Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತ್ವಚೆಯ ರಕ್ಷಣೆಗೆ ಕೊಕೊವಾ ಬೆಣ್ಣೆ
ಮಹಿಳೆಯರು ಹುಟ್ಟುವಾಗಲೆ ಸುಂದರವಾಗಿ ಹುಟ್ಟಿರುತ್ತಾರೆ. ಅವರ ಜೀವನ ಮತ್ತು ಪ್ರಪಂಚವು ಸಹ ಅಷ್ಟೇ ಸುಂದರ. ಇನ್ನು ಅವರ ಬಾಳಿನಲ್ಲಿ ಪ್ರತಿಯೊಂದು ಸುಂದರಮಯವಾದ ಸಂಗತಿಗಳೇ ತುಂಬಿರಬೇಕು ಎಂಬ ಬಯಕೆ. ಇನ್ನು ಸುಂದರವಾದ ತ್ವಚೆ ಬೇಕೆಂಬ ಹಂಬಲ ಯಾವ ಹೆಣ್ಣಿಗೆ ತಾನೇ ಇರುವುದಿಲ್ಲ. ಅದರ ಸಂರಕ್ಷಣೆಗೆ ಮೊದಲು ನಿಮಗೆ ನಿಮ್ಮ ತ್ವಚೆಯು ಸಹ ಉಸಿರಾಡುತ್ತದೆ ಮತ್ತು ಅದಕ್ಕು ಸ್ವಲ್ಪ ಆರೈಕೆ ಬೇಕೆಂಬ ಸತ್ಯ ತಿಳಿದಿರಲಿ. ಅತ್ಯುತ್ತಮವಾದ ತ್ವಚಾ ಸಂರಕ್ಷಣೆಯು ತ್ವಚೆಯನ್ನು ಸುಂದರಗೊಳಿಸುವುದರ ಜೊತೆಗೆ ಹೊಳೆಯುವಂತೆ ಮಾಡುತ್ತದೆ. ಹೊಳೆಯುವಂತಹ ತ್ವಚೆ ಇದ್ದರೆ ನಮ್ಮ ದೇಹ ಮತ್ತು ಮುಖವು ಹೇಗೆ ಕಂಗೊಳಿಸುತ್ತದೆ ಎಂದು ಬಿಡಿಸಿ ಹೇಳಬೇಕೆ? ಕೊಕೊವಾ ಬೆಣ್ಣೆಯು ತ್ವಚೆಗೆ ಅಗತ್ಯವಾದ ಸಂರಕ್ಷಣೆಯನ್ನು ಒದಗಿಸುವಲ್ಲಿ ಹಲವಾರು ವರ್ಷಗಳಿಂದ ಹೆಸರುವಾಸಿಯಾಗಿದೆ. ಇದು ಒಂದು ಅತ್ಯುತ್ತಮವಾದ ಮೊಯಿಶ್ಚರೈಸರ್ ಸಹ ಆಗಿದೆ. ಹಾಗಾಗಿ ಕೊಕೊವಾ ಬೆಣ್ಣೆಯು ಹಲವಾರು ಲೋಷನ್‍ಗಳಲ್ಲಿ ಮತ್ತು ಕ್ರೀಮ್‍ಗಳಲ್ಲಿ ಬಳಕೆಯಾಗುತ್ತದೆ. ಯಾವುದೇ ಸೂಪರ್ ಮಾರ್ಕೆಟಿಗೆ ಭೇಟಿ ನೀಡಿದರು ಸಾಕು ನಿಮಗೆ ಈ ಕೊಕೊವಾ ಬೆಣ್ಣೆಯು ಸಿಗುತ್ತದೆ.
