Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಕ್ಲಿಯರ್ ತ್ವಚೆಗಾಗಿ 5 ಚಾಕಲೇಟ್ ಫೇಶಿಯಲ್ ರೆಸಿಪಿ
ಚಾಕಲೇಟ್ ಒಂದು ಅತ್ಯುತ್ತಮವಾದ ಸೌಂದರ್ಯವರ್ಧಕವಾಗಿದೆ. ಆದ್ದರಿಂದಲೇ ಇದರಿಂದ ತಯಾರಿಸಿದ ಚಾಕಲೇಟ್ ಫೇಶಿಯಲ್ , ಹಾಟ್ ಚಾಕಲೇಟ್ ವ್ಯಾಕ್ಸ್ ಹೆಂಗಳೆಯರ ಮನ ಗೆದ್ದಿದೆ. ಚಾಕಲೇಟ್ ಬಳಸಿ ಫೇಶಿಯಲ್ ಮಾಡಿದರೆ ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚುವುದು. ಚಾಕಲೇಟ್ ನಿಂದ ಫೇಶಿಯಲ್ ಮಾಡಲು ನೀವು ಪಾರ್ಲರ್ ಗೆ ಹೋಗುವ ಬದಲು ಮನೆಯಲ್ಲಿಯೇ ತಯಾರಿಸಬಹುದು, ಇದರಿಂದ ಪಾರ್ಲರ್ ಗೆ ಸುರಿಯುವ ದುಡ್ಡು ಉಳಿಸಬಹುದು, ನಿಮ್ಮ ತ್ವಚೆಯ ಅಂದವೂ ಹೆಚ್ಚುವುದು.
ಈ ಚಾಕಲೇಟ್ ಫೇಶಿಯಲ್ ಅನ್ನು ನಾನಾ ರೀತಿಯಲ್ಲಿ ತಯಾರಿಸಬಹುದು. ಡಾರ್ಕ್ ಚಾಕಲೇಟ್ ಗೆ ಮೊಸರು, ಸ್ಟರಾಬರಿ, ಜೇನು ಹೀಗೆ ಬೇರೆ-ಬೇರೆ ವಸ್ತುಗಳನ್ನು ಹಾಕಿದರೆ ನಾನಾ ಬಗೆಯ ಚಾಕಲೇಟ್ ಫೇಶಿಯಲ್ ತಯಾರಿಸಬಹುದು. ಡಾರ್ಕ್ ಚಾಕಲೇಟ್ ಬಳಸಿ ಮಾಡುವ ಪ್ರತಿಯೊಂದು ಫೇಶಿಯಲ್ ಪರಿಣಾಮಕಾರಿಯಾಗಿದ್ದು ನಿಮಗೆ ಯಾವ ಚಾಕಲೇಟ್ ಫೇಶಿಯಲ್ ಇಷ್ಟವಾಗುತ್ತದೆಯೋ ಅದನ್ನು ಮಾಡಬಹುದು.
ಚಾಕಲೇಟ್ ಫೇಶಿಯಲ್ ಗಳ ರೆಸಿಪಿ ಇಲ್ಲಿದೆ:

1. ಚಾಕಲೇಟ್ ಮತ್ತು ಷೀಕಾಯಿಯ ಎಣ್ಣೆ (shea butter)
ಒಂದು ಪಾತ್ರೆ ಒಳಗೆ ಮತ್ತೊಂದು ಪಾತ್ರೆ ಇಟ್ಟು ಅದರಲ್ಲಿ ಡಾರ್ಕ್ ಚಾಕಲೇಟ್ ಹಾಕಿ ಕರಗಿಸಬೇಕು. ಈಗ ಅದಕ್ಕೆ ಪೀಕಾಯಿಯ ಎಣ್ಣೆ ಮತ್ತು ಹಾಲನ್ನು ಹಾಕಿ ಮಿಶ್ರಣ ಮಾಡಬೇಕು. ಚಾಕಲೇಟ್ ಕರಗಿದ ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಇಡಿ. ನಂತರ ಫೇಶಿಯಲ್ ಅನ್ನು ಮುಖಕ್ಕೆ ಹಚ್ಚಿ 3-4 ನಿಮಿಷ ಇಟ್ಟು, ನಂತರ ಹತ್ತಿಯಿಂದ ಒರೆಸಿ ತಣ್ಣೀರಿನಿಂದ ಮುಖ ತೊಳೆಯಬೇಕು.

