Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೈಸರ್ಗಿಕ ಹೊಳಪಿನ ತ್ವಚೆಗೆ ಅತ್ಯುತ್ತಮ ಸಲಹೆಗಳು
ಒಂದು ಸುಂದರ ತ್ವಚೆಯ ಮೊದಲ ಚಿಹ್ನೆಗಳೆಂದರೆ- ಮೃದು, ಮತ್ತು ಹೊಳಪು ಮತ್ತು ನಯವಾಗಿರುವುದು. ಈ ಎಲ್ಲವನ್ನೂ ಪಡೆಯುವುದು ಅದೃಷ್ಟವೇ ಸರಿ! ಆದರೆ ಇಂತಹ ತ್ವಚೆಯನ್ನು ಹೊಂದುವುದು ಸುಲಭವಲ್ಲ, ಆದರೆ ಅತ್ಯಂತ ಕಷ್ಟವೂ ಅಲ್ಲ!
ಇಲ್ಲಿ ಕೆಲವು ತ್ವಚೆಗೆ ಸಂಬಂಧಿಸಿದ ಮಾಡಬೇಕಾದ ಮತ್ತು ಮಾಡಲೇ ಬಾರದ ಕೆಲವು ಸಲಹೆಗಳನ್ನು ನೀಡಲಾಗಿದೆ. ಈ ಸಕಹೆಗಳನ್ನು ಪಾಲಿಸುವುದು ಅತ್ಯಂತ ಸರಳೂ ಕೂಡ ಹೌದು.
ಒಂದು ತಾರುಣ್ಯದ ಮತ್ತು ಉಜ್ಜ್ವಲವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ಮಾಡಬಹುದಾದ ಮತ್ತು ಮಾಡಬಾರದ ಸಲಹೆಗಳನ್ನು ಓದಿ, ಅನುಸರಿಸಿ, ಶೀರ್ಘ ಪರಿಣಾಮವನ್ನು ಕಾಣಿರಿ. ಈ ಕೆಳಗೆ ಹೇಳಿದ ವಿಧಾನಗಳು ಪ್ರಯತ್ನಿಸಿ ಮತ್ತು ಇದರಿಂದ ನೀವು ಖಚಿತವಾಗಿ ನಿಮ್ಮ ತ್ವಚೆಯ ಮೇಲೆ ಕೆಲವು ಧನಾತ್ಮಕ ಫಲಿತಾಂಶಗಳನ್ನು ಕಾಣುವಿರಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಂಬೆ ಫೇಸ್ ಪ್ಯಾಕ್‌ನ ಮಹತ್ವವೇನು ?
ಮಾಡಬಹುದಾದ ವಿಧಾನಗಳು:

ಸಾಧ್ಯವಾದಷ್ಟು ಅತ್ಯಂತ ನೈಸರ್ಗಿಕ ಪದಾರ್ಥಗಳೊಂದಿಗೆ ಮೇಕಪ್ ಮಾಡಿ:
ನಿಮ್ಮ ತ್ವಚೆಯ ಸುರಕ್ಷತೆಗೆ ಸಾಮಾನ್ಯ ಮೇಕಪ್ ಅವಕಾಶ ಮಾಡಿಕೊಡುತ್ತದೆ. ಮೇಕಪ್ ನಲ್ಲಿರುವ ಕೆಲವು ಪದಾರ್ಥಗಳು ನಿಮ್ಮತ್ವಚೆಗೆ ಉತ್ತಮ ಸೌಂದರ್ಯವನ್ನು ನೀಡಬಹುದು.
ನಿಯಮಿತವಾಗಿ ನಿಮ್ಮ ತ್ವಚೆಗೆ ಎಕ್ಸ್ ಫೊಲೆಟ್ ಮಾಡಿ. ಕನಿಷ್ಟ ಒಂದು ವಾರದಲ್ಲಿ ಒಮ್ಮೆಯಾದರೂ ಇದನ್ನು ಪ್ರಯತ್ನಿಸಿ. ನೀವು ಎಣ್ಣೆಯುಕ್ತ ಅಥವಾ ಸಂಯೋಜನೆಯ (ಕಾಂಬಿನೇಶನ್) ತ್ವಚೆಯನ್ನು ಹೊಂದಿದ್ದರೆ, ಗ್ಲೈಕೊಲಿಕ್ ಅಥವಾ ಸ್ಯಾಲಿಸಿಲಿಕ್ ಆಮ್ಲದಂತಹ ಒಂದು ರಾಸಾಯನಿಕ ಎಕ್ಸ್ ಫೋಲೆಟ್ ಬಳಸಿ. ಸಾಮಾನ್ಯ ಮತ್ತು ಸೂಕ್ಷ್ಮ ತ್ವಚೆಯನ್ನು ಹೊಂದಿರುವವರು ಮೈಕ್ರೊಡರ್ಮಾಬ್ರೇಶನ್ ಎಕ್ಸ್ ಫೊಲೆಟ್ ಬಳಸುವುದು ಉತ್ತಮ. ಇದರಿಂದ ಮುಖವನ್ನು ಸ್ಕ್ರಬ್ ಮಾಡಿ. ಇದರಿಂದ ಅತ್ಯುತ್ತಮ ಬದಲಾವಣೆಯನ್ನು ನೀವೇ ಅನುಭವಿಸುವಿರಿ.
