Latest Updates
-
ಜುಲೈ 17: ದಂಪತಿಗಳ ನಡುವಿನ ಮನಸ್ತಾಪ ದೂರವಾಗಿಸಲು ಈ ಸರಳ ಟಿಪ್ಸ್ ಪಾಲಿಸಿ! -
ದೆಹಲಿಯ ಸೆಖೆ ಮತ್ತು ಆರ್ದ್ರತೆ: ಕರೆಂಟ್ ಬಿಲ್ ಉಳಿಸಿ, ಮನೆಯನ್ನು ತಂಪಾಗಿರಿಸುವ ಸ್ಮಾರ್ಟ್ ಟಿಪ್ಸ್! -
ಬೆಲೆ ಏರಿಕೆಯ ಬಿಸಿ: ಟೊಮೆಟೊ, ಈರುಳ್ಳಿ ಇಲ್ಲದೆ ರುಚಿಕರ ಮತ್ತು ಪೌಷ್ಟಿಕ ಅಡುಗೆ ಮಾಡುವುದು ಹೇಗೆ? -
IND vs ENG ODI: ಇಂದಿನ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರ ಮತ್ತು ಕನ್ನಡ ಕಾಮೆಂಟರಿ ಮಿಸ್ ಮಾಡ್ಬೇಡಿ! -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ! -
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ!
ಮೊಡವೆ ನಿವಾರಕ ಚಿಕಿತ್ಸೆ ಮನೆಯಲ್ಲಿಯೇ ತಯಾರಿಸಿಕೊಳ್ಳಿ
ಸಾಮಾನ್ಯವಾಗಿ ಮೊಡವೆಗಳು, ಬ್ಲ್ಯಾಕ್ ಹೆಡ್‍ಗಳು ಮತ್ತು ವೈಟ್ ಹೆಡ್‍ಗಳು ಜಿಡ್ಡು ಅಥವಾ ಎಣ್ಣೆ ಚರ್ಮವನ್ನು ಹೊಂದಿರುವವರನ್ನು ಕಾಡುವಂತಹ ಸಮಸ್ಯೆಗಳಾಗಿರುತ್ತವೆ. ಇದಕ್ಕೆ ಕಾರಣ ಅವರ ಚರ್ಮವು ಜಿಡ್ಡಿನಿಂದ ಮುಚ್ಚಿ ಹೋಗಿ ಬಿಟ್ಟಿರುತ್ತದೆ.ಮೊಡವೆಗಳು ಒಡೆಯುವುದನ್ನು ಸಂಪೂರ್ಣವಾಗಿ ಹೋಗಲಾಡಿಸುವುದು ಅಥವಾ ನಿಯಂತ್ರಿಸುವುದು ಅಸಾಧ್ಯವಾದ ಕೆಲಸ, ಆದರೂ ಸಹ ಈ ಸಮಸ್ಯೆಯನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಸಾಧ್ಯ.
ಈ ಸಮಸ್ಯೆಗೆ ಹಲವಾರು ಡರ್ಮಟಾಲಜಿಸ್ಟ್‌ಗಳು ಬಯೋಟಿಕ್ ಅಥವಾ ಕ್ರೀಮ್‍ಗಳನ್ನು ಸೂಚಿಸುತ್ತಾರೆ. ಆದರೂ ಸಹ ಈ ಮೊಡವೆ ಒಡೆಯುವುದನ್ನು ತಡೆಯಲು ಮನೆಯಲ್ಲಿಯೇ ಹಲವಾರು ಪ್ರಾಕೃತಿಕ ಮದ್ದುಗಳು ಸಿಗುತ್ತವೆ. ಇವುಗಳನ್ನು ನಿಮ್ಮ ಮುಖದಲ್ಲಿ ಇರುವ ಮೊಡವೆಗಳಿಗೆ ಲೇಪಿಸಿ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ಹದಿಹರೆಯದಲ್ಲಿ ಕಾಡುವ ಮೊಡವೆಗೆ ಇಲ್ಲಿದೆ ಸೂಕ್ತ ಪರಿಹಾರ!

ಬೇಕಿಂಗ್ ಸೋಡಾ
ಮೊಡವೆಗಳಿಗೆ ಅತ್ಯುತ್ತಮವಾದ ಔಷಧಿ ಎಂದರೆ ಅದು ಬೇಕಿಂಗ್ ಸೋಡಾ. ಏಕೆಂದರೆ ಇದು ಮೊಡವೆಗಳ ಸುತ್ತ ನವೆ ಮತ್ತು ತುರಿಕೆ ಉಂಟಾಗದಂತೆ ತಡೆಯುತ್ತದೆ. ಜೊತೆಗೆ ಇದು ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್‍ಗಳನ್ನು ತಡೆಯುತ್ತದೆ.ಸ್ವಲ್ಪ ಬೇಕಿಂಗ್ ಸೋಡಾವನ್ನು ತೆಗೆದುಕೊಳ್ಳಿ, ಅದಕ್ಕೆ ಅದರ ಎರಡು ಪ್ರಮಾಣದಷ್ಟು ನೀರನ್ನು ಸೇರಿಸಿ ( ಬಿಸಿ ನೀರು ಆದಷ್ಟು ಒಳ್ಳೆಯದು), ಮತ್ತು ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಲೇಪಿಸಿ ಸುಮಾರು 10 ನಿಮಿಷಗಳ ಕಾಲ ಬಿಡಿ. ನಿಮಗೆ ಬೇಕಾದಲ್ಲಿ ಇದಕ್ಕೆ ಜೇನು ತುಪ್ಪವನ್ನು ಬೆರೆಸಿ, ಏಕೆಂದರೆ ಜೇನು ತುಪ್ಪವು ನಿಮ್ಮ ತ್ವಚೆಯನ್ನು ಮೊಯಿಶ್ಚರೈಸ್ ಮಾಡುತ್ತದೆ. ನಂತರ ಮುಖವನ್ನು ತೊಳೆಯಿರಿ, ತೊಳೆದ ನಂತರ ನಿಮ್ಮ ಮುಖವು ಜಿಡ್ಡು ರಹಿತವಾಗಿ, ಒಣಗಿದಂತೆ ಮತ್ತು ಮೊಯಿಶ್ಚರೈಸ್ ಆದಂತೆ ಕಂಗೊಳಿಸುತ್ತದೆ.

