Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಬೀರ್ ನಲ್ಲಿದೆ ಟಾಪ್ 10 ಸೌಂದರ್ಯವರ್ಧಕ ಗುಣ!
ಬೀರ್ ಬಳಸಿ ನಮ್ಮ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು ಗೊತ್ತಾ? ನೀವು ಬೀರ್ ಶ್ಯಾಂಪೂ ನೋಡಿರಬಹುದು. ಕೆಲವರಿಗೆ ಬೀರ್ ಕೂದಲಿಗೆ ಒಳ್ಳೆಯದಾ? ಅದರ ಶ್ಯಾಂಪೂ ಇದೆಯಲ್ಲಾ ಎಂಬ ಕುತೂಹಲವಿರುತ್ತದೆ. ಆದರೆ ಬೀರ್ ಕೂದಲಿಗೆ ತುಂಬಾ ಒಳ್ಳೆಯದು ಎಂದು ಹೇಳಬಲ್ಲೆ.
ಬರೀ ಕೂದಲು ಮಾತ್ರವಲ್ಲಿ, ತ್ವಚೆಯ ಅಂದ ಹೆಚ್ಚಿಸುವಲ್ಲಿಯೂ ಬೀರ್ ಪರಿಣಾಮಕಾರಿ. ಇದನ್ನು ಸೌಂದರ್ಯವರ್ಧಕವಾಗಿ ಬಳಸುವ ವಿಧಾನಗಳನ್ನು ನೋಡೋಣ ಬನ್ನಿ:

ತ್ವಚೆಯಲ್ಲಿ ತೇವಾಂಶ ಇರುವಂತೆ ಮಾಡುತ್ತದೆ
ತ್ವಚೆ ತುಂಬಾ ಒಣಗಿದರೆ ತ್ವಚೆಯಲ್ಲಿ ಬಿಳುಪು, ನೆರಿಗೆ ಈ ರೀತಿಯ ಸಮಸ್ಯೆ ಕಂಡು ಬರುವುದು. ಬೀರ್ ತ್ವಚೆಯಲ್ಲಿ ತೇವಾಂಶ ಇರುವಂತೆ ಮಾಡುತ್ತದೆ. ಡ್ರೈ ತ್ವಚೆಯವರು ಬೀರ್ ಫೇಶಿಯಲ್ ಮಾಡಿಸಿ ನೋಡಿ, ಒಳ್ಳೆಯ ರಿಸಲ್ಟ್ ಸಿಗುತ್ತದೆ.

ಬೆಸ್ಟ್ ಹೇರ್ ಕಂಡೀಷನರ್
ಶ್ಯಾಂಪೂ ಹಾಕಿ ತಲೆ ತೊಳೆದ ಬಳಿಕ, ಬಕೆಟ್ ಗೆ ಸ್ವಲ್ಪ ಬೀರ್ ಹಾಕಿ ಅದಕ್ಕೆ ಎರಡು ಮಗ್ ನೀರು ಹಾಕಿ, ಆ ನೀರನ್ನು ತಲೆಗೆ ಹಾಕಿ. ಹೀಗೆ ಮಾಡಿದರೆ ಕೂದಲಿನ ಶೈನಿಂಗ್ ಹೆಚ್ಚುವುದು, ಅಡ್ಡ ಪರಿಣಾಮ ಕೂಡ ಉಂಟಾಗುವುದಿಲ್ಲ.

ತ್ವಚೆಯ ಹೊಳಪು ಹೆಚ್ಚಿಸುತ್ತದೆ
ಬೀರ್ ನಿಂದ ಫೇಶಿಯಲ್ ಅಥವಾ ಫೇಸ್ ಮಾಸ್ಕ್ ಮಾಡಿ ನೋಡಿ, ಮುಖದ ಹೊಳಪು ಹೆಚ್ಚುವುದನ್ನು ನೀವೇ ಕಾಣಬಹುದು.

