Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಆಪಲ್ ತಿಂದರೆ ಆರೋಗ್ಯ, ಮುಖಕ್ಕೆ ಹಚ್ಚಿದರೆ ಸೌಂದರ್ಯ

ಸೇಬಿನಿಂದ ತ್ವಚೆ ಆರೈಕೆ:
* ಸೇಬನ್ನು ಕತ್ತರಿಸಿ ಅದರ ಸಿಪ್ಪೆ ತೆಗೆದು ಮುಖಕ್ಕೆ ಉಜ್ಜಬೇಕು, ಈ ರೀತಿ 3 ನಿಮಿಷ ಉಜ್ಜಿ 15 ನಿಮಿಷ ಬಿಟ್ಟು ಮುಖ ತೊಳೆಯಬೇಕು. ಈ ರೀತಿ 2 ದಿನಕ್ಕೆ ಒಮ್ಮೆ ಮಾಡಿದರೆ ಒಳ್ಳೆಯದು.
* ಫೇಶಿಯಲ್ ಮಾಡುವಾಗ ಸೇಬಿನಿಂದ ಮಾಡಿದರೆ ಒಳ್ಳೆಯದು.
* ಸ್ವಲ್ಪ ಸೇಬಿನ ಪೇಸ್ಟ್ ಗೆ ಒಂದು ಚಮಚ ಜೇನು ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಹದ ಬಿಸಿ ನೀರಿನಿಂದ ಮುಖ ತೊಳೆದರೆ ಒಳ್ಳೆಯದು. ಈ ರೀತಿ ವಾರಕ್ಕೊಮ್ಮೆ ಮಾಡಿ.
ಈ ರೀತಿ ಅನುಸರಿಸಿದರೆ ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು:
ನೆರಿಗೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ: ಸೇಬನ್ನು ಮುಖಕ್ಕೆ ಹಚ್ಚಿದರೆ ಮುಖದಲ್ಲಿ ಕೊಲೇಜಿನ್ ಹೆಚ್ಚಿಸುವುದರಿಂದ ಬೇಗನೆ ಮುಪ್ಪಾಗುವ ಸಮಸ್ಯೆ ಉಂಟಾಗುವುದಿಲ್ಲ.
ಇದು ನೈಸರ್ಗಿಕವಾದ ಕ್ಲೆನ್ಸರ್ ಆಗಿದೆ: ಇದರಲ್ಲಿ ನೈಸರ್ಗಿಕವಾದ ಕ್ಲೆನ್ಸಿಂಗ್ ಆಸಿಡ್ ಇರುವುದರಿಂದ ಮುಖದಲ್ಲಿರುವ ಅಧಿಕ ಎಣ್ಣೆ ಅಂಶವನ್ನು ಹೋಗಲಾಡಿಸಲು ಸಹಕಾರಿಯಾಗಿದೆ. 1/4 ಭಾಗ ಸೇಬು ಸ್ವಲ್ಪ ಹಾಲು ಮತ್ತು ಒಂದು ಚಮಚ ಜೇನು ಮಿಶ್ರ ಮಾಡಿ ಪೇಸ್ಟ್ ರೀತಿ ಮಾಡಿ ಇದರಿಂದ ಫೇಸ್ ಪ್ಯಾಕ್ ಮಾಡುತ್ತಾ ಬಂದರೆ ಮುಖದ ಹೊಳಪು ಹೆಚ್ಚಾಗುವುದು.
ತ್ವಚೆ ಬೆಳ್ಳಗಾಗುವುದು: ಬೆಳ್ಳಗೆ ಕಾಣಬೇಕೆಂದು ಅನೇಕ ಕ್ರೀಮ್ ಗಳನ್ನು ಹಚ್ಚುತ್ತೇವೆ. ಅದರ ಬದಲು ಪ್ರತಿದಿನ ಸೇಬಿನ ತುಂಡನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ಮಾಡುತ್ತಾ ಬಂದರೆ ಮುಖ ಬೆಳ್ಳಗಾಗುವುದು.
ಮೊಡವೆ ನಿಯಂತ್ರಿಸುತ್ತದೆ: ತ್ವಚೆಯಲ್ಲಿ ಕಶ್ಮಲ ಜಾಸ್ತಿಯಿದ್ದರೆ ಮೊಡವೆ ಹೆಚ್ಚಾಗುವುದು. ಸೇಬಿನಿಂದ ಫೇಸ್ ಪ್ಯಾಕ್ ಮಾಡಿದರೆ ಮುಖದಲ್ಲಿ ಬ್ಲ್ಯಾಕ್ ಹೆಡ್ಸ್ ಸಮಸ್ಯೆ ನಿವಾರಣೆಯಾಗುವುದು ಮತ್ತು ಮೊಡವೆ ಕಡಿಮೆಯಾಗುತ್ತದೆ.
ಈ ರೀತಿ ಸೇಬಿನಿಂದ ತ್ವಚೆ ಆರೈಕೆ ಮಾಡಿದರೆ ಮುಖದಲ್ಲಿ ಕಪ್ಪು ಕಲೆಗಳು ಉಂಟಾಗುವುದು, ಬಿಸಿಲಿಗೆ ಹೋದರೆ ಮುಖ ಕಪ್ಪಾಗುವುದು ಮುಂತಾದ ಸಮಸ್ಯೆಗಳು ಕಂಡು ಬರುವುದಿಲ್ಲ.



Click it and Unblock the Notifications
