Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮೊಡವೆಯ ನೋವನ್ನು ಕಡಿಮೆ ಮಾಡಲು ಟಿಪ್ಸ್
ಹದಿಹರೆಯದ ಪ್ರಾಯದಲ್ಲಿ ಮತ್ತು ಯೌವನಾವಸ್ಥೆಯಲ್ಲಿ ಬರುವ ಮೊಡವೆಯನ್ನು ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ. ಏಕೆಂದರೆ ಒಮ್ಮೆ ಮೊಡವೆ ಬಂತೆಂದರೆ ಮುಖದ ಸೌಂದರ್ಯ ಹಾಳಾಗುವುದಂತು ದಿಟ. ಒಂದು-ಎರಡು ಮೊಡವೆ ಬಂದರೆ ಮುಖದ ಮೇಲೆ ಅಷ್ಟೇನು ಕೆಟ್ಟ ಪರಿಣಾಮ ಬೀರುವುದಿಲ್ಲ, ಆದರೆ ಕೆಲವರಿಗೆ ಮುಖ ಪೂರ್ತಿ ಮೊಡವೆ ಎದ್ದು, ಮುಖದ ಕಳೆಯನ್ನು ಕಡಿಮೆ ಮಾಡುವುದರ ಜೊತೆಗೆ ಆ ಮೊಡವೆ ನೀಡುವ ನೋವನ್ನೂ ಅನುಭವಿಸಬೇಕಾಗುತ್ತದೆ.
ಮೊಡವೆ ಬಂದಾಗ ಕೈಯಿಂದ ಚಿವುಟಬೇಡಿ, ಇದರಿಂದ ಕಲೆ ಮತ್ತು ರಂಧ್ರಗಳು ಬೀಳುವ ಸಾಧ್ಯತೆ ಹೆಚ್ಚು. ಮೊಡವೆ ನೋವನ್ನು ಕಡಿಮೆ ಮಾಡಿ, ಮುಖದಲ್ಲಿ ಕಲೆ ಬೀಳದಂತೆ ತಡೆಯಲು ನೈಸರ್ಗಿಕವಾದ ವಿಧಾನಗಳನ್ನು ಅನುಸರಿಸಬಹುದು. ಅಂತಹ ಕೆಲ ವಿಧಾನಗಳ ಬಗ್ಗೆ ಹೇಳಿದ್ದೇವೆ. ಇವು ಪರಿಣಾಮಕಾರಿಯಾದ ವಿಧಾನಗಳಾಗಿದ್ದು ಮೊಡವೆ ಸಮಸ್ಯೆಯಿಂದ ಹೊರಬರುವಲ್ಲಿ ಸಹಾಯ ಮಾಡುವುದು:

ನಿಂಬೆ ರಸ
ಮೊಡವೆ ಬಂದು ನೋವು, ತುರಿಕೆ ಕಂಡು ಬಂದರೆ ಕೈಯಿಂದ ಮುಟ್ಟಬೇಡಿ, ನಿಂಬೆ ಹಣ್ಣಿನ ಒಂದು ಚಿಕ್ಕ ತುಂಡು ತೆಗೆದುಕೊಂಡು ಅದರಿಂದ ಮುಖವನ್ನು ಸ್ಕ್ರಬ್ ಮಾಡಿ. ಈ ರೀತಿ ಮಾಡಿದಾಗ ಸ್ವಲ್ಪ ಉರಿ ಅನಿಸಿದರೂ ಮೊಡವೆ ನೋವನ್ನು ಕಡಿಮೆ ಮಾಡಿ, ಮೊಡವೆಯನ್ನು ಚಿಕ್ಕದಾಗಿಸುವಲ್ಲಿ ತುಂಬಾ ಪರಿಣಾಮಕಾರಿ.

ಮೆಂತೆ ಸೊಪ್ಪು
ಮೆಂತೆ ಸೊಪ್ಪನ್ನು ಪೇಸ್ಟ್ ಮಾಡಿ ಅದನ್ನು ಫೇಶಿಯಲ್ ರಿತಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡುವುದರಿಂದಲೂ ಮೊಡವೆಯ ನೋವು ಕಮ್ಮಿಯಾಗುವುದು.

