Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ತುಟಿಯ ರಂಗು ಗುಲಾಬಿ ಬಣ್ಣದಂತೆ ಕಂಗೊಳಿಸಬೇಕೆ?
ಒಡೆದ, ಒಣಗಿದ ಮತ್ತು ಒರಟಾದ ತುಟಿಗಳ ಸಮಸ್ಯೆಯಿಂದ ಹಲವಾರು ಜನರು ಬಳಲುತ್ತಾರೆ. ಸಾಮಾನ್ಯವಾಗಿ ನಾವು ಮಾರುಕಟ್ಟೆಯಲ್ಲಿ ದೊರೆಯುವ ಕೆಲವೊಂದು ಸೌಂದರ್ಯವರ್ಧಕ ರಾಸಾಯನಿಕ ವಸ್ತುಗಳಿಗೆ ಮಾರು ಹೋಗುವುದರಿಂದ ತುಟಿಯ ಚರ್ಮ ಒಣಗಿ ಈ ಸಮಸ್ಯೆ ನಿಮಗುಂಟಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕೆಂದುಟಿಯ ಚೆಲುವು ಬೇಕೆಂದರೆ ಹೀಗೆ ಮಾಡಿ
ಒಣಗಿದ ಚರ್ಮವು ನಿಮಗೆ ಕಿರಿಕಿರಿಯುಂಟು ಮಾಡುವುದಂತೂ ಸತ್ಯ. ಇಂತಹ ಸಮಸ್ಯೆಯಿಂದ ನಿಮ್ಮ ತುಟಿಯನ್ನು ಕಾಪಾಡಬೇಕೆಂದು ನೀವು ಬಯಸಿದ್ದರೆ ಅದರ ಕಾಳಜಿಯತ್ತ ಕೂಡ ನೀವು ಗಮನ ಹರಿಸುವುದು ಆವಶ್ಯಕ. ಈ ರೀತಿಯ ಕಾಳಜಿ ನಿಮ್ಮ ತುಟಿಯ ರಂಗು ಗುಲಾಬಿ ಬಣ್ಣದಂತೆ ಕಂಗೊಳಿಸುವುದರ ಜೊತೆಗೆ ಇನ್ನಷ್ಟು ಮೃದುವಾಗಿಸುತ್ತದೆ.
ಸಾಮಾನ್ಯವಾಗಿ ರಾಸಾಯನಿಕಯುಕ್ತ ಲಿಪ್ ಬಾಮ್‌ಗಳು ನಿಮ್ಮ ತುಟಿಗೆ ಹಾನಿಯನ್ನುಂಟು ಮಾಡುತ್ತವೆ. ಸುಲಭವಾದ ಸಾಮಾಗ್ರಿಗಳಿಂದ ತಯಾರಿಸಬಹುದಾದ ಈ ಲಿಪ್ ಬಾಮ್ ನಿಮ್ಮ ಆರೋಗ್ಯ ಹಾಗೂ ದುಡ್ಡು ಇವೆರಡನ್ನೂ ಉಳಿಸುತ್ತದೆ. ನಿಮಗೆ ತಡವಾಗುತ್ತಿದ್ದರೆ, ನೇರವಾಗಿ ಈ ನೈಸರ್ಗಿಕ ಸಾಮಾಗ್ರಿಗಳನ್ನು ತುಟಿಗಳಿಗೆ ಹಚ್ಚಿಕೊಳ್ಳಬಹುದು. ಉದಾ, ಆಲೀವ್ ಆಯಿಲ್ ಅನ್ನು ಲಿಪ್ ಬಾಮ್ ತಯಾರಿಕೆಯಲ್ಲಿ ಒಂದು ಸಾಮಾಗ್ರಿಯಂತೆ ಬಳಸಲಾಗುತ್ತದೆ, ಇದನ್ನು ನೀವು ನೇರವಾಗಿ ತುಟಿಗೆ ಹಚ್ಚಿಕೊಳ್ಳಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸುಂದರವಾದ ತುಟಿಗಳ ಕುರಿತು ತಿಳಿದುಕೊಳ್ಳಲು ಬಯಸುವಿರಾ?

