Latest Updates
-
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ? -
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್! -
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'! -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ!
ತ್ವಚೆಯನ್ನು ಬೆಳ್ಳಗಾಗಿಸುವ 12 ಸೂಪರ್ ಫುಡ್ಸ್
ಪ್ರತಿಯೊಬ್ಬರು ತನ್ನ ತ್ವಚೆ ಆಕರ್ಷಕವಾಗಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಕ್ರೀಮ್ ಹಚ್ಚುತ್ತೇವೆ, ಫೇಶಿಯಲ್, ಬ್ಲೀಚ್ ಅಂತ ಮಾಡಿಸಿಕೊಳ್ಳುತ್ತೇವೆ. ಫೇಶಿಯಲ್ ಮಾಡಿಸಿ ಸ್ವಲ್ಪ ದಿನದಲ್ಲಿ ಮುಖ ಸ್ವಲ್ಪ ಮಂಕಾದಂತೆ ಕಾಣುತ್ತದೆ. ಆಗ ಪುನಃ ಫೇಶಿಯಲ್ ಮಾಡಿಸಬೇಕಾಗುತ್ತದೆ.
ಮುಖದ ಬಿಳುಪನ್ನು ಹೆಚ್ಚಿಸಲು ಕ್ರೀಮ್ , ಫೇಶಿಯಲ್ ಮಾಡಿದರೆ ನಿರಂತರವಾದ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಪೋಷಕಾಂಶವಿರುವ ಆಹಾರ ತಿನ್ನಬೇಕು. ಇದರ ಜೊತೆ ದಿನಕ್ಕೆ 8-10 ಗ್ಲಾಸ್ ನೀರು ಕುಡಿಯಬೇಕು. ಅರ್ಧ ಗಂಟೆ ವ್ಯಾಯಾಮ ಮಾಡಬೇಕು, ಮೈಯಿಂದ ಬೆವರು ಸುರಿದರೆ ಬೆವರಿನ ಮುಖಾಂತರ ಮೈಯಲ್ಲಿರುವ ಕಶ್ಮಲಗಳು ಹೊರಹೋಗುತ್ತವೆ. ಈ ನಿಯಮವನ್ನು ನೀವು ಪಾಲಿಸಿದ್ದೇ ಆದರೆ ಯಾವ ಕ್ರೀಮ್, ಫೇಶಿಯಲ್ ನ ಸಹಾಯವಿಲ್ಲದೆ ನಿಮ್ಮ ಸೌಂದರ್ಯ ಹೆಚ್ಚುವುದು. ಮುಖದ ಕಾಂತಿ ಹೆಚ್ಚಿಸುವ ಆ ಹಣ್ಣುಗಳು ಯಾವುವು ಎಂದು ನೋಡೋಣ ಬನ್ನಿ:

1. ಕ್ಯಾರೆಟ್
ಕ್ಯಾರೆಟ್ ನಲ್ಲಿ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಇರುವುದರಿಂದ ಇದನ್ನು ತಿಂದರೆ ತ್ವಚೆಯ ಕಾಂತಿ ಯಾವುದೇ ಕ್ರೀಮ್ ನ ಸಹಾಯವಿಲ್ಲದೆ ಹೆಚ್ಚುವುದು.

2. ಪಪ್ಪಾಯಿ
ಪಪ್ಪಾಯಿ ವಿಟಮಿನ್ ಸಿ, ಎ, ಇ ಇರುವುದರಿಂದ ಮೊಡವೆಯನ್ನು ಹೋಗಲಾಡಿಸುತ್ತದೆ, ಮುಖದಲ್ಲಿ ಕಲೆ ಉಳಿಯಲು ಬಿಡುವುದಿಲ್ಲ. ಇದನ್ನು ಮುಖಕ್ಕೆ ಹಚ್ಚಿಕೊಂಡರೆ ಮುಖ ಹೆಚ್ಚು ಕಾಂತಿಯುತವಾಗಿ ಕಾಣುವುದು.

3. ಟೊಮೆಟೊ
ಟೊಮೆಟೊದಲ್ಲಿ ಲೈಕೊಪೆನೆ ಅಂಶವಿರುವುದರಿಂದ ತ್ವಚೆಗೆ ತುಂಬಾ ಒಳ್ಳೆಯದು. ದಿನಾ ಒಂದು ಲೋಟ ಟೊಮೆಟೊ ಜ್ಯೂಸ್ ಕುಡಿದರೆ ಮುಖದ ಹೊಳಪು ಹೆಚ್ಚುವುದು ಹಾಗೂ ಇದು ಅಧಿಕ ಬೊಜ್ಜನ್ನು ಕರಗಿಸುತ್ತದೆ.

