Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಬೇಸಿಗೆಯಲ್ಲಿ ಬರುವ ಮೊಡವೆ ನಿವಾರಿಸಲು 10 ಟಿಪ್ಸ್
ಮತ್ತೆ ಬೇಸಿಗೆ ಬಂದಿದೆ. ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತೆ ತಲೆ ಎತ್ತುತ್ತಿವೆ. ಅದರಲ್ಲಿಯು ಮುಖ್ಯವಾಗಿ ಮೊಡವೆಗಳು ನಮ್ಮ ಮುಖದ ತ್ವಚೆಯ ಆರೋಗ್ಯವನ್ನಷ್ಟೇ ಅಲ್ಲದೆ ನೋಡಲು ಅಸಹ್ಯಕರವಾಗಿ ಇಡೀ ಸೌಂದರ್ಯವನ್ನು ಹಾಳು ಮಾಡಿ ಬಿಡುತ್ತವೆ. ಜೊತೆಗೆ ಅದು ಆ ವ್ಯಕ್ತಿಯ ಆತ್ಮ ವಿಶ್ವಾಸವನ್ನು ಸಂಪೂರ್ಣವಾಗಿ ಕುಸಿದು ಬೀಳುವಂತೆ ಮಾಡುತ್ತದೆ.
ಆದರೆ ಮೊಡವೆಗಳನ್ನು ಚಿವುಟಬೇಡಿ. ಏಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ಮುಖದ ಮೇಲೆ ಕಲೆಗಳು ಹಾಗೆಯೇ ಉಳಿಯುತ್ತವೆ. ಅದಕ್ಕಾಗಿ ಮೊಡವೆಗಳನ್ನು ಒಡೆದು ಹಿಂಡುವ ಬದಲು, ಅವುಗಳಿಗೆ ಔಷಧಿಯನ್ನು ಹಚ್ಚಿ.
ಇಲ್ಲಿ ನಿಮಗಾಗಿ ಹತ್ತು ಸಲಹೆಗಳನ್ನು ನೀಡಿದ್ದೇವೆ ಓದಿ:

1.ನಿಮ್ಮ ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಮೇಕಪ್ ಹಚ್ಚಿಕೊಂಡರೆ, ಅದನ್ನು ಚೆನ್ನಾಗಿ ತೊಳೆದು ತೆಗೆಯಿರಿ. ಅದಕ್ಕಾಗಿ ನೀವು ಸಾಲ್ಸಿಲಿಕ್ ಫೇಸ್ ವಾಶ್ ಅನ್ನು ಬಳಸಬಹುದು.

2. ಹೊರಗೆ ಹೋಗಿ ಮನೆಗೆ ಬಂದ ಕೂಡಲೆ ಮುಖವನ್ನು ತೊಳೆಯಿರಿ.

3. ಸ್ಕ್ರಬ್ಬನ್ನು ಬಳಸಬೇಡಿ. ಅತಿಯಾಗಿ ತೊಳೆಯುವುದು ಮತ್ತು ಸ್ಕ್ರಬ್ಬನ್ನು ಬಳಸುವುದರಿಂದ ತ್ವಚೆಯಲ್ಲಿ ನವೆ ಉಂಟಾಗಬಹುದು.

ಸ್ಕಿನ್ ಕೇರ್ ಟಿಪ್ಸ್
4. ಯಾವಾಗಲು ನಿಮ್ಮ ಮುಖವನ್ನು ಮುಟ್ಟಬೇಡಿ ಅಥವಾ ಕೆರೆಯುತ್ತಾ ಇರಬೇಡಿ. ಇದರಿಂದ ನಿಮ್ಮ ಮುಖದಲ್ಲಿ ಬ್ಯಾಕ್ಟೀರಿಯಾದಿಂದ ಉಂಟಾಗಬಹುದು.

