Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯೋಗದಿಂದ ತ್ವಚೆಯ ಹೊಳಪು ಹೆಚ್ಚುವುದು
ಧೂಳು, ಮಾಲಿನ್ಯದಿಂದ ಕೂಡಿರುವ ಈ ನಗರಗಳಲ್ಲಿ ನಮ್ಮ ನೈಸರ್ಗಿಕ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಹೆಚ್ಚುತ್ತಿರುವ ಮಾಲಿನ್ಯ, ರಾಸಾಯನಿಕಗಳು ನಮ್ಮ ತ್ಚಚೆಯನ್ನು ಹಾಳುಮಾಡುತ್ತವೆ. ಹಾಗೆಂದ ಮಾತ್ರಕ್ಕೆ ತ್ವಚೆಯನ್ನು ಹಾಳುಗೆಡವಲು ಸಾಧ್ಯವೇ ಅದಕ್ಕಾಗಿಯೇ ನಾವು ಪರಿಹಾರವನ್ನು ಕಂಡುಕೊಂಡಿದ್ದೇವೆ. ಅದೇ ವಿವಿಧ ಬಗೆಯ ಕ್ರೀಮ್ ಗಳು, ಹಾಗೂ ಮತ್ತಿತರ ಸೌಂದರ್ಯವರ್ಧಕಗಳು!
ಆದರೆ ಇದು ನಿಜವಾದ ಪರಿಹಾರವಲ್ಲ. ನಿಮ್ಮ ತ್ಚಚೆಗೆ ಇದರಿಂದ ಯಾವುದೇ ಉಪಯೋಗವೂ ಆಗದು. ಕೇವಲ ಕ್ಷಣದ ಸೌಂದರ್ಯವನ್ನು ನೀಡಬಲ್ಲವೇ ಹೊರತು ಶಾಶ್ವತ ಪರಿಹಾರವಂತೂ ಖಂಡಿತವಾಗಿಯೂ ಇದರಿಂದ ಲಭಿಸದು. ನಿಮ್ಮ ನೈಸರ್ಗಿಕ ತ್ಚಚೆಗೆ ಅದರ ಹೊಳಪಿಗೆ ಸೂಕ್ತ ಪರಿಹಾರವೆಂದರೆ - ಯೋಗ.

ಯೋಗ ದೈಹಿಕ ಆರೋಗ್ಯವನ್ನು ನೀಡುವುದು ಮಾತ್ರವಲ್ಲದೇ ಮಾನಸಿಕ ಆರೋಗ್ಯವನ್ನೂ ಸಹ ಕಾಯ್ದುಕೊಳ್ಳುವಲ್ಲಿ ಯೋಗ ಬಹಳ ಸಹಕಾರಿಯಾಗಿದೆ. ನಿಮ್ಮ ತ್ಚಚೆಯ ಹೊಳಪಿಗೆ ಇಲ್ಲಿ ಕೆಲವು ಯೋಗದ ಭಂಗಿಯನ್ನು ಇಲ್ಲಿ ಹೇಳಲಾಗಿದೆ.
ಆಯುರ್ವೇದದಲ್ಲಿ ತ್ಚಚೆಯು ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯ ಎಂದು ನಂಬಲಾಗಿದೆ. ತ್ವಚೆ ಆರೋಗ್ಯಕರವಾಗಿದ್ದರೆ, ರಕ್ತದ ಪೂರೈಕೆಯನ್ನೂ ಉತ್ತಮಗೊಳಿಸುತ್ತದೆ. ಕೆಲವು ಯೋಗಗಳು ಮುಖದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಯೌವನವನ್ನು ಕಾಯ್ದುಕೊಳ್ಳಲು, ಆರೋಗ್ಯವಾಗಿರಲು ಮತ್ತು ಸುಂದರವಾಗಿ ಕಾಣಲು ಈ ಯೋಗಗಳು ಅತ್ಯಂತ ಸಹಾಯಕವಾಗಿವೆ.
1. ಪಚಿಮೋಟಾಸನ (Pachimotasana) :ಯೋಗದ ಈ ಭಂಗಿ ಮುಖದಲ್ಲಿ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಇದಲ್ಲದೆ ಹೊಟ್ಟೆಯ ಕಾರ್ಯವನ್ನು ಸುಲಭಗೊಳಿಸಲು, ತೊಡೆಯ ಬಲವನ್ನು ಹೆಚ್ಚಿಸಲು ಮತ್ತು ಬೆನ್ನಿನ ಮೂಳೆಯ ವಿಶ್ರಾಂತಿಗೂ ಸಹಾಯಕವಾಗಿದೆ.
ನೆನಪಿನಲ್ಲಿಡಬೇಕಾದ ಅಂಶಗಳು: ನಿಮಗೆ ಬೆನ್ನು ನೋವಿನ ಸಮಸ್ಯೆಯಿದ್ದರೆ ಖಂಡಿತವಾಗಿಯೂ ಈ ಭಂಗಿಯನ್ನು ಮಾಡಲು ಪ್ರಯತ್ನಿಸಬೇಡಿ. ಇದಕ್ಕಿಂತ ಹೆಚ್ಚಾಗಿ ಈ ಭಂಗಿಯನ್ನು ಮಾಡುವಾಗ ನೀವು ವಿಶ್ರಾಂತಿಯಿಂದಿರಬೇಕು. ನಿಮ್ಮ ಮೊಣಕಾಲನ್ನು ತಲೆಗೆ ತಾಗಿಸಲು ನಿಮಗೆ ಸಾಧ್ಯವಾಗಬೇಕು. ಆದ್ದರಿಂದ ಈ ಭಂಗಿಯನ್ನು ಸರಿಯಾದ ಕ್ರಮದಲ್ಲಿ ಮಾಡಿ.