ಕೊಕೊವಾ ಬೆಣ್ಣೆಯು ತನ್ನ ಮೊಯಿಶ್ವರೈಸಿಂಗ್ ಗುಣದಿಂದಾಗಿ ಹಲವಾರು ಸ್ಕಿನ್ ಕೇರ್ ಉತ್ಪನ್ನಗಳಲ್ಲಿ ಸ್ಥಾನ ಪಡೆದಿದೆ. ಇದು ತ್ವಚೆಯ ಆರೋಗ್ಯಕ್ಕು ಸಹ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ. ಕೊಕೊವಾ ಬೆಣ್ಣೆಯ ಹೆಸರು ಕೇಳಿದರೆ ತುಂಬಾ ಜನ ಚಾಕೊಲೆಟ್ ಎಂದು ತಪ್ಪಾಗಿ ಗ್ರಹಿಸುತ್ತಾರೆ. ಆದರೆ ಇದು ಒಂದು ಬಗೆಯ ಕಾಫಿ ಬೀಜವಾಗಿದ್ದು, ಕೊಕೊವಾ ಗಿಡದ ಕೋಡುಗಳಲ್ಲಿ ಇದು ಬೆಳೆಯುತ್ತದೆ. ಈ ಕೊಕೊವಾ ಗಿಡದ ಬೀಜಗಳಲ್ಲಿ ದೊರೆಯುವ ಕೊಬ್ಬಿನಂತಹ ಉತ್ಪನ್ನವನ್ನೆ ಕೊಕೊವಾ ಬೆಣ್ಣೆ ಎಂದು ಕರೆಯುತ್ತಾರೆ. ಇಲ್ಲಿ ನಾವು ನಿಮಗಾಗಿ ಕೊಕೊವಾ ಬೆಣ್ಣೆಯ ಕೆಲವೊಂದು ಉಪಯೋಗಗಳನ್ನು ಪಟ್ಟಿ ಮಾಡಿದ್ದೇವೆ ಓದಿ ತಿಳಿದುಕೊಳ್ಳಿ.

1. ಒಂದಕ್ಕೆ ಎರಡು ಉಪಯೋಗ
ಕೊಕೊವಾ ಬೆಣ್ಣೆಯು ಕೊಕೊವಾ ಗಿಡದಿಂದ ದೊರೆಯುತ್ತದೆ ಎಂಬುದು ನಿಮಗೆ ಗೊತ್ತು. ಈ ಗಿಡದಲ್ಲಿ ರಂಜಕ, ಕ್ಯಾಲ್ಸಿಯಂ, ಸತು, ಮ್ಯಾಂಗನೀಸ್, ಕಬ್ಬಿಣ, ತಾಮ್ರ ಮತ್ತು ಇತ್ಯಾದಿ ಅಂಶಗಳು ಯಥೇಚ್ಛವಾಗಿ ಸಿಗುತ್ತವೆ. ಇವುಗಳ ಜೊತೆಗೆ ಕೊಕೊವಾ ಬೆಣ್ಣೆಯಲ್ಲಿ ಉತ್ತಮವಾದ ಸಂಖ್ಯೆಯಲ್ಲಿ ನ್ಯೂಟ್ರೋಟ್ರಾನ್ಸ್ ಮೀಟ್ಟರ್ಸ್ ಗಳಾದ ಸೆರೊಟೋನಿನ್ ಮತ್ತು ಟ್ರೈಪ್ಟೊಫನ್‍ಗಳು ಇರುತ್ತವೆ. ಹಾಗಾದರೆ ಅದರಿಂದ ನಮಗೇನು ಲಾಭ? ಎಂದು ಕೇಳಬೇಡಿ. ಇದರಿಂದ ನಮ್ಮ ತ್ವಚೆ ಮತ್ತು ಮೆದುಳು ಎರಡಕ್ಕು ಆರೋಗ್ಯ ದೊರೆಯುತ್ತದೆ. ಹಾಗಾದರೆ ಮತ್ತೇಕೆ ತಡ.
