Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ಮನೆಯಲ್ಲೇ ತಯಾರಿಸಿ ಮಾಯಿಶ್ಚುರೈಸರ್ ಕ್ರೀಮ್
ಚಳಿಗಾಲದಲ್ಲಿ ತ್ವಚೆಯನ್ನು ಎಷ್ಟು ರಕ್ಷಣೆ ಮಾಡಿದರೂ ಸಾಲದು. ಅದರಲ್ಲೂ ನಿಮ್ಮದು ಶುಷ್ಕ ತ್ವಚೆಯಾಗಿದ್ದರಂತೂ ತ್ವಚೆಯನ್ನು ಕಾಳಜಿ ಮಾಡುವುದೇ ದಿನದ ಕೆಲಸವಾಗಿಬಿಡುತ್ತದೆ. ಚರ್ಮ ಶುಷ್ಕವಾದಷ್ಟು ಚರ್ಮದಲ್ಲಿ ಬಿರುಕು ಬಿಡುವುದು ಸಹಜ. ಇದರಿಂದ ನಿಮಗೆ ಚಳಿಗಾಲದಲ್ಲಿ ಸಾಕಷ್ಟು ಕಿರಿಕಿರಿ ಎನಿಸಬಹುದು. ಆದ್ದರಿಂದ ಮಾಯಿಶ್ವರೈಸರ್ ಮೊರೆ ಹೋಗುವುದು ಸಹಜ!
ಮಾಯಿಶ್ಚರೈಸರ್ ಗಳು ನೈಸರ್ಗಿಕವಾಗಿರಬಹುದು ಅಥವಾ ಕೃತಕವಾಗಿರಬಹುದು. ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗಂತೂ ಅವು ಬೇಕೇ ಬೇಕು. ಆದ್ದರಿಂದ ಈ ಕೃತಕ ಮಾಯಿಶ್ಚರೈಸರ್ ಕ್ರೀಮ್ ಬಳಸುವುದಕ್ಕಿಂತ ನೈಸರ್ಗಿಕ ಮಾಯಿಶ್ಚರೈಸರ್ ಬಳಸುವುದು ಒಳ್ಳೆಯದು. ಇದರಿಂದ ನಿಮಗೆ ಯಾವುದೇ ರಾಸಾಯನಿಕಗಳನ್ನು ಬಳಸಿ ಅದರ ಅಡ್ಡ ಪರಿಣಾಮಗಳುಂಟಾಗುವ ಭಯವಿರುವುದಿಲ್ಲ. ಆದ್ದರಿಂದ ನೈಸರ್ಗಿಕ ತೇವಾಂಶವುಳ್ಳ ವಸ್ತುಗಳು ನಿಮ್ಮ ತ್ವಚೆಯನ್ನು ಕಾಪಾಡುವುದು ಮಾತ್ರವಲ್ಲದೆ ಆರೋಗ್ಯಕರ ಉಪಶಮನವನ್ನೂ ನೀಡುತ್ತವೆ. ಕೃತಕ ಮಾಯಿಶ್ಚರೈಸರ್ ಕ್ರೀಮ್ ಗಳು ನಿಮಗೆ ದುಬಾರಿಯಾಗಬಹುದು ಜೊತೆಗೆ ಇವುಗಳಲ್ಲಿರುವ ಪೆಟ್ರೋಲಿಯಂನಂತಹ ರಾಸಾಯನಿಕಗಳು ತ್ವಚೆಗೆ ಒಳ್ಳೆಯ ಪರಿಣಾಮವನ್ನೂ ಉಂಟುಮಾಡುವುದಿಲ್ಲ.
ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಉತ್ತಮ ಕಂಪನಿಗಳು ತಯಾರಿಸುವ ಉತ್ಪನ್ನಗಳು ತ್ವಚೆಯ ಸಮಸ್ಯೆಗೆ ಸ್ವಲ್ಪಮಟ್ಟಿನ ಪರಿಹಾರ ಒದಗಿಸಬಹುದು. ಆದರೂ ಕೇವಲ ನೈಸರ್ಗಿಕವಾದ ಮನೆಮದ್ದುಗಳು ಮಾತ್ರ ಮುಖಕ್ಕೆ ಯಾವುದೇ ಅಡ್ಡ ಪರಿಣಾಮಗಳನ್ನುಂಟುಮಾಡದೇ ಉತ್ತಮ ಪರಿಣಾಮವನ್ನುಂಟು ಮಾಡಬಹುದು. ಅದರಲ್ಲೂ ನಿಮ್ಮದು ಸೂಕ್ಷ್ಮ ತ್ವಚೆಯಾಗಿದ್ದರೆ ಅದಕ್ಕೆ ಮನೆಮದ್ದುಗಳಿಗಿಂತ ಉತ್ತಮ ಪರಿಹಾರ ಇನ್ನೊಂದಿಲ್ಲ.
ಸೂಕ್ಷ್ಮ ತ್ವಚೆಗಾಗಿಯೇ ಇರುವ ನೈಸರ್ಗಿಕ ಮಾಯಿಶ್ಚರೈಸರ್ ಗಳು ತ್ವಚೆಯ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಉಪಶಮನವನ್ನು ನೀಡುತ್ತವೆ. ಇಂತಹ ಉತ್ಪನ್ನಗಳು ಸುಲಭವಾಗಿ ಎಲ್ಲರೂ ಬಳಸಬಹುದಾದಂತದ್ದಾಗಿದ್ದು, ನಿಮಗೆ ತೃಪ್ತಿಯನ್ನೂ ನೀಡುತ್ತವೆ. ಚಳಿಗಾಲದಲ್ಲಿ ಶುಷ್ಕ ತ್ವಚೆಯ ಸಮಸ್ಯೆಯನ್ನು ನಿವಾರಿಸಲು ಮಾರ್ಗವನ್ನು ಹುಡುಕುತ್ತಿದ್ದರೆ ಇಲ್ಲಿದೆ ನಿಮಗೊಂದಿಷ್ಟು ಉತ್ತಮ ಸಲಹೆಗಳು! ಪ್ರಯತ್ನಿಸಿ, ಫಲ ಕಂಡುಕೊಳ್ಳಿ.

