Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಸಡಿಲವಾದ ತ್ವಚೆಯನ್ನು ಬಿಗಿಗೊಳಿಸುವುದು ಹೇಗೆ?

ಈ ರೀತಿ ತ್ವಚೆ ಸಡಿಲವಾದರೆ ಮುಖದಲ್ಲಿ ನೆರಿಗೆಗಳು ಎದ್ದು ಕಾಣುತ್ತದೆ. ಮುಖ ಮುಪ್ಪಾದಂತೆ ಕಾಣುತ್ತದೆ. ಆದ್ದರಿಂದ ತ್ವಚೆ ಸಡಿಲವಾಗದಂತೆ ನೋಡಿಕೊಳ್ಳಲು ಈ ಕೆಳಗಿನ ವಿಧಾನವನ್ನು ಅನುಸರಿಸಬಹುದು.
ಕ್ರಂಚಸ್: ಹೊಟ್ಟೆಯಲ್ಲಿ ನೆರಿಗೆ ಬೀಳದಿರುಲು ಕ್ರಂಚಸ್ ಮಾಡುವುದು ಒಳ್ಳೆಯದು. ಅಲ್ಲದೆ ಈ ರೀತಿ ಮಾಡಿದರೆ ಹೊಟ್ಟೆ ಬೊಜ್ಜಿನ ಸಮಸ್ಯೆ ಕೂಡ ಇರುವುದಿಲ್ಲ. ದೇಹದ ತೂಕ ಕಡಿಮೆ ಮಾಡಿಕೊಳ್ಳ ಬಯಸುವವರು ವ್ಯಾಯಾಮ ಮಾಡಬೇಕು. ವ್ಯಾಯಾಮ ಮಾಡಿದರೆ ದೇಹದ ಫಿಟ್ ನೆಸ್ ಕಳೆದುಕೊಳ್ಳುವುದಿಲ್ಲ.
ಮಾಯಿಶ್ಚರೈಸರ್: 8-10 ಗ್ಲಾಸ್ ನೀರು ಕುಡಿಯಬೇಕು. ಹಣ್ಣುಗಳ ಜ್ಯೂಸ್ ಕುಡಿಯಬೇಕು. ಮುಖಕ್ಕೆ ಬಾದಾಮಿ ಎಣ್ಣೆ, ಆಲೀವ್ ಎಣ್ಣೆ ಇವುಗಳಿಂದ ಮಾಯಿಶ್ಚರೈಸರ್ ಮಾಡಬೇಕು. ಈ ರೀತಿ ಮಾಡಿದರೆ ತ್ವಚೆ ಸಡಿಲವಾಗುವುದಿಲ್ಲ.
ಮುಖಕ್ಕೆ ವ್ಯಾಯಾಮ: ನೆರಿಗೆಗಳು ಮುಖ ಮತ್ತು ಕುತ್ತಿಗೆಯಲ್ಲಿ ಬೇಗನೆ ಕಂಡು ಬರುತ್ತದೆ. ಆದ್ದರಿಂದ ಈ ಸಮಸ್ಯೆಯನ್ನು ತಡೆಗಟ್ಟಲು ಮುಖಕ್ಕೆ ವ್ಯಾಯಾಮ ಮಾಡಬೇಕು. ಸ್ವಲ್ಪ ಗಟ್ಟಿಯಾದ ವಸ್ತುಗಳನ್ನು ಜಗಿಯುವುದು ಮಾಡಿದರೆ ಮುಖಕ್ಕೆ ವ್ಯಾಯಾಮ ದೊರೆಯುತ್ತದೆ.
ಮತ್ತೊಂದು ವಿಧದ ವ್ಯಾಯಾಮ ಅಂದರೆ ಸೀಲಿಂಗ್ ಕಡೆ ಮುಖ ಮಾಡಿ ಮುಖವನ್ನು ಮೇಲಕ್ಕೆ ಎಳೆದು 30 ಸೆಕೆಂಡ್ ಕಾಲ ಹಿಡಿಯಬೇಕು. ನಂತರ ಬಿಡಬೇಕು. ಈ ರೀತಿ ಮಾಡಿದರೆ ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಯಬಹುದು.
ಮಸಾಜ್: ಮುಖಕ್ಕೆ ಮತ್ತು ಮೈಗೆ ಮಸಾಜ್ ಮಾಡಬೇಕು. ಸಾಸಿವೆ ಎಣ್ಣೆ, ಆಲೀವ್ ಎಣ್ಣೆ ಇವುಗಳಿಂದ ಮಸಾಜ್ ಮಾಡಬೇಕು.
ಸೋಯಾ: ಸೋಯಾವನ್ನು ತಿನ್ನುವುದರಿಂದ ಕೊಲೆಜಿನ್ ಉತ್ಪತ್ತಿ ಹೆಚ್ಚಾಗುತ್ತದೆ. ಕೊಲೆಜಿನ್ ತ್ವಚೆಯ ತಾರುಣ್ಯವನ್ನು ಕಾಪಾಡಲು ಸಹಾಯಕವಾಗಿದೆ.
ವಿಟಮಿನ್ ಎ ಮತ್ತು ವಿಟಮಿನ್ ಸಿ ಆಹಾರ: ಕ್ಯಾರೆಟ್, ಬೀಟ್ ರೂಟ್ , ಸಿಟ್ರಸ್ ಆಹಾರಗನ್ನು ತಿನ್ನುವುದರಿಂದ ಅಕಾಲಿಕ ನೆರಿಗೆ ಬೀಳುವುದನ್ನು ತಪ್ಪಿಸಬಹುದು.



Click it and Unblock the Notifications
