Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸುವ ಫೇಸ್ ಮಾಸ್ಕ್
ತಿಂಗಳಿಗೊಮ್ಮೆ ಫೇಶಿಯಲ್, ಮಸಾಜ್ ಅಂತ ಮುಖದ ಆರೈಕೆ ಮಾಡದಿದ್ದರೆ ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಕಂಡು ಬರುವುದು ಸಹಜ. ಮೂಗಿನ ಪಕ್ಕದಲ್ಲಿ ಮತ್ತು ಗಲ್ಲದಲ್ಲಿ ಈ ಬ್ಲ್ಯಾಕ್ ಹೆಡ್ಸ್ ಹೆಚ್ಚಾಗಿ ಕಂಡು ಬರುವುದು. ಈ ಬ್ಲ್ಯಾಕ್ ಹೆಡ್ಸ್ ಬಿದ್ದಾಗ ಬರೀ ಫೇಸ್ ವಾಶ್ ಬಳಸಿ ಮುಖ ತೊಳೆಯುವುದರಿಂದ ಅದನ್ನು ಹೋಗಲಾಡಿಸಲು ಸಾಧ್ಯವಿಲ್ಲ.
ಮುಖದಲ್ಲಿರುವ ನಿರ್ಜೀವ ತ್ವಚೆಯನ್ನು ಹೋಗಲಾಡಿಸುವ ವಿಧಾನದಿಂದ ಮಾತ್ರ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಲು ಸಾಧ್ಯ. ಅದಕ್ಕಿರುವ ದಾರಿಯೆಂದರೆ ಸ್ಕ್ರಬ್ಬಿಂಗ್. ಬ್ಯೂಟಿ ಪಾರ್ಲರ್ ಗೆ ಸ್ಕ್ರಬ್ಬಿಂಗ್ ಮಾಡಿಸಲು ಪುರುಸೊತ್ತು ಇಲ್ಲವೆಂದರೆ ಇಲ್ಲಿ ನೀಡಿರುವ ಟಿಪ್ಸ್ ಬ್ಲ್ಯಾಕ್ ಹೆಡ್ಸ್ ಸಮಸ್ಯೆ ನಿವಾರಿಸುವಲ್ಲಿ ಸಹಾಯ ಮಾಡುವುದು.
ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಲು ಟಿಪ್ಸ್

ಓಟ್ಸ್
ಓಟ್ಸ್ ಅನ್ನು ಹಾಲಿನ ಜೊತೆ ಮಿಕ್ಸ್ ಮಾಡಿ ಅದರಿಂದ ಮುಖ ತಿಕ್ಕಿ. ಇದರಿಂದ ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ, ಬ್ಲ್ಯಾಕ್ ಹೆಡ್ಸ್ ರಹಿತ ತ್ವಚೆಯನ್ನು ನಿಮ್ಮದಾಗಿಸಬಹುದು.

ಮೊಸರಿನಿಂದ ಸ್ಕ್ರಬ್ಬಿಂಗ್
ಮೊಸರಿಗೆ ಜೇನು ಅಥವಾ ನಿಂಬೆ ರಸ ಹಾಕಿ ಮಂದವಾಗಿ ಮುಖಕ್ಕೆ ಹಚ್ಚಿ ಒಣಗಲು ಬಿಡಿ, ನಂತರ ಮುಖವನ್ನು ಸ್ಕ್ರಬ್ ಮಾಡಿ ಮುಖ ತೊಳೆಯಿರಿ, ನಂತರ ಮೊಸರಿನಿಂದ 5 ನಿಮಿಷ ಮಸಾಜ್ ಮುಖ ತೊಳೆದರೆ ಬ್ಲ್ಯಾಕ್ ಹೆಡ್ಸ್ ಹೋಗಿರುತ್ತದೆ.

ನಿಂಬೆ ರಸ
ನಿಂಬೆ ಹಣ್ಣು ನೈಸರ್ಗಿಕವಾದ ಬ್ಲೀಚಿಂಗ್ ನಂತೆ ವರ್ತಿಸುತ್ತದೆ. ಒಂದು ಹೋಳು ನಿಂಬೆ ಹಣ್ಣಿನಿಂದ ಮುಖವನ್ನು ಸ್ಕ್ರಬ್ ಮಾಡಿ, ಮೂಗಿನ ಸಮೀಪ ಚೆನ್ನಾಗಿ ಸ್ಕ್ರಬ್ ಮಾಡಿ. ಈ ರೀತಿ ಮಾಡಿಯೂ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಬಹುದು.

