Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಪುರುಷರೇ, ತ್ವಚೆ ಕಾಂತಿಗಾಗಿ ಟೋನರ್ ಬಳಸಿ
ತ್ವಚೆಯ ಆರೈಕೆಯ ಪ್ರಶ್ನೆಯು ಬಂದಾಗ, ಟೋನರ್ ನ ಉಪಯೋಗವು ಬಹುಶಃ ಪುರುಷನೋರ್ವನ ಆದ್ಯತೆಯ ಪಟ್ಟಿಯಲ್ಲಿ ಕಟ್ಟಕಡೆಯ ಸ್ಥಾನವನ್ನು ಪಡೆಯುತ್ತದೆ ಎಂಬುದಂತೂ ಅರ್ಥೈಸಿಕೊಳ್ಳಬಹುದಾದ ವಿಷಯವಾಗಿದೆ. ಆದರೆ, ಇಲ್ಲಿ ಬರುವ ಪ್ರಶ್ನೆಯೇನೆಂದರೆ, ನಿಜಕ್ಕೂ ಪುರುಷರು ಟೋನರ್ ಒಂದರ ಮೊರೆ ಹೋಗುವುದರ ಅವಶ್ಯಕತೆ ಇದೆಯೇ ? ಇದಕ್ಕೆ ಉತ್ತರ, "ಹೌದು, ಖಂಡಿತವಾಗಿಯೂ". ನಿಜವಾಗಿ ಹೇಳಬೇಕೆಂದರೆ, ನಿಮ್ಮ ದಿನ ನಿತ್ಯದ ತ್ವಚೆಯ ಆರೈಕೆಗಾಗಿ ಮಾಡಲ್ಪಟ್ಟ ಉಪಚಾರಗಳ ಪೈಕಿ ಬಹುಶಃ ತಪ್ಪಿ ಹೋಗಿರಬಹುದಾದ ವಸ್ತುವೆಂದರೆ ಅದು ಟೋನರ್ ಆಗಿದ್ದು ಅದಕ್ಕಾಗಿಯೇ ನಿಮ್ಮ ತ್ವಚೆಯು ಪರಿತಪಿಸುತ್ತಿರಬಹುದು.
ನಿಮ್ಮ ತ್ವಚೆಯ ವರ್ಣದ ಕುರಿತು ಟೋನರ್ ಒಂದು ಮಾಡಬಹುದಾದ ಚಮತ್ಕಾರಗಳ ಬಗ್ಗೆ ನೀವು ಚಕಿತರಾಗಬಹುದು. ಪುರುಷರ ತ್ವಚೆಯ ಆರೈಕೆಯ ಪ್ರಪಂಚದ ಅಷ್ಟೇನೂ ಪ್ರಚಲಿತವಲ್ಲದ ನಾಯಕ (ಹೀರೋ) ಆದ ಟೋನರ್ ಗಳ ಬಗ್ಗೆ ನೀವು ತಿಳಿದಿರಬೇಕಾದದ್ದೆಲ್ಲವನ್ನೂ ಇಲ್ಲಿ ಪ್ರಸ್ತಾಪಿಸುತ್ತೇವೆ.

ಟೋನರ್ ಎಂದರೇನು?
ಟೋನರ್ ಅನ್ನು ನಿಮ್ಮ ತ್ವಚೆಯ ಆರೈಕೆಗೆ ಸಾಧ್ಯವಾದ ಅನೇಕ ರೀತಿಯಲ್ಲಿ ಪೂರಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಅದು ಸ್ವಚ್ಚವಾದ ಲೋಷನ್ ನ ರೂಪದಲ್ಲಿರಬಹುದು ಇಲ್ಲವೇ spritz ನ ರೂಪದಲ್ಲಿರಬಹುದು. ಟೋನರ್ ಗಳು ನಿಮ್ಮ ತ್ವಚೆಯ ರಂಧ್ರಗಳನ್ನು ಸ್ವಚ್ಚಗೊಳಿಸಿ, ಬಿಗಿಯಾಗಿಸುವುದರ ಮೂಲಕ ಉರಿಕಾರಕಗಳಿಗೆ, ಧೂಳಿಗೆ, ಮತ್ತು ಒತ್ತಡಕ್ಕೆ ನಿಮ್ಮ ತ್ವಚೆಯ ಕಾಂತಿಯ ಮೇಲೆ ಹಿಡಿತ ಸಾಧಿಸುವುದನ್ನು ಕಠಿಣವಾಗಿಸುತ್ತದೆ.