ದೇಹದ ಮಾಯಿಶ್ಚರೈಸರ್:
ಎರಡು ಚಮಚ ನಿಂಬೆ ರಸ ಮತ್ತು ಒಂದು ಚಮಚ ಆಲೀವ್ ಎಣ್ಣೆಯನ್ನು 1/3 ಕಪ್ ಹಾಲಿಗೆ ಬೆರೆಸಿ. ಈ ಮಿಶ್ರಣವನ್ನು ರೆಫ್ರಿಜರೇಟರ್ ನಲ್ಲಿಟ್ಟು ದಿನವೂ ನಿಮ್ಮ ದೇಹಕ್ಕೆ ಹಚ್ಚಿ. ಹೀಗೆ ಈ ಮಿಶ್ರಣವನ್ನು ದಿನವೂ ಸೂಕ್ಷ್ಮ ತ್ವಚೆಯನ್ನು ಹೊಂದಿರುವವರು ಬಳಸುವುದು ಒಳ್ಳೆಯದು.

ಮುಖದ ಮಾಯಿಶ್ಚರೈಸರ್:
ಒಂದು ಚಮಚ ಕಚ್ಚಾ ತೆಂಗಿನ ಎಣ್ಣೆ , ಒಂದು ಚಮಚ ಜೇನು ಮತ್ತು ಒಂದು ಚಮಚ ನಿಂಬೆ ರಸಗಳನ್ನು ಮಿಶ್ರಣ ಮಾಡಿ ನಂತರ, ಇದನ್ನು ಸುದೀರ್ಘ ಬಳಕೆಗಾಗಿ ರೆಫ್ರಿಜರೇಟರ್ ನಲ್ಲಿ ಶೇಖರಿಸಿಡಬಹುದು. ಇದೂ ಕೂಡ ಸೂಕ್ಷ್ಮ ಚರ್ಮಕ್ಕೆ ಒಂದು ಉತ್ತಮ ಮನೆಯಲ್ಲಿ ತಯಾರಿಸಬಹುದಾದ ಮಾಯಿಶ್ಚರೈಸರ್ ಆಗಿದೆ .

