Latest Updates
-
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ? -
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್! -
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'! -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ!
ಈ ಮ್ಯಾಜಿಕ್ ಫೇಶಿಯಲ್ ಬಗ್ಗೆ ನಿಮಗೆ ಗೊತ್ತೇ?

ಈ ಫೇಶಿಯಲ್ ಬಗ್ಗೆ ತಿಳಿಯುವ ಮುನ್ನ ನಮ್ಮ ದೇಹದಲ್ಲಿ ಬಿಳಿದ್ರವ(lymph)ದ ಪಾತ್ರದ ಕುರಿತು ತಿಳಿಯೋಣ. ಇದು ನಮ್ಮ ದೇಹದಲ್ಲಿ ಇದ್ದು ಕಶ್ಮಲ, ಬೇಡದ ಕೊಬ್ಬು, ಬ್ಯಾಕ್ಟೀರಿಯಾ ಇವುಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಿದೆ.
ಒಂದು ವೇಳೆ ಈ ಬಿಳಿ ದ್ರವ ದೇಹದಲ್ಲಿ ಒಂದು ಕಡೆ ನಿಂತು ಗಟ್ಟಿಯಾದರೆ ಸುಸ್ತು, ಮೈಕೈ ನೋವು ಕಾಣಿಸುವುದು. ಆದ್ದರಿಂದ ಈ ಬಿಳಿದ್ರವ ದೇಹದ ಎಲ್ಲಾ ಭಾಗಗಳಿಗೆ ಸಮ ಪ್ರಮಾಣದಲ್ಲಿ ಹರಿದರೆ ಮಾತ್ರ ಆರೋಗ್ಯ ಮತ್ತು ಮೈಕಾಂತಿ ಹೆಚ್ಚುವುದು.
ಈ ಬಿಳಿದ್ರವ ಮುಖದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಮುಖ ಕ್ಲೆನ್ಸ್ ಮಾಡಿದ ರೀತಿ ಆಕರ್ಷಕವಾಗಿ ಕಾಣುವುದು. ಈ ಬಿಳಿದ್ರವ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಈ ಮ್ಯಾಜಿಕಲ್ ಫೇಶಿಯಲ್ ಸಹಕಾರಿಯಾಗಿದೆ.
ಈ ಮಸಾಜ್ ನಲ್ಲಿ ಯಾವುದೇ ಕ್ರೀಮ್ ಅಥವಾ ಎಣ್ಣೆ ಉಪಯೋಗಿಸುವುದಿಲ್ಲ. ಮಸಾಜ್ ಮಾಡುವವರು ಅವರ ಕೈ ಬೆರಳುಗಳನ್ನು ಮಾತ್ರ ಬಳಸಿ ಮುಖದ ಮೇಲೆ ವೃತ್ತಕಾರವಾಗಿ ಒತ್ತುತ್ತಾ ಮೆದುವಾಗಿ ಒತ್ತಡ ಹಾಕುತ್ತಾರೆ, ಆಗ ಮಸಾಜ್ ಮಾಡಿಸುವವರಿಗೆ ತುಂಬಾ ರಿಲ್ಯಾಕ್ಸ್ ಅನಿಸುವುದು. ಮುಖದಲ್ಲಿ ತುಂಬಾ ಜಿಡ್ಡಿನಂಶವಿದ್ದರೆ ಮತ್ರ ಸ್ವಲ್ಪ ಪೌಡರ್ ಬಳಸಲಾಗುವುದು.
ಈ ಫೇಶಿಯಲ್ ಮಾಡಿಸಿದರೆ ಮುಖ ಊದಿಕೊಳ್ಳುವುದಿಲ್ಲ, ಸೈನಸ್ (sinus) ಸಮಸ್ಯೆ ಇರುವವರು ಈ ಮಸಾಜ್ ಮಾಡಿದರೆ ತುಂಬಾ ಒಳ್ಳೆಯದು. ಈ ಮಸಾಜ್ ಮಾಡಿದರೆ ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟಬಹುದು, ಮುಖದ ಕಾಂತಿ ಹೆಚ್ಚುವುದು. ಈ ಮಸಾಜ್ ಅನ್ನು ವಾರದಲ್ಲಿ 2 ಬಾರಿ ಬೇಕಾದರೆ ಮಾಡಬಹುದು.
ಈ ಮಸಾಜ್ ಒಮ್ಮೆ ಮಾಡಿಸಿ ನೋಡಿ ಅದರ ಪ್ರಯೋಜನವನ್ನು ನೀವೇ ಕಾಣಬಹುದು.



Click it and Unblock the Notifications