2. ಅತ್ಯುತ್ತಮ ಗುಣ ಮಟ್ಟದ ಮೊಯಿಶ್ಚರೈಸರ್
ಕೊಕೊವಾ ಬೆಣ್ಣೆಯ ಅತ್ಯುತ್ತಮ ಗುಣವೆಂದರೆ ಅದರ ಮೊಯಿಶ್ಚರೈಸಿಂಗ್ ಸಾಮರ್ಥ್ಯ. ಈ ತ್ವಚಾ ರಕ್ಷಕ ಬೆಣ್ಣೆಯು ತನ್ನೊಳಗೆ ಉತ್ತಮವಾದ ಕೊಬ್ಬಿನ ಆಮ್ಲಗಳನ್ನು ಹೊಂದಿದೆ. ಇದರಿಂದಾಗಿಯೇ ಇದು ತ್ವಚೆಯನ್ನು ಉತ್ತಮ ರೀತಿಯಲ್ಲಿ ಮೊಯಿಶ್ಚರೈಸ್ ಮಾಡುತ್ತದೆ. ಇದರ ಜೊತೆಗೆ ಇದು ಸೋರಿಯಾಸಿಸ್ ಮತ್ತು ಕಜ್ಜಿಯನ್ನು ಸಹ ನಿವಾರಿಸುವ ಗುಣಗಳನ್ನು ತನ್ನೊಳಗೆ ಹೊಂದಿದೆ. ಇದರ ಅತ್ಯುತ್ತಮವಾದ ಸುವಾಸನೆಯ ಗುಣಗಳು ಇದನ್ನು ಆರೋಮಾ ಥೆರಪಿಯಲ್ಲು ಸಹ ಸ್ಥಾನವನ್ನು ಸಂಪಾದಿಸಿ ಕೊಟ್ಟಿವೆ.
3. ಅತ್ಯುತ್ತಮವಾದ ಅಂಟಿ ಆಕ್ಸಿಡೆಂಟ್
ಈ ತ್ವಚಾ ಸಂರಕ್ಷಕ ಬೆಣ್ಣೆಯು ಅತ್ಯುತ್ತಮವಾದ ಅಂಟಿ ಆಕ್ಸಿಡೆಂಟ್ ಆಗಿದ್ದು, ನಮ್ಮ ತ್ವಚೆಯಲ್ಲಿನ ಫ್ರೀ ರಾಡಿಕಲ್ಸ್ ಗಳನ್ನು ಹೋಗಲಾಡಿಸುತ್ತದೆ. ಈ ಫ್ರೀ ರಾಡಿಕಲ್‍ಗಳು ನಮ್ಮ ತ್ವಚೆಯನ್ನು ಹಾಳು ಮಾಡುವುದರ ಜೊತೆಗೆ, ನಮಗೆ ವಯಸ್ಸಾದಂತೆ ಕಾಣುವಂತೆ ಮಾಡುತ್ತವೆ. ಕೊಕೊವಾ ಬೆಣ್ಣೆಯು ನಮ್ಮ ತ್ವಚೆಗೆ ಶಾಶ್ವತವಾದ ಯೌವನವನ್ನು ನೀಡಲು ಸಹಕರಿಸುತ್ತದೆ.
4. ನಿಮ್ಮ ತ್ವಚೆಯ ನ್ಯೂನತೆಗಳನ್ನು ಪರಿಹರಿಸುತ್ತದೆ.
