Latest Updates
-
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ? -
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್! -
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'! -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ!
ಪುರುಷರ ತ್ವಚೆ ಸೌಂದರ್ಯ ಸಮಸ್ಯೆಗೆ ಉತ್ತರ

ಪುರುಷರಾಗಿರಲಿ, ಮಹಿಳೆಯರಾಗಿರಲಿ ತ್ವಚೆ ಬಗ್ಗೆ ಆರೈಕೆವಹಿಸಿದರೆ ಮಾತ್ರ ಆಕರ್ಷಕವಾದ ತ್ವಚೆಯನ್ನು ಪಡೆಯಲು ಸಾಧ್ಯ. ಅದರಲ್ಲೂ ಪುರುಷರಿಗೆ ತ್ವಚೆ ಆದರೆ ಹೇಗೆ ಹೋಗಲಾಡಿಸಬಹುದು? ಶೇವ್ ಮಾಡಿದ ನಂತರ ಮುಖದಲ್ಲಿ ಉರಿ ಕಂಡು ಬಂದರೆ ಏನು ಮಾಡಬೇಕು? ಪ್ರಶ್ನೆಗಳು ಸಹಜ. ಸಾಮಾನ್ಯವಾಗಿ ಪುರುಷರಲ್ಲಿ ಕಂಡು ಬರುವ ಸೌಂದರ್ಯ ಸಮಸ್ಯೆಗಳೇನು ಅದಕ್ಕೆ ಪರಿಹಾರವೇನು ಎಂದು ನೋಡೋಣ ಬನ್ನಿ:
ಸಮಸ್ಯೆ : ತ್ವಚೆ ತುಂಬಾ ಡ್ರೈ. ಯಾವ ಕ್ರೀಮ್ ಹಚ್ಚಬೇಕು? ಬಾಡಿ ಲೋಷನ್ ಹಚ್ಚಬಹುದೇ?
ಉತ್ತರ: ತುಂಬಾ ಒಣ ತ್ವಚೆಯವರು ರಾತ್ರಿ ಮಲಗುವಾಗ ಎಣ್ಣೆಯಿಂದ ಮಾಯಿಶ್ಚರೈಸರ್ ಮಾಡಿದರೆ ಒಳ್ಳೆಯದು. ಕ್ರೀಮ್ ಅಥವಾ ಬಾಡಿಲೋಷನ್ ಕೂಡ ಹಚ್ಚಬಹುದು.
ಸಮಸ್ಯೆ: ತಲೆಹೊಟ್ಟಿನಿಂದ ಪರಿಹಾರ ಹೇಗೆ?
ಉತ್ತರ: ತಲೆಹೊಟ್ಟು ಹೆಚ್ಚಿನ ಪುರುಷರಿಗೆ ಕಂಡು ಬರುವ ಸಮಸ್ಯೆಯಾಗಿದೆ. ಸರಿಯಾಗಿ ತಲೆ ಕೂದಲಿನ ಆರೈಕೆ ಮಾಡದಿದ್ದರೆ ಈ ರೀತಿಯ ಸಮಸ್ಯೆ ಕಂಡುಬರುವುದು. ತಲೆಗೆ ಸರಿಯಾಗಿ ಎಣ್ಣೆ ಹಚ್ಚಬೇಕು. ನಿಂಬೆರಸ ಅಥವಾ ಮೊಸರು ತಲೆಗೆ ಹಚ್ಚಿದರೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗವುದು.
ಸಮಸ್ಯೆ: ಕೂದಲು ತುಂಬಾ ಉದುರುತ್ತಿದೆ, ಬಕ್ಕ ತಲೆಉಂಟಗಬಹುದೇ?
ಉತ್ತರ: ಆಹಾರಕ್ರಮ ಆರೋಗ್ಯಕರವಾಗಿರಬೇಕು. ಸಿಟ್ರಸ್ ಆಹಾರಗಳನ್ನು ಆಹಾರಕ್ರಮದಲ್ಲಿ ಸೇರಿಸಬೇಕು. ತಲೆಗೆ ಎಣ್ಣೆ ಮಸಾಜ್ ಮಾಡುವುದು, ಹೆಚ್ಚು ರಾಸಾಯನಿಕವಿರುವ ಶ್ಯಾಂಪೂ, ಕಂಡೀಷನರ್, ಜೆಲ್ ಬಳಸದಿರುವುದು ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುವುದು. ತುಂಬಾ ಉದುರುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು, ಏಕೆಂದರೆ ಕೆಲವೊಮ್ಮೆ ಕಾಯಿಲೆಗಳಿದ್ದರೆ ಕೂಡ ಕೂದಲು ಉದುರುತ್ತದೆ. ಆರೋಗ್ಯಕರ ಕೂದಲು ಆರೋಗ್ಯದ ಲಕ್ಷಣವಾಗಿದೆ.
ಸಮಸ್ಯೆ: ಶೇವಿಂಗ್ ಮಾಡಿದ ನಂತರ ಉರಿಯನ್ನು ತಡೆಯುದು ಹೇಗೆ?
ಶೇವಿಂಗ್ ಮಾಡುವ ಮುನ್ನ ಮುಖವನ್ನು ತೊಳೆದು ಮಾಡಿದರೆ ತ್ವಚೆ ಸ್ವಲ್ಪ ಮೃದುವಾಗುವುಉದ ಹಾಗೂ ಶೇವಿಂಗ್ ಮಾಡಲು ಕೂಡ ಸುಲಭವಾಗುವುದು. ಶೇವಿಂಗ್ ಮಾಡಿದ ಸೇವಿಂಗ್ ಜೆಲ್ ಹಚ್ಚುವುದು ಸಹಜ. ಆದರೆ ಶೆವಿಂಗ್ ಜೆಲ್ ತೊಳೆದ ನಂತರ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ. ಇದರಿಂದ ತ್ವಚೆ ಮೃದುವಾಗುವುದು ಹಾಗೂ ಉರಿ ಕೂಡ ಕಡಿಮೆಯಾಗುತ್ತದೆ.
ಸಮಸ್ಯೆ: ತ್ವಚೆಯ ಹೊಳಪು ಹೆಚ್ಚಿಸುವುದು ಹೇಗೆ?
ಉತ್ತರ: ಮುಖ ಕಳೆಗುಂದಿದ್ದರೆ ಮುಖಕ್ಕೆ ಕ್ಲೆನ್ಸ್ ಮಾಡಬಹುದು. ಈ ರೀತಿ ಮಾಡಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು, ಇದರಿಂದ ಮುಖದ ಹೊಳಪು ಹೆಚ್ಚಿ ಮುಖ ಆಕರ್ಷಕವಾಗಿ ಕಾಣುವುದು.



Click it and Unblock the Notifications