Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಚಳಿಗಾಲಕ್ಕಾಗಿ ನೈಸರ್ಗಿಕ ಲಿಪ್ ಬಾಮ್‌ಗಳು
ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮ ಒಣಗುವುದು ಮತ್ತು ನವೆ ಉಂಟಾಗುವುದು ಸಾಮಾನ್ಯ. ಎಷ್ಟೇ ಬಾಡಿ ಲೋಷನ್ ಮತ್ತು ಮಾಯಿಶ್ಚರೈಸರ್ ಅನ್ನು ನೀವು ಚರ್ಮಕ್ಕೆ ಹಚ್ಚಿದರೂ ಕೂಡ ಇದರ ತೊಂದರೆ ಇದ್ದೇ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಅದರ ಹೊಡೆತಕ್ಕೆ ಸಿಲುಕುವ ನಿಮ್ಮ ಶರೀರದ ಅಂಗವೆಂದರೆ ತುಟಿ.
ಚಳಿಗಾಲದಲ್ಲಿ ಒಡೆದ, ಒಣಗಿದ ಮತ್ತು ಒರಟಾದ ತುಟಿಗಳ ಸಮಸ್ಯೆಯಿಂದ ಹಲವಾರು ಜನರು ಬಳಲುತ್ತಾರೆ. ಈ ಕಾಲವು ನಿಮ್ಮ ಚರ್ಮವನ್ನು ಹೆಚ್ಚು ಒಣಗಿಸುವುದರಿಂದ ಈ ಸಮಸ್ಯೆ ನಿಮಗುಂಟಾಗುತ್ತದೆ. ಒಣಗಿದ ಚರ್ಮವು ನಿಮಗೆ ಕಿರಿಕಿರಿಯುಂಟು ಮಾಡುವುದಂತೂ ಸತ್ಯ. ಇಂತಹ ಸಮಸ್ಯೆಯಿಂದ ನಿಮ್ಮ ತುಟಿಯನ್ನು ಕಾಪಾಡಬೇಕೆಂದು ನೀವು ಬಯಸಿದ್ದರೆ ಅದರ ಕಾಳಜಿಯತ್ತ ಕೂಡ ನೀವು ಗಮನ ಹರಿಸುವುದು ಆವಶ್ಯಕ. ಈ ರೀತಿಯ ಕಾಳಜಿ ನಿಮ್ಮ ತುಟಿಯನ್ನು ಗುಲಾಬಿ ಮತ್ತು ಮೃದುವಾಗಿಸುತ್ತದೆ.
ಸಾಮಾನ್ಯವಾಗಿ ರಾಸಾಯನಿಕಯುಕ್ತ ಲಿಪ್ ಬಾಮ್‌ಗಳು ನಿಮ್ಮ ತುಟಿಗೆ ಹಾನಿಯನ್ನುಂಟು ಮಾಡುತ್ತವೆ. ನಿಮಗದರ ಅವಶ್ಯಕತೆ ಇಲ್ಲದಿದ್ದರೆ ವೃಥಾ ಲಿಪ್ ಬಾಮ್‌ಗಳ ಮೇಲೆ ದುಡ್ಡು ಸುರಿಯಬೇಡಿ. ಮನೆಯಲ್ಲೇ ತಯಾರಿಸಬಹುದಾದ ನಿಮ್ಮ ತುಟಿಯನ್ನು ಮೃದುವಾಗಿಸುವ ಲಿಪ್ ಬಾಮ್‌ಗಳನ್ನು ಬಳಸಿ. ಸುಲಭವಾದ ಸಾಮಾಗ್ರಿಗಳಿಂದ ತಯಾರಿಸಬಹುದಾದ ಈ ಲಿಪ್ ಬಾಮ್ ನಿಮ್ಮ ಆರೋಗ್ಯ ಹಾಗೂ ದುಡ್ಡು ಇವೆರಡನ್ನೂ ಉಳಿಸುತ್ತದೆ. ನಿಮಗೆ ತಡವಾಗುತ್ತಿದ್ದರೆ, ನೇರವಾಗಿ ಈ ನೈಸರ್ಗಿಕ ಸಾಮಾಗ್ರಿಗಳನ್ನು ತುಟಿಗಳಿಗೆ ಹಚ್ಚಿಕೊಳ್ಳಬಹುದು. ಉದಾ, ಆಲೀವ್ ಆಯಿಲ್ ಅನ್ನು ಲಿಪ್ ಬಾಮ್ ತಯಾರಿಕೆಯಲ್ಲಿ ಒಂದು ಸಾಮಾಗ್ರಿಯಂತೆ ಬಳಸಲಾಗುತ್ತದೆ, ಇದನ್ನು ನೀವು ನೇರವಾಗಿ ತುಟಿಗೆ ಹಚ್ಚಿಕೊಳ್ಳಬಹುದು.
ಈ ಚಳಿಗಾಲಕ್ಕಾಗಿ ಮನೆಯಲ್ಲೇ ತಯಾರಿಸಬಹುದಾದ ಕೆಲವೊಂದು ಲಿಪ್ ಬಾಮ್‌ಗಳನ್ನು ಇಲ್ಲಿ ನೀಡಲಾಗಿದೆ. ಇದು ನೈಸರ್ಗಿಕವಾಗಿದ್ದು ಯಾವುದೇ ರೀತಿಯ ದುಷ್ಪರಿಣಾಮವನ್ನು ಬೀರುವುದಿಲ್ಲ. ನಿಮ್ಮ ತುಟಿಯನ್ನು ಒಡೆಯುವುದರಿಂದ ಮತ್ತು ಒರಟಾಗುವುದರಿಂದ ರಕ್ಷಿಸಲು ಈ ಸಲಹೆಗಳನ್ನು ನೀವು ಪಾಲಿಸಲೇಬೇಕು.