ಸ್ನಾನದ ನಂತರ ಬಳಸಬಹುದಾದ ಮಾಯಿಶ್ಚರೈಸರ್ ಲೋಶನ್:
ಸುಮಾರು ಹತ್ತು ಚಮಚ ಬಾದಾಮಿ, ತೆಂಗಿನ ಎಣ್ಣೆ ಮತ್ತು ಎಳ್ಳಿನ ಎಣ್ಣೆಯಂತಹ ಸಾರಯುಕ್ತ ತೈಲಗಳನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಒಂದು ಬಾಟಲ್ ನಲ್ಲಿ ಶೇಖರಿಸಿಡಿ. ಮೃದು ಮತ್ತು ರೇಷ್ಮೆಯಂತಹ ತ್ವಚೆಯನ್ನು ಪಡೆಯಲು ಈ ಮಿಶ್ರಣವನ್ನು ಸ್ನಾನದ ನಂತರ ನಿಮ್ಮ ದೇಹಕ್ಕೆ ಅನ್ವಯಿಸಬಹುದು. ಮನೆಯಲ್ಲಿಯೇ ಮಾಡಿದ ಈ ಮಾಯಿಶ್ಚರೈಸರ್ ಬಳಸಿ ಕೆಲವೇ ದಿನಗಳಲ್ಲಿ ವ್ಯತ್ಯಾಸವನ್ನು ಕಾಣಿರಿ.

ತಾಜಾತನ ನೀಡುವ ಮಾಯಿಶ್ಚರೈಸರ್:
ಒಂದು ಚಮಚ ನಿಂಬೆ ರಸ ಮತ್ತು ಎರಡು ಚಮಚ ಆಲಿವ್ ತೈಲ ಮತ್ತು ಒಂದು ಸೌತೆಕಾಯಿಯನ್ನು ತೆಗೆದುಕೊಂಡು ಈ ಊರನ್ನು ಚೆನ್ನಾಗಿ ಮಿಶ್ರಣ ಮಾಡಿ, ರೆಫ್ರಿಜಿರೇಟರ್ ನಲ್ಲಿಟ್ಟುಕೊಳ್ಳಿ . ನಿಮಗೆ ಬೇಕೆನಿಸಿದಾಗ ಇದನ್ನು ಬಳಸಿ. ಇದು ಉಲ್ಲಾಸಕರ ಮತ್ತು ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸುತ್ತದೆ.

ಒಣ ಚರ್ಮಕ್ಕೆ ಅಲೋ ವೆರಾ ಮಾಯಿಶ್ಚರೈಸರ್ :
ಅಲೋ ವೆರಾ ಜೆಲ್ ನಾಲ್ಕು ಚಮಚ, ಬಾದಾಮಿ ತೈಲ ಒಂದು ಚಮಚ, ಆಲಿವ್ ಎಣ್ಣೆ ಒಂದು ಚಮಚ ಮತ್ತು ಸ್ವಲ್ಪ ಗುಲಾಬಿ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ದೇಹಕ್ಕೆ ಲೇಪಿಸಿದರೆ ನಿಮ್ಮ ಒಣ ಚರ್ಮದಲ್ಲಿ ತೇವಾಂಶವನ್ನಿಟ್ಟುಕೊಳ್ಳಲು ಸಹಾಯಕವಾಗುತ್ತದೆ.

