Latest Updates
-
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ?
ಸೆಲೆಬ್ರಿಟಿಗಳ ಸೌಂದರ್ಯವನ್ನು ನಿಮ್ಮದಾಗಿಸಿ ಕೊಳ್ಳಬೇಕೇ?
ಮಹಿಳೆ ಯಾವಾಗಲೂ ಸೌಂದರ್ಯವತಿ, ಆಕೆಯ ವಿಧಾನ ಹಾಗೂ ಸೌಂದರ್ಯದಿಂದ ಮೆಚ್ಚುಗೆಯಾಗುತ್ತದೆ. ಸೌಂದರ್ಯ ಬಯಸದ ಮಹಿಳೆಯರು ಈ ಜಗತ್ತಿನಲ್ಲಿ ಇರಲಿಕ್ಕಿಲ್ಲ. ಪ್ರತಿಯೊಬ್ಬ ಮಹಿಳೆಗೂ ಸುಂದರವಾಗಿ ಕಾಣಿಸಲು ತನ್ನದೇ ಆದ ವಿಧಾನವಿರುತ್ತದೆ. ಸುಂದರವಾಗಿ ಕಾಣಿಸಲು ಜನರು ಹಲವಾರು ರೀತಿಯ ವಿಧಾನಗಳನ್ನು ಪಾಲಿಸುತ್ತಾರೆ.
ಸುಂದರವಾಗಿ ಕಾಣಿಸುವುದರಿಂದ ಆತ್ಮಗೌರವವೂ ಹೆಚ್ಚುತ್ತದೆ. ಸುಂದರವಾಗಿ ಕಾಣುವುದು ಅಷ್ಟು ಸುಲಭದ ಕೆಲಸವಲ್ಲ, ಇದಕ್ಕೆ ಸ್ವಲ್ಪ ಪ್ರಯತ್ನ ಬೇಕಾಗುತ್ತದೆ. ಕೆಲವರು ತಮ್ಮ ಸೌಂದರ್ಯವರ್ಧನೆಗೆ ರಾಸಾಯನಿಕಗಳ ಮೊರೆ ಹೋದರೆ, ಮತ್ತೆ ಕೆಲಸವು ಮನೆಮದ್ದು, ಇನ್ನು ಕೆಲವರು ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆ ಅನುಸರಿಸುತ್ತಾರೆ.
ಸೆಲೆಬ್ರಿಟಿಗಳ ತ್ವಚೆ, ಅವರ ಮೇಕಪ್ ನೋಡಿ ಬೆರಗಾಗಿದ್ದೀರಿ? ಪ್ರತೀ ಸಂದರ್ಭದಲ್ಲೂ ಇವರು ಈ ರೀತಿ ಕಾಣಿಸಿಕೊಳ್ಳಲು ಏನು ಮಾಡುತ್ತಿರಬಹುದು ಎಂದು ನೀವು ಯೋಚಿಸುತ್ತಿರಬಹುದು. ಹೀಗೆ ಆಗಿದ್ದಲ್ಲಿ ಈ ಲೇಖನ ಓದಲೇಬೇಕು. ತ್ವಚೆ ಆರೈಕೆ ಬಗ್ಗೆ ಸೆಲೆಬ್ರಿಟಿಗಳ ಸೌಂದರ್ಯ ರಹಸ್ಯವನ್ನು ನಾವಿಲ್ಲಿ ಕೊಡುತ್ತಿದ್ದೇವೆ. ನಿಮ್ಮ ತ್ವಚೆ ದೊಡ್ಡ ಉಡುಗೊರೆ, ಇದನ್ನು ನಿಜವಾಗಿಯೂ ಕಾಂತಿಯುತ ಮತ್ತು ಹೊಳೆಯುವಂತೆ ಮಾಡಲು ಸೂಕ್ತ ಆರೈಕೆ ಮಾಡಬೇಕು. ಸೆಲೆಬ್ರಿಟಿಗಳ ತ್ವಚೆ ಆರೈಕೆ ಟಿಪ್ಸ್ ಗಳು ನಿಮಗಿಲ್ಲಿ ನೆರವಾಗಬಹುದು. ಸೆಲೆಬ್ರಿಟಿಗಳ ಸೌಂದರ್ಯವೆಂದರೆ ಅದು ಸರಿಯಾದ ತ್ವಚೆಯ ಆರೈಕೆ.
ಐಶ್ವರ್ಯಾಳ ಕೆಂಪು ಹಾಸಿ ತ್ವಚೆಯ ಆರೈಕೆಯಿಂದ ಹಿಡಿದು ಮಿರಾಂಡ ಕೆರ್ ತ್ವಚೆಯ ಆರೈಕೆಗೆ ಬಳಸುವ ಆಹಾರಗಳ ಬಗ್ಗೆ ಇಲ್ಲಿ ನೀಡಲಾಗಿದೆ. ನೀವು ಒಂದು ಸಲ ಗಮನಹರಿಸಿ.

