Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಮುಖದ ಚರ್ಮವನ್ನು ಹೊಳೆಯುವಂತೆ ಮಾಡಲು ಸಲಹೆಗಳು
ನಮಗೆ ಕ್ರಮೇಣ ವಯಸ್ಸಾದಂತೆ ಹಲವಾರು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಹುಟ್ಟುಕೊಳ್ಳುತ್ತವೆ. ಚರ್ಮದ ಮೇಲೆ ಎಣ್ಣೆಯ ಅಂಶವು ಕಡಿಮೆಯಾಗಿ ಅಲ್ಲಲ್ಲಿ ಚರ್ಮವು ಒಣಗಿ ಇಳಿ ಬಿದ್ದಿರುವ ಸಂಭವಗಳು ಹೆಚ್ಚು. ಇಂತಹ ಚರ್ಮವು ಇದ್ದರೆ ಯಾರಿಗಾಗಿಯಾದರೂ ಇಷ್ಟವಿರುದಿಲ್ಲ. ಈ ಸಮಸ್ಯೆಗಳು ಬರದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಆರಂಭಿಸಿ.
ಒಂದು ಪರಿಹಾರ ಮಾರ್ಗವೆಂದರೆ ಚರ್ಮವನ್ನು ಹೊಳೆಯುವಂತೆ ಮಾಡುವ ಕ್ರೀಮ್ ಹಚ್ಚಿಕೊಳ್ಳುವುದು. ಈ ದಿಸೆಯಲ್ಲಿ ಮನೆಯಲ್ಲೇ ಸುಲಭವಾಗಿ ತಯಾರುಮಾಡಬಹುದಾದ ಕೆಳವು ಪಾಕವಿಧಾನಗಳನ್ನು ಇಲ್ಲಿ ಕೊಟ್ಟಿದ್ದೇವೆ. ಕನಿಷ್ಠ ವಾರಕ್ಕೊಮ್ಮೆ ಇಲ್ಲಿ ಕೊಟ್ಟಿರುವ ಯಾವುದಾದರೂ ಕ್ರೀಮ್ ಅನ್ನು ಯುವ ಕಳೆಯ ಚರ್ಮ ಬೇಕೆಂದಿದ್ದರೆ ಬಳಸಿ.
ನಿಮ್ಮ ತ್ವಚೆಗೆ ಹಾನಿಮಾಡಬಲ್ಲ 15 ಆಹಾರಗಳು ಯಾವುದು?

ಮೊಟ್ಟೆಯ ಬಿಳಿ ಮಾಸ್ಕ್
ಮೊಟ್ಟೆಯನ್ನು ಒಡೆದು ಅದರೊಳಗಿರುವ ಬಿಳಿ ಅಂಶದ ಭಾಗವನ್ನು ಹಳದಿ ಅಂಶದ ಭಾಗದಿಂದ ಬೇರ್ಪಡಿಸಿ. ಈ ಬಿಳಿ ಅಂಶವನ್ನು ನೇರವಾಗಿ ನಿಮ್ಮ ಮುಖದ ಮೇಲೆ ಲೇಪಿಸಿ ಒಣಗಲು ಬಿಡಿ. ಸ್ವಲ್ಪ ಸಮಯದ ನಂತರ ಬೆಚ್ಚಗಿರುವ ನೀರಿನಿಂದ ಮುಖವನ್ನು ತೊಳೆಯಿರಿ.
ಮೊಟ್ಟೆಯಲ್ಲಿನ ಬಿಳಿ ಅಂಶವು ಸಾಮಾನ್ಯವಾಗಿ ಚರ್ಮವನ್ನು ಬಿಗಿಗೊಳಿಸುವ ಗುಣಗಳನ್ನು ಹೊಂದಿರುತ್ತದೆ ಹಾಗೂ ಹೆಚ್ಚಾಗಿ ಬಳಸುತ್ತಾರೆ. ಅದು ಚರ್ಮವನ್ನು ಹೊಳೆಯುವಂತೆ ಮಾಡುವುದರೊಂದಿಗೆ ಧೃಡಪಡಿಸುತ್ತದೆ. ನಿಮಗೆ ಇತರ ಪಾಕ ವಿಧಾನಗಳನ್ನು ತಯಾರಿಸಲು ಸಮಯವಿಲ್ಲದಿದ್ದರೆ, ಕೇವಲ ಮೊಟ್ಟೆಯ ಬಿಳಿ ಅಂಶವನ್ನು ಬಳಸಿ ಚರ್ಮದ ಮೇಲೆ ಆಶ್ಚರ್ಯಕರ ಪ್ರಭಾವವನ್ನು ನೀವು ಕಾಣಬಹುದು.
