Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮೊಡವೆಗಳ ನಿವಾರಣೆಗೆ ಜ್ಯೂಸುಗಳು
ಮುಖದ ಮೇಲೆ ಮೊಡವೆಯೆದ್ದರೆ ನೋವು ಕೊಡುವುದರೊಂದಿಗೆ ಮುಜುಗರ ಉಂಟುಮಾಡುತ್ತದೆ. ನೀವು ಯಾವುದೋ ಸಮಾರಂಭಕ್ಕೆ ಹೋಗಬೇಕು ಮುಖದ ಮೇಲೆ ದೊಡ್ಡ ಮೊಡವೆಯೆದ್ದಿದೆ ಎಂದರೆ ನಿಮ್ಮ ಸ್ಥಿತಿ ಏನಾಗುತ್ತದೆ ಊಹಿಸಿಕೊಳ್ಳಿ. ನೀವು ಅದನ್ನು ಮುಚ್ಚಿಡಲು ಹರಸಾಹಸ ಪಟ್ಟರೂ ಸಫಲರಾಗುವುದಿಲ್ಲ. ಮೊಡವೆಗಳು ನಿಧಾನವಾಗಿ ವಾಸಿಯಾಗುತ್ತವೆ. ಆದರೆ ಕಲೆಗಳು ಹಾಗೆ ಉಳಿದುಬಿಡುತ್ತವೆ. ಈ ಕಲೆಗಳು ನಿಮ್ಮ ಅಂದವನ್ನು ಮತ್ತಷ್ಟು ಕೆಡಿಸುತ್ತವೆ.
ಇದಕ್ಕೆ ಹಲವು ಮನೆಮದ್ದುಗಳಿವೆ. ಇವು ಚಮತ್ಕಾರಿಕ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಆದರೆ ಇವು ಪ್ರಭಾವ ಬೀರುವುದು ಬಹಳ ನಿಧಾನವಾಗಿ. ಕ್ರೀಮುಗಳನ್ನು ಹಚ್ಚಿಕೊಳ್ಳುವುದು ಇದರ ನಿವಾರಣೆಗೆ ಮತ್ತೊಂದು ವಿಧಾನ. ಅದೇನೆ ಇರಲಿ ನೀವು ಮೊಡವೆಗಳ ನಿವಾರಿಸಲು ಜ್ಯೂಸುಗಳನ್ನು ಬಳಸಿ ಪ್ರಯತ್ನಿಸಬಹುದು. ಟೊಮೊಟೊವನ್ನು ರುಬ್ಬಿ ಅದರ ರಸವನ್ನು ಬಳಸಬಹುದು ಅಥವ ಅದನ್ನು ಕತ್ತರಿಸಿದಾಗ ಬರುವ ರಸವನ್ನು ಕೂಡ ಮೊಡವೆಗಳಿಗೆ ಹಚ್ಚಬಹುದು.
ಮೊಡವೆಗಳ ನಿವಾರಣೆಗೆ ಜ್ಯೂಸ್ ಗಳು

ಟೊಮೊಟೊ ಜ್ಯೂಸ್
ಟೊಮೊಟೊ ಜ್ಯೂಸ್ ಹಲವು ರೀತಿಯಲ್ಲಿ ಚರ್ಮಕ್ಕೆ ಒಳ್ಳೆಯದು. ಇದು ನಿಮ್ಮ ಚರ್ಮವನ್ನು ಶುಚಿಗೊಳಿಸುವುದಲ್ಲದೆ ಕಲೆಗಳು ಮತ್ತು ಮೊಡವೆಗಳನ್ನು ಕೂಡ ನಿವಾರಿಸುತ್ತದೆ. ಟೊಮೊಟೊ ಜ್ಯೂಸ್ ಸುಲಭವಾಗಿ ಸಿಗುವುದರಿಂದ ಇದನ್ನು ನಿಮ್ಮ ಚರ್ಮದ ಆರೈಕೆಗೆ ಬಳಸಬಹುದು.

ಕ್ಯಾರೆಟ್ ಜ್ಯೂಸ್
ಕ್ಯಾರೆಟ್ ಜ್ಯೂಸ್ ಕೂಡ ಮೊಡವೆಗಳ ನಿವಾರಣೆಗೆ ಪ್ರಯೋಜನಕಾರಿ. ಇದು ಚರ್ಮದ ಕಾಂತಿ ಕೂಡ ಹೆಚ್ಚಿಸುತ್ತದೆ. ನೀವು ಕ್ಯಾರೆಟ್ ಜ್ಯೂಸನ್ನು ಪ್ರತಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು ಅಥವ ಈ ಜ್ಯೂಸನ್ನು ಮೊಡವೆಗಳ ಮೇಲೆ ಹಚ್ಚಬಹುದು.

ನಿಂಬೆ ಹಣ್ಣಿನ ಜ್ಯೂಸ್
ನಿಂಬೆ ಹಣ್ಣು ನೈಸರ್ಗಿಕವಾಗಿ ಬ್ಲೀಚಿಂಗ್ ಗುಣವನ್ನು ಹೊಂದಿದ್ದು ಇದು ಚರ್ಮವನ್ನು ಶುಚಿಗೊಳಿಸುತ್ತದೆ. ನಿಂಬೆ ಹಣ್ಣಿನ ಜ್ಯೂಸನ್ನು ನಿಮ್ಮ ಮುಖಕ್ಕೆ ಹಚ್ಚಿ ಇದರ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಅಲೊವೆರ ಜ್ಯೂಸ್
ಇದು ಕೂಡ ಮೊಡವೆಗಳನ್ನು ಮತ್ತು ಕಲೆಗಳನ್ನು ತೆಗೆಯುತ್ತದೆ. ಅಲೊವೆರ ಮೊಡವೆಗಳನ್ನು ನಿವಾರಿಸುವುದಲ್ಲದೆ ಚರ್ಮದ ಮೃದುತ್ವ ಮತ್ತು ಕಾಂತಿಯನ್ನು ಹೆಚ್ಚಿಸುತ್ತದೆ.

ಕರಬೂಜದ ಹಣ್ಣಿ ಜ್ಯೂಸ್
ಇದರಲ್ಲಿ ವಿಟಮಿನ್ ಎ ಹೆಚ್ಚಿರುತ್ತದೆ. ಇದು ನಿಮ್ಮ ಆರೋಗ್ಯ ಮತ್ತು ಚರ್ಮಕ್ಕೆ ಬಹಳ ಒಳ್ಳೆಯದು. ಈ ಹಣ್ನಿನ ರಸವನ್ನು ಮೊಡವೆಗಳಿಗೆ ಹಚ್ಚುವುದರಿಂದ ಮೊಡವೆಗಳು ನಿವಾರಣೆಯಾಗುತ್ತದೆ.

ಕಿತ್ತಳೆ ಹಣ್ಣಿನ ಜ್ಯೂಸ್
ಇದರಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿಆ್ಯಕ್ಸಿಡೆಂಟ್ ಗಳು ಹೆಚ್ಚಿರುತ್ತದೆ. ಇದು ಚರ್ಮಕ್ಕೆ ಬಹಳ ಒಳ್ಳೆಯದು. ಇದನ್ನು ಕುಡಿಯಬಹುದು ಜೊತೆಗೆ ಮುಖಕ್ಕೆ ಕೂಡ ಹಚ್ಚಿಕೊಳ್ಳಬಹುದು. ಇದರಿಂದ ಮೊಡವೆಗಳಿಂದ ಮುಕ್ತರಾಗಬಹುದು.



Click it and Unblock the Notifications
