Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕಣ್ಣಿನ ಸುತ್ತ ಕಪ್ಪು ಕಲೆಗಳಿಗೆ ಕಾರಣ
ಡಾರ್ಕ್ ಸರ್ಕಲ್ ಅಥವಾ ಕಣ್ಣಿನ ಸುತ್ತ ಕಪ್ಪು ವರ್ತುಲ ಬೀಳುವುದು ಹೆಚ್ಚಿನವರಲ್ಲಿ ಕಂಡುಬರುತ್ತಿರುವ ಸೌಂದರ್ಯ ಸಮಸ್ಯೆಯಾಗಿದೆ. ಕಣ್ಣಿನ ಸುತ್ತ ಕಪ್ಪು ವರ್ತುಲ ಒತ್ತಡ, ಜೀವನ ಶೈಲಿ ಹೀಗೆ ಅನೇಕ ಕಾರಣಗಳಿಂದ ಉಂಟಾಗುತ್ತದೆ. ಈ ರೀತಿಯ ಕಪ್ಪು ಕಲೆಗಳು ಬಿದ್ದರೆ ಮುಖ ಡಲ್ಲಾಗಿ ಕಾಣುವುದರಿಂದ ಸೌಂದರ್ಯ ಮಂಕಾಗುವುದು.
ಒಂದು ವೇಳೆ ನೀವು ಕೂಡ ಈ ಕಪ್ಪು ಕಲೆಗಳ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಕೆಳಗಿನ ಯಾವುದೋ ಒಂದು ಕಾರಣದಿಂದ ನಿಮಗೆ ಆ ರೀತಿ ಆಗುತ್ತಿದೆ ಎಂದು ಅರ್ಥ. ಕಣ್ಣಿನ ಸುತ್ತ ಕಪ್ಪು ವರ್ತುಲ ಬಿದ್ದರೆ ಏನು ಕ್ರೀಮ್ ಹಚ್ಚಬೇಕು ಎಂದು ಯೋಚಿಸುತ್ತೇವೆ ಹೊರತು ಅದು ಏಕೆ ಬಂತು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಈ ರೀತಿ ಉಂಟಾಗಲು ಕಾರಣವೇನು ಎಂದು ತಿಳಿದುಕೊಂಡರೆ ಮಾತ್ರ ಆ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯ.

ಕಣ್ಣಿನ ಸುತ್ತ ಕಪ್ಪು ವರ್ತುಲ ಬರಲು ಕಾರಣ:
ಮೇಕಪ್: ತುಂಬಾ ಸೂಕ್ಷ್ಮ ತ್ವಚೆ ಹೊಂದಿರುವವರೆಗೆ ಕೆಲವೊಂದು ಮೇಕಪ್ ಆಗಿ ಬರುವುದಿಲ್ಲ. ಇದರಿಂದಾಗಿ ಕಣ್ಣಿನ ಸುತ್ತ ಕಪ್ಪು ಕಲೆಗಳು ಕಂಡುಬರುತ್ತವೆ. ಅದರಲ್ಲೂ ಕಣ್ಣಿನ ಮೇಕಪ್ ಗೆ ಬಳಸುವ ಸಾಧನಗಳಿಂದ ಈ ರೀತಿಯ ಸಮಸ್ಯೆ ಕಂಡು ಬರಬಹುದು. ಆದ್ದರಿಂದ hypo-allergic ಮೇಕಪ್ ಸಾಧನಗಳನ್ನು ಮಾತ್ರ ಬಳಸಿ.
ಕಾಯಿಲೆ: ಕಿಡ್ನಿ ಸಮಸ್ಯೆ ಅಥವಾ ನಿದ್ರಾ ಹೀನತೆ ಸಮಸ್ಯೆ ಇದ್ದರೆ ಕಣ್ಣಿನ ಸುತ್ತ ಕಪ್ಪು ಕಲೆಗಳು ಬರುತ್ತದೆ. ಆದ್ದರಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳು ತುಂಬಾ ಕಂಡುಬಂದರೆ ವೈದ್ಯರನ್ನು ಕಂಡು ಸಲಹೆಯನ್ನು ಪಡೆಯುವುದು ಒಳ್ಳೆಯದು.
