Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೈಸರ್ಗಿಕವಾಗಿ ಚರ್ಮದ ಮೇಲಿನ ಬಿಳಿ ಚುಕ್ಕೆಗಳನ್ನು ನಿವಾರಿಸಿಕೊಳ್ಳಬೇಕೇ?
ಒಂದು ರೀತಿಯಲ್ಲಿ ಚರ್ಮದ ಮೇಲೆ ಬಳಿ ಚುಕ್ಕೆಗಳು ಅಥವಾ ಕಲೆಗಳು ಇದ್ದರೆ ವಾಸ್ತವವಾಗಿ ಕೆಟ್ಟದಾಗಿ ಕಾಣುತ್ತದೆ. ಅದು ಒಮ್ಮೆ ಬಂದರೆ ಅದನ್ನು ನಿವಾರಿಸಲು ಬಹಳ ಕಠಿಣವೇ ಸರಿ. ಆದರೆ ಅದು ಅಸಾಧ್ಯವಂತೂ ಅಲ್ಲ. ನಿರಾಶರಾಗಬೇಡಿ. ಆದಾಗ್ಯೂ ಈ ಚುಕ್ಕೆ/ಕಲೆಗಳನ್ನು ಹೋಗಲಾಡಿಸುವ ಕಾರ್ಯಕ್ಕೆ ಮೊದಲು, ಈ ಬಿಳೀ ಚುಕ್ಕೆ ಏಕೆ ಬಂದಿದೆ ಎಂಬುದನ್ನು ತಿಳಿಯೋಣ.
ಪುರುಷರು ಚರ್ಮದ ಟ್ಯಾನ್ ಅನ್ನು ಹೋಗಲಾಡಿಸಲು ಮನೆ ಮದ್ದುಗಳು
ಚರ್ಮದ ಮೇಲೆ ಬಿಳಿ ಚುಕ್ಕೆ ಕಾಣಿಸಿಕೊಂಡರೆ ಸಾಧಾರಣವಾಗಿ ಅದನ್ನು ತೊನ್ನು ಎಂದು ಕರೆಯುತ್ತಾರೆ. ವೈದ್ಯಕೀಯವಾಗಿ ಇದು ಚರ್ಮ ರೋಗವಾಗುತ್ತದೆ. ಇದು ವರ್ಣದ್ರವ್ಯಗಳು ನಷ್ಟವಾಗುವುದು ಅಥವ ಅದರ ಕೊರತೆಯಿಂದ ಸಂಭವಿಸುತ್ತದೆ.
ಅಲೋಪಥಿಕ್ ವಿಜ್ಞಾನದ ರೀತಿಯಲ್ಲಿ ಬಹಳಷ್ಟು ಚಿಕಿತ್ಸೆಗಳಿವೆ. ಆದರೆ ಅವೆಲ್ಲವೂ ನೋವಿನಿಂದ ಕೂಡಿರುತ್ತದೆ ಅಥವ ಬಹಳ ದುಬಾರಿಯಾಗಿರುತ್ತದೆ. ಬದಲಾಗಿ ನೈಸರ್ಗಿಕವಾಗಿ ಕೆಲವು ವಿಧಾನಗಳನ್ನು ಜನರು ಅನುಸರಿಸುತ್ತಾರೆ.
ನಳನಳಿಸುವ ನಿಮ್ಮ ಮೊಗಕ್ಕೆ ಎಗ್ ವೈಟ್, ಪಪಾಯ ಮಾಸ್ಕ್‌ಗಳು

