Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ಇವುಗಳನ್ನು ತಿಂದರೆ ತ್ವಚೆ ಕಾಂತಿ ಹೆಚ್ಚುವುದು
ಆರೋಗ್ಯಯುತ ಮತ್ತು ಅಂದವಾಗಿ ಕಾಣುವ ತ್ವಚೆಯನ್ನು ಹೊಂದಿರಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ವಯಸ್ಸು ಮತ್ತು ಲಿಂಗಭೇಧವಿಲ್ಲದೇ, ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಅಂತಹ ಸುಂದರ ತ್ವಚೆಗಾಗಿ ಹಪಹಪಿಸುತ್ತಾರೆ. ಆದರೆ ದುರದೃಷ್ಟವಶಾತ್ ಹೆಚ್ಚಿನವರು ಮೊಡವೆ, ವಯೋಸಂಬಂಧೀ ಕಲೆಗಳು, ಮತ್ತು ಒಣ ತ್ವಚೆಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಆದರೆ ಒಂದಂತೂ ನಿಜ. ನಮ್ಮ ಎಲ್ಲಾ ಸಮಸ್ಯೆ, ತೊಂದರೆಗಳಿಗೂ ಸಹ ನಮ್ಮ ಅಸ್ತಿತ್ವಕ್ಕೆ ಕಾರಣವಾಗಿರುವ ಪ್ರಕೃತಿಯಲ್ಲಿ ಖಂಡಿತವಾಗಿಯೂ ಪರಿಹಾರವಂತೂ ಇದ್ದೇ ಇದೆ.
ಮಾಯಿಶ್ಚರೈಸರ್ ಮತ್ತು ತ್ವಚೆಯ ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು ಈ ನಿಟ್ಟಿನಲ್ಲಿ ಸಹಾಯಕವಾಗಬಹುದಾದರೂ ಕೂಡ, ತ್ವಚೆಗೆ ನೀವು ಏನನ್ನು ಲೇಪಿಸುತ್ತೀರಿ ಎಂಬುದಕ್ಕಿಂತಲೂ ಮುಖ್ಯವಾಗಿ, ನೀವು ಯಾವ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದೀರಿ ಎಂಬುದು ಅದಕ್ಕಿಂತಲೂ ಮುಖ್ಯವಾಗುತ್ತದೆ. ಕಾಳುಗಳಲ್ಲಿರುವ ಕೊಬ್ಬಿನಾಮ್ಲಗಳು ಜೀವಕೋಶಗಳ ಪೊರೆಯನ್ನು ಕಾಪಿಟ್ಟುಕೊಳ್ಳಲು ಸಹಾಯಕ ಮತ್ತು ಈ ಕಾಳುಗಳು ದೇಹದಲ್ಲಿರುವ ಹಾನಿಕಾರಕ ಕಲ್ಮಶಗಳನ್ನು ನಿವಾರಿಸಿಬಿಡುತ್ತವೆ.

ಸಂಸ್ಕರಿಸಲ್ಪಡದ ಧಾನ್ಯಗಳು (whole grains)
ಇವು ನಿಮ್ಮ ದೇಹದ ತೂಕವನ್ನು ಸಮತೋಲನದಲ್ಲಿಡಲು ನೆರವಾಗುವುದು ಮಾತ್ರವಲ್ಲದೇ, ಬಾರ್ಲಿ, ಗೋಧಿ, ಮುಸುಕಿನ ಜೋಳ, ಮತ್ತು ಜೋಳದಂತಹ ದವಸ ಧಾನ್ಯಗಳು ನಿಮ್ಮ ತ್ವಚೆಗೆ ಕಾಂತಿಯನ್ನೊದಗಿಸುವ ಜವಾಬ್ದಾರಿಯನ್ನೂ ಸಹ ನಿಭಾಯಿಸುತ್ತವೆ. ದವಸ ಧಾನ್ಯಗಳು ಕ್ರಿಯಾಶೀಲ ಘಟಕಗಳಾದ rutin ಮತ್ತು vitamin B ಗಳನ್ನು ಹೊಂದಿದ್ದು, ಇವು ನಿಮಗೆ ಸ್ವಚ್ಚ ಮತ್ತು ತೇವಯುಕ್ತ ತ್ವಚೆಯನ್ನು ನೀಡುತ್ತವೆ.