ಟೀ ಟ್ರೀ ಎಣ್ಣೆ
ಇದೊಂದು ಅದ್ಭುತವಾದ ಆಂಟಿ ಸೆಪ್ಟಿಕ್ ಮತ್ತು ಆಂಟಿ- ಮೈಕ್ರೊಬೈಯಲ್ ಆಗಿ ಪ್ರಯೋಜನಕ್ಕೆ ಬರುತ್ತದೆ. ಹಾಗಾಗಿ ಇದು ತ್ವಚೆಗೆ ಹೇಳಿ ಮಾಡಿಸಿದ ಉತ್ಪನ್ನವಾಗಿದೆ.
ಡಿಸ್ಟಿಲ್ಲ್‌ಡ್ ವಾಟರ್ ಜೊತೆಗೆ ಈ ಎಣ್ಣೆಯನ್ನು ಬೆರೆಸಿ ಫೇಸ್ ಮಾಸ್ಕ್ ಅನ್ನು ತಯಾರಿಸಿಕೊಳ್ಳಿ. ಒಂದು ಟೇಬಲ್ ಚಮಚದಷ್ಟು ಬೇಕಿಂಗ್ ಸೋಡಾ ಮತ್ತು ಜೇನು ತುಪ್ಪವನ್ನು ತೆಗೆದುಕೊಂಡು ಅದಕ್ಕೆ ಐದರಿಂದ ಆರು ಹನಿಗಳಷ್ಟು ಟೀ ಟ್ರೀ ಎಣ್ಣೆಯನ್ನು ಬೆರೆಸಿ ಮಾಸ್ಕ್ ತಯಾರಿಸಿಕೊಳ್ಳಿ. ಒಂದು ವೇಳೆ ನಿಮಗೆ ಅತಿಯಾದ ಮೊಡವೆಗಳು ಇದ್ದಲ್ಲಿ ಈ ಮಾಸ್ಕ್ ಅನ್ನು ಪ್ರತಿನಿತ್ಯ ಒಮ್ಮೆ ಲೇಪಿಸಿ.

ಕೊತ್ತಂಬರಿ - ಪುದಿನಾ ರಸ
ಇದೊಂದು ಬೇಸಿಗೆಯ ಕಾಲದಲ್ಲಿ ತಂಪುಕಾರಕ ರಸದಂತೆ ನಿಮಗೆ ಕೇಳಿಸಬಹುದು. ಆದರೆ ಒಂದು ಟೀ ಚಮಚದಷ್ಟು ಕೊತ್ತಂಬರಿ ಅಥವಾ ಪುದಿನಾ ರಸವು ನಿಮ್ಮ ತ್ವಚೆಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ.
ಈ ರಸಕ್ಕೆ ಒಂದು ಚಿಟಿಕೆಯಷ್ಟು ಹಳದಿಯನ್ನು ಬೆರೆಸುವುದರಿಂದ ಮೊಡವೆ ಮತ್ತು ಬ್ಲ್ಯಾಕ್ ಹೆಡ್‍ಗಳನ್ನು ನಿವಾರಿಸಲು ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಮಿಶ್ರಣವನ್ನು ಪ್ರತಿದಿನ ಮಲಗುವ ಮೊದಲು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳುವುದನ್ನು ಮರೆಯಬೇಡಿ.

ಉಪ್ಪು ಮತ್ತು ನಿಂಬೆರಸ
ನಿಂಬೆಯು ಒಂದು ಉತ್ತಮವಾದ ಒಣಗಿಸುವ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ. ಒಂದು ವೇಳೆ ನಿಮಗೆ ಮತ್ತಷ್ಟು ಒಣಗಿಸುವ ಇಚ್ಛೆಯಿದ್ದಲ್ಲಿ ಎರಡು ಚಮಚ ನಿಂಬೆರಸಕ್ಕೆ ಅರ್ಧ ಚಮಚ ಉಪ್ಪನ್ನು ಬೆರೆಸಿ. ಅದನ್ನು ಮೊಡವೆ ಇರುವ ಭಾಗದಲ್ಲಿ ಉಜ್ಜಿ ಸುಮಾರು 20-30 ನಿಮಿಷ ಬಿಡಿ. ಆದರೆ ಒಂದು ವಿಚಾರ ನೆನಪಿನಲ್ಲಿಡಿ, ಈ ಮಿಶ್ರಣವನ್ನು ಹಚ್ಚಿದಾಗ ಯಾವುದೇ ಕಾರಣಕ್ಕು ಬಿಸಿಲಿನಲ್ಲಿ ಹೊರಗೆ ಹೋಗಬೇಡಿ. ಏಕೆಂದರೆ ನಿಂಬೆರಸಕ್ಕೆ ಬ್ಲೀಚಿಂಗ್ ಗುಣಗಳು ಇರುತ್ತವೆ. ಇದು ತನ್ನ ಸೂಕ್ಷ್ಮತೆಯಿಂದ ನಿಮಗೆ ಕಿರಿಕಿರಿಯನ್ನು ಅಥವಾ ಉರಿಯನ್ನು ತರಬಹುದು.



Click it and Unblock the Notifications