Latest Updates
-
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು?
ಸಾಮಾನ್ಯವಾದ ಸೌಂದರ್ಯ ತಪ್ಪುಕಲ್ಪನೆಗಳ ನಿಜಸ್ಥಿತಿಯ ಅನಾವರಣ
ಹೆಣ್ಣಿನ ಸೌಂದರ್ಯದ ಬಗ್ಗೆ ಎಷ್ಟರಮಟ್ಟಿಗೆ ಓದಿ, ಕೇಳಿ ತಿಳಿದುಕೊಂಡಿದ್ದೇವೆ ಎಂದರೆ, ಸೌಂದರ್ಯದ ಟಿಪ್ ಮತ್ತು ಸೌಂದರ್ಯದ ಕಲ್ಪನೆಯ ಮಧ್ಯದ ಅಂತರ ಗೊತ್ತಾಗುತ್ತಿಲ್ಲ.
ಕಾಲಾಂತರದಿಂದ ಬಂದ ಎಷ್ಟೋ ಸತ್ವವಿರದ,
ಸತ್ಯಕ್ಕೆ ದೂರವಾಗಿರುವ ಸಣ್ಣ ಅಂಶಗಳನ್ನು ನಂಬಿ, ಅನುಸರಿಸಿ ಮುಂದುವರೆಸಿಕೊಂಡು ಬಂದಿದ್ದೇವೆ ಎಂದರೆ ಅವುಗಳು ಸತ್ಯ ಸಂಗತಿಯಂತೆ ಮಾರ್ಪಾಡಾಗಿದೆ. ಹಾಗಾಗಿ ಕೆಳೆಗಿನ ಪಟ್ಟಿಯಲ್ಲಿ ಒಂದು ಕಾಲದಲ್ಲಿ ಸಾಮಾನ್ಯವಾಗಿ ನಂಬುತ್ತಿದ್ದ ಸೌಂದರ್ಯ ಪರಿಕಲ್ಪನೆಗಳ ಬಗ್ಗೆ ವಿವರಣೆ ಇದೆ.
ಹದಿಹರೆಯದಲ್ಲಿ ಕಾಡುವ ಮೊಡವೆಗೆ ಇಲ್ಲಿದೆ ಸೂಕ್ತ ಪರಿಹಾರ!

ಬಿಳಿ ಕೂದಲು ಕಿತ್ತಿದರೆ ಮತ್ತಷ್ಟು ಬೆಳೆಯುತ್ತವೆ :
ತಲೆಯಲ್ಲಿ ಬಿಳಿಕೂದಲು ಕಾಣಿಸಿಕೊಳ್ಳಲು ಆರಂಭವಾದಾಗ, ಅದನ್ನು ಕಿತ್ತಿದರೆ ಡಜನ್ ಗಟ್ಟಲೆ ಬಿಳಿಕೂದಲು ಉತ್ಪತ್ತಿಯಾಗುತ್ತವೆ ಎಂಬ ಉಪದೇಶವನ್ನು ಬಹುಪಾಲು ಜನರು ಪಡೆದಿರುತ್ತಾರೆ. ಇದು ಸಂಪೂರ್ಣ ಸುಳ್ಳು. ಏಕೆಂದರೆ, ತಲೆಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಫಾಲಿಕಲ್ ಗಳಿರುತ್ತವೆ. ಹಾಗಾಗಿ, ಬಿಳಿ ಕೂದಲು ಕಿತ್ತಿದರೂ ಅಷ್ಟೇ, ಕಿತ್ತದಿದ್ದರೂ ಅಷ್ಟೇ ಕೂದಲು ನೆರೆಯುವುದು ತನ್ನಷ್ಟಕ್ಕೆ ತಾನು ನಡೆಯುತ್ತಲೇ ಇರುತ್ತದೆ.

ಬ್ಲೇಡ್ ಬಳಸಿದರೆ ಕೂದಲು ಇನ್ನಷ್ಟು ದಪ್ಪವಾಗುತ್ತದೆ :
ಕೂದಲಿನ ದಪ್ಪ ಚರ್ಮದ ಕೆಳಗಿರುವ ಫಾಲಿಕಲ್ ಮೇಲೆ ಅವಲಂಬಿತವಾಗಿರುತ್ತದೆ. ರೇಜರ್ ಬ್ಲೇಡ್ ಅದನ್ನು ಟಚ್ ಕೂಡ ಮಾಡುವುದಿಲ್ಲ. ಹಾಗಾಗಿ ಕೂದಲು ಕತ್ತರಿಸಿದಾಗ ದಪ್ಪಗಾಗಿ ಬೆಳೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೂದಲನ್ನು ಒಂದು ಕೋನದಿಂದ ಕತ್ತರಿಸಿದ್ದರಿಂದ ದಪ್ಪಗಾಗಿ ಬೆಳೆಯುತ್ತಿರುವಂತೆ ಕಾಣುತ್ತದಷ್ಟೆ.