ಟೋನರ್ ಏಕೆ ಬಳಸಬೇಕು?
ಈ ಟೋನರ್ ನಂತಹ ಉತ್ಪನ್ನಗಳು ನಿಮ್ಮ ತ್ವಚೆಯ ರoಧ್ರಗಳನ್ನು ಸ್ವಚ್ಚಗೊಳಿಸಿದ ಬಳಿಕ ಒಂದು ಸೀಲ್ ನಂತೆ ವರ್ತಿಸಿ ಕಪ್ಪು ಕಲೆಗಳು ಮತ್ತು ಬಿರುಕುಗಳಾಗುವುದನ್ನು ಕಡಿಮೆ ಮಾಡುತ್ತವೆ. ಇವು ಶೇವಿಂಗ್ ನ ತರುವಾಯ, ಉರಿಯನ್ನು ತಡೆಗಟ್ಟುವುದರ ಮೂಲಕ ನಿಮ್ಮ ತ್ವಚೆಗೆ ಅಹ್ಲಾದವನ್ನುಂಟು ಮಾಡುತ್ತವೆ. ಟೋನರ್ ಗಳು ನಿಮ್ಮ ತ್ವಚೆಯು ಕಾಂತಿಯುತವಾಗಿ ಕಾಣುವಂತೆ ಹಾಗೂ ತಾಜಾವಾಗಿ ಇರುವಂತೆ ಮಾಡುತ್ತವೆ.
ನಿಮ್ಮ ತ್ವಚೆಯ ಸ್ವರೂಪಕ್ಕನುಗುಣವಾಗಿ ಟೋನರ್ ಅನ್ನು ಆರಿಸಿಕೊಳ್ಳಿರಿ.

ತೈಲಯುಕ್ತ ತ್ವಚೆಯಾಗಿದ್ದರೆ
ಒಂದು ಉತ್ತಮ ಗುಣಮಟ್ಟ ಟೋನರ್ ನಿಮ್ಮ ಒಣ ತ್ವಚೆಯು ಜಲಾoಶದಿಂದ ಕೂಡಿರುವಂತೆ ಮಾಡುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಈ ದೃಷ್ಟಿಯಿಂದ ನೋಡುವುದಾದರೆ, ನಿಮ್ಮ ದಿನ ನಿತ್ಯದ "ಸ್ವಚ್ಚಗೊಳಿಸುವುದು, ಟೋನ್ ಮಾಡುವುದು, ಮತ್ತು ತೇವವಾಗಿಸುವುದು ('cleansing, toning and moisturizing) ನ ಭಾಗವಾಗಿ ಟೋನರ್ ಅನ್ನು ಉಪಯೋಗಿಸಿದರೆ, ಅದು ನುಣುಪಾದ ತ್ವಚೆಯನ್ನು ಬಹುಕಾಲದವರೆಗೆ ಕಾಪಾಡಿಕೊಳ್ಳಲು ಸಹಕಾರಿಯಾಗಬಲ್ಲದು.

