Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ
ಮುಖದ ಅಂದ ಹೆಚ್ಚಿಸುವ 6 ಪ್ರಮುಖ ಹಣ್ಣುಗಳು
ಮನೆಯಲ್ಲಿಯೇ ನಿಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಮಾರ್ಗಗಳಿರುವಾಗ ಬ್ಯೂಟಿ ಪಾರ್ಲರ್ ಗಳಿಗೆ ಹೋಗಿ ಪರ್ಸು ಖಾಲಿ ಮಾಡಿಕೊಂಡು ಬರುವುದೇಕೆ? ಫೇಶಿಯಲ್ ಮಾಡುವ ಮಸಾಜ್ ವಿಧಾನ ಗೊತ್ತಿದ್ದರೆ ಸಾಕು, ಮಿತ ಖರ್ಚಿನಲ್ಲಿ ನಿಮ್ಮ ಮುಖದ ಹೊಳಪನ್ನು ಹೆಚ್ಚಿಸಬಹುದು.
ಇಲ್ಲಿ ನಾವು ಮನೆಯಲ್ಲಿಯೇ ಫೇಶಿಯಲ್ ಮಾಡಲು ಸೂಕ್ತವಾದ ಕೆಲ ಹಣ್ಣುಗಳ ಬಗ್ಗೆ ಹೇಳಿದ್ದೇವೆ. ಇವುಗಳನ್ನು ಮುಖಕ್ಕೆ ಹಚ್ಚಿದರೆ ಬ್ಯೂಟಿ ಪಾರ್ಲರ್ ನಲ್ಲಿ ಹೋಗಿ ಫೇಶಿಯಲ್ ಮಾಡಿಸಿದಷ್ಟೇ ಫಲಿತಾಂಶ ನೀವೇ ಮಾಡಿದ ನ ಫೇಶಿಯಲ್ ನಿಂದ ದೊರೆಯುವುದು.

* ನಿಂಬೆ ಹಣ್ಣು
ಸೌಂದರ್ಯವನ್ನು ವೃದ್ಧಿಸಲು ಬಳಸಬಹುದಾದ ಸರಳವಾದ ಮತ್ತು ಪರಿಣಾಮಕಾರಿಯಾದ ವಸ್ತುವೆಂದರೆ ನಿಂಬೆ ಹಣ್ಣು. ಇದನ್ನು ಬಳಸಿ ನಾನಾ ಸೌಂದರ್ಯವರ್ಧಕ ಗುಣಗಳನ್ನು ಪಡೆಯಬಹುದು. ಇದು ಮುಖದಲ್ಲಿ ದೊಡ್ಡ-ದೊಡ್ಡ ರಂಧ್ರಗಳಿದ್ದರೆ ನಿಂಬೆ ರಸ ಮುಖಕ್ಕೆ ಹಚ್ಚಿದರೆ ತ್ವಚೆ ಬಿಗಿಯಾಗುವುದರಿಂದ ರಂಧ್ರಗಳು ಎದ್ದು ಕಾಣುವುದಿಲ್ಲ, ಮುಖದಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ, ಮುಖದ ಬಿಳುಪನ್ನು ಹೆಚ್ಚಿಸುತ್ತದೆ.

* ಮೊಟ್ಟೆ
ಮೊಟ್ಟೆಯ ಬಿಳಿಯಿಂದ ಫೇಸ್ ಮಾಸ್ಕ್ ಮಾಡಿದರೆ ಮುಖ ನುಣಪಾಗಿ, ಆಕರ್ಷಕವಾಗಿ ಕಾಣುವುದು. ಈ ಫೇಸ್ ಮಾಸ್ಕ್ ಅನ್ನು ವಾರದಲ್ಲಿ ಒಂದು ಬಾರಿ ಮಾಡಿದರೂ ಸಾಕು.

* ಜೇನು
ಜೇನನ್ನು ಪ್ರತೀದಿನ ಮುಖಕ್ಕೆ ಹಚ್ಚಬಹುದು. ಇದು ಮುಖದ ಹೊಳಪನ್ನು ಹೆಚ್ಚಿಸುತ್ತದೆ, ತ್ವಚೆಯೂ ತುಂಬಾ ಮೃದುವಾಗುವುದು.

* ಸ್ಟ್ರಾಬೆರಿ
ಸ್ಟ್ರಾಬೆರಿ ಸೀಸನ್ ಸಮಯದಲ್ಲಿ ಇದರಿಂದ ಫೇಶಿಯಲ್ ಮಾಡಲು ಮರೆಯದಿರಿ. ಸ್ಟ್ರಾಬೆರಿಯನ್ನು ಮೊಸರಿನ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ತುಂಬಾ ಪರಿಣಾಮಕಾರಿ.

* ಬಾಳೆಹಣ್ಣು
ಬಾಳೆಹಣ್ಣನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆದರೆ ಮುಖದ ಹೊಳಪು ಹೆಚ್ಚುವುದು.

* ಪಪ್ಪಾಯಿ
ಪಪ್ಪಾಯಿ ಎಲ್ಲಾ ಕಾಲದಲ್ಲೂ ದೊರೆಯುವುದು, ದಿನಾ ಹಣ್ಣಾದ ಪಪ್ಪಾಯಿಯನ್ನು ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ನಿಮ್ಮ ಮುಖದ ಸೌಂದರ್ಯ ಒಂದೇ ತಿಂಗಳಿನಲ್ಲಿ ಹೆಚ್ಚುವುದು.



Click it and Unblock the Notifications
