Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ಮುಖದ ಚರ್ಮದ ಸಿಪ್ಪೆ ಸುಲಿಯಲು ಕಾರಣ ಮತ್ತು ಚಿಕಿತ್ಸೆ
ಚರ್ಮದ ಹೊರಪದರವು ಎದ್ದು ಹೋದಾಗ ಚರ್ಮವು ಸಿಪ್ಪೆ ಸುಲಿದಂತೆ ಆಗುವುದು ಸಾಮಾನ್ಯ. ಇದು ನಿಮ್ಮ ಚರ್ಮದ ಮೇಲೆ ನೇರ ಹಾನಿಯನ್ನುಂಟು ಮಾಡಬಹುದು ಅಥವಾ ಕೆಲವೊಂದು ರೋಗಗಳಿಗೆ ಕಾರಣವಾಗಬಹುದು. ಚರ್ಮದ ಸಿಪ್ಪೆ ಸುಲಿಯುವುದು ಸ್ವಾಭಾವಿಕ ಮತ್ತು ಇದು ಯಾವುದೇ ವಯಸ್ಸಿನ ಜನರಲ್ಲೂ ಕಂಡುಬರಬಹುದಾದ ಸಮಸ್ಯೆಯಾಗಿದೆ.
ಮುಖದ ಚರ್ಮದ ಸಿಪ್ಪೆ ಸುಲಿದಂತಾಗುವುದು ತುಂಬಾ ನೋವು ಉಂಟುಮಾಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಇದು ಕಿರಿಕಿರಿಯುಂಟು ಮಾಡಬಹುದು. ಇದನ್ನು ಕಿತ್ತು ಹಾಕಲು ಬಯಸುತ್ತೀರಿ. ಆದರೆ ಇದನ್ನು ಕಿತ್ತು ಹಾಕಿದರೆ ಆಗ ಅದು ಒಳ್ಳೆಯ ರೀತಿಯಲ್ಲಿ ಗುಣಮುಖವಾಗುವುದಿಲ್ಲ.

ಕೆಲವೊಂದು ಸಂದರ್ಭಗಳಲ್ಲಿ ಚರ್ಮವನ್ನು ನೀವು ಕಿತ್ತು ಹಾಕಿದರೆ ಆಗ ಚರ್ಮದ ಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಇದರಿಂದ ನೀವು ಕಿತ್ತು ಹಾಕುವ ಮೊದಲು ಅದರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. ಮುಖದ ಚರ್ಮದ ಸಿಪ್ಪೆ ಸುಲಿದುಹೋಗುವ ಬಗ್ಗೆ ತಿಳಿದುಕೊಂಡರೆ ಅದನ್ನು ಗುಣಪಡಿಸಲು ನಿಮಗೆ ನೆರವಾಗಬಹುದು. ಅದಕ್ಕೆ ಕೆಲವೊಂದು ಕಾರಣಗಳನ್ನು ಇಲ್ಲಿ ನೀಡಲಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎಣ್ಣೆ ಮತ್ತು ಸೂಕ್ಷ್ಮ ತ್ವಚೆಗಾಗಿ ಫೇಶಿಯಲ್ ಆಯಿಲ್
ಬಿಸಿಲಿನಿಂದ ಸುಡುವುದು
ಬಿಸಿಲಿನಿಂದಾಗಿ ಸುಡುವುದು ಮುಖದ ಚರ್ಮದ ಸಿಪ್ಪೆ ಸುಲಿದುಹೋಗಲು ಪ್ರಮುಖ ಕಾರಣವಾಗಿದೆ. ನಿಮ್ಮ ಚರ್ಮವು ಯುವಿ ಕಿರಣಗಳ ಅತಿಯಾದ ಶಾಖಕ್ಕೆ ಗುರಿಯಾದರೆ ಆಗ ಅದು ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಅದು ಚರ್ಮದ ಸಿಪ್ಪೆ ಸುಲಿಯಲು ಕಾರಣವಾಗಬಹುದು.