ಸಾಮಾನ್ಯ ಚರ್ಮಕ್ಕೆ ಅಲೋ ವೆರಾ ಮಾಯಿಶ್ಚರೈಸರ್:
ನಾಲ್ಕು ಚಮಚ ಅಲೋ ವೆರಾ ಜೆಲ್ ಮತ್ತು ಒಂದು ಚಮಚ ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕೊಠಡಿ ತಾಪಮಾನದಲ್ಲಿ ಸಂಗ್ರಹಿಸಿಡಬಹುದು. ಇದನ್ನು ಸಾಮಾನ್ಯ ಚರ್ಮವನ್ನು ಹೊಂದಿರುವವರು ದಿನವೂ ಬಳಸಬಹುದು.

ಗುಲಾಬಿ ದಳಗಳ ಮಾಯಿಶ್ಚರೈಸರ್:
ಕೆಲವು ಗುಲಾಬಿ ದಳಗಳನ್ನು ಗುಲಾಬಿ ನೀರಿನ ಹನಿಗಳ ಜೊತೆ ಕುದಿಸಿ. ಇದನ್ನು ಸೋಸಿ ಎರಡು ಚಮಚ ಅಲೋ ರಸವನ್ನು ಸೇರಿಸಿ. ಇದನ್ನು ನಿಮ್ಮ ಫ್ರಿಜ್ ನಲ್ಲಿ ಶೇಖರಿಸಿಟ್ಟು ಮೃದುವಾದ, ತೇವಾಂಶಯುಕ್ತ ತ್ವಚೆಯನ್ನು ಪಡೆಯಲು ಇದನ್ನು ದೇಹಕ್ಕೆ ಹಚ್ಚಿ. ಜೊತೆಗೆ ಇದನ್ನು ಸೂಕ್ಷ್ಮ ಚರ್ಮವುಳ್ಳವರೂ ಸುರಕ್ಷಿತವಾಗಿ ಬಳಸಬಹುದು .

ತೆಂಗಿನ ಎಣ್ಣೆ ಮಾಯಿಶ್ಚರೈಸರ್:
ಕೊಬ್ಬರಿ ಎಣ್ಣೆ ಉತ್ತಮ ಮಾಯಿಶ್ಚರೈಸರ್ ಎನ್ನುವುದು ಎಲ್ಲರಿಗೂ ತಿಳಿದಿರುವ ಅಂಶ. ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆ, ವಿಟಮಿನ್ ಇ , ಮತ್ತು ಲ್ಯಾವೆಂಡರ್ ನ್ನು ಮಿಶ್ರಣ ಮಾಡಿ. ಉತ್ತಮ ಫಲಿತಾಂಶಕ್ಕಾಗಿ ತ್ವಚೆಗೆ ಈ ಮಿಶ್ರಣವನ್ನು ನಿಯಮಿತವಾಗಿ ಬಳಸಿ. ಇದು ಸೂಕ್ಷ್ಮ ಚರ್ಮದ ಸಮಸ್ಯೆಯನ್ನು ನಿವಾರಿಸಲು ಮನೆಯಲ್ಲಿಯೇ ತಯಾರಿಸಬಹುದಾದ ಒಂದು ಉತ್ತಮ ಮಾಯಿಶ್ಚರೈಸರ್ ಕ್ರೀಮ್!

ಹಾಲಿನ ಮಾಯಿಶ್ಚರೈಸರ್:
ಎರಡು ಚಮಚ ಆಲಿವ್ ಎಣ್ಣೆಯನ್ನು ಹಾಲಿನೊಂದಿಗೆ ಬೆರೆಸಿ. ಇದಕ್ಕೆ ಎರಡು ಚಮಚ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಈ ಮಿಶ್ರಣವನ್ನು ದಿನವೂ ಸೂಕ್ಷ್ಮ ತ್ವಚೆಗೆ ಲೇಪಿಸಿದರೆ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದು.
ಚಳಿಗಾಲದಲ್ಲಿ ಎದುರಾಗುವ ನಿಮ್ಮ ತ್ವಚೆಯ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕಂಡುಕೊಳ್ಳಲು ಮೇಲಿನ ಮನೆಮದ್ದುಗಳನ್ನು ಇಂದೇ ಪ್ರಯತ್ನಿಸಿ.



Click it and Unblock the Notifications











