Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸುಕ್ಕುಗಳನ್ನು ಹೋಗಲಾಡಿಸುವ ಮನೆಮದ್ದುಗಳು
ನಾವು ಬೆಳೆದಂತೆ, ನಮ್ಮ ಚರ್ಮ ಉಲ್ಲಾಸವನ್ನು ಕಳೆದುಕೊಳ್ಳುತ್ತದೆ. ತ್ವಚೆ ಮೊದಲಿನಂತೆ ಉಳಿಯುವುದಿಲ್ಲ. ತೀವ್ರ ಅಥವಾ ಹಾಗೇ ಉಳಿಯುವುದಿಲ್ಲ ಆಗುತ್ತದೆ. ವಯಸ್ಸು ಸಹ ಸುಕ್ಕುಗಳು, ಕಪ್ಪು ವತ್ರುಲಗಳು, ಮತ್ತು ಸೂಕ್ಷ್ಮ ರೇಖೆಗಳಿಗೆ ಕಾರಣವಾಗುತ್ತದೆ. ಮಹಿಳೆಯರು ಇವುಗಳಿಂದ ತಮಗೆ ವಯಸ್ಸಾಗಿದೆ ಎಂಬ ಭ್ರಮೆಯನ್ನು ಹೊಂದಿರುತ್ತಾರೆ. ಅವರು ವಿಶೇಷವಾಗಿ ಸುಕ್ಕುಗಟ್ಟಿದಂತಹ ಚಿಹ್ನೆಗಳನ್ನು ಮರೆಮಾಚಲು ಕ್ರೀಮ್ ಮತ್ತು ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ. ಸೂಕ್ಷ್ಮ ರೇಖೆಗಳು ಮತ್ತು ಸುರುಳಿಗಟ್ಟಿದ ಚರ್ಮಕ್ಕೆ ಅನೇಕ ಮುಲಾಮುಗಳು ಕೂಡ ಇವೆ.
ರಾಸಾಯನಿಕ ಆಧಾರಿತ ಶೃಂಗಾರ ಸಾಮಗ್ರಿಗಳು ಎಲ್ಲರ ತ್ವಚೆಗೆ ಪರಿಣಾಮಕಾರಿಯಾಗಿರುವುದಿಲ್ಲ. ಬದಲಿಗೆ ಅವು ಸೋಂಕು, ತುರಿಕೆ ಯಂತಹ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಆದರೆ ಸುಕ್ಕುಗಳು ಮತ್ತು ವಯಸ್ಸಾದ ಇತರ ಚಿಹ್ನೆಗಳನ್ನು ಹೋಗಲಾಡಿಸುವಲ್ಲಿ ಮನೆಯಲ್ಲಿ ಕ್ರೀಮ್ ತಯಾರಿಸಿ ಬಳಸುವುದು ಯಾವಾಗಲೂ ಉತ್ತಮ ಆಯ್ಕೆ. ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಂಡು ತಯಾರಿಸಲಾಗುವ ಕ್ರೀಮ್ ಗಳು ಯಾವುದೇ ರೀತಿಯಲ್ಲಿ ಅಪಾಯಕಾರಿಯಲ್ಲ. ಇದು ಶಾಶ್ವತ ಪರಿಹಾರವನ್ನು ಒದಗಿಸುತ್ತವೆ. ನೈಸರ್ಗಿಕವಾದ ಮತ್ತು ಮನೆಯಲ್ಲಿಯೇ ತಯಾರಿಸಿದ ಎಲ್ಲರ ಚರ್ಮಕ್ಕೂ ಹೊಂದಿಕೊಳ್ಳುವಂತಹ ಕ್ರೀಮ್ ಈಗ ಲಭ್ಯವಿದೆ.
ಅನೇಕ ಮಹಿಳೆಯರಲ್ಲಿ ಸುಕ್ಕಿನ ಸಮಸ್ಯೆಗಳನ್ನು ಹೋಗಲಾಡಿಸಿ ಅವರ ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುವ ಉಪಯುಕ್ತ ಮನೆಯಲ್ಲಿ ತಯಾರಿಸಲಾಗುವ ಕ್ರೀಮ್ ಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

