Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಚಳಿಗಾಲದಲ್ಲಿ ಮೊಡವೆ ಹೆಚ್ಚಾಗಲು ಕಾರಣವೇನು?
ಎಣ್ಣೆ ತ್ವಚೆ ಇರುವವರೆಗೆ ಮೊಡವೆ ಸಮಸ್ಯೆ ಕಂಡು ಬರುವುದು ಸಾಮಾನ್ಯ. ಅದರಲ್ಲೂ ಬಿಸಿಲು ಕಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಕೆಲವರಲ್ಲಿ ಬೇಸಿಗೆ ಕಾಲಕ್ಕಿಂತ ಚಳಿಗಾಲದಲ್ಲಿ ಹೆಚ್ಚು ಮೊಡವೆ ಮುಖದಲ್ಲಿ ಏಳುತ್ತದೆ. ಚಳಿಗಾಲದಲ್ಲಿ ಮೊಡವೆ ಹೆಚ್ಚಾಗಲು ಕಾರಣವೇನು ಎಂದು ನೋಡೋಣ ಬನ್ನಿ.
ಕೋಲ್ಡ್ ಕ್ರೀಮ್: ಕೋಲ್ಡ್ ಕ್ರೀಮ್ ಹಚ್ಚಿದಾಗ ಅದು ಮುಖದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ಚಳಿಗಾಲದಲ್ಲಿ ದೂಳು ಅಧಿಕವಿರುತ್ತದೆ. ಅ ದೂಳಿನಲ್ಲಿ ಓಡಾಡುವಾಗ ದೂಳು ಬಂದು ಮುಖದ ಮೇಲೆ ಕೂರುತ್ತದೆ. ಹೀಗೆ ದೂಳು ಕೂರುವುದರಿಂದ ಮೊಡವೆ ಹೆಚ್ಚಾಗುತ್ತದೆ. ಆದ್ದರಿಂದ ಗಾಡಿಯಲ್ಲಿ ಓಡಾಡುವಾಗ ಮುಖಕ್ಕೆ ಬಟ್ಟೆ ಸುತ್ತಿದರೆ ಒಳ್ಳೆಯದು.

ಕೆಲವರು ಕೋಲ್ಡ್ ಕ್ರೀಮ್ ಅನ್ನು ದಪ್ಪವಾಗಿ ಹಾಕುತ್ತಾರೆ. ಇದರಿಂದ ಮುಖದ ರಂಧ್ರಗಳಿಗೆ ಉಸಿರಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಕೂಡ ಮೊಡವೆ ಉಂಟಾಗುತ್ತದೆ.
ಮುಖ ತೊಳೆಯುವುದು: ಚಳಿಗಾದಲ್ಲಿ ನೀರು ಮುಟ್ಟುವುದಕ್ಕೆ ಮನಸ್ಸು ಬರುವುದಿಲ್ಲ. ಇದರಿಂದ ಬೇಸಿಗೆಯಲ್ಲಿ ಮುಖ ತೊಳೆದಷ್ಟು ಬಾರಿ ಚಳಿಗಾಲದಲ್ಲಿ ಮುಖವನ್ನು ತೊಳೆಯುವುದಿಲ್ಲ. ಇದು ಕೂಡ ಒಂದು ಕಾರಣವಾಗಿದೆ.
ಬೆವರದಿರುವುದು: ಮೈ ಬೆವರಿದರೆ ತ್ವಚೆಗೆ ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ಬೆವರುವುದಿಲ್ಲ. ಇದರಿಂದ ತ್ವಚೆಯಿಂದ ಕಶ್ಮಲಗಳು ಹೊರ ಹೋಗದೆ ಮೊಡವೆ ಉಂಟಾಗುತ್ತದೆ.
ಚಳಿಗಾಲದಲ್ಲಿ ಮೊಡವೆ ಉಂಟಾಗುವುದನ್ನು ತಡೆಯಲು ಸಲಹೆಗಳು:
* ಕೋಲ್ಡ್ ಕ್ರೀಮ್ ಅನ್ನು ತುಂಬಾ ದಪ್ಪವಾಗಿ ಹಾಕಬಾರದು.
* ಮುಖವನ್ನು ದಿನದಲ್ಲಿ 5-6 ಬಾರಿ ತೊಳೆಯಿರಿ. ಹೀಗೆ ತೊಳೆಯುವಾಗ 2 ಬಾರಿ ಮಾತ್ರ ಸೋಪು ಹಚ್ಚಿ ತೊಳೆಯಿರಿ. ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ ತೇವಂಶವನ್ನು ಕಾಪಾಡಿಕೊಳ್ಳಿ.
* ದಿನಕ್ಕೆ 8-10 ಲೋಟ ನೀರು ಕುಡಿಯಬೇಕು.



Click it and Unblock the Notifications