ಮಿರಾಂಡ ಕೆರ್ ಬ್ಲಾಗ್ ಓದಿ
ಮಿರಾಂಡ ಕೆರ್ ಸೌಂದರ್ಯ ಇಷ್ಟಪಡುವವಳು ಮತ್ತು ಇದಕ್ಕಾಗಿ ಆಕೆ ಶಿಸ್ತಿನ ಸೌಂದರ್ಯ ನಿಯಮಗಳನ್ನು ಪಾಲಿಸುತ್ತಾಳೆ. ಆಕೆ ತನ್ನ ಸೌಂದರ್ಯದ ರಹಸ್ಯ ಮತ್ತು ಟಿಪ್ಸ್ ಗಳನ್ನು ಬ್ಲಾಗ್ ನಲ್ಲಿ ಬರೆಯುತ್ತಾಳೆ. ತನ್ನ ತ್ವಚೆಗೆ ತೆಂಗಿನ ಎಣ್ಣೆ ಬಳಸುತ್ತೇನೆಂದು ಆಕೆ ಹೇಳುತ್ತಾಳೆ. ಸೆಲೆಬ್ರಿಟಿಗಳ ತ್ವಚೆ ಆರೈಕೆ ಯಾವಾಗಲೂ ದುಬಾರಿಯಾಗಿರುವುದಿಲ್ಲ. ಪ್ರಯತ್ನಿಸಿ ನೋಡಿ. ತೆಂಗಿನ ಎಣ್ಣೆಯಲ್ಲಿ ಉರಿಯೂತ ವಿರೋಧಿ ಗುಣಗಳಿವೆ. ಇದು ನಿಮ್ಮ ತ್ವಚೆಯನ್ನು ಕಾಂತಿಯುತ ಮತ್ತು ಹೊಳೆಯುವಂತೆ ಮಾಡಲು ನೆರವಾಗುತ್ತದೆ.

ಕೇಟ್ ಮಿಡಲ್ಟನ್ ರಹಸ್ಯ
ತಾಯಿಯಾಗಿ ಹೆಮ್ಮೆ ಪಡುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ ಮತ್ತು ಆಕೆ ತನ್ನ ಮದುವೆಗೆ ಮೊದಲು ವೆನೊಮ್ ಫೇಶಿಯಲ್ ಮಾಡಿದ್ದಾಳೆಂದು ವರದಿಗಳು ಹೇಳಿವೆ. ಇದು ಕೇವಲ ರಾಜಮನೆತನದವರಿಗೆ ಮಾತ್ರವೆಂದು ನೀವು ಭಾವಿಸುತ್ತಿದ್ದೀರಾ? ಖಂಡಿತವಾಗಿಯೂ ಅಲ್ಲ, ಸೆಲೆಬ್ರಿಟಿಗಳ ಸೌಂದರ್ಯವನ್ನು ಪಡೆಯಲು ಸಾಮಾನ್ಯರು ಕೂಡ ಸೆಲೆಬ್ರಿಟಿ ತ್ವಚೆ ಆರೈಕೆ ಪಾಲಿಸಬಹುದು.

ಹೇಲ್ ಬೆರ್ರಿ
ತನ್ನ ಸೌಂದರ್ಯದಿಂದಲೇ ಎಲ್ಲರನ್ನು ಸೆಳೆಯುವ ಈ ಮಹಿಳೆ ಪರಿಪೂರ್ಣ ತ್ವಚೆಗೆ ಯಾವುದೇ ದುಬಾರಿ ಉತ್ಪನ್ನಗಳನ್ನು ಬಳಸುವುದಿಲ್ಲ. ಆಕೆ ತನ್ನ ತ್ವಚೆಯ ಸೌಂದರ್ಯದ ಶ್ರೇಯಸ್ಸನ್ನು ವಿಟಮಿನ್ `ಸಿ' ಗೆ ನೀಡುತ್ತಾಳೆ. ವಿಟಮಿನ್ `ಸಿ' ಯಲ್ಲಿ ಅದ್ಭುತ ತ್ವಚೆಗೆ ಬೇಕಾಗುವ ಎಲ್ಲಾ ಗುಣಗಳಿವೆ. ಇದು ಸೆಲೆಬ್ರಿಟಿ ಸೌಂದರ್ಯದ ರಹಸ್ಯವಲ್ಲವೇ?

ಜೆನ್ನಿಫರ್ ಲವ್ ಹೆವಿಟ್
ಮೊಡವೆಗಳನ್ನು ನಿವಾರಿಸಲು ಈ ಸೆಲೆಬ್ರಿಟಿ ಟೂಥ್ ಪೇಸ್ಟ್ ನ್ನು ಬಳಸುತ್ತಾಳೆ. ಸೆಲೆಬ್ರಿಟಿಯ ತ್ವಚೆಯ ಆರೈಕೆಗೆ ಇದು ದುಬಾರಿಯೇ? ಸೆಲೆಬ್ರಿಟಿಗಳ ಕೆಲವೊಂದು ಸೌಂದರ್ಯ ರಹಸ್ಯವನ್ನು ಸಾಮಾನ್ಯರು ಕೂಡ ಪಾಲಿಸಬಹುದು.