1. ಶುಂಠಿ:
ಶುಂಠಿ ರಸವನ್ನು ಸೇವಿಸುವ ಮೂಲಕ ಬಿಳಿ ಚುಕ್ಕಿಗಳನ್ನು ನೈಸರ್ಗಿಕವಾಗಿ ಸುಧಾರಿಸಬಹುದು. ಶುಂಠಿ ರಸ ರಕ್ತಸಂಚಲನೆ ಹೆಚ್ಚಲು ಸಹಾಯಮಾಡುತ್ತದೆ. ನೀವು ಶುಂಠಿಯನ್ನು ಬಳಸಲು 3 ಮಾರ್ಗಗಳಿವೆ:
* ಶುಂಠಿ ಮತ್ತು ನಿಂಬೆ ರಸಕ್ಕೆ ನೀರನ್ನು ಸೇರಿಸಿ ಪ್ರತಿದಿನ ಎರಡುಸಲ ಕುಡಿಯಬೇಕು.
* ಶುಂಠಿಯನ್ನು ಉಜ್ಜಿ ಪೇಸ್ಟ್ ಮಾಡಿಕೊಂಡು ಚುಕ್ಕೆಗಳಮೇಲೆ ಲೇಪಿಸಿ ಸ್ವಲ್ಪ ಸಮಯ ಹಾಗೇ ಬಿಡಿ.
* ಮತ್ತೋಂದು ರೀತಿಯಲ್ಲಿ ಶುಂಠಿರಸವನ್ನು ಒಂದೇ ಪ್ರಮಾಣದಲ್ಲಿ ಕೆಮ್ಮಣ್ಣಿನ ಜೊತೆ ಮಿಶ್ರಣಮಾಡಿ ಚುಕ್ಕೆಗಳಿರುವ ಪ್ರದೇಶದಲ್ಲಿ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ನೀರಿನಲ್ಲಿ ತೊಳೆದುಕೊಳ್ಳಿ.

2. ಜೇನುತುಪ್ಪ:
ಜೇನುತುಪ್ಪದಲ್ಲಿರುವ ಶಿಲೀಂದ್ರ ವಿರೋಧಿ ಗುಣಗಳಿರುವುದರಿಂದ ಚರ್ಮದಮೇಲೆ ಹಚ್ಚಿದರೆ ಬ್ಯಾಕ್ಟೀರಿಯವನ್ನು ನಿರ್ಮೂಲಮಾಡಿ ಆರೋಗ್ಯಕರ ಚರ್ಮವನ್ನು ಪಡೆಯುವ ಲಾಭವಿದೆ. ಜೇನುತುಪ್ಪವನ್ನು ಉಪಯೋಗಿಸಲು ಇಲ್ಲಿ ಕೊಟ್ಟಿರುವ ಹಾಗೆ ಎರಡು ರೀತಿಯ ವಿಧಾನಗಳಿವೆ:
* ನಿಮ್ಮ ಚರ್ಮವನ್ನು ನೀರಿನಿಂದ ತೊಳೆದು ಒರಸಿಕೊಳ್ಳಿ. ಬಿಳಿಚುಕ್ಕೆಗಳ ಮೇಲೆ ಜೆನುತುಪ್ಪವನ್ನು ಬಳೆದು ಅದು ಚರ್ಮದೊಂದಿಗೆ ಲೀನವಾಗಲು ಬಿಡಿ.
* ಎರಡು ಟೇಬಲ್ ಸ್ಪೂನ್ ಜೇನುತುಪ್ಪದೊಂದಿಗೆ ಒಂದೊಂದು ಟೀಸ್ಪೂನ್ ಗಂದದ ಪುಡಿ, ಅಕ್ಕಿ ಹಿಟ್ಟು, ಅರಶಿನ ಎಲ್ಲವನ್ನು ಚೆನ್ನಾಗಿ ಪೇಸ್ಟ್ ನಂತೆ ಮಿಶ್ರಣಮಾಡಿ ಪೀಡಿತ ಪ್ರದೇಶಗಳಲ್ಲಿ ಲೇಪಿಸಿ. ಹತ್ತು ನಿಮಿಷಗಳಾದಮೇಲೆ ಎಲ್ಲವನ್ನು ನೀರಿನಿಂದ ತೊಳೆಯಿರಿ.

