Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಳಿಗಾಲದ ತರಕಾರಿ ಬಳಸಿ ತ್ವಚೆಯ ರಕ್ಷಣೆ
ಚಳಿಗಾಲದಲ್ಲಿ ಆರೋಗ್ಯದ ರಕ್ಷಣೆಯೊಂದಿಗೆ ತ್ವಚೆಯ ಆರೈಕೆ ಮತ್ತು ಅದಕ್ಕೆ ಪೋಷಕಾಂಶಗಳನ್ನು ನೀಡುವುದು ಅತ್ಯಗತ್ಯ. ಚಳಿಗಾಲದಲ್ಲಿ ಬೆಳೆಯುವ ಮತ್ತು ಲಭ್ಯವಿರುವ ತರಕಾರಿಗಳನ್ನು ಉಪಯೋಗಿಸಿ ತ್ವಚೆಯ ರಕ್ಷಣೆ ಮಾಡಲು ಕೆಲವೊಂದು ವಿಧಾನಗಳಿವೆ. ಚಳಿಗಾಲದ ತರಕಾರಿಗಳೆಂದರೆ ಬೀನ್ಸ್, ಎಲೆಕೋಸು, ಮೊಗ್ಗುಗಳು, ಲೆಟಿಸ್, ಪಾಲಕ, ಕ್ಯಾರೆಟ್, ಈರುಳ್ಳಿ, ಬಟಾಣಿ ಮತ್ತು ಶತಾವರಿ. ಈ ತರಕಾರಿಗಳು ವಿಟಮಿನ್ ಮತ್ತು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದೆ. ಇದೆಲ್ಲವನ್ನು ನಿಮ್ಮ ಮನೆ ತೋಟದಲ್ಲಿ ಬೆಳೆಸಿ ನಿಯಮಿತವಾಗಿ ಸೇವಿಸಬಹುದು.
ಆರೋಗ್ಯ ಲಾಭದೊಂದಿಗೆ ಚಳಿಗಾಲದಲ್ಲಿ ಸಿಗುವ ತರಕಾರಿಗಳಿಂದ ತ್ವಚೆಯ ಲಾಭಗಳು ಇದೆ. ಚಳಿಗಾಲದ ತರಕಾರಿಗಳನ್ನು ಪರಿಣಾಮಕಾರಿಯಾಗಿ ಬಳಸುವುದರಿಂದ ತ್ವಚೆಯ ಆರೈಕೆ ಮಾಡಬಹುದು. ಹೀಗೆ ಮಾಡಲು ಹಲವಾರು ವಿಧಗಳಿವೆ. ಈ ತರಕಾರಿಗಳನ್ನು ಆಹಾರದಲ್ಲಿ ಬಳಸಬಹುದು, ಹಾಗೆ ತಿನ್ನಬಹುದು ಅಥವಾ ಪೇಸ್ಟ್ ಅಥವಾ ಸ್ಕ್ರಬ್ ಮೂಲಕ ಚರ್ಮಕ್ಕೆ ಹಚ್ಚಬಹುದು.
ಚಳಿಗಾಲದ ತರಕಾರಿಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಹೇಗೆ ಮಾಡಬಹುದು ಎನ್ನುವುದನ್ನು ಚರ್ಚಿಸಲಾಗಿದೆ.