ಮೊಟ್ಟೆಯ ಬಿಳಿ ಅಂಶ ಮತ್ತು ಹಿಟ್ಟಿನ ಮಾಸ್ಕ್
ಮೊಟ್ಟೆಯನ್ನು ಒಡೆದು ಅದರೊಳಗಿರುವ ಬಿಳಿ ಅಂಶದ ಭಾಗವನ್ನು ಹಳದಿ ಅಂಶದ ಭಾಗದಿಂದ ಬೇರ್ಪಡಿಸಿ. ಇದಕ್ಕೆ ಮೈದಾಹಿಟ್ಟು, ಗ್ಲಿಸರಿನ್ ಮತ್ತು ಜೇನುತುಪ್ಪ ಸೇರಿಸಿ ಮಿಶ್ರಣಮಾಡಿ ನಿಮ್ಮ ಮುಖದ ಮೇಲೆ ಲೇಪಿಸಿ ಒಣಗಲು ಬಿಡಿ. ಸ್ವಲ್ಪ ಸಮಯದ ನಂತರ ಬೆಚ್ಚಗಿರುವ ನೀರಿನಿಂದ ತೊಳೆಯಿರಿ. ಈ ಪೇಸ್ಟಿಗೆ ಮುಲ್ತಾನಿ ಮಿಟ್ಟಿ ಸಹ ಬೆರಸಿ ಉಪಯೋಗಿಸಬಹುದು. ನಿಮ್ಮ ಮುಖದ ಚರ್ಮದಲ್ಲಿ ಎಣ್ಣೆ ಅಂಶವು ಹೆಚ್ಚಾಗಿದ್ದಲ್ಲಿ ಗ್ಲಿಸರಿನ್ ಉಪಯೋಗಿಸಬೇಡಿ.
ಮಿಲ್ತಾನಿ ಮಿಟ್ಟಿ(Fuller's Earth) ಚರ್ಮದ ಹಿಡಿತವನ್ನು ಬಿಗಿಗೊಳಿಸಲು ಸಹಾಯವಾಗುವುದಲ್ಲದೆ ಮುಖದ ಮೇಲಿರಬಹುದಾದ ಗುಳ್ಳೆಗಳು, ಕಲೆಗಳು ಮತ್ತು ಚರ್ಮ ಸಂಸ್ಕರಣ (Tanning) ಕಲೆಗಳ ವಿರುದ್ಧ ಹೋರಾಡುತ್ತದೆ. ಈ ಪೇಸ್ಟ್ ನಿಮ್ಮ ಮುಖದ ಮೇಲಿರುವ ಹೆಚ್ಚಾದ ತೈಲವನ್ನು ತೆಗೆಯುವುದಲ್ಲದೆ ನಿಮ್ಮ ಮುಖದ ಭಾಗದಲ್ಲಿ ರಕ್ತ ಸಂಚಾರವನ್ನು ಉತ್ತೇಜಿಸುತ್ತದೆ. ಮುಲ್ತಾನಿ ಮಿಟ್ಟಿಯು ಯಾವಾಗಲೂ ಮರುಕಟ್ಟೆಯಲ್ಲಿ ಸಿಗದೇ ಇರಬಹುದು. ಹಾಗಿದ್ದಲ್ಲಿ ಮೈದಾ ಹಿಟ್ಟನ್ನು ನಿಯಮಿತವಾಗಿ ಉಪಯೋಗಿಸಬಹುದು. ಆದರೆ ಗಮನವಿಡಿ: ಮಿಲ್ತಾನಿ ಮಿಟ್ಟಿಯನ್ನು ಎಣ್ಣೆಯುಕ್ತ ಚರ್ಮದ ಮೇಲೆ ಮಾತ್ರ ಉಪಯೊಗಿಸಬೇಕು ಮತ್ತು ಒಣ ಚರ್ಮದ ಮೇಲೆ ಅಲ್ಲ ಎಂಬುದು.
ಮೊಟ್ಟೆಯ ಬಿಳಿ ಅಂಶ ಮತ್ತು ಮೊಸರಿನ ಮಾಸ್ಕ್
ಮೊಟ್ಟೆಯನ್ನು ಒಡೆದು ಅದರೊಳಗಿರುವ ಬಿಳಿ ಅಂಶದ ಭಾಗವನ್ನು ಹಳದಿ ಅಂಶದ ಭಾಗದಿಂದ ಬೇರ್ಪಡಿಸಿ. ಇದಕ್ಕೆ ಮೊಸರು ಮತ್ತು ಸಕ್ಕರೆಯನ್ನು ಮಿಶ್ರಣಮಾಡಿ ನಿಮ್ಮ ಮುಖದ ಮೇಲೆ ಲೇಪಿಸಿ. ಚೆನ್ನಾಗಿ ಒಣಗಿದ ನಂತರ ಬೆಚ್ಚಗಿರುವ ನೀರಿನಿಂದ ತೊಳೆಯಿರಿ.
ಮೊಸರು ನಿಮ್ಮ ಮುಖದ ಮೇಲಿರುವ ಕಲೆಗಳ ವಿರುದ್ಧ ಹೋರಾಡುತ್ತದೆ ಮತ್ತು ಚರ್ಮನ್ನು ಶುದ್ಧೀಕರಿಸುತ್ತದೆ. ಸಕ್ಕರೆಯು ನೈಸರ್ಗಿಕವಾಗಿ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದಲ್ಲದೆ ಶುದ್ಧೀಕರಿಸಿ ತೇವಾಂಶವನ್ನು ಉತ್ತಮಗೊಳಿಸಿ ಆರಂಭಿಕ ವಯಸ್ಸಿನ ಚಿಹ್ನೆಗಳ ವಿರುದ್ಧ ವರ್ತಿಸುತ್ತದೆ.