3. ಬೇವು (ನೀಮ್):
ಬೇವಿನೆಲೆಯು ಎಲ್ಲಾ ಚರ್ಮದ ಸಮಸ್ಯೆಗಳಿಗೆ ಒಂದು ಉತ್ತಮ ನೈಸರ್ಗಿಕ ಔಷಧಿ. ಇದನ್ನು ಯಾವ ರೀತಿಯಲ್ಲಿ ಉಪಯೊಗಿಸಬೇಕು ಇಲ್ಲಿ ನೊಡಿ.
* ಒಂದು ಟೀ ಚಮಚ ಒಣಗಿದ ಬೇವಿನೆಲೆಯು ಪುಡಿ, ಬೇವಿನ ಹಣ್ಣುಗಳು ಮತ್ತು ಬೇವಿನ ಹೂಗಳ ಪುಡಿ ಇವೆಲ್ಲವನ್ನು ಚೆನ್ನಾಗಿ ಮಿಶ್ರಣಮಾಡಿ ಪ್ರತಿದಿನವೂ ಒಂದು ಚಮಚ ಮಿಶ್ರಣವನ್ನು ನೀರಿನಲ್ಲಿ ಹಾಕಿ ಕುಡಿಯಿರಿ. ಇದರಿಂದ ಚರ್ಮದ ಆಟೊ ಇಮ್ಮ್ಯೂನ್ ಕಾಯಿಲೆಗಳು ಕಡಿಮೆಯಾಗುತ್ತದೆ.
* ಬೇವಿನ ಎಲೆಗಳಿಗೆ ಸ್ವಲ್ಪ ನೀರು ಬೆರಸಿ ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿದ ನಂತರ ಬಿಳಿಚುಕ್ಕೆಗಳಿರುವ ಪ್ರದೇಶದಲ್ಲಿ ಲೇಪಿಸಿ. ಹತ್ತು ನಿಮಿಷಗಳಾದಮೇಲೆ ತೊಳೆದುಕೊಳ್ಳಿ. ಇದರಿಂದ ನಿಮ್ಮ ಚರ್ಮದ ಮೊದಲಿನ ಹೊಳಪುಬರುವ ಲಾಭವನ್ನು ಪಡೆಯಿರಿ.

4. ಆರಶಿನ:
ಅರಶಿನ ಮತ್ತು ಬೇವಿನೆಲೆಯ ಪೇಸ್ಟ್ ಚರ್ಮದ ಸಮಸ್ಯೆಗಳು ಮತ್ತು ಚರ್ಮದ ಸೋಂಕು, ಎಲ್ಲ ರೀತಿಯ ಪೂತಿನಾಶಕಗಳಂತೆ ಕೆಲಸಮಾಡುತ್ತದೆ. ಐದು ಟೀ ಚಮಚ ಅರಶಿನ ಮತ್ತು 250 ml ಸಾಸಿವೆ ಎಣ್ಣೆ ಎರಡನ್ನೂ ಬೆರಸಿ ಪೇಸ್ಟ್ ಮಾಡಿ ಚುಕ್ಕೆಗಳಿರುವ ಪ್ರದೇಶದಲ್ಲಿ ಹಚ್ಚುತ್ತಿದ್ದರೆ ಚರ್ಮದ ನಿರೋಧಕ ವ್ಯವಸ್ತೆ ಹೆಚ್ಚುತ್ತದೆ. ಇದನ್ನು ದಿನಕ್ಕೆ ಎರದು ಸಲ ಸುಮಾರು ಒಂದು ವರ್ಷ ಹಚ್ಚಿದರೆ ಸಕಾರಾತ್ಮಕ ಫಲಿತಾಂಶವನ್ನು ಪಡೆಯಬಹುದು.

