ತಿಳಿ ನೋಟ ರಕ್ಷಣೆಗೆ ಬ್ಯೂಟಿ ಟಿಪ್ಸ್

By Poornima Heggade

ತಿಳಿಯಾದ ಚರ್ಮ ತುರಿಕೆ, ಉಪದ್ರವ ಮತ್ತು ಕೆಂಪು ಗುಳ್ಳೆಗಳನ್ನು ಅತ್ಯಂತ ಸುಲಭವಾಗಿ ಈಡಾಗುವ ಒಂದು ಚರ್ಮದ ವಿಧ ತಿಳಿ ಚರ್ಮ. ಇಂತಹ ತ್ವಚೆಯ ಬಣ್ಣವು ತಿಳಿಯಾಗಿದ್ದು ಅಂತಹವರು ಬೇರೆಯದೇ ಆದ ಮೇಕಪ್ ಸಲಹೆಗಳು ಮತ್ತು ಕಲ್ಪನೆಗಳನ್ನು ಅನುಸರಿಸುವ ಅಗತ್ಯವಿದೆ. ಸಾಮಾನ್ಯ ಮೇಕಪ್ ಈ ರೀತಿಯ ತ್ವಚೆಗೆ ಹೊಂದುವುದೇ ಇಲ್ಲ! ಇಂತಹ ಮೇಕಪ್ ಗಳು ತೆಳು ಚರ್ಮ ಹೊಂದಿರುವವರಲ್ಲಿ ಸಾಕಷ್ಟು ಸಮಸ್ಯೆಗಳನ್ನೂ ಉಂಟುಮಾಡಬಹುದು! ಅಲ್ಲದೇ ತೆಳು ತ್ವಚೆಗೆ ತಪ್ಪಾಗಿ ಮೇಕಪ್ ಮಾಡಿದರೆ ತ್ವಚೆ ಒಣ ಮತ್ತು ಹೊಳಪನ್ನು ಕಳೆದುಕೊಂಡಂತೆ ಕಾಣಬಹುದು. ಆದ್ದರಿಂದ ಇಂತಹ ಸಮಸ್ಯೆಗಳನ್ನು ನಿವಾರಿಸಲು ತ್ವಚೆಯ ಬಣ್ಣ ಮತ್ತು ರಚನೆಗೆ ಸರಿಹೊಂದುವಂತಹ ಮೇಕಪ್ ಗಳನ್ನೇ ಬಳಸುವುದು ಉತ್ತಮ.

ನೀವು ತೆಳು ಚರ್ಮಕ್ಕೆ ಮೇಕಪ್ ಮಾಡಿದಾಗ ಕೆಲವು ಅಗತ್ಯವಾಗಿ ಮಾಡಬೇಕಾದ ಮತ್ತು ಮಾಡಲೇಬಾರದ ವಿಷಯಗಳ ಕುರಿತು ಗಮನವಹಿಸಬೇಕುನಿಮ್ಮ ತೆಳು ತ್ವಚೆಯು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡಲು ಕೆಲವು ಉಪಯುಕ್ತ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

Beauty tips to cover a pale look

1. ಬಣ್ಣಗಳನ್ನು ಬಳಸುವುದು
ಬಿಳಿಯ ಮತ್ತು ತೆಳು ತ್ವಚೆಗೆ ದಟ್ಟ ಮತ್ತು ಗಾಢ ಬಣ್ಣದ ಶೃಂಗಾರ ಸುಂದರವಾಗಿ ಕಾಣುತ್ತದೆ. ಯಾವಾಗಲೂ ನಿಮ್ಮ ತ್ವಚೆಗೆ ಹೊಳಪನ್ನು ನೀಡಲು ಎದ್ದುಕಾಣುವ ಬಣ್ಣಗಳನ್ನೇ ಬಳಸಿ. ಅತ್ಯಂತ ಬೆಳ್ಳಗಿರುವ ಜನರು ಗುಲಾಬಿ, ಕೆಂಪು ಬಣ್ಣದಂತಹ ಗಾಢ ತುಟಿ ಬಣ್ಣಗಳನ್ನು ಬಳಸಬೇಕು. ತೆಳುವಾದ ಮೇಕಪ್ ನಿಮ್ಮ ಚರ್ಮದ ಹೊಳಪು ಮಂದವಾಗಿ ಕಾಣುವಂತೆ ಮಾಡುತ್ತದೆ. ಬೆಳ್ಳಗಿನ ಮತ್ತು ತೆಳು ಚರ್ಮವನ್ನು ಹೊಂದಿರುವ ಜನರು ಉಗುರುಗಳಿಗೂ ಕೂಡ ಅಲಂಕಾರಿಕ ಬಣ್ಣಗಳನ್ನು ಬಳಸಬೇಕು. ಬಣ್ಣಗಳು ತೆಳು ತ್ವಚೆಯನ್ನು ಉತ್ಸಾಹಭರಿತವಾಗಿ ಕಾಣುವಂತೆ ಮಾಡುತ್ತವೆ. ಚರ್ಮದ ರಚನೆ ಮತ್ತು ಬಣ್ಣ ಬಳಸುವ ಮೇಕಪ್ ಬಣ್ಣಗಳಿಂದ ವರ್ಧಿಸುವುದರಿಂದ ವಿಶೇಷವಾಗಿ ತುಟಿಗಳಿಗೆ ಸಾಮಾನ್ಯ ಅಥವಾ ತೆಳುವಾದ ಬಣ್ಣವನ್ನು ಬಳಸದಿರಿ.