1.ತೆಂಗಿನ ಎಣ್ಣೆ ಅಥವಾ ಹಾಲು:
ಇದೊಂದು ನೈಸರ್ಗಿಕ ಲಿಪ್ ಬಾಮ್ ಆಗಿದ್ದು ಈ ಚಳಿಗಾಲಕ್ಕೆ ಸೂಕ್ತವಾದುದು. ನಿಮ್ಮ ತುಟಿಯನ್ನು ಮೃದು ಮತ್ತು ಮಾಯಿಶ್ಚರೈಸನ್ನಾಗಿ ಮಾಡಲು ತೆಂಗಿನ ಎಣ್ಣೆ ಅಥವಾ ಹಾಲನ್ನು ಒಡೆದ ತುಟಿಯ ಮೇಲೆ ಲೇಪಿಸಿಕೊಳ್ಳಿ.

2.ಗ್ಲಿಸರಿನ್:
ಗ್ಲಿಸರಿನ್ ಅನ್ನು ಬಳಸಿಕೊಂಡು ಹೆಚ್ಚಿನ ಲಿಪ್ ಬಾಮ್‌ಗಳನ್ನು ತಯಾರಿಸಲಾಗುತ್ತದೆ. ಇದು ತ್ವಚೆಯನ್ನು ಮೃದುವಾಗಿಸುವುದರೊಂದಿಗೆ ಅದನ್ನು ಮಾಯಿಶ್ಚರೈಸ್ ಕೂಡ ಮಾಡುತ್ತದೆ. ನಿಮ್ಮ ತುಟಿಯ ರಂಗನ್ನು ಗುಲಾಬಿಯಾಗಿಸಲು ಇದು ಸಹಕಾರಿಯಾಗಿದೆ.

3.ಆಲೀವ್ ಆಯಿಲ್:
ಆಲೀವ್ ಆಯಿಲ್ ಅನ್ನು ನಿಮ್ಮ ತುಟಿಯೊಂದಿಗೆ ಮುಖಕ್ಕೆ ಕೂಡ ಹಚ್ಚಬಹುದು. ಮಗುವಿನಂತಹ ತ್ವಚೆಯನ್ನು ಪಡೆಯಲು ಆಲೀವ್ ಆಯಿಲ್ ಸಹಕಾರಿ.

4.ಜೇನು:
ಹನಿಯನ್ನು ಲಿಂಬೆಯೊಂದಿಗೆ ಮಿಶ್ರ ಮಾಡಿಕೊಂಡು ಮುಖಕ್ಕೆ ಲೇಪಿಸಿಕೊಳ್ಳಿ. ಇದೊಂದು ನೈಸರ್ಗಿಕವಾದ ಮತ್ತು ಮನೆಯಲ್ಲೇ ತಯಾರಿಸಬಹುದಾದ ಲೇಪನವಾಗಿದ್ದು ಮೃತ ತ್ವಚೆಯನ್ನು ದೂರವಾಗಿಸಿ ಅದನ್ನು ಕಾಂತಿಯುಕ್ತವನ್ನಾಗಿಸುತ್ತದೆ. ನಿಮ್ಮ ಒಡೆದ ತುಟಿಗೆ ಜೇನನ್ನು ಸವರಿ ಮತ್ತು ಚಮತ್ಕಾರವನ್ನು ಆಸ್ವಾದಿಸಿ.

5.ಬೆಣ್ಣೆ:
ಚಳಿಗಾಲದ ಒಡೆದ ಒರಟಾದ ತುಟಿಗಾಗಿ ಸೂಕ್ತ ಔಷಧವೆಂದರೆ ಬೆಣ್ಣೆಯಾಗಿದೆ. ಮಲಗುವ ಮುಂಚೆ ತುಟಿಗೆ ಬೆಣ್ಣೆ ಸವರಿ.

6.ತುಪ್ಪ:
ನಿಮ್ಮ ತುಟಿಯನ್ನು ಮೃದು ಮತ್ತು ಗುಲಾಬಿ ಬಣ್ಣವನ್ನಾಗಿಸಲು ಅದಕ್ಕೆ ತುಪ್ಪ ಸವರಿ. ಒಡೆದ ತುಟಿಯನ್ನು ಸರಿಪಡಿಸಲು ಇದೊಂದು ನೈಸರ್ಗಿಕ ಸಿದ್ಧೌಷಧವಾಗಿದೆ.

7.ಮಿಲ್ಕ್ ಕ್ರೀಮ್:
ಇದೊಂದು ಉತ್ತಮ ನೈಸರ್ಗಿಕ ಪರಿಹಾರಕವಾಗಿದ್ದು ಹಿರಿಯರಿಂದ ಅನುಸರಿಸಿಕೊಂಡು ಬಂದ ವಿಧಾನವಾಗಿದೆ. ಈ ಚಳಿಗಾಲಕ್ಕೆ ಇದನ್ನು ನೀವು ಪ್ರಯತ್ನಿಸಲೇಬೇಕು.



Click it and Unblock the Notifications