4. ಕಿವಿ
ಕಿವಿ ಹಣ್ಣು ತಿಂದರೆ ದೇಹದ ಮತ್ತು ಸೌಂದರ್ಯದ ಆರೋಗ್ಯಕ್ಕೆ ಒಳ್ಳೆಯದು. ಮುಖದಲ್ಲಿ ಕಪ್ಪು ಕಲೆಗಳು ಬಿದ್ದರೆ ಅದಕ್ಕೆ ಕಿವಿ ಹಣ್ಣಿನ ರಸ ಹಚ್ಚುತ್ತಾ ಬಂದರೆ ಕಲೆರಹಿತ ತ್ವಚೆ ಪಡೆಯಬಹುದು.

5. ಬೀಟ್ ರೂಟ್
ಪ್ರತಿನಿತ್ಯ ಬೀಟ್ ರೂಟ್ ಜ್ಯೂಸ್ ಕುಡಿದರೆ ನಿಮ್ಮ ಕೆನ್ನೆ ಕೆಂಪಾಗುವುದು, ಇದನ್ನು ಪೇಸ್ಟ್ ಮಾಡಿ ಫೇಸ್ ಪ್ಯಾಕ್ ಗೂ ಬಳಸಬಹುದು.

6. ಹಸಿರು ತರಕಾರಿ
ಹಸಿರು ತರಕಾರಿಯಲ್ಲಿ ಪೋಕಾಂಶಗಳು ಅಧಿಕವಿದ್ದು ಇವುಗಳನ್ನು ತಿಂದರೆ ತ್ವಚೆಯಲ್ಲಿ ಕೊಲೆಜಿನ್ ಅನ್ನು ಹೆಚ್ಚಿಸಿ ತ್ವಚೆಯನ್ನು ಸಂರಕ್ಷಿಸುತ್ತದೆ.

7. ಸ್ಟ್ರಾಬರಿ
ಇದರಲ್ಲೂ ವಿಟಮಿನ್ ಸಿ ಇದ್ದು ತ್ವಚೆಗೆ ತುಂಬಾ ಒಳ್ಳೆಯದು. ದಿನಾ ಒಂದು ಸ್ಟ್ರಾಬರಿ ತಿಂದರೆ ಮುಖದ ಹೊಳಪು ಹೆಚ್ಚುವುದು.

8. ಕೆಂಪು ದುಂಡು ಮೆಣಸು
ಕೆಂಪು ದುಂಡು ಮೆನಸಿನಲ್ಲಿ ಲೈಕೊಪೆನೆ ಮತ್ತು ವಿಟಮಿನ್ ಸಿ ಇರುವುದರಿಂದ ಇದನ್ನು ಅಡುಗೆಯಲ್ಲಿ ಬಳಸುವುದು ಒಳ್ಖೆಯದು.

9. ಟೀ
ಗ್ರೀನ್ ಟೀ ಆರೋಗ್ಯಕರವಾದ ಟೀಯಾಗಿದೆ. ಇದನ್ನು ಕುಡಿಯುವುದರಿಂದ ಮುಖದ ಕಾಂತಿ ಹೆಚ್ಚುವುದು.

10. ಸೋಯಾ ಉತ್ಪನ್ನಗಳು
ಸೋಯಾ ಹಾಲು ಮೊಡವೆ ಮತ್ತು ಇತರ ತ್ವಚೆ ಸಮಸ್ಯೆಯನ್ನು ಹೋಗಲಾಡಿಸಿ, ತ್ವಚೆ ರಕ್ಷಣೆಯನ್ನು ಮಾಡುತ್ತದೆ.

11. ಬ್ರೊಕೋಲಿ
ಇದರಲ್ಲೂ ವಿಟಮಿನ್ ಸಿ ಮತ್ತು ಇ ಇರುವುದರಿಂದ ತ್ವಚೆಗೆ ಒಳ್ಳೆಯದು. ವಿಟಮಿನ್ ಇ ಇರುವ ಯಾವುದೇ ಆಹಾರಗಳು ತ್ವಚೆಗೆ ತುಂಬಾ ಒಳ್ಳೆಯದು.

12. ಮೀನು
ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶವಿರುವುದರಿಂದ ಇದು ಕೂಡ ಮುಖದ ಕಾಂತಿ ಹೆಚ್ಚಿಸುವಲ್ಲಿ ತುಂಬಾ ಸಹಕಾರಿ.



Click it and Unblock the Notifications