Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮುಖದಲ್ಲಿರುವ ಎಣ್ಣೆಯಂಶವನ್ನು ಹೋಗಲಾಡಿಸಬೇಕೆ?
ಚಳಿಗಾಲದಲ್ಲಿ ತ್ವಚೆ ಒಣಗಿ ಬಿರುಕು ಉಂಟಾಗುವುದು ಬೇಡವೆಂದು ಕೋಲ್ಡ್ ಕ್ರೀಮ್ ಹಚ್ಚಿದರೆ ಮುಖ ಎಣ್ಣೆ-ಎಣ್ಣೆಯಾಗಿ ಮುಖ ಕಪ್ಪಾಗಿ ಕಾಣುವುದು ಮತ್ತೊಂದು ಸಮಸ್ಯೆಯಾಗಿರುತ್ತದೆ.
ಮುಖ ತುಂಬಾ ಡ್ರೈಯಾಗಿರಬಾರದು ಆದರೆ ಮುಖದಲ್ಲಿ ಎಣ್ಣೆಯಂಶವೂ ಇರಬಾರದು, ಈ ರೀತಿಯ ತ್ವಚೆ ಮಾತ್ರ ಹೊಳಪಿನಿಂದ ಕಾಣುವುದು. ಆದ್ದರಿಂದ ಮುಖ ಆಯಿಲ್ ಫ್ರೀ (ಎಣ್ಣೆಯಂಶ ಇಲ್ಲದಿರುವುದು) ಆಗಿರಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಸಾಕು:

ಹಾಲಿನಿಂದ ಮಸಾಜ್: ಹಾಲಿನಿಂದ ಮುಖಕ್ಕೆ ಮಸಾಜ್ ಮಾಡಿದರೆ ಮುಖದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸುವುದು ಮಾತ್ರವಲ್ಲ, ಮುಖದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ಹಾಲನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಮುಖ ತೊಳೆದರೆ ಮುಖ ಸ್ವಚ್ಛವಾಗಿ ಕಾಣುವುದು. ಹಾಲಿನಿಂದ ಪ್ರತಿದಿನ ಕ್ಕ್ಲೆನ್ಸಿಂಗ್ ಮಾಡಿದರೆ ಒಣ ತ್ವಚೆಯ ಸಮಸ್ಯೆ ಕಂಡು ಬರುವುದಿಲ್ಲ.
ಮುಖಕ್ಕೆಬಿಸಿ ನೀರು ಹಾಕಬೇಡಿ: ಚಳಿ ಎಂದು ಮುಖಕ್ಕೆ ತುಂಬಾ ಬಿಸಿ ನೀರು ಹಾಕಬೇಡಿ. ಮುಖ ಡ್ರೈ ಆಗಬಾರದು, ಮುಖದಲ್ಲಿ ತೇವಾಂಶ ಇರಬೇಕು ಎಮದು ಬಯಸುವವರು ಹದ ಬಿಸಿ ನೀರಿ ನೀರು ಅಥವಾ ತಣ್ಣೀರಿನಷ್ಟೇ ಬಳಸಬೇಕು.
ಟೊಮೆಟೊ ಮಸಾಜ್: ಟೊಮೆಟೊ ರಸ ಮುಖದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸುತ್ತದೆ. ಟೊಮೆಟೊ ರಸಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿ ಮುಖ್ಕಕೆ ಹಚ್ಚಿ. ಈ ರೀತಿ ಮಾಡಿದರೆ ಮುಖದಲ್ಲಿರುವ ಎಣ್ಣೆಯಂಶವನ್ನು ಹೋಗಲಾಡಿಸಬಹದು. ಅದೇ ನಿಂಬೆರಸವನ್ನು ಮಾಯಿಶ್ಚರೈಸರ್ ಜೊತೆ ಹಾಕಿ ಹಚ್ಚಿದರೆ ತ್ವಚೆ ಒಣಗುತ್ತದೆ.
ಎಕ್ಸ್ ಫೋಲೆಟ್: ಮುಖದಲ್ಲಿರುವ ಎಣ್ಣೆಯಂಶವನ್ನು ಹೋಗಲಾಡಿಸಲು ವಾರಕ್ಕೆ ಎರಡು ಬಾರಿಯಾದರೂ ಮುಖಕ್ಕೆ ಎಕ್ಸ್ ಫೋಲೆಟ್ (ಸ್ಕ್ರಬ್) ಮಾಡಬೇಕು.



Click it and Unblock the Notifications