2. ಚಾಕಲೇಟ್ ಮತ್ತು ಮೊಸರು
ಡಾರ್ಕ್ ಚಾಕಲೇಟ್ ಅನ್ನು ಕರಗಿಸಿದ ಮೇಲೆ ಅದನ್ನು ತಣ್ಣನೆ ಮಾಡಿ ಅದಕ್ಕೆ ಮೊಸರು ಹಾಕಿ ಮೆತ್ತಗಾಗುವವರೆಗೆ ಕರಗಿಸಿ. ನಂತರ ಈ ಫೇಶಿಯಲ್ ಕ್ರೀಮ್ ಅನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆದರೆ ಮುಖ ತುಂಬಾ ಆಕರ್ಷಕವಾಗಿ ಕಾಣುವುದು.

3. ಚಾಕಲೇಟ್, ಸ್ಟ್ರಾಬರಿ, ಜೇನಿನ ಫೇಶಿಯಲ್
ಸ್ಟ್ರಾಬರಿ ಮತ್ತು ಚಾಕಲೇಟ್ ನ ಫೇಶಿಯಲ್ ಬೇಕೆಂದು ಬಯಸುವವರು ಈ ಫೇಶಿಯಲ್ ಟ್ರೈ ಮಾಡಬಹದು. ಚಾಕಲೇಟ್ ಕರಗಿಸಿ, ಸ್ಟ್ರಾಬರಿಯನ್ನು ಹಿಸುಕಿ ಪೇಸ್ಟ್ ರೀತಿಯಲ್ಲಿ ಮಾಡಿ ಅದಕ್ಕೆ ಹಾಕಿ ಸ್ವಲ್ಪ ಜೇನು ಹಾಕಿದರೆ ಚಾಕಲೇಟ್, ಸ್ಟ್ರಾಬರಿ ಫೇಶಿಯಲ್ ರೆಡಿ. ಇದನ್ನು ಹಚ್ಚಿ 45 ನಿಮಿಷದ ಬಳಿಕ ಹದ ಬಿಸಿ ನೀರಿನಿಂದ ಮುಖ ತೊಳೆಯಿರಿ.

4. ಚಾಕಲೇಟ್, ತೆಂಗಿನ ಹಾಲು ಮತ್ತು ಸಕ್ಕರೆ
ಚಾಕಲೇಟ್ ಅನ್ನು ಕರಗಿಸಿ ಅದಕ್ಕೆ ಸ್ವಲ್ಪ ತೆಂಗಿನ ಹಾಲು ಮತ್ತು ಸಕ್ಕರೆ ಹಾಕಿ ಕರಗಿಸಿ ಮಿಶ್ರಣವನ್ನು ನತಣ್ಣಗಾಗಲು ಇಡಬೇಕು. ನಂತರ ಇದರಿಂದ ಫೇಶಿಯಲ್ ಮಾಡಿದರೆ ನಿಮ್ಮ ತ್ವಚೆಯ ಹೊಳಪು ಹೆಚ್ಚುವುದು.

5. ಚಾಕಲೇಟ್ ಮತ್ತ ಓಟ್ ಮೀಲ್ಸ್ ಮಾಸ್ಕ್
ಚಾಕಲೇಟ್ ಕರಗಿಸಿ ಅದಕ್ಕೆ ಓಟ್ ಮೀಲ್ಸ್ ಅನ್ನು ಪುಡಿ ಮಾಡಿ ಹಾಕಿ ಕರಗಿಸಬೇಕು. ನಂತರ ತಣ್ಣಗಾದ ಮೇಲೆ ಈ ಫೇಶಿಯಲ್ ಹಚ್ಚಿದರೆ ಬ್ಲ್ಯಾಕ್ ಹೆಡ್ಸ್ ಮಾಯವಾಗುವುದು, ತ್ವಚೆಯ ಅಂದ ಹೆಚ್ಚುವುದು.



Click it and Unblock the Notifications