ಆರೋಗ್ಯಕಾರಿ ಆಹಾರಗಳನ್ನು ಸೇವಿಸಿ ಮತ್ತು ಆರೋಗ್ಯಕಾರಿ ಪಾನೀಯಗಳನ್ನು ಕುಡಿಯಿರಿ:
ನಿಮ್ಮ ತ್ವಚೆಯಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಾಕಷ್ಟು ನೀರನ್ನು ಕುಡಿಯಿರಿ. ಗ್ರೀನ್ ಟೀ ಮತ್ತು ವಿಟಮಿನ್ ಎ, ಇ, ಸಿ ಮತ್ತು ಬೀಟಾ ಕ್ಯಾರೋಟಿನ್ ಆಹಾರಗಳನ್ನು ಸೇವಿಸಿ. ಇದು ಆಂಟಿ ಆಕ್ಸಿಡೆಂಟ್ ಗುಣ ಹೊಂದಿದ್ದು ಕೋಶ ಹಾನಿ ವಿರುದ್ಧ ಹೋರಾಟ ಮಾಡುತ್ತದೆ. ( ಜೊತೆಗೆ : ಆಂಟಿ ಆಕ್ಸಿಡೆಂಟ್ (ಉತ್ಕರ್ಷಣ) ಹೃದಯ ರೋಗ ಮತ್ತು ಕ್ಯಾನ್ಸರ್ ವಿರುದ್ಧ ರಕ್ಷಿಸಲು ಸಹಾಯಕ ! )
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫೇಸ್ ಮಾಸ್ಕ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ?
ಪ್ರತಿ ದಿನ ಐ ಕ್ರೀಮ್ ಬಳಸಿ!:
ನಿಮ್ಮ ಕಣ್ಣಿನ ಸುತ್ತಲೂ ತ್ವಚೆ ಅತ್ಯಂತ ತೆಳುವಾಗಿ ಮತ್ತು ದುರ್ಬಲವಾಗಿರುತ್ತದೆ. ಆದ್ದರಿಂದ SPF 30 (ಎಸ್ ಪಿ ಎಫ್ 30) ಐ ಕ್ರೀಮ್ ನ್ನು ಬಳಸಿ.
ನಿಯಮಿತವಾಗಿ ತ್ವಚೆಗೆ ನೀವೇ ಚಿಕಿತ್ಸೆಯನ್ನು ಮಾಡಿಕೊಳ್ಳಬಹುದು. ನಿಮ್ಮ ತ್ವಚೆಯ ಆರೈಕೆಯನ್ನು ಕನಿಷ್ಟ ದಿನದಲ್ಲಿ ಎರಡು ಬಾರಿ ಮಾಡಬೇಕು. ನಿಮ್ಮ ಈ ತ್ವಚೆಯ ಚಿಕಿತ್ಸೆಯನ್ನು ನಿಯಮಿತವಾಗಿ ಮಾಡದಿದ್ದಲ್ಲಿ ಶಾಶ್ವತವಾದ ಫಲಿತಾಂಶಗಳನ್ನು ನಿರೀಕ್ಷಿಸಬೇಡಿ!
ಮಾಡಬಾರದ ಸಂಗತಿಗಳು:
ಸಣ್ಣ ವಯಸ್ಸಿನಲ್ಲಿಯೇ ಅಕಾಲಿಕ ಧೂಮಪಾನ ಮಾಡೂವುದು ನಿಮ್ಮ ತ್ವಚೆಯ ಮೇಲೆ ಸೂರ್ಯನ ಕಿರಣದಿಂದ ಉಂಟಾಗುವ ಹಾನಿಯ ನಂತರದಲ್ಲಿ ಅಷ್ಟೇ ಅಪಾಯಕಾರಿಯಾದ ಸಂಗತಿ. ಇದರಲ್ಲಿರುವ ನಿಕೋಟಿನ್ ನಿಮ್ಮ ತ್ವಚೆಗೆ ಆಮ್ಲಜನಕದ ಹರಿವನ್ನು ತಡೆದು, ರಕ್ತನಾಳಗಳನ್ನು ಮೊಟಕುಗೊಳಿಸುತ್ತದೆ!