ಅಗಸೆಬೀಜಗಳು (flaxseed)
ನೀವು ಓರ್ವ ಸಸ್ಯಹಾರಿಯಾಗಿದ್ದರೆ, ಅಗಸೆಬೇಜಗಳು ಒಮೇಗಾ 3 - ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲಗಳಾಗಿವೆ. ಇವು ನಿಮ್ಮ ಶರೀರವನ್ನು ಜಲಪೂರಣಗೊಳಿಸಿ (hydrate), ತ್ವಚೆಯಲ್ಲಿನ ತೈಲಾಂಶವನ್ನು ಹದಗೊಳಿಸಿ, ತ್ವಚೆಯ ಸೂಕ್ಷ್ಮ ರಂಧ್ರಗಳನ್ನು ತೆರಪುಗೊಳಿಸಿ, ಮೊಡವೆಗಳ ವಿರುದ್ಧ ಹೋರಾಡುತ್ತವೆ. ನಿಮ್ಮ ತ್ವಚೆಯು ಸಹಜವಾಗಿ ಕಂಗೊಳಿಸಲು, ಪ್ರತಿದಿನ ಮುಂಜಾನೆ ಒಂದು ಟೀಚಮಚದಷ್ಟು ಅಗಸೆ ಎಣ್ಣೆಯನ್ನು ಸೇವಿಸಿರಿ. ಇದು ನವಿರಾದ, ಸೂಕ್ಷ್ಮ ಸ್ವರೂಪದ ತ್ವಚೆಯ ಆರೈಕೆಗೂ ಬಲು ಉಪಯುಕ್ತ.

ಬೆಣ್ಣೆಹಣ್ಣು
ಇದು ನಿಜಕ್ಕೂ ಒಂದು ಚಮತ್ಕಾರಿಕ ಫಲವಸ್ತುವಾಗಿದೆ. ಹಣ್ಣಿನ ತಿರುಳು ಮಾತ್ರವಲ್ಲದೇ, ಇದರ ಸಿಪ್ಪೆಯೂ ಸಹ ಅತಿ ಹೆಚ್ಚು ಪ್ರಮಾಣದ ವಿಟಮಿನ್ B ನಿಂದ ಸಮೃದ್ಧವಾಗಿದೆ. ಮಾತ್ರವಲ್ಲದೇ, ಇದು niacin (b-3) ನಿಂದಲೂ ಸಮೃದ್ಧವಾಗಿದ್ದು, ಇದು ನಿಮಗೆ ನಯವಾದ, ಆರೋಗ್ಯಯುತ ತ್ವಚೆಯನ್ನು ನೀಡುವುದರ ಜೊತೆಗೆ, ತ್ವಚೆಯು ಕಂದಿದಂತೆ ಅಥವಾ ಊದಿಕೊಂಡಂತೆ ಕಾಣುವುದನ್ನು ತಪ್ಪಿಸುತ್ತದೆ. ಬೆಣ್ಣೆಹಣ್ಣುಗಳನ್ನು ನಿಮಗೆ ಇಷ್ಟವಾಗುವ ರೀತಿಯಲ್ಲಿ ಸೇವಿಸಬಹುದು; ಇವನ್ನು ಚೆನ್ನಾಗಿ ಕತ್ತರಿಸಿ ಸಲಾಡ್ ನಲ್ಲಿ ಸೇರಿಸಿ ತಿನ್ನಬಹುದು, ಯಾವುದಾದರೂ ನಯವಾದ ತಿನಿಸಿನೊಂದಿಗೆ ಬೆರೆಸಿಯೋ ಅಥವಾ ಸುಮ್ಮನೆ ಅವುಗಳನ್ನು ಹಾಗೆಯೇ ಹಸಿಯಾಗಿಯೂ ಸಹ ಸೇವಿಸಬಹುದು.

ಆಲೂಗೆಡ್ಡೆಗಳು
ಈ ಚಿರಪರಿಚಿತ ಆಲೂಗೆಡ್ಡೆಯು, ನಿಮ್ಮ ಶರೀರವು elastin ಅನ್ನು ಉಂಟುಮಾಡಲು ಬೇಕಾದ ಪೊಟ್ಯಾಷಿಯಂ ,ವಿಟಮಿನ್ C, ಸತು, ಮತ್ತು ತಾಮ್ರವನ್ನು ದಂಡಿಯಾಗಿ ಹೊಂದಿದೆ. Elastin ನಿಮ್ಮ ತ್ವಚೆಯು ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಳ್ಳದಂತೆ ಎಚ್ಚರವಹಿಸುತ್ತದೆ ಮತ್ತು ತ್ವಚೆಯು ತಾಜಾ ಹಾಗೂ ತಾರುಣ್ಯಭರಿತವಾಗಿ ಕಾಣುವಂತೆ ಮಾಡುತ್ತದೆ.

