Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಸೌಂದರ್ಯ ಹಾಳು ಮಾಡುವ ಅಭ್ಯಾಸಗಳು
ಆರೋಗ್ಯವಂತಿಕೆಯ ಮುಖ್ಯ ಲಕ್ಷಣವೇ ಕಾಂತಿಯುಕ್ತವಾದ ಚರ್ಮ. ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಒಳ್ಳೆಯ ಅಭ್ಯಾಸಗಳಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಮ್ಮ ದಿನನಿತ್ಯದ ಕೆಲವು ಅಭ್ಯಾಸಗಳಿಂದಾಗಿ ನಮ್ಮ ಚರ್ಮದ ಆರೋಗ್ಯವನ್ನು ನಾವೇ ಹಾಳುಮಾಡಿಕೊಳ್ಳುತ್ತೇವೆ. ಇದರ ಬಗ್ಗೆ ನಮಗೆ ಅರಿವಿದ್ದರೆ ನಮ್ಮ ಚರ್ಮವನ್ನು ಕಾಪಾಡಿಕೊಳ್ಳಬಹುದು. ಇಲ್ಲಿವೆ ನಮ್ಮ ಚರ್ಮವನ್ನು ಕಾಪಾಡಿಕೊಳ್ಳಲು ನಾವು ಬಿಡಬೇಕಾದ ಕೆಲವು ಕೆಟ್ಟ ಅಭ್ಯಾಸಗಳು.
ಸರಿಯಾಗಿ ಶುಚಿಮಾಡದ ಮೇಕಪ್ ಕಿಟ್ ಅಥವ ಮೇಕಪ್ ನಂತರ ಸರಿಯಾಗಿ ಮುಖ ಶುಚಿಗೊಳಿಸದಿದ್ದರೆ ಚರ್ಮ ಹಾಳಾಗುತ್ತದೆ. ಈ ರೀತಿಯಲ್ಲಿ ಚರ್ಮವನ್ನು ಹಾಳುಮಾಡುವ ಅಭ್ಯಾಸಗಳನ್ನು ಬಿಡಬೇಕು. ದಿನದ ಶ್ರಮದಾಯದ ಕೆಲಸದ ನಂತರ ನಾವು ಅದೆಷ್ಟೋ ಬಾರಿ ರಾತ್ರಿ ಮಲಗುವ ಮುನ್ನ ಮುಖ ತೊಳೆಯುವುದನ್ನು ತಪ್ಪಿಸುತ್ತೇವೆ ಅಲ್ಲವೇ? ಅಥವ ಎಷ್ಟೋ ಬಾರಿ ಅಲಂಕಾರ ಸಾಧನಗಳ ಎಕ್ಸಪೈರಿ ದಿನಾಂಕ ನೋಡದೆ ತೆಗೆದುಕೊಂಡು ಬಳಸಿಬಿಡುತ್ತೇವೆ ಅಲ್ಲವೇ? ಕಾಂತಿಯುಳ್ಳ ಯೌವನದ ಕಳೆ ಹೊಮ್ಮಿಸುವ ಚರ್ಮ ಆರೋಗ್ಯದ ಮೊದಲ ಲಕ್ಷಣ. ಆದರೆ ಹೆಂಗಸರಲ್ಲಿ ಇರುವ ಕೆಲವು ಕೆಟ್ಟ ಅಭ್ಯಾಸಗಳು ಅವರ ಚರ್ಮದ ಆರೋಗ್ಯವನ್ನು ಹಾಳುಗೆಡವುತ್ತವೆ.

ಬಿಸಿ ನೀರಿನ ಸ್ನಾನ
ಪ್ರತಿಯೊಬ್ಬರಿಗೂ ಬಿಸಿ ನೀರಿನ ಸ್ನಾನ ಇಷ್ಟವಾಗುತ್ತದೆ. ಅದು ಆರಾಮದಾಯಕ ಅನುಭವ ನೀಡುವುದರೊಂದಿಗೆ ಮುಖದ ಚರ್ಮವನ್ನು ಹಾಳುಮಾಡುತ್ತದೆ. ಮುಖದ ಚರ್ಮವು ತುಂಬಾ ಸೂಕ್ಷ್ಮವಾದದ್ದು. ಹೆಚ್ಚು ಬಿಸಿಯಾದ ನೀರನ್ನು ಬಳಸುವುದರಿಂದ ಚರ್ಮದಲ್ಲಿನ ಸೂಕ್ಷ್ಮ ಗ್ರಂಥಿಗಳು ದುರ್ಬಲಗೊಳ್ಳುತ್ತದೆ. ಇದರಿಂದ ಚರ್ಮವು ಕೆಂಪಾಗಬಹುದು ಮತ್ತು ಒಣ ಚರ್ಮವಾಗಿಬಿಡಬಹುದು. ಆದ್ದರಿಂದ ಮುಂದಿನ ಸಾರಿ ಬಿಸಿ ಬಿಸಿ ನೀರಿನ ಟಬ್ನಲ್ಲಿ ಇಳಿಯುವ ಮುನ್ನ ನಿಮ್ಮ ಮುಖದ ಚರ್ಮದ ಕಡೆ ಕಾಳಜಿ ಇರಲಿ.