ಸನ್ಸ್ಕ್ರೀನ್ ಬಳಸಿ:
ನಿಮ್ಮ ತ್ವಚೆಯ ಮಾಯಿಶ್ವರೈಸರ್ ಉಳಿಸಿಕೊಳ್ಳಲು ಕನಿಷ್ಟ SPF 30ಯನ್ನು ಬಳಸಿ. ಇದನ್ನು ಚಳಿಗಾಲದಲ್ಲಿ ಕೂಡ ಬಳಸಿ. ನೀವು ಮನೆಯಿಂದ ಹೊರ ಹೋಗುವ ಕೆಲವು ನಿಮಿಷಗಳ ಮೊದಲು ದಿನವೂ ಬಳಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎಣ್ಣೆಯುಕ್ತ ತ್ವಚೆಯವರಿಗಾಗಿ ಸುಕ್ಕುನಿವಾರಕ ಸಲಹೆಗಳು
ನಿಮ್ಮ ಕುತ್ತಿಗೆ, ಎದೆ ಮತ್ತು ಕೈಗಳನ್ನು ಮರೆತುಬಿಟ್ಟಿದ್ದೀರೆ? ಈ ಭಾಗಗಳಲ್ಲಿ ವೇಗವಾಗಿ ವಯಸ್ಸು ಗೊತ್ತಾಗುವುದಿಲ್ಲ ಎಂಬ ಕಾರಣಕ್ಕೆ ನಿರ್ಲಕ್ಷಿಸುತ್ತಿದ್ದರೆ ಖಂಡಿತ ಹಾಗೆ ಮಾಡದಿರಿ. ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವ ಹಾಗೆ ಈ ಭಾಗಗಳ ರಕ್ಷಣೆಗೂ ಸನ್ಸ್ಕ್ರೀನ್, ಮಾಯಿಶ್ವರೈಸರ್. ಎಕ್ಸ್ ಫೊಲೆಶನ್ ಹಚ್ಚಿ. ವಿಟಮಿನ್ ಎ, ತಾಮ್ರ ಮತ್ತು ವಿಟಮಿನ್ ಸಿ ರೀತಿಯ ಅಂಶಗಳಿರುವ ವಯಸ್ಸಿನ ಕಲೆಯನ್ನು ಹೋಗಲಾಡಿಸುವ ಕ್ರೀಮ್ ಗಳನ್ನು ಬಳಸಿ.
ನಿಮ್ಮ ತ್ವಚೆ ಅತ್ಯಂತ ಶುಷ್ಕ ಸ್ವಭಾವವನ್ನು ಹೊಂದಿರಬಹುದು. ಅನೇಕ ಮಹಿಳೆಯರು ಮುಖದಲ್ಲಿ ಮೊಡವೆಗಳಿದ್ದಾಗ ಮುಖವನ್ನು ಸಂಪೂರ್ಣವಾಗಿ ಶುಷ್ಕಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ತ್ವಚೆಯಲ್ಲಿ ಎಲ್ಲ ನೈಸರ್ಗಿಕ ಎಣ್ಣೆ ಅಂಶಗಳು ಹೊರತೆಗೆದರೆ ಅದು ಮುಖದಲ್ಲಿ ತುಂಬಲು ಇನ್ನಷ್ಟು ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫೇಸ್ ಮಾಸ್ಕ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ?
ಇದು ಮುಖದಲ್ಲಿನ ಗುಳ್ಳೆಗಳಿಗೆ ಕಾರಣವಾಗುತ್ತದೆ. ಮುಖದಲ್ಲಿನ ರಂಧ್ರಗಳು ಮತ್ತು ಮೊಡವೆ ಇತ್ಯಾದಿ ಕಲೆಗಳಿಗೆ ಯಾವುದೇ ಕ್ಲಿನ್ಸರ್ ಅಥವಾ ಎಕ್ಸ್ ಫೋಲೆಟ್ ಪ್ರಯೋಜನವಾಗದಿದ್ದರೆ, ಮೊಡವೆಗಳೂ ಅಧಿಕವಾಗುತ್ತಾ ಹೋದರೆ, ನಿಮ್ಮ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ!



Click it and Unblock the Notifications