ಸ್ಕಿನ್ ಕೇರ್ ಟಿಪ್ಸ್
5. ನಿಮ್ಮ ಮುಖಕ್ಕೆ ಹಚ್ಚುವ ಕ್ರೀಮ್ ಅಥವಾ ಮೇಕ್- ಅಪ್‍ಗಳ ಮೇಲೆ " ನಾನ್ ಕೊಮೆಡೊಜೆನಿಕ್" ( non Comedogenic ) ಎಂದು ನಮೂದಾಗಿರುವುದನ್ನು ಖಾತ್ರಿ ಮಾಡಿಕೊಳ್ಳಿ.

ಸ್ಕಿನ್ ಕೇರ್ ಟಿಪ್ಸ್
6. ಬಿಸಿಲಿನಲ್ಲಿ ಸುತ್ತಾಡಬೇಡಿ. ಬಿಸಿಲು ಮೊಡವೆ ಬರುವುದನ್ನು ಮತ್ತಷ್ಟು ಪ್ರಚೋದಿಸುತ್ತದೆ.

ಸ್ಕಿನ್ ಕೇರ್ ಟಿಪ್ಸ್
7. ವಾರಕ್ಕೊಮ್ಮೆಯಾದರು ಮೊಡವೆ ನಿರೋಧಕ ಮಾಸ್ಕನ್ನು ಬಳಸಿ.

ಸ್ಕಿನ್ ಕೇರ್ ಟಿಪ್ಸ್
8. ದೇಹದಲ್ಲಿರುವ ಹಾರ್ಮೋನುಗಳ ಅಸಮತೋಲನದಿಂದಾಗಿ ಮೊಡವೆಗಳು ಉಂಟಾಗುತ್ತವೆ. ಹಾಗಾಗಿ ನಿಮ್ಮ ಚರ್ಮ ತಙ್ಞರ ಬಳಿ ಹಾರ್ಮೋನುಗಳ ಪರೀಕ್ಷೆಯನ್ನು ಮಾಡಿಸಿ.

ಸ್ಕಿನ್ ಕೇರ್ ಟಿಪ್ಸ್
9. ತಲೆಯಲ್ಲಿ ಹೊಟ್ಟು ಇರುವುದು ಸಹ ಹಣೆ ಮತ್ತು ಬೆನ್ನಿನ ಮೇಲೆ ಉಂಟಾಗುವ ಮೊಡವೆಗಳು ಬರಲು ಇರುವ ಪ್ರಮುಖ ಕಾರಣವಾಗಿದೆ. ಅದಕ್ಕಾಗಿ ನಿಮ್ಮ ಚರ್ಮ ತಙ್ಞರ ಬಳಿ ಒಂದು ತಲೆ ಹೊಟ್ಟು ನಿರೋಧಕ ಶ್ಯಾಂಪೂಕೇಳಿ ಬರೆಸಿಕೊಳ್ಳಿ.

ಸ್ಕಿನ್ ಕೇರ್ ಟಿಪ್ಸ್
10. ಒಂದು ವೇಳೆ ನಿಮಗೆ ಮೊಡವೆಗಳು ಇದ್ದಲ್ಲಿ, ನಿಮ್ಮ ದೇಹಕ್ಕೆ ಅಂಟಿಕೊಳ್ಳುವಂತಹ (ಟೈಟ್ ಫಿಟ್) ಬಟ್ಟೆಗಳನ್ನು ಧರಿಸಬೇಡಿ.
ಇವು ಯಾವುದು ಪ್ರಯೋಜನಕ್ಕೆ ಬರದೆ ಹೋದಲ್ಲಿ ನಿಮ್ಮ ಚರ್ಮ ತಙ್ಞರು ಪರಿಹಾರವನ್ನು ಸೂಚಿಸಬಹುದು. ಅದಕ್ಕಾಗಿ ಈ ಕೂಡಲೆ ಡಾಕ್ಟರನ್ನು ಸಂಪರ್ಕಿಸಿ. ಮೊಡವೆಗಳಿಂದ ಮುಕ್ತರಾಗಿ.



Click it and Unblock the Notifications