1.ಮೊಟ್ಟೆ ಮತ್ತು ಕ್ರೀಮ್ ಮಾಸ್ಕ್
ಮೊಟ್ಟೆಯು ಬಯೋಟಿನ್, ಪ್ರೋಟೀನ್ ಮತ್ತು ಜೀವಸತ್ವಗಳ ರೀತಿಯ ಘಟಕಗಳನ್ನು ಹೊಂದಿದೆ ಇವು ಸುಕ್ಕುಗಳನ್ನು ಕಡಿಮೆ ಮದಲು ಸಹಾಯಮಾಡುತ್ತದೆ. ಮೊಟ್ಟೆಯಲ್ಲಿನ ಲೋಳೆ ಅಂಶ ವಯಸ್ಸಾದ ಚಿಹ್ನೆಗಳನ್ನು ಹೋಗಲಾಡಿಸುವ ಗುಣಗಳನ್ನು ಹೊಂದಿದೆ. ಕ್ರೀಮ್, ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡಲು ಅತ್ಯಗತ್ಯ. ಈ ಮಾಸ್ಕ್ ನ್ನು ಒಂದು ಮೊಟ್ಟೆ ಮತ್ತು ಅರ್ಧ ಬೌಲ್ ಕ್ರೀಮ್ ಮಿಶ್ರಣ ಮಾಡಿ ತಯಾರಿಸಿ. ಈ ಮಿಶ್ರಣಕ್ಕೆ ಲಿಂಬೆ ಹನಿಗಳನ್ನು ಸೇರಿಸಿ. ಈ ಮಾಸ್ಕ್ ನ್ನು ತ್ವಚೆಗೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ. ಈ ಪೇಸ್ ಪ್ಯಾಕ್ ನಿಯಮಿತವಾಗಿ ಬಳಸುವುದರಿಂದ ಸಾಕಷ್ಟು ಪರಿಣಾಮಕಾರಿಯಾಗಿದೆ.

2.ಬಾಳೆಹಣ್ಣು ಮತ್ತು ಕ್ಯಾರೇಟ್ ಮಾಸ್ಕ್
ಈ ಸಂಯೋಜನೆಯು ಸ್ವಲ್ಪ ವಿಲಕ್ಷಣದಂತೆ ಕಂಡರೂ ತ್ವಚೆಯ ಮೇಲೆ ಪವಾಡವನ್ನುಂಟು ಮಾಡುತ್ತದೆ. ಬಾಳೆಹಣ್ಣು ಮತ್ತು ಕ್ಯಾರೆಟ್ ಎರಡೂ ಚರ್ಮದ ಬಿಗಿಗೊಳಿಸುವ ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಈ ಪ್ಯಾಕ್ ನ್ನು ಒಂದು ಬಾಳೆಹಣ್ಣು ಮತ್ತು ಒಂದು ಕ್ಯಾರೆಟ್ ಪೇಸ್ಟ್ ಮಾಡಿ ತಯಾರಿಸಿ. ಈ ಪೇಸ್ಟ್ ನ್ನು ಚೆನ್ನಾಗಿ ಮಿಶ್ರಣಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷವರೆಗೆ ಹಾಗೆಯೇ ಇಟ್ಟು ನಂತರ ತುಸು ಬೆಚ್ಚಗಿನ ನೀರಿನಿಂದ ತೊಳೆಯಿರಿ.

3.ಗುಲಾಬಿ ನೀರಿನ ಶುದ್ಧೀಕರಣ (ರೋಸ್ ವಾಟರ್ ಕ್ಲಿಂಸಿಂಗ್)
ತ್ವಚೆಯಲ್ಲಿ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳು ಉಂಟಾಗಲು ತ್ವಚೆಯಲ್ಲಿನ ಕಲ್ಮಶಗಳು ಮತ್ತು ಕೊಳಕುಗಳು ಕಾರಣವಾಗುತ್ತವೆ. ರಾತ್ರಿ ನಿದ್ದೆ ಮಾಡುವುದಕ್ಕಿಂತ ಮೊದಲು ಪ್ರತಿ ದಿನ ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ಗುಲಾಬಿ ನೀರನ್ನು ಬಳಸಿ. ಕಣ್ಣುಗಳು ಅಡಿಯಲ್ಲಿರುವ ಕಪ್ಪು ವತ್ರುಗಳನ್ನು ಕಡಿಮೆ ಮಾಡಲು ರೋಸ್ ವಾಟರ್ ನ್ನು ಹತ್ತಿಯಲ್ಲಿ ಹಾಕಿ ಮುಖದ ಮೇಲೆ ಉಜ್ಜುವುದರ ಮೂಲಕ ಕಡಿಮೆ ಈ ಮಸಾಜ್ ಚರ್ಮದಲ್ಲಿ ರಕ್ತ ಸಂಚಾರವನ್ನೂ ಹೆಚ್ಚಾಗಿಸುತ್ತದೆ.