ತೆಂಗಿನ ಎಣ್ಣೆ ಅಥವಾ ಹಾಲು:
ಇದೊಂದು ನೈಸರ್ಗಿಕ ಲಿಪ್ ಬಾಮ್ ಆಗಿದ್ದು ಈ ಚಳಿಗಾಲಕ್ಕೆ ಸೂಕ್ತವಾದುದು. ನಿಮ್ಮ ತುಟಿಯನ್ನು ಮೃದು ಮತ್ತು ಮಾಯಿಶ್ಚರೈಸನ್ನಾಗಿ ಮಾಡಲು ತೆಂಗಿನ ಎಣ್ಣೆ ಅಥವಾ ಹಾಲನ್ನು ಒಡೆದ ತುಟಿಯ ಮೇಲೆ ಲೇಪಿಸಿಕೊಳ್ಳಿ.

ಗ್ಲಿಸರಿನ್:
ಗ್ಲಿಸರಿನ್ ಅನ್ನು ಬಳಸಿಕೊಂಡು ಹೆಚ್ಚಿನ ಲಿಪ್ ಬಾಮ್‌ಗಳನ್ನು ತಯಾರಿಸಲಾಗುತ್ತದೆ. ಇದು ತ್ವಚೆಯನ್ನು ಮೃದುವಾಗಿಸುವುದರೊಂದಿಗೆ ಅದನ್ನು ಮಾಯಿಶ್ಚರೈಸ್ ಕೂಡ ಮಾಡುತ್ತದೆ. ನಿಮ್ಮ ತುಟಿಯ ರಂಗನ್ನು ಗುಲಾಬಿಯಾಗಿಸಲು ಇದು ಸಹಕಾರಿಯಾಗಿದೆ.

ಆಲೀವ್ ಆಯಿಲ್:
ಆಲೀವ್ ಆಯಿಲ್ ಅನ್ನು ನಿಮ್ಮ ತುಟಿಯೊಂದಿಗೆ ಮುಖಕ್ಕೆ ಕೂಡ ಹಚ್ಚಬಹುದು. ಮಗುವಿನಂತಹ ತ್ವಚೆಯನ್ನು ಪಡೆಯಲು ಆಲೀವ್ ಆಯಿಲ್ ಸಹಕಾರಿ.

ಜೇನು:
ಹನಿಯನ್ನು ಲಿಂಬೆಯೊಂದಿಗೆ ಮಿಶ್ರ ಮಾಡಿಕೊಂಡು ಮುಖಕ್ಕೆ ಲೇಪಿಸಿಕೊಳ್ಳಿ. ಇದೊಂದು ನೈಸರ್ಗಿಕವಾದ ಮತ್ತು ಮನೆಯಲ್ಲೇ ತಯಾರಿಸಬಹುದಾದ ಲೇಪನವಾಗಿದ್ದು ಮೃತ ತ್ವಚೆಯನ್ನು ದೂರವಾಗಿಸಿ ಅದನ್ನು ಕಾಂತಿಯುಕ್ತವನ್ನಾಗಿಸುತ್ತದೆ. ನಿಮ್ಮ ಒಡೆದ ತುಟಿಗೆ ಜೇನನ್ನು ಸವರಿ ಮತ್ತು ಚಮತ್ಕಾರವನ್ನು ಆಸ್ವಾದಿಸಿ.

ಬೆಣ್ಣೆ:
ಚಳಿಗಾಲದ ಒಡೆದ ಒರಟಾದ ತುಟಿಗಾಗಿ ಸೂಕ್ತ ಔಷಧವೆಂದರೆ ಬೆಣ್ಣೆಯಾಗಿದೆ. ಮಲಗುವ ಮುಂಚೆ ತುಟಿಗೆ ಬೆಣ್ಣೆ ಸವರಿ.

ತುಪ್ಪ:
ನಿಮ್ಮ ತುಟಿಯನ್ನು ಮೃದು ಮತ್ತು ಗುಲಾಬಿ ಬಣ್ಣವನ್ನಾಗಿಸಲು ಅದಕ್ಕೆ ತುಪ್ಪ ಸವರಿ. ಒಡೆದ ತುಟಿಯನ್ನು ಸರಿಪಡಿಸಲು ಇದೊಂದು ನೈಸರ್ಗಿಕ ಸಿದ್ಧೌಷಧವಾಗಿದೆ.

ಮಿಲ್ಕ್ ಕ್ರೀಮ್:
ಇದೊಂದು ಉತ್ತಮ ನೈಸರ್ಗಿಕ ಪರಿಹಾರಕವಾಗಿದ್ದು ಹಿರಿಯರಿಂದ ಅನುಸರಿಸಿಕೊಂಡು ಬಂದ ವಿಧಾನವಾಗಿದೆ. ಈ ಚಳಿಗಾಲಕ್ಕೆ ಇದನ್ನು ನೀವು ಪ್ರಯತ್ನಿಸಲೇಬೇಕು.



Click it and Unblock the Notifications