ಕಿತ್ತಳೆ ಸಿಪ್ಪೆ
ಕಿತ್ತಳೆ ಸಿಪ್ಪೆಯನ್ನು ಪೇಸ್ಟ್ ಮಾಡಿ ಅದನ್ನು ಜೇನಿನ ಜೊತೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ ಒಣಗಲು ಬಿಡಿ, ನಂತರ ಸ್ವಲ್ಪ ನೀರನ್ನು ಮುಖಕ್ಕೆ ಚಿಮುಕಿಸಿ ಮತ್ತೊಮ್ಮೆ ಸ್ಕ್ರಬ್ ಮಾಡಿ ಮುಖ ತೊಳೆದರೆ ಬ್ಲ್ಯಾಕ್ ಹೆಡ್ಸ್ ಸಂಪೂರ್ಣವಾಗಿ ಹೋಗಿರುತ್ತದೆ.

ಅಡುಗೆ ಸೋಡಾ
ಅಡುಗೆ ಸೋಡಾವನ್ನು ಸ್ವಲ್ಪ ನೀರು ಹಾಕಿ ಕಲೆಸಿ, ವೃತ್ತಾಕಾರವಾಗಿ ಮುಖಕ್ಕೆ ಮಸಾಜ್ ಮಾಡಿ 5 ನಿಮಿಷದ ನಂತರ ಒದ್ದೆ ಬಟ್ಟೆಯಿಂದ ಮುಖವನ್ನು ಒರೆಸಿ. ನಂತರ ಮುಖ ತೊಳೆಯಿರಿ. ಮುಖದಲ್ಲಿ ಮೊಡವೆ ಇರುವವರಿಗೆ ಈ ವಿಧಾನ ತುಂಬಾ ಸೂಕ್ತವಾದದು.

ಮೊಟ್ಟೆ
ಮೊಟ್ಟೆಯ ಬಿಳಿಗೆ ಸ್ವಲ್ಪ ಜೇನು ಮತ್ತು ನಿಂಬೆರಸ ಹಾಕಿ ಮಿಕ್ಸ್ ಮಾಡಿ, ಮುಖಕ್ಕೆ ಹಚ್ಚಿ ಅದು ಒಣಗಿದ ಬಳಿಕ ಸ್ವಲ್ಪ ನೀರನ್ನು ಮುಖಕ್ಕೆ ಹಾಕಿ ಸ್ಕ್ರಬ್ ಮಾಡಿ , ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡುವುದರಿಂದಲೂ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು.

ಪಪ್ಪಾಯಿ
ಮುಖಕ್ಕೆ ವಾರದಲ್ಲಿ 2-3 ಬಾರಿ ಪಪ್ಪಾಯಿ ಹಚ್ಚಿ ಪೇಶಿಯಲ್ ಮಾಡುತ್ತಿದ್ದರೆ ಮುಖದಲ್ಲಿ ಬ್ಲ್ಯಾಕ್ ಹೆಡ್ಸ್ ಬೀಳುವುದನ್ನು ತಡೆಯಬಹುದು, ಅಲ್ಲದೆ ಮುಖದ ಬಿಳುಪು ಕೂಡ ಹೆಚ್ಚುವುದು.

ಕಡಲೆ ಹಿಟ್ಟು
ಕಡಲೆ ಹಿಟ್ಟಿಗೆ ಸ್ವಲ್ಪ ಮಿಶ್ರಣ ಮಾಡಿ ಮುಖವನ್ನು ಸಕ್ರಬ್ ಮಾಡಿದರೆ ಬ್ಲ್ಯಾಕ್ ಹೆಡ್ಸ್ ಹೋಗುವುದು. ಮುಖ ತೊಳೆಯಲು ಕಡಲೆ ಹಿಟ್ಟು ಬಳಸಿದರೆ ಒಳ್ಳೆಯದು.
ಕೆಲವರಿಗೆ ಕಡಲೆ ಹಿಟ್ಟು ತ್ವಚೆಗೆ ಹೊಂದಿಕೊಳ್ಳುವುದಿಲ್ಲ, ಅಂತವರು ಇದನ್ನು ಬಳಸಬೇಡಿ.



Click it and Unblock the Notifications
