Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಕಿವಿ ಸ್ವಚ್ಛಗೊಳಿಸಲು ಪರಿಣಾಮಕಾರಿ ಸಲಹೆಗಳು
ಕಿವಿಗಳು ನಮ್ಮ ದೇಹದ ಪ್ರಮುಖ ಅಂಗಗಳು. ಕಿವಿಗಳನ್ನು ಆಗಾಗ ಸ್ವಚ್ಛಗೊಳಿಸಬೇಕಾದದ್ದು ಅತೀ ಮುಖ್ಯ! ಏಕೆಂದರೆ ನಮ್ಮ ಕಿವಿಗಳಿಗೆ ಬೇರೆ ಯಾವುದೇ ರಕ್ಷಣಾತ್ಮಕ ಪದರಗಳಿಲ್ಲ. ಆದ್ದರಿಂದ ಕಿವಿಯ ಒಳಗೆ ಸಣ್ಣ ಕಣಗಳ ಸಂಗ್ರಹವಾಗುವ ಅವಕಾಶಗಳೇ ಹೆಚ್ಚು. ಮೇಣದ ರೂಪದ ರಚನೆಯಿಂದಾಗಿ ಕಿವಿಗಳು ಮುಚ್ಚಿದಂತೆ ಕಾಣುತ್ತದೆ. ಕಸ ಮತ್ತು ಧೂಳಿನ ಕಣಗಳು ಕಿವಿಯೊಳಗೆ ಹೋಗುವ ಸಾಧ್ಯತೆಗಳು ಅಧಿಕ.
ಕಿವಿಯಲ್ಲಿರುವ ಕೊಳಕನ್ನು ಮತ್ತು ಧೂಳುಗಳನ್ನು ತೆಗೆದುಹಾಕಲು ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಕಿವಿಯಲ್ಲಿನ ಕೊಳಕಿನಿಂದ ಕಿವಿ ಕೇಳಿದ ಸಮಸ್ಯೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಜೊತೆಗೆ ಕಿವಿಯಲ್ಲಿನ ಬ್ಯಾಕ್ಟೀರಿಯಾಗಳು ಸೋಂಕುಗಳು ಅಥವಾ ರೋಗಗಳಿಗೂ ಕಾರಣವಾಗಬಹುದು. ಕಿವಿಯನ್ನು ಸ್ವಚ್ಛಗೊಳಿಸಲು ಕೆಲವು ಮೂಲಭೂತ ವಿಧಾನಗಳನ್ನು ಈ ಕೆಳಗೆ ಕೊಡಲಾಗಿದೆ: -

1. ಮನೆಯಲ್ಲಿ ತಯಾರಿಸಿ ವ್ಯಾಕ್ಸ್ ದ್ರಾವಣ:
ಕಿವಿಯಲ್ಲಿರುವ ಕೊಳೆಯನ್ನು ಕರಗಿಸುವ ಅನೇಕ ನೈಸರ್ಗಿಕ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಬಹುದು. ಮನೆಯಲ್ಲಿ ವ್ಯಾಕ್ಸ್ ದ್ರಾವಕವನ್ನು, ಹೈಡ್ರೋಜನ್ ಪೆರಾಕ್ಸೈಡ್ , ಗ್ಲಿಸರಿನ್ ಮತ್ತು ಖನಿಜ ತೈಲಗಳನ್ನು ಬಳಕೆ ಮಾಡಿ ತಯಾರಿಸಬಹುದು. ಈ ಮಿಶ್ರಣವನ್ನು ವ್ಯಾಕ್ಸ್ ದ್ರಾವಕಕ್ಕೆ ಬಳಸಬಹುದು. ಈ ಪದಾರ್ಥಗಳನ್ನು 1-2 ಚಮಚಗಳಷ್ಟು ಬಳಸಿ ಮತ್ತು ಕಿವಿಗೆ 2-3 ಹನಿಗಳನ್ನು ಹಾಕಿ. ರಾತ್ರಿಯಿಡೀ ಹಾಗೆಯೇ ಬಿಟ್ಟು ಬೆಳಿಗ್ಗೆ ಕಿವಿ ಬಡ್ಸ್ ಗಳ ಸಹಾಯದಿಂದ ಕೊಳೆಯನ್ನು ತೆಗೆಯಬಹುದು.