ಮಲೈಕಾ ಅರೋರಾ ಖಾನ್ ಮೋಡಿ
ಬಾಲಿವುಡ್ ನ ಸುಂದರಿ ಮಲೈಕಾ ಅರೋರಾ ಖಾನ್ ಹೇಳುವಂತೆ ಆಕೆ ತೈಲದ ಮಸಾಜ್‌ಗೆ ಹೆಚ್ಚು ಒತ್ತು ನೀಡುತ್ತಾರಂತೆ

ಸೂಪರ್ ಬಹುಕಾಂತೀಯ ಐಶ್ವರ್ಯಳ ರಹಸ್ಯ
ಐಶ್ವರ್ಯಳದ್ದು ನೈಸರ್ಗಿಕ ಸೌಂದರ್ಯ ಮತ್ತು ತನ್ನ ಸೌಂದರ್ಯದ ಆರೈಕೆಗೆ ಆಕೆ ಜೈವಿಕ ವಿಧಾನ ಅನುಸರಿಸುತ್ತಾಳೆ. ಪ್ರತೀ ದಿನ ಆಕೆ ಬಿಸಿನೀರಿಗೆ ಜೇನು ಹಾಕಿ ಕುಡಿಯುತ್ತಾಳೆ. ಇದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ. ಸೆಲೆಬ್ರಿಟಿಯ ತ್ವಚೆಯ ಆರೈಕೆ ನೀವು ಪಾಲಿಸಬಹುದು ಮತ್ತು ಆಕೆ ನಿಮ್ಮನ್ನು ವಿಸ್ಮಯ ಪಡಿಸುವ ಸೆಲೆಬ್ರಿಟಿ ಸೌಂದರ್ಯವಲ್ಲವೇ?

ಬೇಬೊ ರೀತಿ ಸೌಂದರ್ಯ ಕಾಪಾಡಿ
ಬೇಬೊ ಸೌಂದರ್ಯ ಒಂದು ಉಡುಗೊರೆ. ಆಕೆಯ ವಂಶವಾಹಿನಿಗೆ ಧನ್ಯವಾದ, ಆಕೆಗೆ ಹೊಳೆಯುವ ತ್ವಚೆಯಿದೆ. ಆಕೆ ತನ್ನ ಆಹಾರ ಕ್ರಮದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಿಗೆ ಉಪಯೋಗಿಸುತ್ತಾರೆ. ಇದರಿಂದ ಆಕೆಯ ತ್ವಚೆ ಕಾಂತಿಯುತವಾಗಿದೆ. ಆಕೆ ಶಿಸ್ತುಬದ್ಧವಾಗಿ ತರಕಾರಿ ಸೇವನೆ ಮಾಡುತ್ತಾಳೆ. ಈ ಸೆಲೆಬ್ರಿಟಿ ಸೌಂದರ್ಯ ರಹಸ್ಯ ನೀವು ಪಾಲಿಸಿ.

ಕತ್ರಿನಾ ಕೈಫ್ ಮತ್ತು ಆಕೆಯ ಸೆಲೆಬ್ರಿಟಿ ಸೌಂದರ್ಯ
ಕತ್ರಿನಾ ಕೈಫ್ ಪಾಲಿಸುವ ಸೆಲೆಬ್ರಿಟಿ ತ್ವಚೆ ಆರೈಕೆಯು ತುಂಬಾ ಸುಲಭ. ಆಕೆ ತುಂಬಾ ಆರೋಗ್ಯಕರ ಆಹಾರ ಕ್ರಮ, ಕೆಲವೊಂದು ಮೂಲ ವ್ಯಾಯಾಮ ಮತ್ತು ಕೆಲವೊಂದು ತ್ವಚೆ ಆರೈಕೆ. ಈ ಸೆಲೆಬ್ರಿಟಿ ಸೌಂದರ್ಯ ಅಸಾಮಾನ್ಯ. ಸೆಲೆಬ್ರಿಟಿ ಸೌಂದರ್ಯವನ್ನು ಹೇಗೆ ಪಡೆಯುವುದೆಂದು ನಿಮಗೆ ಅಚ್ಚರಿಯಾಗುತ್ತಿದ್ದರೆ ನೀವು ಸೆಲೆಬ್ರಿಟಿ ತ್ವಚೆ ಆರೈಕೆಯ ಟಿಪ್ಸ್ ಗಳನ್ನು ಪಾಲಿಸಿ. ಇದು ತುಂಬಾ ಸರಳವಾಗಿದೆ.



Click it and Unblock the Notifications