ಎಣ್ಣೆ ಚರ್ಮ ಇರುವವರು ಡಿಹೈಡ್ರೇಟ್ ಮಾಡುವ ಅಗತ್ಯವಿಲ್ಲ :
ಎಣ್ಣೆ ಚರ್ಮ ನಮ್ಮ ದೇಹದಲ್ಲಿರುವ ಚರ್ಮ ಮತ್ತು ಕೂದಲನ್ನು ಮೃದು ಮತ್ತು ಆರೋಗ್ಯದಿಂದಿಡಲು ಅಗತ್ಯವಾದ ಎಣ್ಣೆ ಪದಾರ್ಥವನ್ನು ಉತ್ಪತ್ತಿ ಮಾಡುತ್ತಿರುತ್ತದೆ. ಆದರೆ, ಕೆಲ ಬಾರಿ ಆ ಎಣ್ಣೆ ಗ್ರಂಥಿಗಳು ಕೂದಲು ಬೆಳೆಯುವ ರಂಧ್ರಗಳನ್ನು ಮುಚ್ಚಬಹುದು. ಇದನ್ನು ಮಾಶ್ಚರೈಸರ್ ಬಳಸಿ ಸ್ವಚ್ಛಗೊಳಿಸಬಹುದು. ಆದ್ದರಿಂದ, ಅತಿಯಾದ ಎಣ್ಣೆ ಚರ್ಮವಿದ್ದರೆ ಆಗಾಗ ಎಣ್ಣೆಮುಕ್ತ ಮಾಶ್ಚರೈಸರ್ ಬಳಸುತ್ತಿರಬೇಕು.

ಜಾಹೀರಾತಿನಂತೆ ಟುಇನ್ಒನ್ ಶಾಂಪೂ ಕೆಲಸ ಮಾಡುತ್ತದೆಯೆ :
ಶಾಂಪೂ ಮಾಡುವುದು ಮತ್ತು ಕಂಡಿಷನಿಂಗ್ ಮಾಡುವುದು ಎರಡೂ ವಿಭಿನ್ನವಾದ ವಿಷಯಗಳು. ಶಾಂಪೂ ಕೂದಲನ್ನು ಸ್ವಚ್ಛಗೊಳಿಸಿದರೆ, ಕಂಡಿಷನರ್ ಕೂದಲನ್ನು ಮೃದು ಮಾಡುತ್ತದೆ. ಟೂಇನ್ಒನ್ ಶಾಂಪೂಗಳನ್ನು ಮಾರುಕಟ್ಟೆಗೆ ತಂದಿರುವುದು ಮಾರಾಟಗಾರರ ಜಾಣ್ಮೆಯ ನಡೆಯಷ್ಟೆ. ಆದರೆ, ಸ್ವಸ್ಥ ಕೂದಲಿಗಾಗಿ ಶಾಂಪೂ ಮತ್ತು ಕಂಡಿಷನರ್ ಗಳನ್ನು ಬೇರೆಬೇರೆಯಾಗಿ ಬಳಸುತ್ತಿರಬೇಕು.

ಡೈರಿ ಉತ್ಪನ್ನಗಳ ಜೊತೆ ಮೀನು ತಿಂದರೆ ಚರ್ಮದ ಮೇಲೆ ಕಲೆ ಮೂಡುತ್ತದೆ :
ಮೆಲನಿನ್ ಎಂಬ ಪದಾರ್ಥವನ್ನು ಉತ್ಪತ್ತಿ ಮಾಡುವ ಕೋಶಗಳ ನಾಶದಿಂದ ಚರ್ಮದ ಮೇಲೆ ಕಲೆ ಉಂಟಾಗುತ್ತದೆ. ಇದನ್ನು ವಿಟಿಲಿಗೋ ಅಥವಾ ತೊನ್ನು ಎಂದು ಕರೆಯುತ್ತಾರೆ. ಇದು ಸಂಭವಿಸುವುದಕ್ಕೂ ಡೈರಿ ಪರಾರ್ಥ ಅಥವಾ ಮೀನು ತಿನ್ನುವುದಕ್ಕೂ ಯಾವುದೇ ಸಂಬಂಧವಿಲ್ಲ.



Click it and Unblock the Notifications