2. ಫೌಂಡೇಶನ್ ಗಳ ಬಗ್ಗೆ ಗಮನವಿರಲಿ
ತೆಳುವಾದ ತ್ವಚೆಗೆ ಅತ್ಯಾವಶ್ಯಕವಾದ ಸಲಹೆಯೆಂದರೆ ಸೂಕ್ತವಾದ ಫೌಂಡೇಶನ್ ಅನ್ನು ಬಳಸುವುದು. ಫೌಂಡೇಶನ್ಸ್ ಕ್ರೀಮ್ ಅಥವಾ ಪೌಡರ್ ಗಳು ತ್ವಚೆಗೆ ಮೃದುತ್ವವನ್ನು ನೀಡುತ್ತವೆ. ಇದು ಚರ್ಮವನ್ನು ಟೋನ್ ಮಾಡಲು ನೆರವಾಗುತ್ತದೆ. ಸರಿಯಾದ ಫೌಂಡೇಶನ್ ಬಳಸದಿದ್ದರೆ ನಿಮ್ಮ ಮುಖ ಶುಷ್ಕ ಮತ್ತು ಕಪ್ಪಾಗಿ (ಬೂದು ಬಣ್ಣ) ಕಾಣಬಹುದು. ಹೀಗಾದಾಗ ನಿಮ್ಮ ಮುಖ ನಿಮ್ಮ ದೇಹದ ಬಣ್ಣಕ್ಕೆ ಸರಿಹೊಂದದೇ ಇರಬಹುದು. ಜೊತೆಗೆ ಸೌಂದರ್ಯವನ್ನೇ ಹಾಳು ಮಾಡಬಹುದು. ಆದ್ದರಿಂದ, ಒಂದು ಫೌಂಡೇಶನ್ ನ್ನು ಖರೀದಿಸುವ ಮೊದಲು ಪರೀಕ್ಷಿಸಬೇಕು. ಸೂರ್ಯನ ಕಿರಣದಲ್ಲಿ ಫೌಂಡೇಶನ್ ಯಾವ ರೀತಿ ಕಾಣುತ್ತದೆ ಎಂಬುದನ್ನೂ ಪರೀಕ್ಷಿಸಿ. ಫೌಂಡೇಶನ್ ಯಾವುದೇ ಬೆಳಕಿನಲ್ಲಿ ನಿಮ್ಮ ತ್ವಚೆಗೆ ಸರಿಹೊಂದುವಂತೆ ಇರಬೇಕು. ಆದ್ದರಿಂದ ಇದನ್ನು ಆಯ್ಕೆ ಮಾಡುವಾಗ ಹೆಚ್ಚು ಗಮನವಹಿಸಿ.

3. ಕಣ್ಣುಗಳು
ಕಣ್ಣುಗಳು ಮುಖದ ಪ್ರಮುಖ ಭಾಗವಾಗಿದೆ. ನಿಮ್ಮ ಕಣ್ಣುಗಳು ಸುಂದರವಾಗಿ ಕಾಣುವಂತೆ ಮಾಡಲು ತೆಳು ತ್ವಚೆಯನ್ನು ಹೊಂದಿರುವವರು ಗಾಢವಾದ ಮಸ್ಕರಾ ಮತ್ತು ಐಲೈನರ್ ಗಳನ್ನು ಬಳಸುವುದು ಸೂಕ್ತ. ಗಾಢವಾದ ಮಸ್ಕರಾ ಕಣ್ಣಿನ ಹೊಳಪನ್ನು ಹೆಚ್ಚಿಸಿ ಎದ್ದು ಕಾಣುವಂತೆ ಮಾಡುತ್ತದೆ. ಹುಬ್ಬುಗಳು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಗಾಢವಾದ ಐ ಶ್ಯಾಡೊವಿನ ಬದಲು ತೆಳುವಾದ ಶ್ಯಾಡೊವನ್ನೇ ಬಳಸಿ. ಇದು ಕೆಲವೊಮ್ಮೆ ತುಂಬಾ ಸುಂದರವಾಗಿ ಕಾಣುವಂತೆ ಮಾಡುತ್ತದೆ. ತೆಳು ತ್ವಚೆಯನ್ನು ಹೊಂದಿರುವವವರು ಸಾಧ್ಯವಾದಷ್ಟು ಸರಳ ಕಣ್ಣಿನ ಮೇಕಪ್ ಮಾಡಲು ಪ್ರಯತ್ನಿಸಿ. ಕೇವಲ ಕಾಜಲ್, ಐಲೈನರ್ ಮತ್ತು ಮಸ್ಕರಾ ದಟ್ಟ ಮತ್ತು ಮನಮೋಹಕ ನೋಟಕ್ಕೆ ಸಾಕು.