2. ಮತ್ಸ್ಯಾಸನ: ಈ ಆಸನವು ನಿಮ್ಮ ಮುಖದ ಮೂಳೆಯ ವಿಶ್ರಾಂತಿಗೆ ಮತ್ತು ಕುತ್ತಿಗೆ ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಮುಖದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಜೊತೆಗೆ ರಕ್ತದಲ್ಲಿ ಆಮ್ಲನಜನಕದ ಪ್ರಮಾಣವನ್ನೂ ಹೆಚ್ಚಿಸುತ್ತದೆ.
ನೆನಪಿಡಬೇಕಾದ ಅಂಶಗಳು: ನೀವು ರಕ್ತದೂತ್ತಡದಿಂದ ಬಳಲುತ್ತಿದ್ದರೆ ಅಥವಾ ನಿಮಗೆ ಕುತ್ತಿಗೆ ಅಥವಾ ಬೆನ್ನಿನ ನೋವಿದ್ದರೆ ಈ ಆಸನವನ್ನು ಮಾಡಬೇಡಿ.
3. ಹಾಲಾಸನ: ಈ ಆಸನವು ಯಾರು ದೀರ್ಘಕಾಲದವರೆಗೆ ಕುಳಿತು ಕೆಲಸ ಮಾಡುತ್ತಾರೋ ಅಂತಹವರಿಗೆ ಸಾಕಷ್ಟು ಸಹಾಯಕವಾಗಿದೆ. ಇದು ಥೈರಾಯ್ಡ್ ಗ್ರಂಥಿಗಳು , ಪ್ಯಾರಾಥೈರಾಯ್ಡ್ ಗ್ರಂಥಿಗಳು , ಶ್ವಾಸಕೋಶದ ಮತ್ತು ಕಿಬ್ಬೊಟ್ಟೆಯ ಭಾಗದ ಅಂಗಗಳನ್ನು ಪ್ರಚೋದಿಸುತ್ತದೆ. ಮುಖದಲ್ಲಿ ಮತ್ತು ತಲೆಯಲ್ಲಿ ರಕ್ತದ ಸಮಾನದ ಹಂಚಿಕೆಯನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ. ಹಾಗೂ ಜೀರ್ಣಕ್ರಿಯೆಗೆ ಮತ್ತು ಹಾರ್ಮೋನ್ ಬದಲಾವಣೆಯ ನಿಯಂತ್ರಣಕ್ಕೆ ಈ ಭಂಗಿ ಸಹಾಯಕ.
ನೆನಪಿನಲ್ಲಿಡಬೇಕಾದ ಅಂಶಗಳು: ನೀವು ಅಧಿಕ ರಕ್ತದೊತ್ತಡ, ಅತಿಸಾರ, ಯಕೃತ್ತಿನ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ ಅಥವಾ ಕುತ್ತಿಗೆ ನೋವನ್ನು ಅನುಭವಿಸುತ್ತಿದ್ದರೆ ಈ ಆಸನವನ್ನು ಮಾಡಬೇಡಿ.
4. ಪ್ರಾಣಾಯಾಮ: ಆಳವಾಗಿ ಉಸಿರನ್ನು ಎಳೆದುಕೊಂಡು, ಉಸಿರನ್ನು ಹೊರಬಿಡುವ ಈ ಆಸನ ರಕ್ತದಲ್ಲಿ ಆಮ್ಲಜನಕ ಚಲಾವಣೆಯನ್ನು ಹೆಚ್ಚಿಸಲು ಸಹಾಯಕ. ಇದು ಮನಸ್ಸಿಗೆ ಮತ್ತು ನರಗಳಿಗೆ ಸಾಕಷ್ಟು ಅಗತ್ಯವಿರುವ ವಿಶ್ರಾಂತಿಯನ್ನು ಒದಗಿಸುತ್ತದೆ. ಅಲ್ಲದೇ ನಿಮ್ಮನ್ನು ಒತ್ತಡಮುಕ್ತರನ್ನಾಗಿ ಮಾಡಲು ಮತ್ತು ಸೌಂದರ್ಯವನ್ನು ಹೆಚ್ಚಿಸಲು ಈ ಆಸನವನ್ನು ತಪ್ಪದೇ ಮಾಡಿ.
5. ಶವಾಸನ: ಯೋಗ ನಿದ್ರಾ ಅಥವಾ ಶವಾಸನ ಸಂಪೂರ್ಣ ವಿಶ್ರಾಂತಿಯನ್ನು ಕಂಡುಕೊಳ್ಳುವ ಆಸನ. ನೆಲದ ಮೇಲೆ ಮಲಗಿ ಕೈಕಾಲು ಮತ್ತು ಸಂದುಗಳನ್ನು ಸಡಿಲವಾಗಿ ಬಿಡಬೇಕು.ಕಣ್ಣುಗಳನ್ನು ಮುಚ್ಚಿರಬೇಕು. ಶವದಂತೆಯೇ ಮಲಗಿ ವಿಶ್ರಾಂತಿ ತೆಗೆದುಕೊಳ್ಳಬೇಕು.



Click it and Unblock the Notifications