Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
ವೈನ್ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ
ಫೇಶಿಯಲ್ ಮಾಡಿಸಬೇಕೆಂದು ಬ್ಯೂಟಿ ಪಾರ್ಲರ್ ಗೆ ಹೋದರೆ ಅವರು ಹರ್ಬಲ್ ಫೇಶಿಯಲ್, ಫ್ರೂಟ್ ಫೇಶಿಯಲ್, ವೈನ್ ಫೇಶಿಯಲ್ ಹೀಗೆ ಅನೇಕ ಹೆಸರು ಹೇಳಿ ಇದರಲ್ಲಿ ನಿಮಗೆ ಯಾವುದು ಬೇಕೆಂದು ಕೇಳುತ್ತಾರೆ. ಎಷ್ಟೋ ಬಾರಿ ಫೇಶಿಯಲ್ ಮಾಡಿಸುವಾಗ, ನಾವು ಮಾಡಿಸುವ ಫೇಶಿಯಲ್ ನಿಂದ ದೊರೆಯುವ ಗುಣ ಗೊತ್ತಿಲ್ಲದೆಯೇ ಮಾಡಿಸುತ್ತೇವೆ.
ಚಿಕ್ಕ ಪ್ರಾಯದವರಿಗಾದರೆ ಫ್ರೂಟ್ ಫೇಶಿಯಲ್ ಓಕೆ. ಆದರೆ ವಯಸ್ಸು 35 ದಾಟಿದ ಬಳಿಕ ವೈನ್, ಗೋಲ್ಡ್ ಫೇಶಿಯಲ್ ಅಂತ ಮಾಡಿಸಿದರೆ ಹೆಚ್ಚು ಒಳ್ಳೆಯದು. ಅದರಲ್ಲೂ ವೈನ್ ಪುರುಷ ಹಾಗೂ ಮಹಿಳೆಯರಿಬ್ಬರ ತ್ವಚೆಗೂ ತುಂಬಾ ಒಳ್ಳೆಯದು. ಇದು ನೆರಿಗೆಯನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.
ಇಲ್ಲಿ ನಾವು ವೈನ್ ಫೇಶಿಯಲ್ ಮಾಡಿಸಿದರೆ ದೊರೆಯುವ ಪ್ರಯೋಜನಗಳ ಬಗ್ಗೆ ಇಲ್ಲಿ ಹೇಳಲಾಗಿದೆ. ಈ ಪ್ರಯೋಜನಗಳು ನಿಮಗೂ ಬೇಕೆಂದು ಅನಿಸಿದರೆ ವೈನ್ ಫೇಶಿಯಲ್ ಮಾಡಿಸುವುದು ಒಳ್ಳೆಯದು.

1. ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ
ಇದರಲ್ಲಿ antioxidants ಅಧಿಕವಿರುತ್ತದೆ. ಇದರಿಂದ ಫೇಶಿಯಲ್ ಮಾಡಿದರೆ ಇದರಲ್ಲಿರುವ antioxidants ಅನ್ನು ತ್ವಚೆ ಹೀರಿಕೊಂಡು ತ್ವಚೆ ಬಿಗಿಯಾಗುತ್ತದೆ. ಇದರಿಂದ ನೆರಿಗೆ ಬೇಗನೆ ಬೀಳುವುದಿಲ್ಲ.

2. ಮೊಡವೆಯ ವಿರುದ್ಧ ಹೋರಾಡುತ್ತದೆ
ಇದರಲ್ಲಿರುವ ಪಾಲಿ ಫೀನೋಲ್ ಅಮಶ ತ್ವಚೆಯಲ್ಲಿ ಉರಿ ಉಂಟಾಗದಂತೆ ತಡೆಯುತ್ತದೆ. ಇದು ತ್ವಚೆಯಲ್ಲಿರುವ ಕಲ್ಮಶವನ್ನು ಹೊರಹಾಕುವುದರಿಂದ ದೂಳು, ಎಣ್ಣೆಯಂಶಯಿಂದ ಉಂಟಾಗುವ ಮೊಡವೆ ಕಡಿಮೆಯಾಗುವುದು.

3. ಒಣ ತ್ವಚೆಗೆ ಉತ್ತಮ ಮದ್ದು
ಒಣ ತ್ವಚೆ ಇರುವವರು ಆಲ್ಫಾ ಹೈಡ್ರೋಕ್ಸಿ ಆಸಿಡ್ ಅಧಿಕವಿರುವ ವೈನ್ ನಿಂದ ಫೇಶಿಯಲ್ ಮಾಡಿಸಿದರೆ ತ್ವಚೆ ಮಾಯಿಶ್ಚರೈಸರ್ ಆಗಿರುತ್ತದೆ.

4. ಬೆಸ್ಟ್ ಟೋನರ್
ಕೆಂಪು ವೈನ್ ಅನ್ನು ಟೊನರ್ ಆಗಿ ಬಳಸಬಹುದು. ಮೊಡವೆ ಇರುವವರು ಇದನ್ನು ಟೋನರ್ ಆಗಿ ಬಳಸುವುದು ತುಂಬಾ ಒಳ್ಳೆಯದು.

5. ನಿರ್ಜೀವ ತ್ವಚೆಯನ್ನು ತೆಗೆದು ಹಾಕಲು
ಒಂದು ಕಪ್ ವೈಟ್ ವೈನ್ ಅನ್ನು 1 ಕಪ್ ಹೊಟ್ಟು (ತವಡು) ಹಾಕಿ ಸುಮಾರು 4 ಗಂಟೆಗಳ ಕಾಲ ಇಡಬೇಕು. ನಂತರ ಇದರಿಂದ ದೇಹವನ್ನು ಸ್ಕಬ್ ಮಾಡಿ ನೋಡಿ, ನಿಮ್ಮ ತ್ವಚೆಯ ಅಂದ ಹೆಚ್ಚುವುದು.

6. ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ಮಾಡುತ್ತದೆ
ಇತ್ತೀಚಿಕೆಗೆ ನಡೆಸಿದ ಸಂಶೋಧನೆಯಿಂದ ವೈನ್ ತ್ವಚೆಯನ್ನು ಸುರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿದು ಬಂದಿದೆ.



Click it and Unblock the Notifications