ತ್ವಚೆ ಮೃದುವಾಗುತ್ತದೆ
ಬೀರ್ ನಲ್ಲಿ ವಿಟಮಿನ್ ಬಿ ಇದ್ದು ಅದನ್ನು ನಮ್ಮ ತ್ವಚೆ ಹೀರಿಕೊಂಡು ತ್ವಚೆಯನ್ನು ಮೃದುವಾಗಿಸುತ್ತದೆ. ಇದು ತ್ವಚೆಯನ್ನು ಮೃದುವಾಗಿಸುತ್ತದೆ.

ಕೂದಲು ಮಂದವಾಗಿ ಕಾಣುವಂತೆ ಮಾಡುತ್ತದೆ
ತುಂಬಾ ತೆಳ್ಳಗಿನ ಕೂದಲಿನವರು ಬೀರ್ ನಿಂದ ತಲೆ ಕೂದಲಿನ ಆರೈಕೆ ಮಾಡಿ ನೋಡಿ, ನಿಮ್ಮ ಕೂದಲು ಮಂದವಾಗಿ ಆಕರ್ಷಕವಾಗಿ ಕಾಣುವುದು.

ಮೊಡವೆಗಳ ವಿರುದ್ಧ ಹೋರಾಡುತ್ತದೆ
ಬೀರ್ ನಲ್ಲಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಇದೆ. ಆದ್ದರಿಂದ ಇದು ಇರುವ ಮೊಡವೆಯನ್ನು ಒಣಗಿಸಿ, ಮತ್ತೆ ಮೊಡವೆ ಏಳುವುದನ್ನು ತಡೆಯುತ್ತದೆ.

ಇದರಲ್ಲಿರುವ pH ಪ್ರಮಾಣ ತ್ವಚೆ ರಕ್ಷಣೆ ಮಾಡುತ್ತದೆ
ಯಾವತ್ತೂ ಕ್ರೀಮ್ ಕೊಳ್ಳುವಾಗ ಅದರ pH ಪ್ರಮಾಣ ನೋಡಿ ಕೊಳ್ಳಬೇಕು. pH 30 ಇರುವುದು ಸೂರ್ಯನ ಕಿರಣಗಳಿಂದ ತ್ವಚೆ ರಕ್ಷಣೆ ಮಾಡುತ್ತದೆ. ಬೀರ್ ನಲ್ಲಿ ಕೂಡ ಇದು ಇರುವುದರಿಂದ ತ್ವಚೆಗೆ ತುಂಬಾ ಒಳ್ಳೆಯದು.

ಅಕಾಲಿಕ ನೆರಿಗೆ ತಡೆಯುತ್ತದೆ
ಯೌವನ ಪ್ರಾಯದಲ್ಲಿಯೇ ಬೀರ್ ನಿಂದ ತ್ವಚೆ ಆರೈಕೆ ಮಾಡುವವರಿಗೆ ಬೇಗನೆ ನೆರಿಗೆ ಬೀಳುವುದಿಲ್ಲ.

ಮುಖದ ಕ್ಲೆನ್ಸಿಂಗ್ ಗೆ ಬಳಸಬಹುದು
ಇದರಲ್ಲಿ ಆಸ್ಟ್ರಿಜೆಂಟ್ ಅಧಿಕವಿರುವುದರಿಂದ ಕ್ಲೆನ್ಸಿಂಗ್ ಮಾಡಲು ಬಳಸಬಹುದು.

ಬೀರ್ ಫಾರ್ ಬಬಲ್ ಬಾತ್
ಸಾಕಷ್ಟು ದುಡ್ಡು ಕೈಯಲ್ಲಿ ಇದ್ದರೆ ಬೀರ್ ಬಳಸಿ ಬಬಲ್ ಬಾತ್ ಮಾಡಬಹುದು. ಇದು ತ್ವಚೆ ಮತ್ತು ಕೂದಲಿನ ಸೌಂದರ್ಯ ಹೆಚ್ಚುವುದು. ಇದನ್ನು ಮಾಹಿತಿಗಷ್ಟೇ ಹೇಳಿದ್ದೇನೆ ಮಾಡುವುದು, ಬಿಡುವುದು ನಿಮಗೆ ಬಿಟ್ಟದ್ದು.



Click it and Unblock the Notifications