ಈ ಬೆಣ್ಣೆಯು ನಿಮ್ಮ ತ್ವಚೆಯಲ್ಲಿರುವ ಹಲವಾರು ನ್ಯೂನತೆಗಳನ್ನು ಪರಿಹರಿಸುತ್ತದೆ. ಕೊಕೊವಾ ಮಾಸ್ ಪಾಲಿಫೆನೊಲ್ ಎಂಬ ಅಂಶವು ಕೊಕೊವಾ ಬೆಣ್ಣೆಯಲ್ಲಿ ಕಂಡು ಬರುತ್ತದೆ. ಇವು ತ್ವಚೆಯಲ್ಲಿ ಕಂಡು ಬರುವ ನ್ಯೂನತೆಗಳಿಗೆ ರಾಮ ಬಾಣವಾಗಿ ಕೆಲಸ ಮಾಡುತ್ತದೆ. ಇದರ ಜೊತೆಗೆ ಕೊಕೊವಾ ಬೆಣ್ಣೆಯು ಕ್ಯಾನ್ಸರ್ ಕಾರಕ ಕೋಶಗಳನ್ನು ನಿವಾರಿಸುತ್ತದೆ. ಇದರಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಎ ಅಧಿಕ ಪ್ರಮಾಣದಲ್ಲಿರುವುದರಿಂದಾಗಿ ಇವು ತ್ವಚೆಗೆ ಉತ್ತಮ ಪೋಷಕಾಂಶವನ್ನು ಒದಗಿಸುವುದರ ಜೊತೆಗೆ ಅದರ ಲೋಪ ದೋಷಗಳನ್ನು ಸಹ ತಿದ್ದುತ್ತವೆ.
5. ತರಚಿದ ಗಾಯಗಳು, ಮೊಡವೆ ಮತ್ತು ನೆರಿಗೆಗಳಿಗೆ ಉತ್ತಮ ಪರಿಹಾರ
ಮೊಡವೆಗಳು ಭಾದಿಸುವ ತ್ವಚೆಗೆ ಕೊಕೊವಾ ಬೆಣ್ಣೆಗಿಂತ ಉತ್ತಮ ಪರಿಹಾರ ಮತ್ತೊಂದಿಲ್ಲ. ಕೊಕೊವಾ ಬೆಣ್ಣೆಯಲ್ಲಿ ಅಂಟಿ ಬ್ಯಾಕ್ಟೀರಿಯಾ ಅಂಶಗಳು ಇದ್ದು, ಇವು ಮೊಡವೆ, ತರಚಿದ ಗಾಯಗಳು ಮತ್ತು ನೆರಿಗೆಗಳನ್ನು ನಿವಾರಿಸುತ್ತದೆ. ತಮ್ಮ ಹೊಟ್ಟೆಯ ಮೇಲೆ ಕಂಡು ಬರುವ ನೆರಿಗೆಗಳನ್ನು ನಿವಾರಿಸಿಕೊಳ್ಳಲು ಗರ್ಭಿಣಿ ಹೆಂಗಸರು ಕೊಕೊವಾ ಬೆಣ್ಣೆಯನ್ನು ಈಗಲಿಂದಲೆ ಶೇಖರಿಸಿಡುವುದು ಉತ್ತಮ. ಈ ಎಲ್ಲಾ ಸಮಸ್ಯೆಗಳಿಗು ಕೊಕೊವಾ ಬೆಣ್ಣೆ ರಾಮ ಬಾಣ. ಇದು ಉತ್ತಮವಾಗಿ ಕೆಲಸ ನಿರ್ವಹಿಸಲು ಅನ್ ರಿಫೈನ್ಡ್ ಕೊಕೊವಾ ಬೆಣ್ಣೆಯನ್ನು ಬಳಸುವುದು ಉತ್ತಮ. ಆದರೆ ಅದು ಸಿಗುವುದು ದುರ್ಲಭ. ನಿಮಗೆ ದೊರಕುವ ಕೊಕೊವಾ ಬೆಣ್ಣೆಯು ರಿಫೈನ್ಡ್ ಆದಂತಹುದು, ಅದಕ್ಕೆ ಹಲವಾರು ಅಂಶಗಳನ್ನು ಬೆರೆಸಿ ಮಾರಲಾಗಿರುತ್ತದೆ. ಆದರು ಪರವಾಗಿಲ್ಲ ಒಮ್ಮೆ ಕೊಂಡು ಕೊಂಡು ನೋಡಿ ಅದರ ಚಮತ್ಕಾರವನ್ನು!!



Click it and Unblock the Notifications