Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಸೂಕ್ಷ್ಮ ತ್ವಚೆಯವರಿಗೆ ನೈಸರ್ಗಿಕ ಬ್ಲೀಚ್ ಒಳ್ಳೆಯದು
ಬ್ಲೀಚ್ ಮಾಡಿಸಿದರೆ ತ್ವಚೆಯ ಬಿಳುಪು ಹೆಚ್ಚುವುದು. ಬ್ಯೂಟಿ ಪಾರ್ಲರ್ ಗೆ ಹೋಗಿ ಕೆಮಿಕಲ್ ಹಾಕಿ ಬ್ಲೀಚ್ ಮಾಡಿಸಿದರೆ ಕೆಲವರಿಗೆ ತ್ವಚೆ ಅಲರ್ಜಿ ಉಂಟಾಗುವುದು. ಚಿಕ್ಕ ಪ್ರಾಯದವರು ಅಂದರೆ 30 ವರ್ಷಕ್ಕಿಂತ ಕೆಳಗಿನವರು ಬ್ಲೀಚ್ ಮಾಡಿಸಿಕೊಳ್ಳುವುದು ತ್ವಚೆಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಆದರೆ ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನು ಬ್ಲೀಚ್ ನಂತೆ ಬಳಸಬಹುದು. ಇವುಗಳನ್ನು ಸಾಮಾನ್ಯವಾಗಿ ಎಲ್ಲಾ ಪ್ರಾಯದವರು ಬಳಸಬಹುದಾಗಿದ್ದು, ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗುವುದಿಲ್ಲ, ಅಲ್ಲದೆ ಮುಖದ ಹೊಳಪು ಹೆಚ್ಚುವುದು.
ಆ ನೈಸರ್ಗಿಕ ಬ್ಲೀಚ್ ಬಗ್ಗೆ ಸ್ಲೈಡ್ ನಲ್ಲಿ ಹೇಳಲಾಗಿದೆ ನೋಡಿ:

ಕಿತ್ತಳೆ ಸಿಪ್ಪೆ ಮತ್ತು ಹಾಲು
ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಅದನ್ನು ಹಾಲನ್ನು ಜೊತೆ ರುಬ್ಬಿ ಪೇಸ್ಟ್ ರೀತಿ ಮಾಡಿಕೊಂಡು ಮುಖಕ್ಕೆ ಹಚ್ಚಿ, 20 ನಿಮಿಷದ ಬಳಿಕ ಮುಖ ತೊಳೆದರೆ ಮುಖದ ಬಿಳುಪು ಹೆಚ್ಚುವುದು. ಈ ಬ್ಲೀಚ್ ಅನ್ನು ತುಂಬಾ ಸೂಕ್ಷ್ಮ ತ್ವಚೆಯವರು ಕೂಡ ಬಳಸಬಹುದು.

ಟೊಮೆಟೊ
ಟೊಮೆಟೊ ಪರಿಣಾಮಕಾರಿಯಾದ ಬ್ಲೀಚಿಂಗ್ ಸಾಧನವಾಗಿದೆ. ಟೊಮೆಟೊವನ್ನು ಮುಖಕ್ಕೆ ಹಚ್ಚಿ ಅದು ಒಣಗಿದ ಬಳಿಕ ಮುಖ ತೊಳೆದರೆ ಮುಖದಲ್ಲಿರುವ ಕಂದಿದ ತ್ವಚೆ ಮಾಯವಾಗುವುದು.

ಸೌತೆಕಾಯಿ
ಸೌತೆಕಾಯಿ ಸೂಕ್ಷ್ಮ ತ್ವಚೆಯವರಿಗೆ ಸೂಕ್ತವಾದ ಸೌಂದರ್ಯವರ್ಧಕ. ಇದನ್ನು ಮುಖಕ್ಕೆ ಹಚ್ಚಿದರೆ ಮುಖದಲ್ಲಿರುವ ಕಪ್ಪು ಕಲೆಗಳು ಕಡಿಮೆಯಾಗುವುದು, ಕಣ್ಣಿನ ಸುತ್ತ ಬಿದ್ದಂತಹ ಕಪ್ಪು ವರ್ತುಲ ಮಾಯವಾಗುವುದು.

ನಿಂಬೆ ಹಣ್ಣು
ಮೊಡವೆ ಇರುವವರು ಈ ಬ್ಲೀಚಿಂಗ್ ಸಾಧನವನ್ನು ಬಳಸಿದರೆ ಉತ್ತಮ ಪ್ರಯೋಜನ ಪಡೆಯಬಹುದು. ನಿಂಬೆ ರಸ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಪ್ರತೀ ಎರಡು ದಿನಕ್ಕೊಮ್ಮೆ ಮಾಡುತ್ತಾ ಬನ್ನಿ. ಉತ್ತಮ ಫಲಿತಾಂಶ ದೊರೆಯುವುದು.

ಓಟ್ ಮೀಲ್
ಓಟ್ ಮೀಲ್ ಬಳಸಿ ಸ್ಕ್ರಬ್ ಮಾಡಬಹುದು. 1 ಚಮಚ ಓಟ್ಸ್ ಗೆ 2 ಚಮಚ ಮೊಸರು, ಸ್ವಲ್ಪ ನಿಂಬೆ ರಸ ಹಾಕಿ ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿದರೆ ಬ್ಲ್ಯಾಕ್ ಹೆಡ್ಸ್ ಸುಲಭವಾಗಿ ಹೋಗಲಾಡಿಸಬಹುದು.

ಮೊಸರು
ತುಂಬಾ ಸೂಕ್ಷ್ಮ ತ್ವಚೆಯಿರುವವರು ಮೊಸರು ಮಾತ್ರ ಹಚ್ಚುವುದು ಒಳ್ಳೆಯದು. ಮೊಸರು ತ್ವಚೆಯನ್ನು ಮೃದುವಾಗಿಸಿ, ಮುಖದ ಅಂದವನ್ನು ಹೆಚ್ಚಿಸುತ್ತದೆ.



Click it and Unblock the Notifications
