೊಡವೆ ಕಡಿಮೆಯಾಗುವುದು, ಟೊಮೆಟೊ ಮತ್ತು ಸೌತೆಕಾಯಿ ಮುಖದಲ್ಲಿ ಕಲೆ ನಿಲ್ಲಲು ಬಿಡುವುದಿಲ್ಲ.

ತುಳಸಿ:
ತುಳಸಿಯನ್ನು ನೀರಿನಲ್ಲಿ 20 ನಿಮಿಷ ಕುದಿಸಿ, ಆ ನೀರು ತಣ್ಣಗಾದ ಮೇಲೆ ಮುಖಕ್ಕೆ ಹಚ್ಚಬೇಕು. ಈ ರೀತಿ ಪ್ರತಿದಿನ ಮಾಡಿದರೆ ಮೊಡವೆ ಮಾಯವಾಗುತ್ತದೆ.

ಮೆಂತೆ:
ಮೆಂತೆಯನ್ನು ಪುಡಿ ಮಾಡಿ ಸ್ವಲ್ಪ ನೀರು ಮತ್ತು ನಿಂಬೆ ರಸ ಹಾಕಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ 25-30 ದಿನಗಳಲ್ಲಿ ಮೊಡವೆ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖವಾಗಬಹುದು.



Click it and Unblock the Notifications