ಶುಚಿಗೊಳಿಸದ ಮೇಕಪ್ ಬ್ರಶ್ ಇತ್ಯಾದಿ ಬಳಕೆ
ನೀವು ಬಳಸುವ ಮೇಕಪ್ ಬ್ರಶ್ ಇತ್ಯಾದಿಗಳನ್ನು ಶುಚಿಗೊಳಿಸದೆ ಬಳಸಿದರೆ ಮೊಡವೆಗಳುಂಟಾಗಿ ಬ್ಯಾಕ್ಟೀರಿಯಾಗಳಿಂದ ಸೋಂಕು ಉಂಟಾಗಬಹುದು. ಆದ್ದರಿಂದ ನೀವು ಬಳಸುವ ಬ್ರಶ್ಗಳನ್ನು ವಾರಕ್ಕೊಮ್ಮೆ ಶಾಂಪೂ ನೀರಿನಲ್ಲಿ ತೊಳೆದು ಚೆನ್ನಾಗಿ ಒಣಗಿಸುವುದ ಉತ್ತಮ.

ಸಾಕಷ್ಟು ನಿದ್ದೆ ಮಾಡದಿರುವುದು ಅಥವ ನಿದ್ರಾಹೀನತೆ
ಚರ್ಮಶಾಸ್ತ್ರಜ್ಞರ ಪ್ರಕಾರ ನಿದ್ರಾಹೀನತೆ ಅಥವ ಕಡಿಮೆ ನಿದ್ದೆ ಮಾಡುವುದು ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟುಮಾಡುತ್ತದೆ. ಇದು ಚರ್ಮದಲ್ಲಿ ಮೊಡವೆಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದಿನದಲ್ಲಿ ಉಂಟಾದ ಚರ್ಮಕೋಶಗಳ ಹಾನಿಯನ್ನು ರಾತ್ರಿಯ 8 ಗಂಟೆಯ ನಿದ್ದೆ ಸರಿಮಾಡುತ್ತದೆ. ಚರ್ಮ ಈ ವಿಶ್ರಾಂತಿಯ ಅವಧಿಯಲ್ಲಿ ಮತ್ತೆ ತನ್ನನ್ನು ಸರಿಮಾಡಿಕೊಳ್ಳುತ್ತದೆ.

ಮೊಡವೆಗಳನ್ನು ಕೀಳುವುದು
ಮೊಡವೆಯ ಚೂಪಾದ ತುದಿ ಹಿಡಿದು ಕೀಳಲು ಪ್ರಚೋದನಕಾರಿಯಾಗಿರುತ್ತದೆ ಆದರೆ ಹೀಗೆ ಕೀಳುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಇದರಿಂದ ಮೊಡವೆಗಳು ಚರ್ಮದೊಳಗೆ ಇನ್ನಷ್ಟು ಆಳಕ್ಕೆ ಇಳಿಯುತ್ತದೆ. ಪ್ರತಿಬಾರಿ ಹೀಗೆ ಮಾಡಿದಾಗಲೂ ಬ್ಯಾಕ್ಟೀರಿಯಾಗಳು ಇನ್ನಷ್ಟು ಆಳಕ್ಕೆ ಇಳಿದು ಸೋಂಕು ಹೆಚ್ಚಾಗುತ್ತದೆ. ಕೊಳೆ ಮತ್ತು ಎಣ್ಣೆ ಮೊಡವೆಗಳಿಗೆ ಮೂಲ ಕಾರಣ. ಆದ್ದರಿಂದ ಮುಖವನ್ನು ದಿನಕ್ಕೆ ಎರಡು ಬಾರಿ ಫೇಸ್ವಾಶ್ ಬಳಸಿ ತೊಳೆಯುವುದು ಉತ್ತಮ ಅಭ್ಯಾಸ.