ಲೋಳೆಸರ
ಮೊಡವೆಯ ನೋವನ್ನು ಕಮ್ಮಿ ಮಾಡಿ, ಮುಖದಲ್ಲಿರುವ ಕಲೆಯನ್ನು ಕ್ರಮೇಣ ಹೋಗಲಾಡಿಸುವ ಸಾಮರ್ಥ್ಯ ಲೋಳೆಸರಕ್ಕಿದೆ. ಇದನ್ನು ಪ್ರತೀದಿನ ಹಚ್ಚುವುದರಿಂದ ಮೃದುವಾದ ತ್ವಚೆಯನ್ನು ಪಡೆಯಬಹುದು.

ಟೀ ಟ್ರೀ ಆಯಿಲ್
ಮೊಡವೆಯ ಮೇಲೆ ಟೀ ಟ್ರೀ ಆಯಿಲ್ ನ ಡ್ರಾಪ್ ಹಾಕಿದರೆ ಮೊಡವೆಯ ನೋವು ಕಡಿಮೆಯಾಗುವುದು ಹಾಗೂ ಅದರ ಗಾತ್ರವೂ ಕಿರಿದಾಗುವುದು.

ಜೇನು
ಜೇನು ಕೆಲವರ ಮುಖಕ್ಕೆ ತುಂಬಾ ಒಳ್ಳೆಯದು, ಕೆಲವರಲ್ಲಿ ಯಾವುದೇ ಪರಿಣಾಮ ಬೀಳುವುದಿಲ್ಲ. ನಿಮ್ಮ ತ್ವಚೆಗೆ ಜೇನು ಬಳಸಿದಾಗ ಒಂದು ವಾರದಲ್ಲಿ ಮೊಡವೆ ಸ್ವಲ್ಪ ಕಮ್ಮಿಯಾದಂತೆ ಅನಿಸಿದರೆ ಇದೇ ವಿಧಾನವನ್ನು ಮುಂದುವರೆಸಿಕೊಂಡು ಹೋಗಬಹುದು.

ಸೌತೆಕಾಯಿ
ಮೊಡವೆ ತುಂಬಾ ನೋಯುತ್ತಿದ್ದರೆ ಆ ಭಾಗಕ್ಕೆ ಸೌತೆಕಾಯಿಯ ಪೇಸ್ಟ್ ಹಚ್ಚಿದರೆ ನೋವು ಕಮ್ಮಿಯಾಗುವುದು. ಸೌತೆಕಾಯಿ ಮುಖದ ಕಾಂತಿ ಹೆಚ್ಚಿಸುವುದು.

ಕಿತ್ತಳೆಯ ಸಿಪ್ಪೆ
ಕಿತ್ತಳೆಯ ಸಿಪ್ಪೆಯನ್ನು ಒಣಗಿಸಿ ಅದನ್ನು ಹಾಲಿನ ಜೊತೆ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಸಮಸ್ಯೆಯನ್ನು ಕಮ್ಮಿ ಮಾಡಬಹುದು.

ದ್ರಾಕ್ಷಿ
ದ್ರಾಕ್ಷಿಯಿಂದ ಮುಖವನ್ನು ಉಜ್ಜಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಇದರಲ್ಲಿರುವ ವಿಟಮಿನ್ ಸಿ ಮೊಡವೆ ಏಳದಂತೆ ತಡೆಯುತ್ತದೆ.

ಟೂತ್ ಪೇಸ್ಟ್
ಮೊಡವೆ ದಪ್ಪಗಾಗುವುದನ್ನು ತಡೆಯಲು ಮೊಡವೆಯ ಮೇಲೆ ಟೂತ್ ಪೇಸ್ಟ್ ಹಚ್ಚಿದರೆ ಸಾಕು, ಆದರೆ ನೆನೆಪಿಡಿ ಟೂತ್ ಪೇಸ್ಟ್ ಹಚ್ಚಿ 5 ನಿಮಿಷ ಬಿಟ್ಟ ತಕ್ಷಣ ಮುಖ ತೊಳೆಯಿರಿ, ಇಲ್ಲದಿದ್ದರೆ ಟೂತ್ ಪೇಸ್ಟ್ ಹಚ್ಚಿದ ಭಾಗದಲ್ಲಿ ತ್ವಚೆ ಕಂದಿ ಹೋಗುವುದು.



Click it and Unblock the Notifications