ಮಾಯಿಶ್ಚರೈಸರ್
ಇದು ನಿಮ್ಮ ತ್ವಚೆಯ ಮೇಲೆ ಮಿನುಗುವ ಕಾಂತಿಯ ಪರಿಣಾಮವನ್ನುಂಟು ಮಾಡುವುದರ ಮೂಲಕ ತ್ವಚೆಯ ಕೋಶಗಳ ಮರುಜೀವಕ್ಕೆ ನಾಂದಿ ಹಾಡಬಲ್ಲದು. ಇದರಿಂದ ನಿಮ್ಮ ತ್ವಚೆಯು ಒಣ ಸ್ಥಿತಿಯಲ್ಲಿರುವುದರಿಂದ ಬಹು ಬೇಗನೇ ಹೊರಬರುತ್ತದೆ ಹಾಗೂ ನಿಮ್ಮ ಮಾಯಿಶ್ಚರೈಸರ್ ನ ತೇವವಾಗಿಸುವ ಗುಣಕ್ಕೆ ಬಹು ಬೇಗನೆ ಸ್ಪಂದಿಸುತ್ತದೆ.

ಶೇವಿಂಗ್ ಟಿಪ್ಸ್
ಪುರುಷರ ತ್ವಚೆಯ ಆರೈಕೆಯ ವಿಷಯಕ್ಕೆ ಬಂದಾಗ, ಶೇವಿಂಗ್ ನಿಂದ ಉಂಟಾಗುವ ಉರಿಯ ಕಿರಿಕಿರಿಯು ಬಹು ದೊಡ್ಡ ಸಮಸ್ಯೆಯಾಗಿದೆ. ಈ ವಿಚಾರದಲ್ಲಿ ಟೋನರ್ ಗಳಿಗೆ ಅನಂತಾನಂತ ಧನ್ಯವಾದಗಳು. ಏಕೆಂದರೆ, ಇವುಗಳನ್ನು ಶೇವಿಂಗ್ ನ ತರುವಾಯ ಉಪಯೋಗಿಸುವ ಬಾಮ್ (balm) ನೊಂದಿಗೆ ಬೆರೆಸಿ ಬಳಸಿದರೆ, ನಿಮ್ಮ ತ್ವಚೆಯು ತಾಜಾವಾಗಿ, ಮೃದುವಾಗಿ, ರೇಷ್ಮೆಯಂತೆ ನುಣುಪಾಗಿ, ಮತ್ತು ಅಪ್ಯಾಯಮಾನವಾಗಿ ಕಾಣುತ್ತದೆ.

ಮೃದುವಾದ ತ್ವಚೆ ನಿಮ್ಮದಾಗುವುದು
ನಿಮ್ಮ ಗಡುಸಾದ ಶೇವಿಂಗ್ ಪ್ರಕ್ರಿಯೆಯ ನಂತರ. ಮಾತ್ರವಲ್ಲದೇ, ಶೇವಿಂಗ್ ನ ಮೊದಲು ಈ ಟೋನರ್ ಅನ್ನು ಬಳಸಿದರೆ, ಅದು ನಿಮ್ಮ ಮುಖದ ತ್ವಚೆಯನ್ನು ಬಿಗಿಗೊಳಿಸಿ, ಕೂದಲು ಸೆಟೆದು ನಿಲ್ಲುವಂತೆ ಮಾಡಿ, ನಿಮ್ಮ ರೇಜರ್ ಬ್ಲೇಡ್, ಗಡ್ಡವನ್ನು ಸುಲಭವಾಗಿ ಕತ್ತರಿಸುವಂತೆ ಮಾಡಲು ಸಹಕರಿಸುತ್ತದೆ.

ಆಕರ್ಷಕ ಮುಖ ಕಾಂತಿಗಾಗಿ
ಆದರೆ ಎಚ್ಚರವಿರಲಿ, ಎಲ್ಲಾ ಟೋನರ್ ಗಳು ಈ ತೆರನಾದ ಉಪಯೋಗಕ್ಕೆ ಬರಲ್ಲ. ಅದ್ದರಿಂದ, ವಿಶೇಷವಾಗಿ ನಿಮ್ಮ ಶೇವಿಂಗ್ ದಿನಚರಿಯನ್ನು ಸುಧಾರಿಸುವoತೆ ಮಾಡಲು ಸಿದ್ಧಗೊಳಿಸಿರುವ ಟೋನರ್ ಬಳಸಿ ತ್ವಚೆ ಆರೈಕೆ ಮಾಡಿ.



Click it and Unblock the Notifications