1. ಶತಾವರಿ
ಚಳಿಗಾಲದಲ್ಲಿ ಬೆಳೆಯುವ ಶತಾವರಿಯ ಎಲೆ, ಕಾಂಡ ಮತ್ತು ಬೇರುಗಳನ್ನು ವೈದ್ಯಕೀಯ ಉದ್ದೇಶಗಳಿಗೆ ಬಳಸಲಾಗುತ್ತದೆ. ಈ ತರಕಾರಿಯನ್ನು ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಬಳಸಬಹುದು. ಶತಾವರಿಯಿಂದ ಹಲವಾರು ಆರೋಗ್ಯ ಮತ್ತು ತ್ವಚೆಯ ಲಾಭಗಳಿವೆ. ಇದರಲ್ಲಿ ತ್ವಚೆಯನ್ನು ಶುಚಿಗೊಳಿಸುವ ಗುಣಗಳಿದೆ ಮತ್ತು ಇದನ್ನು ನೇರವಾಗಿ ತ್ವಚೆಗೆ ಹಚ್ಚಬಹುದು. ಚಳಿಗಾಲದಲ್ಲಿ ತ್ವಚೆ ಒಣಗಿ ಬಿರುಕು ಬಿಟ್ಟಂತೆ ಆಗುವುದರಿಂದ ಇದನ್ನು ನಿವಾರಿಸಲು ಶತಾವರಿ ಬಳಸಬಹುದು. ಇದನ್ನು ತ್ವಚೆಯ ಆರೈಕೆಗೆ ಬಳಸುವಾಗ ಎಚ್ಚರಿಕೆ ವಹಿಸಬೇಕಾದ ಅಗತ್ಯವೂ ಇದೆ. ಇದು ತುಂಬಾ ಕಿರಿಕಿರಿ ಮತ್ತು ನಿಮ್ಮ ತ್ವಚೆಗೆ ಹೊಂದಿಕೊಳ್ಳದೆ ಇರಬಹುದು. ಮೊದಲು ಇದನ್ನು ಕೈಯ ಒಂದು ಭಾಗಕ್ಕೆ ಹಚ್ಚಿ ಯಾವುದೇ ಸಮಸ್ಯೆಯಾಗುತ್ತದೆಯಾ ಎಂದು ಮೊದಲು ತಿಳಿದುಕೊಳ್ಳಿ.

2. ಕ್ಯಾರೆಟ್
ಕ್ಯಾರೆಟ್ ತುಂಬಾ ಆರೋಗ್ಯಕಾರಿ. ಇದರಲ್ಲಿ ಹಲವಾರು ವಿಟಮಿನ್ ಗಳಿರುವ ಕಾರಣ ಇದು ಕಣ್ಣಿಗೆ ತುಂಬಾ ಒಳ್ಳೆಯದು. ಕ್ಯಾರೆಟ್ ತ್ವಚೆಗೆ ತುಂಬಾ ಉಪಯುಕ್ತ ಮತ್ತು ಲಾಭಕಾರಿ. ಕ್ಯಾರೆಟ್ ನಲ್ಲಿರುವ ವಿಟಮಿನ್ `ಎ' ತ್ವಚೆಯನ್ನು UV ಕಿರಣಗಳಿಂದ ರಕ್ಷಿಸುತ್ತದೆ. ಚರ್ಮ ಸುಕ್ಕುಗಟ್ಟದಂತೆ, ಚರ್ಮದ ಬಣ್ಣ ಮಾಸದಂತೆ, ನವೆ ಮತ್ತು ಮೊಡವೆಗಳಿಂದ ಇದು ರಕ್ಷಣೆ ನೀಡುತ್ತದೆ. ಕ್ಯಾರೆಟ್ ನ್ನು ಫೇಸ್ ಪ್ಯಾಕ್ ಆಗಿ ಬಳಸಬಹುದು. ಕ್ಯಾರೆಟ್ ಜ್ಯೂಸ್ ಕುಡಿಯುವುದು ಅಥವಾ ಹಸಿಯಾಗಿಯೇ ಅದನ್ನು ತಿನ್ನುವುದರಿಂದ ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಮಾಡಬಹುದು.

3. ಮೊಳಕೆ ಕಾಳುಗಳು
ಕಡಿಮೆ ಕೊಬ್ಬಿನ ಶಕ್ತಿಯನ್ನು ನೀಡುವ ಫಿಟ್ ನೆಸ್ ಗೆ ಹೇಳಿ ಮಾಡಿಸಿದಂತಿರುವ ಮೊಳಕೆ ಕಾಳುಗಳು ತ್ವಚೆಗೂ ಉಪಯುಕ್ತ. ಮೊಳಕೆ ಕಾಲುಗಳನ್ನು ತ್ವಚೆಯ ಆರೈಕೆ ಮತ್ತು ತೂಕ ಕಳಕೊಳ್ಳಲು ವೈದ್ಯರು ಸಲಹೆ ಮಾಡುತ್ತಾರೆ. ಮೊಳಕೆ ಕಾಳುಗಳು ಮುಖದಲ್ಲಿರುವ ಕೊಳಕು ಮತ್ತು ಎಣ್ಣೆಯ ಅಂಶವನ್ನು ಶುಚಿಗೊಳಿಸುತ್ತದೆ. ಇದರಿಂದ ಮೊಡವೆಗಳು ನಿವಾರಣೆಯಾಗುತ್ತದೆ. ಮುಖದ ಮೇಲೆ ಬೀಳುವ ನೆರಿಗೆ ಮತ್ತು ಕಪ್ಪು ಕಲೆಗಳನ್ನು ಇದು ತಡೆಯುತ್ತದೆ. ಚಳಿಗಾಲದ ತರಕಾರಿಗಳಲ್ಲಿ ಮೊಳಕೆ ಕಾಳುಗಳನ್ನು ತ್ವಚೆ ಆರೈಕೆಗೆ ಬಳಸಬಹುದು.