4.ಆಲೂ ಸ್ಕ್ರಬ್
ಆಲೂಗಡ್ಡೆ ತ್ವಚೆಗೆ ಅತ್ಯುತ್ತಮ ಬ್ಲೀಚಿಂಗ್ ಮತ್ತು ವಯಸ್ಸಾದ ಚಿಹ್ನೆಗಳನ್ನು ಕಡಿಮೆಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಪ್ರತಿ ದಿನ ನಿಮ್ಮ ಮುಖಕ್ಕೆ ಆಲೂಗಡ್ಡೆ ಸ್ಲೈಸ್ ಬಳಸಿಕೊಂಡು ಮಸಾಜ್ ಮಾಡಿದರೆ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆಲೂಗಡ್ಡೆಉಅನ್ನು ಮಾಸ್ಕ್ ಆಗಿಯೂ ಬಳಸಬಹುದು. ಒಂದು ಆಲೂಗೆಡ್ಡೆಯನ್ನು ಮ್ಯಾಶ್ (ರುಬ್ಬಿ) ಕೆಲವು ನಿಂಬೆ ಹನಿಗಳನ್ನು ಸೇರಿಸಿ. ಮುಖಕ್ಕೆ ಮೇಲೆ ಹಚ್ಚಿ ಮತ್ತು 5-10 ನಿಮಿಷಗಳ ಕಾಲ ಹಾಗೆಯೇ ಇರಿಸಿಕೊಳ್ಳಿ. ನಂತರ ತಣ್ಣೀರಿನಲ್ಲಿ ಮಾಸ್ಕ್ ನ್ನು ತೊಳೆಯಿರಿ. ಆಲೂಗೆಡ್ಡೆಯನ್ನು ನಿಯಮಿತವಾಗಿ ಚರ್ಮದ ಮೇಲೆ ಅನ್ವಯಿಸುವುದರಿಂದ ಸಾಕಷ್ಟು ಪ್ರಯೋಜನಕಾರಿಯಾಗಿದೆ.

5.ಮೊಸರಿನ ಮಾಸ್ಕ್
ಮೊಸರು ಚರ್ಮದ ಅಂಗಾಂಶಗಳನ್ನು ಮತ್ತು ಜೀವಕೋಶಗಳನ್ನು ದುರಸ್ತಿ ಮತ್ತು ಪುನರ್ ನಿರ್ಮಿಸಲು ಅಗತ್ಯ ಜೀವಸತ್ವಗಳನ್ನು ಒದಗಿಸುತ್ತದೆ. ಮೊಸರನ್ನು ಪ್ರತಿದಿನ ಸೇವಿಸುವುದರಿಂದಲೂ ಸಹ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಮೊಸರಿನ ಮಾಸ್ಕ್ ನ್ನು ಮೊಸರಿನೊಂದಿಗೆ ನಿಂಬೆ ಹನಿಗಳನ್ನು ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ನಿಂಬೆ ಮುಖವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಮೊಸರು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಈ ಪ್ಯಾಕ್ ನ್ನು ಹಚ್ಚಿ 20 ನಿಮಿಷಗಳ ಕಾಲ ಬಿಡಿ. ಆನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ನಿಮ್ಮ ತ್ವಚೆಗೆ ಉತ್ತಮ ಫಲಿತಾಂಶಗಳನ್ನು ಪಡೆಯಲು ನಿಯಮಿತವಾಗಿ ಈ ಮನೆಮದ್ದುಗಳನ್ನು ಮಾಡಿ ಕೆಲವೇ ದಿನಗಳಲ್ಲಿ ನಿಮ್ಮ ತ್ವಚೆಯಲ್ಲಾಗುವ ಧನಾತ್ಮಕ ಬದಲಾವಣೆಗಳನ್ನು ನೀವೇ ಗಮನಿಸಿ!



Click it and Unblock the Notifications