2. ಬಿಸಿ ತೈಲದ ಚಿಕಿತ್ಸೆ:
ನೀವು ತೆಂಗಿನ ಎಣ್ಣೆಯಂತಹ ಎಣ್ಣೆಗಳನ್ನು ಬಿಸಿ ಮಾಡಿ ಕಿವಿಯ ಕೊಳಗಳನ್ನು ತೆಗೆದುಹಾಕಲು ಬಳಸಬಹುದು. ಒಂದು ಬಟ್ಟಲಿನಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಿ. ಇದು ಉಗುರು ಬೆಚ್ಚಗಾಗುವಷ್ಟು ಮಾತ್ರ ಬಿಸಿ ಮಾಡಿ. ನಿಮ್ಮ ಎರಡೂ ಕಿವಿಗಳಿಗೂ ಈ ತೈಲವನ್ನು 3-4 ಹನಿಗಳಷ್ಟು ಹಾಕಿ. ಬೆಚ್ಚಗಿನ ತೈಲ, ದ್ರಾವಕದಂತೆ ವರ್ತಿಸಿ ಕೊಳೆ ತೆಗೆಯಲು ಸುಲಭವಾಗುವಂತೆ ಮಾಡುತ್ತದೆ. ಕಿವಿಗೆ ತೈಲ ಹಾಕಿದ ನಂತರ ಕಿವಿಯನ್ನು ವಿರುದ್ಧ ದಿಕ್ಕಿನಲ್ಲಿ ಬಾಗಿಸಿದರೆ (ತಲೆಯನ್ನು ಬಗ್ಗಿಸುವುದು) ತೈಲ ಸರಿಯಾಗಿ ಕಿವಿಯ ಒಳಗೆ ಸೇರುತ್ತದೆ. ಕಿವಿಯ ಹತ್ತಿಯ ಚೂರನ್ನು ಹಾಕಿ ಮಲಗಿ. ಮರುದಿನ ಕಿವಿಗಳನ್ನು ಸ್ವಚ್ಛಗೊಳಿಸಲು ಮತ್ತು ಹೆಚ್ಚುವರಿ ತೈಲವನ್ನು ತೆಗೆದುಹಾಕಲು ನಿಮ್ಮ ಕಿವಿಗೆ ನೀರು ಹಾಕಿ.
3. ಇಯರ್ ಬಡ್ಸ್ (ಕಿವಿ ಸ್ವಚ್ಛಗೊಳಿಸಲು ಬಳಸುವ ಬಡ್ಸ್ ಗಳು):
ಮೃದು ಕಿವಿ ಬಡ್ಸ್ ಗಳ ಸಹಾಯದಿಂದ ಕಿವಿಗಳನ್ನು ನಿಯಮಿತವಾಗಿ ಶುಚಿಗೊಳಿಸುತ್ತಿರುವುದು ಒಳ್ಳೆಯದು. ಹೀಗೆ ಸ್ವಚ್ಛ ಗೊಳಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಯೆಂದರೆ ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ಮೃದು ಬಡ್ಸ್ ಗಳನ್ನೇ ಬಳಸಿ ಗಟ್ಟಿಯಾದ ಬಡ್ಸ್ ಗಳು ಕಿವಿಯ ಆಂತರಿಕ ಭಾಗಗಳಿಗೆ ಹಾನಿಯನ್ನು ಉಂಟುಮಾಡಬಹುದು. ಜೊತೆಗೆ ಯಾವುದೇ ಚೂಪಾದ ಉಪಕರಣಗಳನ್ನು ಬಳಸಬೇಡಿ. ಉತ್ತಮ ಗುಣಮಟ್ಟದ ಕಿವಿ ಬಡ್ಸ್ ಗಳು ವೈದ್ಯಕೀಯ ಮಳಿಗೆಗಳಲ್ಲಿ ಲಭ್ಯವಿರುತ್ತವೆ.