ಒಣ ಚರ್ಮ
ಚರ್ಮದ ಸಿಪ್ಪೆ ಸುಲಿದು ಹೋಗಲು ಒಣ ಚರ್ಮವು ಪ್ರಮುಖ ಕಾರಣವಾಗಿದೆ. ನಿಮ್ಮ ಚರ್ಮವು ಒಣಗಿದ್ದರೆ ಆಗ ಅದು ಜತೆಯಾಗಿ ನಿಲ್ಲದೆ ಇರುವುದರಿಂದ ಅದು ಸುಲಿಯಲು ಕಾರಣವಾಗುತ್ತದೆ. ಚರ್ಮದಲ್ಲಿ ಮೊಶ್ಚಿರೈಸರ್ ಕೊರತೆಯಿಂದಾಗಿ ಒಣಚರ್ಮ ಉಂಟಾಗುತ್ತದೆ. ಹಾನಿಕಾರಕ ಕ್ರೀಮ್ ಮತ್ತು ಕಡಿಮೆ ತೇವಾಂಶವಿರುವ ಪ್ರದೇಶಗಳಲ್ಲಿ ವಾಸಿಸುವುದು ಇದಕ್ಕೆ ಕಾರಣ.
ಅಲರ್ಜಿ ಅಥವಾ ಇಸಬು
ದದ್ದು ಮತ್ತು ಇಸಬು ಚರ್ಮದ ಸಿಪ್ಪೆ ಸುಲಿಯಲು ಪ್ರಮುಖ ಕಾರಣ. ನಿಮಗೆ ಯಾವುದೇ ಆಹಾರದಿಂದ ಅಲರ್ಜಿಯಿದ್ದರೆ ಮತ್ತು ನೀವು ಅದನ್ನು ಸೇವಿಸಿದರೆ ಆಗ ಅದು ಅಲರ್ಜಿಗೆ ಕಾರಣವಾಗಿ ಚರ್ಮದ ಸಿಪ್ಪೆ ಸುಲಿದು ಹೋಗಲು ಕಾರಣವಾಗಬಹುದು. ಶಿಲೀಂಧ್ರ ಸೋಂಕುಗಳಿಂದ ಉಂಟಾಗುವಂತಹ ರಿಂಗ್ವಾರ್ಮ್ ನಿಂದಾಗಿ ಮುಖದ ಚರ್ಮದ ಸಿಪ್ಪೆ ಸುಲಿದಂತಾಗಬಹುದು.
ಪ್ರತಿರಕ್ಷಣೆ ತೊಂದರೆಗಳು
ಕ್ಯಾನ್ಸರ್ ಅಥವಾ ಇತರ ರೀತಿಯ ಚರ್ಮರೋಗಗಳು ಚರ್ಮದ ಸಿಪ್ಪೆ ಸುಲಿಯುವಿಕೆಗೆ ಕಾರಣವಾಗಬಹುದು.
ಚರ್ಮದ ಸಿಪ್ಪೆ ಸುಲಿದು ಹೋಗುವುದಕ್ಕೆ ಚಿಕಿತ್ಸೆಗಳು
ಇಲ್ಲಿ ನೀಡಲಾಗಿರುವ ಕೆಲವೊಂದು ಚಿಕಿತ್ಸೆಗಳನ್ನು ಅಳವಡಿಸಿದರೆ ಚರ್ಮದ ಸಿಪ್ಪೆ ಸುಲಿದು ಹೋಗುವ ಸಮಸ್ಯೆ ನಿವಾರಿಸಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗ್ಲಿಸರಿನ್ ನಮ್ಮ ಮುಖಕ್ಕೆಷ್ಟು ಅಗತ್ಯ
1. ಮೊಶ್ಚಿರೈಸರ್
ಉತ್ತಮ ಗುಣಮಟ್ಟದ ಮೊಶ್ಚಿರೈಸರ್ ನಿಂದ ನಿಯಮಿತ ಸಮಯದಲ್ಲಿ ಮೊಶ್ಚಿರೈಸರ್ ನ್ನು ಹಚ್ಚುತ್ತಾ ಇದ್ದರೆ ಆಗ ಮುಖದ ಚರ್ಮದ ಸಿಪ್ಪೆ ಸುಲಿಯುವುದನ್ನು ತಡೆಯಬಹುದು. ಒಳ್ಳೆಯ ಗುಣಮಟ್ಟದ ಮೊಶ್ಚಿರೈಸರ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲರ್ಜಿಗೆ ಕಾರಣವಾಗಬಲ್ಲ ರಾಸಾಯನಿಕಗಳನ್ನು ಗುರುತಿಸಬೇಕು.
2. ಪೌಷ್ಠಿಕಾಂಶಗಳ ಸೇವನೆ
ನಿಮ್ಮ ಆಹಾರ ಕ್ರಮದಲ್ಲಿ ಅಗತ್ಯವಾದ ಪ್ರೋಟಿನ್, ಕಬ್ಬಿನಾಂಶ, ವಿಟಮಿನ್ ಎ, ಬಿ ಮತ್ತು ಸಿ ಇದ್ದರೆ ಆಗ ನಿಮ್ಮ ಚರ್ಮವು ಸ್ವಾಭಾವಿಕವಾಗಿ ಮೊಶ್ಚಿರೈಸರ್ ನ್ನು ಪಡೆಯುತ್ತದೆ. ಇದು ಚರ್ಮ ಒಣಗುವುದನ್ನು ದೂರ ಮಾಡುತ್ತದೆ.