5. ಪವಿತ್ರ ತುಳಸಿ:
ಪವಿತ್ರ ತುಳಸಿಯ ಪೇಸ್ಟ್ ಅನ್ನು ಬಿಳಿಭಾಗಗಳಮೇಲೆ ನೇರವಾಗಿ ಹಾಕಬಹುದು ಅಥವ ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಸ್ವಲ್ಪ ಅರಶಿನದ ಜೊತೆ ಸೇರಿಸಿ ಹಚ್ಚಿದರೆ ಇನ್ನೂ ಉತ್ತಮ ಫಲಿತಾಂಶ ಸಿಗುತ್ತದೆ. ಕುದಿಯುವ ನೀರನ್ನು ಕೊಠಡಿ ತಾಪಮಾನಕ್ಕೆ ತಂದು ಹಚ್ಚಿ ನಂತರ ನೀರಿನಲ್ಲಿ ತೊಳೆಯಬೇಕು. ಇದು ಅತ್ಯುತ್ತಮ ಶಿಳಿಂದ್ರ ವಿರೋಧಿ ಮತ್ತು ನಂಜು ನಿರೋಧಕ ಪರಿಹಾರ.

6. ತಾಮ್ರ:
ತಾಮ್ರದಲ್ಲಿರುವ ಉತ್ತೇಜಕ ಫಲವತ್ತತೆಯ ಗುಣ ನಿರೋಧಕ ವ್ಯವಸ್ತೆಗೆ ಸಹಕಾರಿಯಾಗಿದೆ. ಒಂದು ತಾಮ್ರದ ಪಾತ್ರೆಯಲ್ಲಿ ನೀರನ್ನು ರಾತ್ರಿ ಕೊಠಡಿ ತಾಪಮಾನದಲ್ಲಿಡಿ. ಮಾರನೆದಿನ ಬೆಳಗ್ಗೆ ಆ ನೀರಿನಲ್ಲಿ ನೆನೆದಿರುವ ತಾಮ್ರ ಅಯಾನುಗಳು ಉತ್ಪತ್ತಿಯಾಗಿರುತ್ತವೆ. ಈ ನೀರನ್ನು ಸೇವಿಸಿದರೆ ನಮ್ಮ ಶರೀರದೊಳಗೆ ಮೆಲನಿನ್ ಉತ್ಪತ್ತಿಯಾಗಿ ವರ್ಣದ್ರವ್ಯಗಳ ಉತ್ಪಾದನೆಗೆ ಸಹಾಯವಾಗುತ್ತದೆ. ಇದರಿಂದ ಬಿಳಿಚುಕ್ಕೆಗಳು ಕಡಿಮೆಯಾಗುತ್ತಾ ಹೋಗೆ ಹಿಂದಿನ ಸಹಜ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ.

7. ಎಲೆಕೋಸು
ಎಲೆಕೋಸು ಅಂತಹ ಜನಪ್ರಿಯ ಪದಾರ್ಥ ಆಗಿಲ್ಲದಿದ್ದರೂ ಅದರಲ್ಲಿ ಕೆಲವು ಅದ್ಭುತ ಗುಣಗಳಿವೆ. ಇದನ್ನು ನೀವು ಬಳಸಬೇಕಾದ ಎರಡು ವಿಧಾನಗಳಿವೆ.
* ತಾಜಾ ಎಲೆಕೋಸಿನ ಎಲೆಗಳಿಂದ ರಸವನ್ನು ತಯಾರಿಸಿ ಪೀಡಿತ ಪ್ರದೇಶಗಳ ಮೇಲೆ ಹಚ್ಚಿರಿ. ಹತ್ತು ನಿಮಿಷದ ನಂತರ ಬೆಚ್ಚಗಿರುವ ನೀರಿನಿಂದ ತೊಳೆಯಿರಿ.
* ಎಲೆಕೋಸಿನ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ. ನೀರು ಸ್ವಲ್ಪ ತಣ್ಣಗಾದಮೇಲೆ ಪೀಡಿತ ಪ್ರದೇಶಗಳ ಮೇಲೆ ಹಾಕಿರಿ.
* ಇಲ್ಲವಾದರೆ, ಎಲೆಕೋಸನ್ನು ನಿಮ್ಮ ಆಹಾರದ ಜೊತೆ ಸೇರಿಸಿ ಸೇವಿಸಿ ಅದರ ಲಾಭ ಪಡೆಯಿರಿ.



Click it and Unblock the Notifications