Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
30 ದಾಟಿದರೂ ಯೌವನದ ಕಳೆ ಮಾಸದಿರಲು ಟಿಪ್ಸ್
ನಾವೆಲ್ಲಾ ನಮ್ಮ ತ್ವಚೆ ಸುಂದರವಾಗಿರಬೇಕು, ವಯಸ್ಸು 35 ದಾಟಿದರೂ ಯೌವನದ ಕಳೆ ಮಾಸಬಾರದು ಎಂದೆಲ್ಲಾ ಬಯಸುತ್ತೇವೆ. ಆದರೆ ಅದಕ್ಕಾಗಿ ಪ್ರಯತ್ನವನ್ನು ಮಾತ್ರ ಮಾಡುವುದಿಲ್ಲ. ಕ್ರೀಮ್, ಪೌಂಡೇಶನ್ ಗಳಿದ್ದರೆ ಸಾಕು ಸುಂದರವಾದ ತ್ವಚೆ ಪಡೆಯಬಹುದೆಂದು ಬಯಸುತ್ತೇವೆ. ಆದರೆ ನಿಮ್ಮ ಊಹೆ ತಪ್ಪು, ಬೆಲೆ ಬಾಳುವ ಕ್ರೀಮ್ ಗಳಿಂದ ಮತ್ತು ಬ್ಯೂಟಿ ಪಾರ್ಲರ್ ಗಳಿಂದ ಮಾತ್ರ ನಿಮ್ಮ ಚೆಲುವು ಹೆಚ್ಚಿಸಲು ಸಾಧ್ಯವಿಲ್ಲ.
ನಿಮ್ಮ ತ್ವಚೆಯ ಸೌಂದರ್ಯ ಕಾಪಾಡಲು ತ್ವಚೆ ಆರೈಕೆ ಹೇಗೆ ಮಾಡಬೇಕೆಂದು ತಿಳಿಯ ಬಯಸುವುದಾದರೆ ಮುಂದೆ ಒದಿ:

ಮೊತ್ತ ಮೊದಲು ಸಲಹೆಯೆಂದರೆ ಡಯಟ್
ಆಹಾರಕ್ರಮ ನಿಮ್ಮ ತ್ವಚೆಯ ಆರೋಗ್ಯದ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ನೀವು ಪಾಸ್ಟ್ ಫುಡ್ ಕಲ್ಚರ್ ಇಷ್ಟ ಪಡುವವರಾದರೆ ಅಷ್ಟೇ ಫಾಸ್ಟಾಗಿ ನಿಮ್ಮ ತ್ವಚೆಯಲ್ಲಿ ನೆರಿಗೆಗಳು ಕಾಣಿಸಿಕೊಳ್ಳುವುದು. ಆರೋಗ್ಯಕರ ಆಹಾರವನ್ನು ತಿನ್ನಿ. ಬಣ್ಣ-ಬಣ್ಣದ ತರಕಾರಿಗಳನ್ನು ಅಡುಗೆಯಲ್ಲಿ ಸೇರಿಸಿ, ಹಣ್ಣುಗಳನ್ನು ತಿನ್ನಿ.

ಮತ್ತೊಂದು ಪ್ರಮುಖ ಸಲಹೆಯೆಂದರೆ ಒತ್ತಡದಿಂದ ಹೊರಬನ್ನಿ
ಮಾನಸಿಕ ಒತ್ತಡವಿದ್ದರೆ ಸೌಂದರ್ಯ ಮಾತ್ರವಲ್ಲ, ಲುಕ್ ಕೂಡ ಹಾಳಾಗುವುದು ಮಾತ್ರವಲ್ಲ, ಆರೋಗ್ಯ ಕೂಡ ಹಾಳಾಗುವುದು.

ಕ್ಲೆನ್ಸಿಂಗ್
ಪ್ರತೀದಿನ ಮುಖವನ್ನು ಕ್ಲೆನ್ಸಿಂಗ್ ಮಾಡಿ. ಟೋನರ್ ಬಳಸಿ ಕ್ಲೆನ್ಸಿಂಗ್ ಮಾಡಿದರೆ ಒಳ್ಳೆಯದು.

ಸ್ಕ್ರಬ್ಬಿಂಗ್ ಮಾಡಿ
ವಾರಕ್ಕೊಮ್ಮೆ ಸ್ಕ್ರಿಬ್ಬಿಂಗ್ ಮಾಡಿ ಮುಖದಲ್ಲಿರುವ ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ. ಸ್ಕ್ರಬ್ಬಿಂಗ್ ಗೆ ಫ್ರೂಟ್ ಬಳಸುವುದು ಒಳ್ಳೆಯದು.

ಮಸಾಜ್
ಮಸಾಜ್ ತ್ವಚೆ ಕಾಂತಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಕ್ರೀಮ್
ಗುಣ ಮಟ್ಟದ ಕ್ರೀಮ್ ಬಳಸಿ, ಆಗಾಗ ಕ್ರೀಮ್ ಗಳನ್ನು ಬದಲಾಯಿಸುತ್ತಾ ಇರಬೇಡಿ. ಪೌಂಡೇಶನ್ ಅನ್ನು ದಿನಾ ಹಚ್ಚಬೇಡಿ, ಅಪರೂಪಕ್ಕೆ ಹಚ್ಚಿ.

ಮೇಕಪ್ ತೆಗೆದು ಮಲಗಿ
ಮಲಗುವ ಮುನ್ನ ಮೇಕಪ್ ತೆಗೆಯಿರಿ. ಮೇಕಪ್ ತೆಗೆಯದೆ ಮಲಗಿದರೆ ತ್ವಚೆ ರಂಧ್ರಗಳ ಉಸಿರಾಟಕ್ಕೆ ತೊಂದರೆ ಉಂಟಾಗಿ, ಅದರಿಂದ ತ್ವಚೆ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದು.

ನೈಟ್ ಕ್ರೀಮ್ ಹಚ್ಚಿ ಮಲಗಿ
ರಾತ್ರಿ ಮಲಗುವಾಗ ನೈಟ್ ಕ್ರೀಮ್ ಹಚ್ಚಿ ಮಲಗಿ, ಅಲ್ಲದೆ ಸೀಸನ್ ಗೆ ತಕ್ಕ ಹಾಗೆ ಕ್ರೀಮ್ ಹಚ್ಚಿ ತ್ವಚೆ ಆರೈಕೆ ಮಾಡಿ.

ಸುಖವಾದ ನಿದ್ದೆ ಮಾಡಿ
ದಿನದಲ್ಲಿ 6-8 ಗಂಟೆಗಳ ನಿದ್ದೆ ಮಾಡಿ. ಇದರಿಂದ ಮುಖದಲ್ಲಿ ಡಾರ್ಕ್ ಸರ್ಕಲ್ ಬೀಳುವುದನ್ನು ತಡೆಯಬಹುದು.
ಇಷ್ಟು ವಿಧಾನಗಳನ್ನು ಅನುಸರಿಸಿದರೆ ಸಾಕು ನಿಮ್ಮ ತ್ವಚೆ ಯೌವನದ ಕಳೆಯಿಂದ ಆರೋಗ್ಯಕರವಾಗಿರುತ್ತದೆ.



Click it and Unblock the Notifications