3. ಸೌತೆಕಾಯಿ ಮಿಶ್ರಣ
ಸೌತೆಕಾಯಿಯ ತಿರುಳು ಸ್ವಾಭಾವಿಕ ಮೊಶ್ಚಿರೈಸರ್. ಇದನ್ನು ನಿಮ್ಮ ಮುಖದ ಮೇಲೆ ನಿಯಮಿತವಾಗಿ ಹಚ್ಚಿ. ಹೆಚ್ಚಿನ ಪರಿಣಾಮ ಬೀರಬೇಕೆದರೆ ತಿರುಳನ್ನು ನೀವು ಆಲಿವ್ ಎಣ್ಣೆ, ಜೇನು ಮತ್ತು ಅರಿಶಿನ ಜತೆ ಮಿಶ್ರಣ ಮಾಡಿ ಹಚ್ಚಿಕೊಳ್ಳಿ.
4. ಜೇನು
ಮುಖದ ಚರ್ಮ ಸಿಪ್ಪೆ ಸುಲಿಯುವುದಕ್ಕೆ ಜನಪ್ರಿಯ ಚಿಕಿತ್ಸೆಯೆಂದರೆ ಜೇನು. ನಿಮ್ಮ ಮುಖಕ್ಕೆ ಸಂಪೂರ್ಣವಾಗಿ ಜೇನನ್ನು ಹಚ್ಚಿ ಮತ್ತು ಅರ್ಧಗಂಟೆ ಬಿಟ್ಟು ಅದನ್ನು ತೊಳೆಯಿರಿ. ಒಣ ಚರ್ಮಕ್ಕೆ ಇದು ಸ್ವಾಭಾವಿಕ ಮೊಶ್ಚಿರೈಸರ್.
5. ಓಟ್ ಮೀಲ್
ಓಟ್ ಮೀಲ್ ಸ್ನಾನ ನಿಮ್ಮ ಚರ್ಮಕ್ಕೆ ಒಳ್ಳೆಯದು. ನಿಮ್ಮ ಚರ್ಮಕ್ಕೆ ಮೊಶ್ಚಿರೈಸರ್ ಬೇಕಾದರೆ ಆಗ ಮಗುವಿನ ಎಣ್ಣೆಯನ್ನು ಬಳಸಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶೇವಿಂಗ್ ನಂತರ ಕಂಡುಬರುವ ಸಮಸ್ಯೆಗೆ ಸಲಹೆಗಳು
6. ಹಾಲು
ಒಂದು ಬಟ್ಟೆಯನ್ನು ಹಾಲಿನಲ್ಲಿ ಅದ್ದಿಟ್ಟು ಅದನ್ನು ನಿಮ್ಮ ಚರ್ಮದ ಮೇಲೆ ಹಚ್ಚಿದರೆ ಧನಾತ್ಮಕ ಫಲಿತಾಂಶ ಪಡೆಯಬಹುದು. ಇದರಿಂದ ನಿಮ್ಮ ಚರ್ಮವು ತೇವಾಂಶ ಪಡೆಯುತ್ತದೆ ಮತ್ತು ಸಿಪ್ಪೆ ಸುಲಿಯುವುದು ತಪ್ಪುತ್ತದೆ. ಹಾಲಿನಲ್ಲಿರುವ ಪ್ರೋಟಿನ್ ಚರ್ಮದ ಸಿಪ್ಪೆ ಸುಲಿಯುವ ಸಮಸ್ಯೆ ನಿವಾರಿಸುತ್ತದೆ. ಹಾಲಿನಲ್ಲಿರುವ ಲಾಕ್ಟಿಕ್ ಆಮ್ಲವು ಉರಿಯೂತ ನಿವಾರಣಕಾರಿ. ಇದು ಉರಿಯೂತ ನಿವಾರಣೆ ಮಾಡುತ್ತದೆ ಮತ್ತು ಚರ್ಮವು ಒಳ್ಳೆಯ ರೀತಿ ತೇವಾಂಶ ಪಡೆಯಲು ನೆರವಾಗುತ್ತದೆ. ಇದೇ ವಿಧಾನದಿಂದ ದದ್ದುಗಳನ್ನು ಕಡಿಮೆ ಮಾಡಬಹುದು.



Click it and Unblock the Notifications