ಬೆರ್ರಿಗಳು (Berries)
ಆರೋಗ್ಯಯುತ ತ್ವಚೆಗೆ ಅಗತ್ಯವಾಗಿ ಬೇಕೇ ಬೇಕಾಗಿರುವ ವಿಟಮಿನ್ C ಅನ್ನು ದಂಡಿಯಾಗಿ ಹೊಂದಿರುವ ಸ್ಟ್ರಾಬೆರಿ, ಬ್ಲುಬೇರಿ, raspberry, ಅಥವಾ blackberry ಗಳ ಪೈಕಿ ಯಾವುದಾದರೊಂದನ್ನು ಆರಿಸಿಕೊಳ್ಳಿ. Antioxidant ಗಳಿಂದ ಸಂಪನ್ನವಾಗಿರುವ ಬೆರಿಗಳ ಸೇವನೆಯು ನಿಮ್ಮ ತ್ವಚೆಯು ಉರಿಯೂತದಿoದ ರಕ್ಷಿಸಲ್ಪಟ್ಟು, ತಾರುಣ್ಯದಿoದ ಕೂಡಿರುವಂತೆ ಕಾಳಜಿವಹಿಸುತ್ತದೆ ಹಾಗೂ ನೀವು ಮೊಡವೆಗಳಿಗೆ ವಿದಾಯ (good bye) ಹೇಳುವoತೆ ಮಾಡುತ್ತದೆ.

yogurt (ಮೊಸರು)
yogurt ಹೆಚ್ಚಿನ ಭಾರತೀಯ ಮನೆಗಳಲ್ಲಿ ಆಹಾರದ ಒಂದು ಪ್ರಮುಖ ಸ್ಥಾಯಿ ಘಟಕವಾಗಿರುವುದರಿoದ, ನಿಮ್ಮ ಅರಿವಿಗೆ ಬಾರದಂತೆಯೇ, ಈ ಅದ್ಭುತ ತಿನಿಸು, ನೀವು ಸುಂದರವಾಗಿ ಕಾಣುವoತಾಗಲು ರಹಸ್ಯವಾಗಿ ಕಾರ್ಯನಿರ್ವಹಿಸುತ್ತದೆ. ನಾರು ಮತ್ತು ಪ್ರೋಟೀನ್ ನಿಂದ ಸಮೃದ್ಧವಾಗಿರುವ yogurt, ತ್ವಚೆಯನ್ನು ಹೆಚ್ಚು ಶಕ್ತಿಯುತ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೊಂದಿರುವಂತೆ ಮಾಡುತ್ತದೆ. Yogurt ನ ಸಂಪೂರ್ಣ ಲಾಭವನ್ನು ಪಡೆಯಬೇಕಾದರೆ, ಗ್ರೀಕ್ Yogurt ನ್ನು ಪ್ರಯತ್ನಿಸಿ. ಕಾರಣ, ಇತರೆ ಸಾಧಾರಣ Yogurt ಗಳಿಗಿಂತ ಗ್ರೀಕ್ Yogurt ಎರಡು ಪಟ್ಟಿಗಿಂತಲೂ ಅಧಿಕ ಪ್ರಮಾಣದ ಪ್ರೋಟೀನ್ ಮತ್ತು ನಾರಿನಂಶವನ್ನು ಹೊಂದಿದೆ.