ಹೆಚ್ಚುಕಾಲ ಫೋನಿನಲ್ಲಿ ಮಾತಾಡುವ ಅಭ್ಯಾಸ
ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಆದರೆ ನಿಮ್ಮ ಫೋನ್ ನಿಮ್ಮ ಚರ್ಮವನ್ನು ಹಾಳುಮಾಡುತ್ತದೆ ಎನ್ನುವುದು ಸತ್ಯ. ಸಂಶೋಧನೆಗಳ ಪ್ರಕಾರ ಕೆನ್ನೆಗೆ ಒತ್ತಿ ಹಿಡಿದ ನಿಮ್ಮ ಫೋನುಗಳು ಮೊಡವೆಗಳಿಗೆ ಕಾರಣವಾಗುತ್ತದೆ. ನಿಮ್ಮ ಫೋನ್ ಶುಚಿಯಾಗಿದೆಯೋ ಇಲ್ಲವೋ ಬ್ಯಾಕ್ಟಿರೀಯಾ ಮುಕ್ತವೋ ಅಲ್ಲವೋ ಅದು ಉಂಟುಮಾಡುವ ಬಿಸಿ ಮತ್ತು ಕರ್ಷಣೆಯಿಂದ ಮೊಡವೆಗಳುಂಟಾಗುತ್ತವೆ.

ಧೂಮಪಾನ
ಇದು ಚರ್ಮದ ಆರೋಗ್ಯದ ಮುಖ್ಯ ಶತ್ರುಗಳಲ್ಲಿ ಒಂದು. ಧೂಮಪಾನವು ಚರ್ಮಕ್ಕೆ ರಕ್ತ ಪರಿಚಲನೆಯನ್ನು ಕಡಿಮೆಮಾಡುವುದಲ್ಲದೆ ಚರ್ಮ ಮತ್ತು ರಕ್ತಕ್ಕೆ ವಿಷವನ್ನು ಬೆರೆಸುತ್ತದೆ. ಇದಲ್ಲದೆ ಧೂಮಪಾನದಿಂದ ಚರ್ಮ ಕಳೆಗುಂದುತ್ತದೆ ಮತ್ತು ಸುಕ್ಕುಗಟ್ಟುತ್ತದೆ. ಸಂಶೋಧನೆಗಳು ಪ್ರತಿ ಹತ್ತು ವರ್ಷದ ಧೂಮಪಾನದ ಅಭ್ಯಾಸದಿಂದ ಹೇಗೆ ಚರ್ಮಕ್ಕೆ 2.5 ವರ್ಷ ಹೆಚ್ಚು ವಯಸ್ಸಾಗುತ್ತದೆ ಎಂದು ತೋರಿಸಿವೆ.

ಮದ್ಯಪಾನ
ಇದು ಅತ್ಯಂತ ಅಪಾಯಕಾರಿ ಅಭ್ಯಾಸ. ಸಂಶೋಧನೆಗಳ ಪ್ರಕಾರ ಹೆಂಗಸರಲ್ಲಿ ಮದ್ಯಪಾನದಿಂದ ಶೇ.6ರಷ್ಟು ಸ್ತನಕ್ಯಾನ್ಸರ್ನ ಸಾಧ್ಯತೆಗಳು ಹೆಚ್ಚುತ್ತದೆ. ಸರಿಸುಮಾರು ಪ್ರತಿದಿನ ಮತ್ತು ಒಟ್ಟಾರೆ ಪ್ರತಿವರ್ಷ 5,000 ಕ್ಯಾನ್ಸರ್ನಿಂದಾಗುವ ಸಾವುಗಳಿಗೆ ಕಾರಣ ಮದ್ಯಪಾನ. ಮದ್ಯಪಾನವು ಚರ್ಮದ ಮೇಲೆ ಹಲವು ದುಷ್ಪರಿಣಾಗಳನ್ನು ಉಂಟು ಮಾಡುತ್ತದೆ. ಚರ್ಮವು ಕಳೆಗುಂದುವುದರೊಂದಿಗೆ ಚರ್ಮದಲ್ಲಿನ ತೇವಾಂಶವನ್ನು ಹೀರಿಬಿಡುತ್ತದೆ. ಚರ್ಮದಲ್ಲಿ ನೈಸರ್ಗಿಕವಾಗಿರುವ ಎಣ್ಣೆಯ ಅಂಶವನ್ನು ಹೀರಿಕೊಂಡು ಚರ್ಮವನ್ನು ಒಣಗಿಸಿಬಿಡುತ್ತದೆ. ಚರ್ಮದಲ್ಲಿನ ರಕ್ತನಾಳಗಳು ಇದರಿಂದ ಒಡೆದುಹೋಗಿ ಶಾಶ್ವತವಾಗಿ ನಾಶಹೊಂದುತ್ತದೆ.



Click it and Unblock the Notifications