4. ಲೆಟಿಸ್
ಲೆಟಿಸ್ ನ್ನು `ಸಲಾಡ್ ಎಲೆ' ಎಂದು ಕರೆಯಲಾಗುತ್ತದೆ. ಇದನ್ನು ಹೆಚ್ಚಾಗಿ ಸಲಾಡ್, ಸ್ಯಾಂಡ್ ವಿಚ್ ಮತ್ತು ಬರ್ಗರ್ ಗಳಲ್ಲಿ ಉಪಯೋಗಿಸಲಾಗುತ್ತದೆ. ಚಳಿಗಾಲದ ತರಕಾರಿಯಾಗಿರುವ ಈ ಹಸಿರು ಎಲೆಯು ತ್ವಚೆಗೆ ಹೆಚ್ಚಿನ ಲಾಭವಿದೆ. ಲೆಟಿಸ್ ನಲ್ಲಿರುವ ವಿಟಮಿನ್ ಎ ತ್ವಚೆಯನ್ನು ಪುನಶ್ಚೇತನಗೊಳಿಸುತ್ತದೆ. ಇದರಲ್ಲಿರುವ ಪೊಟಾಶಿಯಂ ಅಂಶವು ತ್ವಚೆ ಹೊಳೆಯುವಂತೆ ಮಾಡುತ್ತದೆ. ಲೆಟಿಸ್ ಸೇವಿಸುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಅದು ಹೊರಹಾಕುತ್ತದೆ. ಇದರಿಂದ ತ್ವಚೆ ಮತ್ತು ದೇಹವನ್ನು ಆರೋಗ್ಯವಾಗಿರಿಸುತ್ತದೆ.

5. ಪಾಲಕ್
"ನಾವಿಕ ಮನುಷ್ಯ ಪಪಾಯ"ನ ಮೆಚ್ಚಿನ ಆಹಾರ ನಮಗೆ ಸೂಪರ್ ಮ್ಯಾನಂತಹ ಶಕ್ತಿಯನ್ನು ನೀಡುತ್ತದೆ. ಶಕ್ತಿವರ್ಧಿಸುವ ಗುಣದೊಂದಿಗೆ ಪಾಲಕ್ ನಮ್ಮ ಚರ್ಮಕ್ಕೂ ಒಳ್ಳೆಯದು. ಪಾಲಕ್ ನಲ್ಲಿರುವ ವಿಟಮಿನ್ ಮತ್ತು ಪೋಷಕಾಂಶಗಳು ಆರೋಗ್ಯ ಮತ್ತು ಚರ್ಮ ಹೊಳೆಯಲು ಪ್ರಮುಖ ಪಾತ್ರ ವಹಿಸುತ್ತದೆ. ಪಾಲಕ್ ನಿಂದ ಮೊಡವೆ, ಹಾನಿಗೊಳಗಾದ ಚರ್ಮದ ಸರಿಪಡಿಸುವಿಕೆ ಮತ್ತು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಪಾಲಕ್ ತ್ವಚೆಯ ಆರೈಕೆಗೆ ಅತ್ಯಂತ ಉಪಯುಕ್ತ ತರಕಾರಿ.
ಮೊದಲೇ ಹೇಳಿದಂತೆ ಇತರ ಕೆಲವು ಚಳಿಗಾಲದ ತರಕಾರಿಗಳು ತ್ವಚೆಗೆ ರಕ್ಷಣೆ ನೀಡುತ್ತದೆ. ಪ್ರತಿಯೊಂದು ತರಕಾರಿಯು ಒಂದಲ್ಲ ಒಂದು ರೀತಿಯಲ್ಲಿ ತ್ವಚೆಗೆ ಲಾಭಕಾರಿ. ಚಳಿಗಾಲದಲ್ಲಿ ಈ ತರಕಾರಿಗಳನ್ನು ಬಳಸಿ ಮತ್ತು ಆರೋಗ್ಯಕರವಾಗಿರಿ.



Click it and Unblock the Notifications