ಮಾವಿನ ಹಣ್ಣು
ಮುಂದಿನ ಬಾರಿಯ ಬೇಸಿಗೆಯಲ್ಲಿ ನೀವು ಸೇವಿಸುವ ಮಾವಿನ ಹಣ್ಣು, ನಿಮ್ಮ ತ್ವಚೆಯ ಮೇಲೆ ಮಂತ್ರದಂಡದಂತೆ ಕಾರ್ಯನಿರ್ವಹಿಸುತ್ತದೆ. ಮಾವಿನ ಹಣ್ಣಿನಲ್ಲಿ 80% ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ವಿಟಮಿನ್ A ಯನ್ನು ಹೊಂದಿದ್ದು, ಇದು ನೀವು ದಿನವೊಂದರಲ್ಲಿ ಸೇವಿಸಬೇಕಾಗುವ ವಿಟಮಿನ್ A ಯ ಪ್ರಮಾಣವಾಗಿದೆ. ಇದು ನಿಮ್ಮ ತ್ವಚೆಯ ಮತ್ತು ಅದರ ಒಟ್ಟಾರೆ ಅಂದವನ್ನು ಕಾಪಿಡಲು ಸಹಕರಿಸುತ್ತದೆ. ಮಾವಿನ ಹಣ್ಣು antioxidant ಗಳಿಂದಲೂ ಸಮೃದ್ಧವಾಗಿದ್ದು, ಇವು ಮುಕ್ತ radical (free radical) ಗಳೊಡನೆ ಹೊರಡುತ್ತವೆ ಅರ್ಥಾತ್ ನಿಮ್ಮ ತ್ವಚೆಯು ಬಹು ಕಾಲದವರೆಗೆ ತಾರುಣ್ಯದಿoದ ಕಾಣುವಂತೆ ಮಾಡುತ್ತವೆ. ಜನಪ್ರಿಯ ನಂಬಿಕೆಗೆ ತದ್ವಿರುದ್ಧವಾಗಿ, ಮಾವು ಕಡಿಮೆ ಕ್ಯಾಲರಿಗಳನ್ನು ಹೊಂದಿರುವುದರಿಂದ, ಇದು ನಿಮ್ಮ ತ್ವಚೆಯ ಆರೋಗ್ಯಕ್ಕೆ ಸಹಾಯಕವಾಗುವುದಲ್ಲದೇ, ನಿಮ್ಮ ಸೊಂಟದ ಸುತ್ತಳತೆಯ ಮೇಲೂ ನಿಗಾವಹಿಸುತ್ತದೆ.

ದೊಣ್ಣೆಮೆಣಸು
ಪಾದ ಉರಿಯ ಕಾರಣದಿಂದ ನೀವು ನಿದ್ದೆಯಿಲ್ಲದ ರಾತ್ರಿಗಳಿಂದ ಬಳಲುತ್ತಿರುವಿರಾ ? ಹಾಗಿದ್ದಲ್ಲಿ, ಇಗೋ ನಿಮ್ಮ ಆಹಾರಕ್ಕೆ ದೊಣ್ಣೇಮೆಣಸನ್ನು ಸೇರಿಸಿರಿ. ಈ ದೊಣ್ಣೇಮೆಣಸು ನಿಮ್ಮ ಯಾವುದೇ ಸಲಾಡ್ ನ ಸ್ವಾದವನ್ನು ಹೆಚ್ಚಿಸುವುದಷ್ಟೇ ಅಲ್ಲ; ಹಸಿರು, ಹಳದಿ, ಕಿತ್ತಳೆ, ಮತ್ತು ಕೆಂಪು ಬಣ್ಣದ ಈ ದೊಣ್ಣೆಮೆಣಸುಗಳು ನಿಮ್ಮ ಸಲಾಡ್ ನ ನೋಟವನ್ನೂ ಕೂಡ ಹೆಚ್ಚಿಸುತ್ತದೆ. ದೊಣ್ಣೆಮೆಣಸುಗಳನ್ನು ನಿಯಮಿತವಾಗಿ ಸೇವಿಸುವುದರಿಂದ, ಇವುಗಳಲ್ಲಿರುವ carotenoids ಎಂದು ಕರೆಯಲ್ಪಡುವ antioxidant ಗಳು ತ್ವಚೆಯು ಸುಕ್ಕಾಗುವುದನ್ನು ತಡೆಯುತ್ತವೆ.

ಲಸ್ಸಿ (Cottage Cheese)
Cottage Cheese ಅಥವಾ ಪನೀರ್ ಇದು selenium, ವಿಟಮಿನ್ E, ಮತ್ತು antioxidant ಗಳಿಂದ ಪೂರಣಗೊoಡಿದ್ದು, ಇವು ಮುಕ್ತ ಫ್ರೀ ರಾಡಿಕಲ್ ಗಳ ಜೊತೆ ಹೋರಾಡಲು ನೆರವಾಗುತ್ತವೆ ಮತ್ತು ತತ್ಪರಿಣಾಮವಾಗಿ ನೀವು ಕಾಂತಿಯುತ ತ್ವಚೆಯನ್ನು ಹೊಂದಲು ಕಾರಣವಾಗುತ್ತದೆ. ನಿಯಮಿತವಾದ ಚೀಸ್ ನ ಸೇವನೆಯು ಕೆಲಬಗೆಯ ಕ್ಯಾನ್ಸರ್ ಗಳನ್ನು ದೂರವಿರಿಸಲೂ ಕೂಡ ಸಹಕಾರಿ ಎಂದು ಕೆಲವು ವರದಿಗಳು ತಿಳಿಸಿವೆ.



Click it and Unblock the Notifications