ನಿಮ್ಮ ಕೂದಲನ್ನು ಆಗಾಗ ತೊಳೆಯುವುದು ಸೂಕ್ತವೇ ?
ಎಲೆಕೋಸು ಮತ್ತು ಅಕ್ಕಿ ಹಿಟ್ಟು ಮಾಸ್ಕ್
ಎಲೆಕೋಸು ಎಲೆಗಳನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಅಕ್ಕಿ ಹಿಟ್ಟು ಮತ್ತು ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖದ ಮೇಲೆ ಲೇಪಿಸಿ ಒಣಗಲು ಬಿಡಿ. ನಂತರ ಬೆಚ್ಚಗಿರುವನೀರಿನಿಂದ ಚೆನ್ನಾಗಿ ನೆನಸಿ ತೊಳೆದುಕೊಳ್ಳಿ. ನಿಮ್ಮ ಮುಖದ ಚರ್ಮವು ಎಣ್ಣೆಯುಕ್ತವಾಗಿದ್ದಲ್ಲಿ ಬಾದಾಮಿ ಎಣ್ಣೆ ಅಥವ ಆಲಿವ್ ಎಣ್ಣೆಯನ್ನು ಹಾಕಬೇಡಿ. ನಿಮಗನಿಸಿದರೆ ಮೊಟ್ಟೆಯ ಬಿಳಿ ಅಂಶವನ್ನು ಹಾಕಿ ಮಿಶ್ರಣಮಾಡಿ.
ಎಲೆಕೋಸಿನ ಎಲೆಗಳು ಈ ರೀತಿ ಕೆಲಸಮಾಡುವುದೆಂದರೆ ನಿಮಗೆ ಆಶ್ಚರ್ಯವಾಗಿರಬಹುದು. ಆದರೆ ಎಲೆಕೋಸಿನ ಎಲೆಗಳಲ್ಲಿ ಸುಕ್ಕುಗಳು ಮತ್ತು ಸಡಿಲ ಚರ್ಮಗಳ ವಿರುದ್ಧ ಹೋರಾಡಲು ಅತ್ಯುತ್ತಮ ಅಂಶವಿರುತ್ತದೆ. ಬಾದಾಮಿ ಎಣ್ಣೆ ಅಥವ ಆಲಿವ್ ಎಣ್ಣೆ ಚರ್ಮದ ತೇವಾಂಶವನ್ನು ವೃದ್ಧಿಗೊಳಿಸುತ್ತದೆ.
ಎಲೆಕೋಸು ಮತ್ತು ಜೇನುತುಪ್ಪದ ಮಾಸ್ಕ್
ಎರಡು ಅಥವ ಮೂರು ಎಲೆಕೋಸಿನ ಎಲೆಗಳನ್ನು ಅರೆದು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಮೊಸರು ಮತ್ತು ಜೇನುತುಪ್ಪವನ್ನು ಹಾಕಿ ಚೆನ್ನಾಗೆ ಮಿಶ್ರಣ ಮಾಡಿ. ನಿಮಗೆ ಒಣಚರ್ಮವಿದ್ದಲ್ಲಿ ಬಾದಾಮಿ ಎಣ್ಣೆ ಅಥವ ಆಲಿವ್ ಎಣ್ಣೆಯನ್ನು ಸೇರಿಸಿ. ಈ ಪೇಸ್ಟನ್ನು ನಿಮ್ಮ ಮುಖದ ಮೇಲೆ ಲೇಪಿಸಿ ಸುಮಾರು 15 - 20 ನಿಮಿಷಗಳ ಕಾಲ ಬಿಡಿ. ನಂತರ ಬೆಚ್ಚಗಿರುವ ನೀರಿನಿಂದ ಚೆನ್ನಾಗಿ ನೆನಸಿ ತೊಳೆದುಕೊಳ್ಳಿ.
ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳು ಎಲ್ಲರ ಮನೆಯಲ್ಲೂ ಸುಲಭವಾಗಿ ದೊರೆಯುತ್ತವೆ. ನಾವು ಇಲ್ಲಿ ಕೊಟ್ಟಿರುವ ವಿವಿಧ ರೀತಿಯ ಪೇಸ್ಟ್ ಗಳು ನಿಮಗೆ ಸಹಾಯಮಾಡುತ್ತವೆಯೆಂದು ನಾವು ಭಾವಿಸುತ್ತೇವೆ. ಆದ್ದರಿಂದ ನೀವು ಯಾವ ಯಾವ ಪೇಸ್ಟ್ ಗಳನ್ನು ತಯಾರಿಸಲು ಅಂದುಕೊಂಡಿದ್ದೀರಾ ಎಂಬುದನ್ನು ನಮಗೆ ತಿಳಿಸಿ.



Click it and Unblock the Notifications