Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬೇಸಿಗೆಯ ಕಾವು ಹೆಚ್ಚಿರುವಾಗ ತ್ವಚೆ ರಕ್ಷಣೆಗೆ ಟಿಪ್ಸ್
ಓವನ್ ನಲ್ಲಿ ಆಹಾರ ಬೇಯುವುದನ್ನು ನೋಡಿರುತ್ತೀರಿ. ಬೇಸಿಗೆಯ ಬಿಸಿಲಿನ ಝಳವೂ ಕೂಡ ನಿಮ್ಮ ಚರ್ಮವನ್ನು ಅದೇ ರೀತಿ ಬೇಯಿಸುತ್ತದೆ. ನಿಮ್ಮ ಚಿರ್ಮವನ್ನು ಬೇಸಿಗೆಯಲ್ಲಿ ಕಾಯ್ದುಕೊಳ್ಳಲು ಹೆಚ್ಚಿನ ಪರಿಶ್ರಮ ಅತ್ಯಗತ್ಯ. ಚರ್ಮ ಸ್ವಚ್ಚಗೊಳಿಸುವ ನಿತ್ಯದ ಕೆಲಸಗಳಲ್ಲೊಂದು ಕ್ಲೀನ್ಸಿಂಗ್ ಅಥವಾ ಸ್ವಚ್ಚಗೊಳಿಸುವಿಕೆ. ಇಡೀ ದಿನ ನಮ್ಮ ಚರ್ಮ ಹೊರಗಿನ ಕಲ್ಮಶಗಳಿಗೆ, ಧೂಳು, ಬೆವರುಗಳಿಗೆ ತುತ್ತಾಗುತ್ತದೆ. ಹೀಗಾಗಿ ಸರಿಯಾದ ರೀತಿಯಲ್ಲಿ ಚರ್ಮವನ್ನು ಸ್ವಚ್ಚಗೊಳಿಸಿಕೊಳ್ಳಬೇಕಾದ ಅವಶ್ಯಕತೆಯಿದೆ.
ಬೇಸಿಗೆಯಲ್ಲಿ ಪರಿಣಾಮಕಾರಿಯಾಗಿ ಚರ್ಮ ಸ್ವಚ್ಚಗೊಳಿಸಿಕೊಳ್ಳಲು ಕೆಳಗಿನ ವಿಧಾನಗಳನ್ನು ಪಾಲಿಸಿ:

1. ಬೇಸಿಗೆಯ ಬಿಸಿ ಮತ್ತು ಒಣಹವೆ ಚರ್ಮದಲ್ಲಿ ಎಣ್ಣೆಯಂಶವನ್ನು ಹೆಚ್ಚಿಸಿ ಚರ್ಮಕ್ಕೆ ಹೊಲಸು ಅಂಟಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಬೆಳಗ್ಗೆ ಮತ್ತು ಸಂಜೆ ಎರಡೂ ವೇಳೆ ನಿಮ್ಮ ಮುಖ ಹಾಗೂ ಕುತ್ತಿಗೆಯನ್ನು ಸರಿಯಾಗಿ ನೀರಿನಿಮದ ತೊಳೆದುಕೊಳ್ಳಿ. ನಿಮ್ಮ ಚರ್ಮದ ಗುಣಕ್ಕೆ ಅನುಗುಣವಾಗಿ ಸರಿಯಾದ ಪಿಎಚ್ ಸಮತೋಲನವುಳ್ಳ ಫೇಶಿಯಲ್ ಬಳಸಿ.
2. ಪದೇ ಪದೇ ಚರ್ಮವನ್ನು ತಿಕ್ಕಿ ತೊಳೆಯುವುದರಿಂದ ಚರ್ಮದ ಮೇಲಿನ ರಕ್ಷಣಾ ಪದರ ಹರಿಯುತ್ತದೆ. ಇದರಿಂದ ಮತ್ತಷ್ಟು ಒಣಕು,ಕಿರಿಕಿರಿ ಹೆಚ್ಚಬಹುದು. ಹೀಗಾಗಿ ಚರ್ಮ ತೊಳೆಯುವಾಗಲೂ ಅತಿಯಾಗುವುದು ಬೇಡ.
3. ಚರ್ಮದ ಮೇಲಿನ ಎಣ್ಣೆಯಂಶ ಚರ್ಮವನ್ನು ಸ್ವಲ್ಪ ಮಟ್ಟಿಗೆ ರಕ್ಷಿಸುತ್ತದೆ. ಹೀಗಾಗಿ ದೇಹದಲ್ಲಿ ಸಹಜವಾಗಿಯೇ ನೀರಿನಂಶವನ್ನು ಕಾಪಾಡಿಕೊಳ್ಳಿ.
4. ನಿಮ್ಮ ಚರ್ಮ ನೈಸರ್ಗಿಕವಾಗಿ ಹುಟ್ಟಿನಿಂದಲೇ ಎಣ್ಣೆಯುತವಾಗಿದ್ದರೆ ಸೂಕ್ತವಾದ ಜೆಲ್ ಸಹಿತವಾದ ಸೋಪಿನಿಂದ ತೊಳೆದುಕೊಳ್ಳಿ.
5. ಒಣಚರ್ಮವುಳ್ಳವರು ಹಾಲಿನ ಕೆನೆ, ಎಣ್ಣೆ ಅಥವಾ ಬಾಮ್ ಬಳಸಿಕೊಂಡು ಸ್ವಚ್ಚಗೊಳಿಸಿಕೊಳ್ಳಿ.
6. ಮೇಕಪ್ ನ ಅಂಶ ತೆಗೆಯಲು ಸರಿಯಾದ ಮೇಕಪ್ ರಿಮೂವರ್ ಬಳಸಿ.



Click it and Unblock the Notifications