4. ಕಂಚು (Bronze) ಮತ್ತು ಕಂದು ಬಣ್ಣ
ತೆಳು ತ್ಚಚೆಯನ್ನು ಹೊಂದಿರುವ ಜನರು ಮನಮೋಹಕ ಮತ್ತು ಸುಂದರವಾಗಿ ಕಾಣಲು (Bronze) ಕಂಚಿನ ಬಣ್ಣದ ಮೇಕಪ್ ಮಾಡಬೇಕು. ಹೊಂಬಣ್ಣದ ಕೂದಲಿನ ಜೊತೆಗೆ ಕಂಚಿನ ಬಣ್ಣ ತೆಳು ಚರ್ಮಕ್ಕೆ ಪರಿಪೂರ್ಣವೆನಿಸುತ್ತದೆ. ಕಂಚಿನ ಬಣ್ಣದ ಮೇಕಪ್ ಗೆ ಸರಿಹೊಂದಲು ಕಂಚಿನ ಬಣ್ಣದ ಛಾಯೆಯನ್ನು ಹೊಂದಿರುವ ಫೌಂಡೇಶನ್ ಅನ್ನು ಆಯ್ಕೆ ಮಾಡಿ. ಕಂಚಿನ ಬಣ್ಣ ಮತ್ತು ಕಂದು ಬಣ್ಣ ಕಣ್ಣಿನ ಶ್ಯಾಡೊಗಳನ್ನು ಬಳಸಿ. ನಿಮ್ಮ ಕೆನ್ನೆಗೂ ಕಂಚಿನ ಬಣ್ಣದ ಶಿಮ್ಮರ್ ನ್ನು ಬಳಸಬಹುದು. ಆದರೆ ಕಂಚಿನ ಬಣ್ಣವನ್ನು ಅಧಿಕವಾಗಿ ಕಾಣುವಂತೆ ಮೇಕಪ್ ಮಾಡಬೇಡಿ. ಒಂದು ಕೆಂಗಂದು (ಮೆರೂನ್) ಅಥವಾ ಕೆಂಪು ಬಣ್ಣದ ಲಿಪ್ಸ್ಟಿಕ್ ನ್ನು ಇದಕ್ಕೆ ಸರಿಕೊಂದುವಂತೆ ಬಳಸಿ. ಈ ಇಡೀ ಮೇಕಪ್ ಕಂಚಿನ ಬಣ್ಣ, ಕಂದು ಮತ್ತು ಚಿನ್ನದ ಬಣ್ಣದ ಉಡುಪುಗಳಿಗೆ ಸರಿಹೊಂದುವಂತೆ ಇರಲಿ.

5. ಕೆನ್ನೆಗಳಿಗೆ ಹೊಳಪು
ನಿಮ್ಮ ಕೆನ್ನೆಗಳಿಗೆ ಹೊಳಪನ್ನು ನೀಡುವ ಬಣ್ಣಗಳನ್ನು (blush) ಹಚ್ಚಲು ಎಂದಿಗೂ ಮರೆಯಬೇಡಿ. ಕೆನ್ನೆಗಳಿಗೆ ಬಣ್ಣವನ್ನು ಬಳಸದೇ ನಿಮ್ಮ ಮೇಕಪ್ ಪರಿಪೂರ್ಣವಾಗಲು ಸಾಧ್ಯವೇ ಇಲ್ಲ! ತೆಳುವಾದ ತ್ವಚೆ ಹೊಳಪನ್ನು ಕಂಡುಕೊಳ್ಳಲು ಮತ್ತು ಸುಂದರವಾಗಿ ಕಾಣುವಂತೆ ಮಾಡಲು ತುಸು ಬಣ್ಣವನ್ನು ಹಚ್ಚುವ ಅಗತ್ಯವಿದೆ. ಗುಲಾಬಿ ಅಥವಾ ಲ್ಯಾವೆಂಡರ್ ಛಾಯೆಯ ಬಣ್ಣಗಳನ್ನೇ ಬಳಸಿ.

Story first published: Sunday, January 5, 2014, 23:45 [IST]
X
Desktop Bottom Promotion