4. ಔಷಧೀಯ ಕಿವಿ ದ್ರಾವಣಗಳು:
ಔಷಧೀಯ ಕಿವಿ ದ್ರಾವಕಗಳು ಕಿವಿ ಸ್ವಚ್ಛಗೊಳಿಸುವಲ್ಲಿ ಖಂಡಿತವಾಗಿಯೂ ಪರಿಣಾಮಕಾರಿ. ರಾಸಾಯನಿಕ ಔಷಧಗಳು ವೈದ್ಯಕೀಯ ಮಳಿಗೆಗಳಲ್ಲಿ ಲಭ್ಯ. ಈ ಲಿಕ್ವಿಡ್ (ದ್ರವ) ಬಾಟಲಿಗಳಲ್ಲಿ ಬಳಕೆದಾರರಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿರುತ್ತದೆ. ಈ ಡ್ರಾಪ್ಸ್ (ಹನಿಗಳನ್ನು) ಗೊತ್ತಿರುವವರು ಮಾತ್ರ ಬಳಸಬಹುದು. ಕಿವಿ ದ್ರಾವಕಗಳನ್ನು ಕನಿಷ್ಠ ವಾರಕ್ಕೊಮ್ಮೆ ಬಳಸಬೇಕು. ಇದು ಕಿವಿಗಳನ್ನು ಸ್ವಚ್ಛಗೊಳಿಸಲು ಒಂದು ಸುಲಭ ಉಪಾಯವಾಗಿದೆ. ಆದರೆ ಕಿವಿ ಅತ್ಯಂತ ಸೂಕ್ಷ್ಮ ಅಂಗವಾಗಿರುವುದರಿಂದ ರಾಸಾಯನಿಕ ಆಧಾರಿತ ಉತ್ಪನ್ನಗಳನ್ನು ಹೆಚ್ಚಾಗಿ ಬಳಸದಂತೆ ಎಚ್ಚರವಹಿಸಿ.
5. ವೈದ್ಯರ ಸಲಹೆ:
ನಿಮ್ಮ ಕಿವಿಯನ್ನು ಸ್ವಚ್ಛಗೊಳಿಸಲು ಇತರ ವಿಧಾನಗಳನ್ನು ಪ್ರಯತ್ನಿಸಿದ ನಂತರವೂ ಸ್ವಚ್ಛವಾಗದೇ ಕಿವಿ ಕಟ್ಟಿರುವ ಅನುಭವವಾದರೆ ನೀವು ವೈದ್ಯರನ್ನು ಭೇಟಿ ಮಾಡಲೇಬೇಕು. ಕಿವಿಯಲ್ಲಿ ಧೂಳು ತುಂಬಿದ್ದು, ಕಿವಿ ನೋವು ಕಾಣಿಸಿಕೊಂಡರೆ ಅದು ಕಿವಿಗೆ ಸಂಬಂಧಿಸಿದ ರೋಗಗಳ ಲಕ್ಷಣಗಳಾಗಿರಬಹುದು. ಕಿವಿ ನೋವು ಹೆಚ್ಚಾಗಿ ಕಿವಿ ಕೇಳಿಸದಿದ್ದರೆ ಇದು ಗಂಭೀರ ಸಮಸ್ಯೆ. ವೈದ್ಯರು ವೈದ್ಯಕೀಯ ಉಪಕರಣಗಳನ್ನು ಬಳಸಿ ನಿಮ್ಮ ಕಿವಿಯ ಸಮಸ್ಯೆಯನ್ನು ನಿವಾರಿಸುತ್ತಾರೆ. ಕಿವಿಯಲ್ಲಿ ಸೇರಿಕೊಂಡಿರುವ ಧೂಳು ಸುಲಭವಾಗಿ ಹೋಗುವುದಿಲ್ಲ. ಆದ್ದರಿಂದ ನಿಯಮಿತವಾಗಿ ಶುಚಿಗೊಳಿಸುವ ಹಾಗೂ ನಿರ್ವಹಣೆಯ ಅಗತ್ಯವಿದೆ. ಕಿವಿ ನಮ್ಮ ದೇಹದ ಎಲ್ಲಾ ಇತರ ಅಂಗಗಳಂತೆ ಪ್ರಮುಖವಾದ ಅಂಗವಾಗಿದ್ದು ಖುದ್ಧಾಗಿ ಇದಕ್ಕೆ ಸಮಾನ ಪ್ರಾಮುಖ್ಯತೆಯನ್ನು ನೀಡಬೇಕು!



Click it and Unblock the Notifications