ತಲೆಸುತ್ತು ಮತ್ತು ನಿದ್ರಾಹೀನತೆ: ಕೆಲಸದ ಒತ್ತಡ ಅಧಿಕವಾದಂತೆ ಕಾಯಿಲೆಗಳು ಹೆಚ್ಚಾಗುವುದು. ಮಾನಸಿಕ ಒತ್ತಡದಿಂದ ತಲೆಸುತ್ತು , ನಿದ್ರಾಹೀನತೆ ಸಮಸ್ಯೆಗಳು ಕಂಡುಬರುತ್ತದೆ. ಇದರಿಂದಾಗಿ ಕಣ್ಣಿನ ಸುತ್ತ ಕಪ್ಪು ಕಲೆಗಳು ಕಂಡುಬರುತ್ತದೆ. ನಿದ್ದೆ ಮಾಡುವಾಗ ಮಗುಚಿ ಮಲಗಬೇಡಿ. ಹೊಟ್ಟೆ ಮೇಲೆ ಒತ್ತಡ ಬಿದ್ದಾಗ ಅದು ತ್ವಚೆ ಮೇಲೆ ಒತ್ತಡ ಹಾಕುತ್ತದೆ. ಇದರಿಂದ ಮುಖದಲ್ಲಿ ತ್ವಚೆ ಕಾಂತಿ ಕಡಿಮೆಯಾಗಿ ಕಪ್ಪು ಕಲೆಗಳಿಂದ ಮುಖ ಡಲ್ಲಾಗಿ ಕಾಣುವುದು.
ದೇಹದಲ್ಲಿ ನೀರಿನಂಶ ಕಡಿಮೆಯಾದರೆ: ದೇಹದಲ್ಲಿ ನೀರಿನಂಶ ಕಡಿಮೆಯಾದರೂ ಕೂಡ ಕಣ್ಣಿನ ಸುತ್ತ ಕಪ್ಪು ಕಲೆಗಳು ಕಂಡುಬರುತ್ತದೆ. ಆದ್ದರಿಂದ ಸಾಕಷ್ಟು ನೀರು ಕುಡಿಯುವುದು ಒಳ್ಳೆಯದು.
ಕಪ್ಪು ಚುಕ್ಕಿಗಳು ಹೆಚ್ಚಾಗಿ ಬಿಸಿಲಿನಲ್ಲಿ ಓಡಾಡುತ್ತಿರುವವರ ಮುಖದಲ್ಲಿ ಕಪ್ಪು ಚುಕ್ಕಿಗಳು ಉಂಟಾಗುವುದು, ಅಲ್ಲದೆ ಮುಖದಲ್ಲಿ ಕಣ್ಣಿನ ಕೆಳಭಾಗದಲ್ಲಿರುವ ತ್ವಚೆ ಮುಖದ ಉಳಿದ ಭಾಗದ ತ್ವಚೆಗಿಂತ ತುಂಬಾ ತೆಳ್ಳಗಿರುವುದರಿಂದ ಆ ಭಾಗ ಬೇಗನೆ ಕಪ್ಪಾಗುತ್ತದೆ.
ಅನಾರೋಗ್ಯಕರ ಜೀವನ ಶೈಲಿ: ಮಿತಿ ಮೀರಿ ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿದ್ದರೆ ಕಣ್ಣಿನ ಸುತ್ತ ಕಪ್ಪುಕಲೆಗಳು ಕಂಡುಬರುತ್ತದೆ.
ನಿಮ್ಮ ಮುಖದಲ್ಲಿ ಕಣ್ಣಿನ ಸುತ್ತ ಕಪ್ಪು ಕಲೆಗಳಿಗೆ ಇವುಗಳಲ್ಲಿ ಒಂದು ಅಂಶ ಕಾರಣವಾಗಿದ್ದು, ಯಾವ ಕಾರಣಕ್ಕೆ ಆ ರೀತಿ ಉಂಟಾಗುತ್ತಿದೆ ಎಂದು ಕಂಡುಹಿಡಿಯಿರಿ, ಆಗ ಕಣ್ಣಿನ ಸುತ್ತ ಬಿದ್ದ ಕಪ್ಪು ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.



Click it and Unblock the Notifications
